Home
ಸುದ್ದಿಜಾಲ

ಜಿಯೋಗೆ ಎಚ್ಚರಿಕೆ ಸಂದೇಶ: ಏರ್‌ಟೆಲ್‌ನಿಂದ ಬಿಗ್ ಡೇಟಾ ಆಫರ್....!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣ ಬಳಕೆದಾದರ ಬಳಗವನ್ನು ಹೊಂದಿರುವ ಏರ್‌ಟೆಲ್ ಹೊಸ ಪ್ರಯತ್ಮಕ್ಕೆ ಮುಂದಾಗಿದೆ. ಇಷ್ಟು ದಿನ ಜಿಯೋ ವಿರುದ್ಧ ದರ ಸಮರದಿಂದಾಗಿ ತನ್ನ ಪೋಸ್ಟ್ ಪೇಯ್ಡ್ ಮತ್ತು ಬ್ರಾಂಡ್ ಬ್ಯಾಂಡ್ ಪ್ಲಾನ್ ಗಳನ್ನು ಬದಲಾಯಿಸಿ, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದ್ದ ಏರ್‌ಟೆಲ್‌, ಸದ್ಯ ಇದೇ ಮಾದರಿಯಲ್ಲಿ ಪ್ರೀಪೇಯ್ಡ್ ನಲ್ಲಿ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

ಜಿಯೋಗೆ ಎಚ್ಚರಿಕೆ ಸಂದೇಶ: ಏರ್‌ಟೆಲ್‌ನಿಂದ ಬಿಗ್ ಡೇಟಾ ಆಫರ್....!

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಬಳಕೆದಾರರು ರೀಚಾರ್ಜ್ ಮಾಡಿಸಿಕೊಂಡಿರುವ ಪ್ಲಾನ್ ಅನ್ನು ಏರ್‌ಟೆಲ್ ಬದಲಾವಣೆ ಮಾಡಲು ಹೊರಟಿದೆ. ಅಲ್ಲದೇ ಇರದಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಏರ್‌ಟೆಲ್ ತನ್ನ ರೂ.149 ಪ್ಲಾನ್ ಮತ್ತು ರೂ.399 ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿದೆ.

ರೂ.149 ಪ್ಲಾನ್:

ರೂ.149 ಪ್ಲಾನ್:

ಈಗಾಗಲೇ ಮಾರುಕಟ್ಟೆಯಲ್ಲಿ ರೂ.149 ಪ್ಲಾನ್ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಪಡೆದುಕೊಳ್ಳಲಿದೆ. ಇದುವರೆಗೂ 28 ದಿನಗಳ ಅವಧಿಯಲ್ಲಿ ನಿತ್ಯ 1.4 GB ಡೇಟಾವನ್ನು ಮಾತ್ರವೇ ದೊರೆಯುತಿತ್ತು. ಆದರೆ ಇನ್ನು ಮುಂದೆ ನಿತ್ಯ 2 GB ಡೇಟಾವನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ಜಿಯೋಗೆ ದೊಡ್ಡಮಟ್ಟದಲ್ಲಿ ಸೆಡ್ಡು ಹೊಡೆದಿದೆ.

ಎರಡನೇ ಬಾರಿ:

ಎರಡನೇ ಬಾರಿ:

ಈ ಹಿಂದೆಯೂ ಏರ್‌ಟೆಲ್ ರೂ.149 ಪ್ಲಾನ್ ಅನ್ನು ಬದಲಾವಣೆಯನ್ನು ಮಾಡಿತ್ತು. ಮೊದಲು ಕೇವಲ ನಿತ್ಯ 1GB ಡೇಟಾವನ್ನು ಮಾತ್ರವೇ ನೀಡಲಾಗುತಿತ್ತು. ಆದರೆ ನಂತರದಲ್ಲಿ 1.4 GB ಡೇಟಾವನ್ನು ನಿತ್ಯ ನೀಡಲು ಶುರು ಮಾಡಿತು. ಇದಾದ ನಂತರದಲ್ಲಿ ಈಗ ನಿತ್ಯ 2GB ಡೇಟಾವನ್ನು ನೀಡಲು ಮುಂದಾಗಿದೆ.

ರೂ.399 ಪ್ಲಾನ್:

ರೂ.399 ಪ್ಲಾನ್:

ಇದು ಸಹ ಏರ್‌ಟೆಲ್ ಬಿಡುಗಡೆ ಮಾಡಿರುವ ಪ್ಲಾನ್ ಗಳಲ್ಲಿ ಬೆಸ್ಟ್ ಪ್ಲಾನ್ ಎನ್ನಲಾಗಿದ್ದು, ಇದರಲ್ಲಿ ಬಳಕೆದಾರರಿಗೆ ಇದುವರಿಗೆ ನಿತ್ಯ 2 GB ಡೇಟಾವನ್ನು ಬಳಕೆಗೆ ನೀಡಲಾಗುತಿತ್ತು. ಆದರೆ ಸದ್ಯ ಇದರಲ್ಲಿ ಬದಲಾವಣೆಯನ್ನು ಮಾಡಲಾಗಿದ್ದು, ನಿತ್ಯ 2.4GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರಿಂದಾಗಿ ಏರ್‌ಟೆಲ್ ಬಳಕೆದಾರರು ಸಾಕಷ್ಟು ಲಾಭ ಮಾಡಿಕೊಳ್ಳಬಹುದು.

ಜಿಯೋಗೆ ಎಚ್ಚರಿಕೆ:

ಜಿಯೋಗೆ ಎಚ್ಚರಿಕೆ:

ಈಗ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುವ ಸಲುವಾಗಿ ಜಿಯೋಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಈ ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ.

Best Mobiles in India

English summary
Airtel revises Rs 149 and Rs 399 Prepaid Plans. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+