ದೇಶದ ನಂ.1 ಟೆಲಿಕಾಂ ಆಪರೇಟರ್ ಸ್ಥಾನವನ್ನು ಕಾಯ್ದಿರಿಸಿಕೊಂಡ ಏರ್‌ಟೆಲ್!!

|

208-19 ನೇ ಸಾಲಿನ ಎರಡನೇ ತ್ರೈಮಾಸಿಕದ ಆದಾಯವನ್ನು ಪರಿಗಣಿಸಿ ನೋಡಿದಾಗ ಏರ್ ಟೆಲ್ ಭಾರತದ ನಂಬರ್ 1 ಟೆಲಿಕಾಂ ಆಪರೇಟರ್ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

ಏರ್ ಟೆಲ್ ಇಂಡಿಯಾ ವರದಿ ಮಾಡಿರುವಂತೆ ಅದರ ಆದಾಯ 2018-19 ನೇ ಸಾಲಿನ ಎರಡನೇ ತ್ರೈಮೀಸಿಕದಲ್ಲಿ 149,198 ಮಿಲಿಯನ್ ರುಪಾಯಿಗಳು(–11 ಶೇಕಡಾ) ಇದನ್ನು 2017-18 ನೇ ಸಾಲಿನ ಎರಡನೇ ತ್ರೈಮಾಸಿಕಕ್ಕೆ ಹೋಲಿಸುವುದಾದರೆ 167,364 ಮಿಲಿಯನ್ ರುಪಾಯಿಗಳಾಗಿದ್ದು ಈ ಸಾಲಿನಲ್ಲಿ ಇಳಿಕೆಯಾಗಿದೆ.

ದೇಶದ ನಂ.1 ಟೆಲಿಕಾಂ ಆಪರೇಟರ್ ಸ್ಥಾನವನ್ನು ಕಾಯ್ದಿರಿಸಿಕೊಂಡ ಏರ್‌ಟೆಲ್!!

ಏರ್ ಟೆಲ್ ಇಂಡಿಯಾದ EBITDA 33 ಶೇಕಡಾ ಇಳಿದಿದೆ ಅಂದರೆ 63,290 ಮಿಲಿಯನ್ ಇದ್ದದ್ದು ಇದೀಗ 42,487 ಮಿಲಿಯನ್ ಆಗಿದೆ. ಏರ್ ಟೆಲ್ ಇಂಡಿಯಾದ EBITDA ಮಾರ್ಜಿನ್37.8 ಶೇಕಡಾದಿಂದ 28.5 ಶೇಕಡಾ ಇಳಿದಿದೆ .EBIT ಕೂಡ 100 ಶೇಕಡಾ ಇದ್ದು INR 24,937 ಮಿಲಿಯನ್ ಇದೆ.

ಏರ್ ಟೆಲ್ ಇಂಡಿಯಾದ ಆದಾಯ 3 ಶೇಕಡಾ ಇಳಿದಿದೆ ಅಂದರೆ INR 71,440 ಮಿಲಿಯನ್ ಇದ್ದದ್ದು ಇದೀಗ 69,036 ಮಿಲಿಯನ್ ರುಪಾಯಿ ಗೆ ಕುಸಿದಿದೆ.

ವೊಡಾಫೋನ್ ಐಡಿಯಾದ EBITDA 28.7 ಶೇಕಡಾ ಇಳಿದಿದೆ. INR 13,722 ಮಿಲಿಯನ್ ಇದ್ದದ್ದು INR 9,778 ಮಿಲಿಯನ್ ಆಗಿದೆ.ಇದರ EBITDA ಮಾರ್ಜಿನ್ ಇಳಿಕೆಯಾಗಿದ್ದು 10.6 ಶೇಕಡಾದಿಂದ 8.1 ಶೇಕಡಾಕ್ಕೆ ಬಂದಿದ್ದು 2.5 ಶೇಕಡಾ ಇಳಿಕೆಯಾಗಿದೆ.

ವೊಡಾಫೋನ್ ಐಡಿಯಾದ Capex ಅಧಿಕಗೊಂಡಿದ್ದು INR 25,213 ಮಿಲಿಯನ್ ಇದ್ದದ್ದು INR 32,956 ಆಗಿದೆ ಅಂದರೆ 30.7 ಶೇಕಡಾ ಏರಿಕೆಯಾಗಿದೆ. ವೊಡಾಫೋನ್ ಐಡಿಯಾ ಅಗಸ್ಟ್ ನಲ್ಲಿ ಕೈಜೋಡಿಸಿ ಕೆಲಸವನ್ನು ಆರಂಭಿಸಿತ್ತು 2018-19 ನೇ ಸಾಲಿನ ಎರಡನೇ ತ್ರೈಮಾಸಿಕದ ಆದಾಯವನ್ನು 120,238 ಮಿಲಿಯನ್(-7.1 ಶೇಕಡಾ) ಎಂದು ತೋರಿಸಿತ್ತು. ಮೊದನೇ ತ್ರೈಮಾಸಿಕದಲ್ಲಿ ಇದರ ಆದಾಯ 129,441 ಮಿಲಿಯನ್ ಆಗಿದ್ದು ಅದು ಎರಡನೇ ತ್ರೈಮಾಸಿಕದಲ್ಲಿ ಸ್ವಲ್ಪ ಕಡಿಮೆ ಆಗಿತ್ತು.ಇದು ಸೆಪ್ಟೆಂಬರ್ ನ ಎಲ್ಲಾ ಮೂರು ತಿಂಗಳ ಆದಾಯವಾಗಿದೆ.

ವೊಡಾಫೋನ್ ಐಡಿಯಾದ ARPU 4.7 ಶೇಕಡಾ ಇಳಿಯಾಗಿದೆ. INR 92 ಇದ್ದದ್ದು ಇದೀಗ INR 88ಆಗಿದೆ. ಇದು ಎರಡನೇ ತ್ರೈಮಾಸಿಕದ ಆದಾಯದ ಮೇಲೆ ನೇರಪರಿಣಾಮ ಬೀರಿದೆ.

ವೊಡಾಫೋನ್ ಐಡಿಯಾದ ನೆಟ್ ವರ್ಕ್ ನಲ್ಲಿನ ಮಿನಿಟ್ಸ್ 0.2 ಶೇಕಡಾಕ್ಕೆ ಇಳಿಕೆಯಾಗಿದೆ. 732,837 ಮಿಲಿಯನ್ ನಿಂದ 731,195 ಮಿಲಿಯನ್ ಗೆ ಕುಸಿದಿದೆ.

ಆದಾಯದ ಈ ಲೆಕ್ಕಾಚಾರವು 2019 ನೇ ಸಾಲಿನ ಮೊದಲನೇ ಮತ್ತು ಎರಡನೇ ತ್ರೈಮಾಸಿಕಕ್ಕಾಗಿ EBITDA ಮತ್ತು ಪ್ರಮುಖ ಪ್ರದರ್ಶನದ ಇಂಡಿಕೇಟರ್ ಗಳ ಅಂಕಿಅಂಶಗಳು ವೊಡಾಫೋನ್ ಐಡಿಯಾವು ಎಪ್ರಿಲ್ 1,2018 ರಿಂದ ವಿಲೀನಗೊಂಡ ಘಟಕದ್ದೇ ಆಗಿದೆ ಎಂದು ವೊಡಾಫೋನ್ ತಿಳಿಸಿದೆ.

ಮೊಬೈಲ್ ಚಂದಾದಾರಿಕೆಯ ಆಧಾರದಲ್ಲಿ ವೊಡಾಫೋನ್ ಐಡಿಯಾದ ಭಾರತದ ನಂಬರ್ 1 ಟೆಲಿಕಾಂ ಆಪರೇಟರ್ ಆಗಿರುತ್ತಾರೆ. ಆದರೆ 13 ಮಿಲಿಯನ್ ಮೊಬೈಲ್ ಫೋನ್ ಗ್ರಾಹಕರನ್ನು ವೊಡಾಫೋನ್ ಕಳೆದುಕೊಂಡಿದ್ದು ಅದು 7.1 ಶೇಕಡಾ ಒಟ್ಟಾರೆ ಆದಾಯದ ಮೇಲೆ ಪರಿಣಾಮ ಬೀರಿದೆ.

ವೊಡಾಫೋನ್ ಐಡಿಯಾ 24,866 ಬ್ರಾಡ್ ಬ್ಯಾಂಡ್ ಸೈಟ್ ಗಳನ್ನು 3ಜಿ ಮತ್ತು 4ಜಿ ನೆಟ್ ವರ್ಕ್ ನಲ್ಲಿ ತ್ರೈಮಾಸಿಕದಲ್ಲಿ ಸೇರಿಸಲಾಯಿತು ಮತ್ತು 365,575 ಬ್ರಾಡ್ ಬ್ಯಾಂಡ್ ಸೈಟ್ ಗಳನ್ನು ತಲುಪಲಾಯಿತು. ಬ್ರಾಡ್ ಬ್ಯಾಂಡ್ ಕವರೇಜ್ ಸುಮಾರು 261,000 ನಗರ ಮತ್ತು ಹಳ್ಳಿಗಳಲ್ಲಿ ಇದೆ ಮತ್ತು ಸುಮಾರು 817 ಮಿಲಿಯನ್ ಭಾರತೀಯರು ಇದರಡಿಯಲ್ಲಿ ಬರುತ್ತಾರೆ ಅಂದರೆ ಒಟ್ಟಾರೆ ಭಾರತೀಯ ಜನಸಂಖ್ಯೆ 67.6 ಶೇಕಡಾವನ್ನು ಇದರ ಅಡಿಯಲ್ಲಿ ಬರಲಿದ್ದಾರೆ.

ಏರ್ ಟೆಲ್ ಇಂಡಿಯಾ ಸುಮಾರು 27,000 ಮೊಬೈಲ್ ಬ್ರಾಡ್ ಬ್ಯಾಂಡ್ ಬಿಟಿಎಸ್ ನ್ನು ನಿಯೋಜಿಸಲಾಗಿದೆ. ವೇಗ ಪರೀಕ್ಷೆಯಲ್ಲಿ ಜಾಗತಿಕ ನಾಯಕ ಓಕ್ಲಾ, ಏರ್ ಟೆಲ್ ನ್ನು ವೇಗದ ಮೊಬೈಲ್ ನೆಟ್ ವರ್ಕ್ ಎಂದು ರೇಟ್ ಮಾಡಿದ್ದಾರೆ. ಸತತ ನಾಲ್ಕನೇ ಬಾರಿಗೆ ಓಕ್ಲಾ ಏರ್ ಟೆಲ್ ನ್ನು ಭಾರತದ ವೇಗದ ನೆಟ್ ವರ್ಕ್ ಎಂದು ಗುರುತಿಸಿರುವುದಾಗಿದೆ.

Most Read Articles
Best Mobiles in India

Read more about:
English summary
Airtel retains #1 telecom operator status – ahead of Vodafone Idea

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more