ಜಿಯೋ ಜೊತೆಗೆ ಸ್ಪರ್ಧಿಸಲು ಏರ್ ಟೆಲ್ ನ ಹೊಸ ಪ್ಲಾನ್ ಗಳು ರೆಡಿ
ಟೆಲಿಕಾಂ ಆಪರೇಟರ್ ಏರ್ ಟೆಲ್ ಹೊಸ ಪ್ಲಾನ್ ಗಳನ್ನು ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದೆ. ಕಂಪೆನಿಯು ಹೊಸದಾಗಿ ರುಪಾಯಿ 49 ಮತ್ತು ರುಪಾಯಿ 98 ರ ಪ್ಲಾನ್ ನ್ನು ತನ್ನ ಚಂದಾದಾರರಿಗಾಗಿ ಬಿಡುಗಡೆಗೊಳಿಸಿದೆ. ಎಲ್ಲಾ ಟೆಲಿಕಾಂ ಸರ್ಕಲ್ ನಲ್ಲೂ ಕೂಡ ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ.

48 ರುಪಾಯಿ ಪ್ಲಾನ್:
ರುಪಾಯಿ 48 ರ ಪ್ಲಾನ್ ನಲ್ಲಿ ಏರ್ ಟೆಲ್ ಬಳಕೆದಾರರಿಗೆ 3 ಜಿಬಿ ಡಾಟಾ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಇನ್ನೊಂದೆಡೆ 98 ರುಪಾಯಿ ಪ್ಲಾನ್ ನಲ್ಲಿ 6ಜಿಬಿ ಡಾಟಾ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಆದರೆ 98 ರುಪಾಯಿ ಪ್ಲಾನಿನ ಅಡಿಯಲ್ಲಿ 10 ಉಚಿತ ರಾಷ್ಟ್ರೀಯ ಎಸ್ಎಂಎಸ್ ಗಳು ಲಭ್ಯವಾಗುತ್ತದೆ.

98 ರುಪಾಯಿ ಪ್ಲಾನ್:
ಹೊಸದಾಗಿರುವ ರುಪಾಯಿ 98 ರ ಪ್ಲಾನ್ ರಿಲಯನ್ಸ್ ಜಿಯೋ 98 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧಿಸುತ್ತದೆ.ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ 2ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ಕರೆಗಳ ಬೆನಿಫಿಟ್ ನ್ನು 98 ರುಪಾಯಿ ಪ್ಲಾನ್ ನ ಅಡಿಯಲ್ಲಿ ನೀಡುತ್ತದೆ.

ಇತರೆ ಬೆನಿಫಿಟ್ ಗಳು:
ಇದರ ಜೊತೆಗೆ ಬಳಕೆದಾರರಿಗೆ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿರುತ್ತದೆ. ರಿಲಯನ್ಸ್ ಜಿಯೋ ಪ್ಲಾನಿನ ಅವಧಿಯು 28 ದಿನಗಳದ್ದಾಗಿರುತ್ತದೆ. ಮೇಲೆ ತಿಳಿಸಿರುವ ಬೆನಿಫಿಟ್ ಗಳ ಜೊತೆಗೆ ಜಿಯೋ ಚಂದಾದಾರರಿಗೆ ಉಚಿತ ಮತ್ತು ಕಾಂಪ್ಲಿಮೆಂಟರಿ ಜಿಯೋ ಸ್ಯೂಟ್ ಆಪ್ ಗೆ ಆಕ್ಸಿಸ್ ಸಿಗುತ್ತದೆ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತರೆ ಆಫರ್ ಗಳು ಕೂಡ ಲಭ್ಯವಿರುತ್ತದೆ.

52 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧೆ:
ಇನ್ನೊಂದೆಡೆ 48 ರುಪಾಯಿಯ ಏರ್ ಟೆಲ್ ಪ್ಲಾನ್ 52 ರುಪಾಯಿ ರಿಲಯನ್ಸ್ ಜಿಯೋ ಪ್ಲಾನ್ ನೊಂದಿಗೆ ಸ್ಪರ್ಧಿಸುತ್ತದೆ. ಬಳಕೆದಾರರಿಗೆ 150ಎಂಬಿ ಡಾಟಾ ಪ್ರತಿದಿನ ಪ್ಲಾನಿನ ಭಾಗವಾಗಿ ಲಭ್ಯವಾಗುತ್ತದೆ. ಇದು 7 ದಿನಗಳ ಅವಧಿಯನ್ನು ಹೊಂದಿರುತ್ತದೆ ಮತ್ತು ಉಚಿತವಾಗಿ 70 ಎಸ್ಎಂಎಸ್ ಗಳನ್ನು ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಮೈ ಜಿಯೋ ಆಪ್ಸ್ ನ್ನು ಆಕ್ಸಿಸ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.

ಏರ್ ಟೆಲ್ ವೋಲ್ಟ್ ಸರ್ವೀಸ್:
ಈ ತಿಂಗಳ ಆರಂಭಕ್ಕೂ ಮುನ್ನ ಏರ್ ಟೆಲ್ ವೋಲ್ಟ್ ಸರ್ವೀಸ್ ನ್ನು ದೇಶದಾದ್ಯಂತ ವಿಸ್ತರಿಸುವ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಇದು ಹೈ ಡೆಫಿನೇಷನ್ನಿನ ವಾಯ್ಸ್ ಸೇವೆಯನ್ನು ಮತ್ತು ನೂತನ ಕಮ್ಯುನಿಕೇಷನ್ ಸೇವೆಯನ್ನು ಎಲ್ಲಾ ಡಿವೈಸ್ ಗಳನ್ನು ಕೂಡ ಒದಗಿಸುತ್ತದೆ. ಎಲ್ ಇಟಿ, ವೈ-ಫೈ, 5ಜಿ ಆಕ್ಸಿಸ್ ಗೆ ಕೂಡ ಇದು ಅವಕಾಶ ನೀಡುತ್ತದೆ.


Click it and Unblock the Notifications








