Just In
- 14 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 15 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 16 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 18 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
ವಿಷ್ಣು ಸ್ಮಾರಕ ಉದ್ಘಾಟನೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಿದೆ ಎಂದ ಕಿಚ್ಚ ಸುದೀಪ್
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈಗ ಏರ್‌ಟೆಲ್ 'ಪೋಸ್ಟ್ ಪೇಯ್ಡ್' ಗ್ರಾಹಕರಾಗಲು ಪುಣ್ಯ ಮಾಡಿರಬೇಕು!
ದೇಶದ ಟೆಲಿಕಾಂನಲ್ಲಿ ಮೂರನೇ ಸ್ಥಾನಕ್ಕೆ ಜಾರಿರುವ ಏರ್‌ಟೆಲ್ ಇದೀಗ ತನ್ನ ಪೋಸ್ಟ್ಪೇಯ್ಡ್ ಪ್ಲ್ಯಾನ್‌ಗಳನ್ನು ಭರ್ಜರಿಯಾಗಿ ಪರಿಷ್ಕರಿಸಿದೆ. ಇತ್ತೀಚಿಗಷ್ಟೇ ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದ ಏರ್‌ಟೆಲ್ ಈ ವರ್ಷದಲ್ಲಿ ಮೊದಲ ಬಾರಿಗೆ ತನ್ನ ಪೋಸ್ಟ್ಪೇಯ್ಡ್ ಪ್ಲ್ಯಾನ್ಗಳನ್ನು ಪರಿಷ್ಕರಿಸಿದ್ದು, ಈಗಿರುವ ತನ್ನ 399 ರೂಪಾಯಿಗಳ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಅನ್ನು ರದ್ದುಪಡಿಸಿದೆ. ಆದರೆ, ಉಳಿದ ಪ್ಲ್ಯಾನ್‌ಗಳ ಮೇಲೆ ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ.

ಹೌದು, ದೇಶದಲ್ಲಿ ಜಿಯೋ ಮತ್ತು ವೊಡಾಫೋನ್-ಐಡಿಯಾ ತೀವ್ರ ಸ್ಪರ್ಧೆಯ ಬೆನ್ನಲ್ಲೇ ಏರ್‌ಟೆಲ್ ಹೊಸದಾಗಿ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಗಾಳ ಹಾಕಲು ಮುಂದಾಗಿದೆ. ಹಾಗಾಗಿ, 499 ರೂಪಾಯಿಗಳಿಂದ ಶುರುವಾಗಿರುವ ನೂತನ ನಾಲ್ಕು ಪೋಸ್ಟ್ಪೇಯ್ಡ್ ಪ್ಲ್ಯಾನ್‌ಗಳನ್ನು ಕಂಪೆನಿ ಇದೀಗ ಬಿಡುಗಡೆ ಮಾಡಿದ್ದು, ಈ ಎಲ್ಲಾ ಪ್ಲ್ಯಾನ್‌ಗಳ ಮೇಲೆ ಏರ್‌ಟೆಲ್ ಗ್ರಾಹಕರು ಈ ಮೊದಲು ಕಂಡಿರದ ಭರ್ಜರಿ ಆಫರ್‌ಗಳನ್ನು ಪಡೆಯಬಹುದಾಗಿದೆ. ಹಾಗಾದರೆ, ಏರ್‌ಟೆಲ್ ನೂತನವಾಗಿ ಪರಿಷ್ಕರಿಸಿರುವ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿ ಏನೆಲ್ಲಾ ಆಫರ್‌ಗಳಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏರ್‌ಟೆಲ್ 499 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 499 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 75GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಜತೆಗೆ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಸಹ ಗ್ರಾಹಕರಿಗೆ ಸಿಗಲಿದೆ.

ಏರ್‌ಟೆಲ್ 749 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 749 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 125GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಇದರಲ್ಲಿ ಫ್ರೀ ಆಡ್ ಆನ್ ಕನೆಕ್ಷನ್ ಜೊತೆಗೆ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಗ್ರಾಹಕರಿಗೆ ಸಿಗಲಿದೆ.

ಏರ್‌ಟೆಲ್ 999 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 999 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 150GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಇದರಲ್ಲಿ 3 ರೆಗ್ಯುಲರ್ ಮತ್ತು ಒಂದು ಫ್ರೀ ಆಡ್ ಆನ್ ಕನೆಕ್ಷನ್ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಗ್ರಾಹಕರಿಗೆ ಸಿಗಲಿದೆ.

ಏರ್‌ಟೆಲ್ 1599 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 1599 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 150GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಇದರಲ್ಲಿ 3 ರೆಗ್ಯುಲರ್ ಮತ್ತು ಒಂದು ಫ್ರೀ ಆಡ್ ಆನ್ ಕನೆಕ್ಷನ್ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಜೊತೆಗೆ 200 ನಿಮಿಷಗಳ ಐಎಸ್‌ಡಿ, ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ನಲ್ಲಿ ಶೇ. 10 ಡಿಸ್ಕೌಂಟ್ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470