ಏರ್ ಟೆಲ್ ನಿಂದ ಜಿಯೋಗೆ ಮತ್ತೊಂದು ಶಾಕ್...!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಎಫೆಕ್ಟ್ ಮುಂದುವರೆದಿದೆ. ಭಾರತದ ಅತಿದೊಡ್ಡ ನೆಟ್ ವರ್ಕ್ ಹಾಗೂ ರಿಲಾಯನ್ಸ್ ಜಿಯೋದ ಬಹುದೊಡ್ಡ ಪ್ರತಿಸ್ಪರ್ಧಿ ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಘೋಷಿಸಿದ್ದು, ಜಿಯೋ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.
ಹೀಗಾಗಲೇ, ಇಂಟರ್ ನೆಟ್ ಡೇಟಾ ದರ ಇಳಿಮುಖದತ್ತ ಸಾಗುತ್ತಿರುವಾಗಲೇ, ಈ ಆಫರ್ ಮತ್ತೊಂದಿಷ್ಟು ಅಗ್ಗದ ದರದಲ್ಲಿ ಗ್ರಾಹಕರಿಗೆ ಡೇಟಾ ನೀಡಲಿರುವುದಂತು ಸತ್ಯ. ಹಾಗಾದರೆ, ಏರಟೆಲ್ ನೀಡಿರುವ ಆಪರ್ ಯಾವುದು? ಅದರಲ್ಲೇನಿದೆ? ಮತ್ತು ಈ ಆಫರ್ ನಿಂದ ಜಿಯೋಗೆ ಯಾಕೆ ಶಾಕ್ ಎಂಬುದನ್ನು ಈ ಕೆಳಗಿನ ಸ್ಲೈಡ್ ಗಳಲ್ಲಿ ನೋಡಿ.


ರಿಲಾಯನ್ಸ್ ಜಿಯೋಗೆ ಸೆಡ್ಡು..!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ದರದಲ್ಲಿ ಡೇಟಾ ನೀಡಿ ಇತರೆ ಟೆಲಿಕಾಂ ಆಪರೇಟರ್ ಗಳ ನಿದ್ದೆಗೆಡಿಸಿದ್ದ ಜಿಯೋ ಈ ಬಾರಿ ಏರ್ ಟೆಲ್ ನೀಡಿದ ಆಫರ್ ನಿಂದ ಶಾಕ್ ಗೆ ಒಳಗಾಗಿದೆ. ಈಗಾಗಲೇ ಬಿಎಸ್ಎನ್ಎಲ್ ಸಹ ಹೊಸ FTTH ಬ್ರಾಡ್ ಬ್ಯಾಂಡ್ ಆಫರ್ ಗಳನ್ನು ಘೋಷಿಸಿ ಜಿಯೋದ ಫೈಬರ್ ನೆಟ್ ಗೆ ಪೈಪೋಟಿ ನೀಡುತ್ತಿದೆ. ಇದರ ಜೊತೆ Airtel ಘೋಷಿಸಿರುವ ಪ್ಲಾನ್ ಮತ್ತೊಂದು ದರ ಸಮರಕ್ಕೆ ನಾಂದಿಯಾಡಿದೆ.

ಹೊಸ ಆಫರ್ ನಲ್ಲಿ ಏನೀದೆ..?
ಏರ್ ಟೆಲ್ ಜನವರಿಯಲ್ಲಿ ಘೋಷಿಸಿದ್ದ 149 ರೂ. ರೀಚಾರ್ಜ್ ಪ್ಯಾಕ್ ಅನ್ನು ರೀವೈಸ್ ಮಾಡಿದ್ದು, ಮೊದಲಿದ್ದ 1GB ಡೇಟಾ ಬದಲಾಗಿ 28 ದಿನಕ್ಕೆ 2GB ಡೇಟಾ ನೀಡುತ್ತಿದೆ. ಇದರ ಜೊತೆಗೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಉಚಿತವಾಗಿ ಲಭ್ಯವಿವೆ. 149 ರೂ.ಗೆ 2GB 3G/4G ಡೇಟಾವನ್ನು 28 ದಿನಗಳಿಗೆ ಕೊಡಲಿರುವ ಏರ್ ಟೆಲ್ ಕೇವಲ 2.68 ರೂ.ಗೆ 1GBಯಂತೆ 56GB ಡೇಟಾ ನೀಡಲಿದೆ.

ಆಫರ್ ಎಲ್ಲೆಲ್ಲಿ ಲಭ್ಯ..?
ಏರ್ ಟೆಲ್ ಘೋಷಿಸಿರುವ ಹೊಸ ಆಫರ್ ಭಾರತದ ಎಲ್ಲಾ ಟೆಲಿಕಾಂ ಸರ್ಕಲ್ ಗಳಲ್ಲಿ ಲಭ್ಯವಿರದೇ ಆಯ್ದ ಏರ್ ಟೆಲ್ ಗ್ರಾಹಕರಿಗೆ ಮಾತ್ರ ದೊರೆಯಲಿದ್ದು, ಯಾವ ಯಾವ ಗ್ರಾಹಕರಿಗೆ ಮತ್ತು ಯಾವ ಟೆಲಿಕಾಂ ಸರ್ಕಲ್ ಗಳಲ್ಲಿ ಈ ಆಫರ್ ದೊರೆಯಲಿದೆ ಎಂಬುದನ್ನು ಏರ್ ಟೆಲ್ ಅಧಿಕೃತವಾಗಿ ಪ್ರಕಟಿಸಿಲ್ಲ.

ಜಿಯೋ ಆಫರ್ ಏನಿತ್ತು..?
ಹೊಸ ಆಫರ್ ಮೂಲಕ ಏರ್ ಟೆಲ್ ಜಿಯೋಗೆ ಗುದ್ದು ನೀಡಿದ್ದು, ಜಿಯೋದ 149 ರೂ. ಆಫರ್ ಗೆ ಎದುರಾಗಿ ಈ ಆಫರ್ ನೀಡಿದೆ. ರಿಲಾಯನ್ಸ್ ಜಿಯೋ 149 ರೂ.ಗೆ ಪ್ರತಿದಿನ 1.5GB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಿತ್ತು. ಇದರ ಜೊತೆ ಅನಿಯಿಮತ ಕರೆ ಹಾಗೂ ದಿನಕ್ಕೆ 100 SMS ಉಚಿತವಾಗಿ ಜಿಯೋ ನೀಡಿತ್ತು.


ಏರ್ ಟೆಲ್ ನ ಮತ್ತಷ್ಟು ಪ್ಲಾನ್ಸ್ ರಿವೈಸ್..!
149 ರೂ. ಪ್ಲಾನ್ ಅಷ್ಟೇ ಅಲ್ಲದೇ, ಏರ್ ಟೆಲ್ ಇತ್ತೀಚೆಗೆ 499 ರೂ. ರೀಚಾರ್ಜ್ ಪ್ಲಾನ್ ಪರಿಚಯಿಸಿತ್ತು. ಈ ಪ್ಲಾನ್ ಅನ್ವಯ ಪ್ರತಿ ದಿನಕ್ಕೆ 2GB ಯಂತೆ 82 ದಿನಗಳ ವ್ಯಾಲಿಡಿಟಿಯೊಂದಿಗೆ 164GB ಡೇಟಾ ನೀಡಲು ಮುಂದಾಗಿತ್ತು. ಈಗ ಈ ಪ್ಲಾನ್ ಅನ್ನು ಏರ್ ಟೆಲ್ ರೀವೈಸ್ ಮಾಡಿದ್ದು, 399 ರೂ.ಗೆ ಪ್ರತಿದಿನಕ್ಕೆ 2.4GB ಡೇಟಾವನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಇದರ ಜೊತೆ ಸಾಮಾನ್ಯವಾಗಿ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಉಚಿತವಾಗಿ ಲಭ್ಯವಿರಲಿವೆ. ಈ ಆಫರ್ ಗಳೊಂದಿಗೆ ಏರ್ ಟೆಲ್ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ತಾನು ಹೊಂದಿರುವ ಬಿಗಿಪಟ್ಟನ್ನು ಇನ್ನಷ್ಟು ಬಿಗಿಯಾಗಿಸಿಕೊಂಡಿದ್ದು, ಜಿಯೋಗೆ ಶಾಕ್ ನೀಡಿದಂತಾಗಿದೆ.


Click it and Unblock the Notifications








