Home
ಸುದ್ದಿಜಾಲ

ಏರ್‌ಟೆಲ್‌ ಈ ಡೇಟಾ ಪ್ಯಾಕ್‌ನಲ್ಲಿ ಇದೀಗ ಡಬಲ್ ಧಮಾಕ: ಏನೆಲ್ಲಾ ಪ್ರಯೋಜನಗಳು!

ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌ ಹಾಗೂ ಜಿಯೋ ನಡುವಿನ ಪೈಪೋಟಿ ಮುಂದುವರೆಯುತ್ತಲೇ ಇದೆ. ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಸ್ಫರ್ಧೆಗೆ ಇಳಿದಿವೆ. ತಮ್ಮ ಪ್ಲಾನ್‌ಗಳಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ಪರಿಷ್ಕರಣೆ ಮಾಡುತ್ತಿವೆ. ಏರ್‌ಟೆಲ್‌ ಇದೀಗ ತನ್ನ ಡೇಟಾ ಪ್ಯಾಕ್‌ ಪ್ಲಾನ್‌ನಲ್ಲಿ ಹೊಸ ಪ್ರಯೋಜನಗಳನ್ನು ಸೇರ್ಪಡೆ ಮಾಡಿದೆ.

ಹೌದು, ಏರ್‌ಟೆಲ್‌ ಟೆಲಿಕಾಂ ತನ್ನ ಜನಪ್ರಿಯ ಡೇಟಾ ಪ್ಯಾಕ್‌ ಪ್ಲಾನ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ಘೋಷಿಸಿದೆ. ಇತ್ತೀಚಿಗಷ್ಟೆ ಪ್ರಾರಂಭಿಸಿದ್ದ 99ರೂ. ಬೆಲೆಯ ಅನ್‌ಲಿಮಿಟೆಡ್‌ ಡೇಟಾ ಪ್ಯಾಕ್‌ನಲ್ಲಿ ಹೊಸ ಪ್ರಯೋಜನಗಳನ್ನು ಸೇರ್ಪಡೆ ಮಾಡಿದೆ. ಈ ಮೂಲಕ ಡೇಟಾ ಪ್ಯಾಕ್‌ ಪ್ಲಾನ್‌ಗಳನ್ನು ಬಯಸುವವರಿಗೆ ವಿಶೇಷ ಪ್ರಯೋಜನಗಳನ್ನು ಕಲ್ಪಿಸಿದೆ. ಹಾಗಾದ್ರೆ ಏರ್‌ಟೆಲ್‌ 99ರೂ. ಡೇಟಾ ಪ್ಯಾಕ್‌ನಲ್ಲಿ ಯಾವೆಲ್ಲಾ ಪ್ರಯೋಜನಗಳು ಸೇರ್ಪಡೆ ಆಗಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ ಈ ಡೇಟಾ ಪ್ಯಾಕ್‌ನಲ್ಲಿ ಇದೀಗ ಡಬಲ್ ಧಮಾಕ: ಏನೆಲ್ಲಾ ಪ್ರಯೋಜನಗಳು!

ಏರ್‌ಟೆಲ್ 99ರೂ ಡೇಟಾ ಪ್ಯಾಕ್ನ ಹಿಂದಿನ ಪ್ರಯೋಜನಗಳು
ಏರ್‌ಟೆಲ್ 99ರೂ ಬೆಲೆಯ ಡೇಟಾ ಪ್ಯಾಕ್ ಬಿಡುಗಡೆ ಆದಾಗ ಗ್ರಾಹಕರಿಗೆ 30GB ಫೇರ್ ಯೂಸೇಜ್ ಪಾಲಿಸಿ (FUP)ಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ ಒಂದು ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು ಅನಿಯಮಿತ ಡೇಟಾ ಪ್ರಯೋಜನಗಳನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ 30GB ಹೆಚ್ಚಿನ ವೇಗದ ಡೇಟಾವನ್ನು ಬಳಸಿದ ನಂತರ, ಬಳಕೆದಾರರು 64 Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಬಳಸಬಹುದಾಗಿದೆ. ಇದೀಗ ಈ ಪ್ಲಾನ್‌ನಲ್ಲಿ ನೀಡಲಾಗ್ತಿದ್ದ ಪ್ರಯೋಜನಗಳನ್ನು ಪರಿಷ್ಕರಿಸಿದೆ.

ಏರ್‌ಟೆಲ್ 99ರೂ. ಡೇಟಾ ಪ್ಯಾಕ್ನ ಪರಿಷ್ಕೃತ ಪ್ರಯೋಜನಗಳು
ಏರ್‌ಟೆಲ್ 99ರೂ. ಡೇಟಾ ಪ್ಯಾಕ್‌ ಅನ್ನು ಪರಿಷ್ಕ್ರತಗೊಳಿಸಿದ ನಂತರ 2 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಈ ಅವಧಿಯಲ್ಲಿ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡಲಿದೆ. ಆದರೆ ನ್ಯಾಯಯುತ ಬಳಕೆಯ ನೀತಿಯನ್ನು (FUP) ದಿನಕ್ಕೆ 20GB ಗೆ ಪರಿಷ್ಕರಿಸಲಾಗಿದೆ. 20GB ಡೇಟಾವನ್ನು ಬಳಸಿದ ನಂತರ ಇರದ ವೇಗವು 64 Kbps ವರೆಗೆ ಇರಲಿದೆ. ಅಂದರೆ ಏರ್‌ಟೆಲ್ ಗ್ರಾಹಕರು ಈ ಪ್ಲಾನ್‌ನಲ್ಲಿ ಎರಡು ದಿನಗಳವರೆಗೆ ದಿನಕ್ಕೆ 20GB ಅನ್ನು ಆನಂದಿಸಬಹುದು. ಒಟ್ಟಾರೆ ಒಟ್ಟು 40GB ಹೈ-ಸ್ಪೀಡ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಆದರೆ ಏರ್‌ಟೆಲ್ ಕಂಪೆನಿಯ ಈ ಡೇಟಾ ಪ್ಯಾಕ್‌ನಲ್ಲಿ ಹೆಚ್ಚುವರಿ ದಿನದ ಮಾನ್ಯತೆಯ ಜೊತೆಗೆ ಒಟ್ಟು ಪ್ರಯೋಜನಗಳನ್ನು 10GB ಯಷ್ಟು ಹೆಚ್ಚಿಸಿದೆ. ಆದರೆ ಈ ಡೇಟಾ ಪ್ಯಾಕ್‌ನ ಲಾಭ ಪಡೆಯಲು, ನೀವು ಸಕ್ರಿಯ ಮೂಲ ಯೋಜನೆಯನ್ನು ಹೊಂದಿರಬೇಕು ಅನ್ನೊದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ.

ಈ ಡೇಟಾ ಪ್ಯಾಕ್‌ ಅನ್ನು ಆಯ್ಕೆ ಮಾಡಿಕೊಂಡವರಿಗೆ ಇದೀಗ ಒಂದು ದಿನದ ಬದಲಿಗೆ ಎರಡು ದಿನಗಳ ಮಾನ್ಯತೆ ಲಭ್ಯವಾಗಲಿದೆ. ಹಾಗೆಯೇ ಒಂದು ದಿನಕ್ಕೆ ಸೀಮಿತವಾಗಿದ್ದ 30GB ಡೇಟಾ ಬದಲಿಗೆ 2 ದಿನಗಳ ಅವದಿಯಲ್ಲಿ ಒಟ್ಟು 40GB ಡೇಟಾ ಪ್ರಯೋಜನ ದೊರೆಯಲಿದೆ. ದೈನಂದಿನ ಡೇಟಾ ಪ್ರಯೋಜನ ಮುಗಿದ ನಂತರ ಹೆಚ್ಚಿನ ಡೇಟಾ ಬಯಸುವವರಿಗೆ ಈ ಡೇಟಾ ಪ್ಯಾಕ್‌ ಇದೀಗ ಉತ್ತಮ ಆಯ್ಕೆಯಾಗಿದೆ. ಆದರೆ ಇದರ ವ್ಯಾಲಿಡಿಟಿ ಕೇವಲ ಎರಡು ದಿನಗಳಿಗೆ ಸೀಮಿತವಾಗಿರುವುದು ಕೂಡ ಇಲ್ಲಿ ಪ್ರಮುಖವಾಗಿದೆ.

ಇತ್ತೀಚಿಗೆ ಏರ್‌ಟೆಲ್‌ ಟೆಲಿಕಾಂ ಪರಿಚಯಿಸಿದ್ದ 779ರೂ. ಪ್ರಿಪೇಯ್ಡ್‌ ಪ್ಲಾನ್‌ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇನ್ನು ಈ ರೀಚಾರ್ಜ್‌ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯ ದೊರೆಯಲಿದೆ. ಜೊತೆಗೆ ಈ ಅವಧಿಯಲ್ಲಿ ಪ್ರತಿನಿತ್ಯ 100 ಉಚಿತ ಎಸ್ಎಮ್ಎಸ್ ಪ್ರಯೋಜನ ಒಳಗೊಂಡಿದೆ.

Best Mobiles in India

English summary
Airtel Revises now Rs 99 Unlimited Data Pack, Offers More Data Benefits and validity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+