ಏರ್‌ಟೆಲ್‌ನಿಂದ ಮತ್ತೊಂದು ಹೊಸ ಪ್ಲಾನ್..! ರೂ. 159ಕ್ಕೆ ಪ್ರತಿದಿನ 1GB ಡೇಟಾ..!
ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಅನ್ನಿಸಿಕೊಂಡಿರುವ ಏರ್ ಟೆಲ್ ಹೊಸ ಪ್ಲಾನ್ ವೊಂದನ್ನು ಪ್ರೀಪೇಯ್ಡ್ ಬಳಕೆದಾರರಿಗಾಗಿ ಪರಿಚಯಿಸಿದೆ. ರಿಲಯನ್ಸ್ ಜಿಯೋ ಮತ್ತು ವಡಾಫೋನ್ ಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ರೂ.159 ನ ಪ್ಲಾನ್ ವೊಂದನ್ನು ಈ ಸೇವಾ ಪ್ರೊವೈಡರ್ ಪರಿಚಯಿಸಿದ್ದಾರೆ.

ಹೊಸ ಏರ್ ಟೆಲ್ ಪ್ಲಾನ್ ನಲ್ಲಿ ಏನಿದೆ?
ರೂಪಾಯಿ 159 ಪ್ಲಾನ್ ನಲ್ಲಿ ಏರ್ ಟೆಲ್ 1ಜಿಬಿ ಡಾಟಾ ಮತ್ತು 100 ಎಸ್ಎಂಎಸ್ ನ್ನು ಪ್ರತಿದಿನ ಉಚಿತವಾಗಿ ನೀಡುತ್ತದೆ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನೂ ಒದಗಿಸುತ್ತದೆ. ಈ ಪ್ಲಾನ್ 21 ದಿನಗಳ ಅವಧಿಯನ್ನು ಹೊಂದಿರುತ್ತದೆ.
ಆದರೆ ಈ ಪ್ಲಾನ್ ನಲ್ಲಿ ಒಂದು ಕಂಡೀಷನ್ ಇದೆ. ಯಾವ ಏರ್ ಟೆಲ್ ಗ್ರಾಹಕರು ತಮ್ಮ ಕನೆಕ್ಷನ್ ನ್ನು ಪ್ರೈಮರಿ ಕನೆಕ್ಷನ್ ಆಗಿ ಬಳಸುತ್ತಾರೋ ಅವರಿಗೆ 1ಜಿಬಿ ಡಾಟಾ ಪ್ರತಿದಿನ ಈ ಪ್ಲಾನ್ ನಲ್ಲಿ ಉಚಿತವಾಗಿ ಲಭ್ಯವಾಗುತ್ತದೆ. ಒಂದು ವೇಳೆ ಗ್ರಾಹಕರು ಏರ್ ಟೆಲ್ ನ್ನು ಸೆಕೆಂಡರಿ ಕನೆಕ್ಷನ್ ಆಗಿ ಬಳಸುತ್ತಿದ್ದರೆ ಸಂಪೂರ್ಣ 21 ದಿನಗಳ ಅವಧಿಗೆ 1ಜಿಬಿ ಡಾಟಾ ಉಚಿತವಾಗಿರುತ್ತದೆ ಅಷ್ಟೇ.

ರಿಲಾಯನ್ಸ್ ಪ್ಲಾನ್ ನಲ್ಲಿ ಹೇಗಿದೆ?
159 ರುಪಾಯಿ ಏರ್ ಟೆಲ್ ಪ್ಲಾನ್ ರಿಲಾಯನ್ಸ್ ಜಿಯೋದ 149 ಪ್ಲಾನ್ ಮತ್ತು ವಡಾಫೋನಿನ 159 ಪ್ಲಾನ್ ಗೆ ಸ್ಪರ್ಧೆಯೊಡ್ಡುತ್ತದೆ. ರಿಲಯನ್ಸ್ ಜಿಯೋದ 149 ಪ್ಲಾನ್ ನಲ್ಲಿ 1.5ಜಿಬಿ ಡಾಟಾ ಪ್ರತಿದಿನ ಉಚಿತವಾಗಿರುತ್ತದೆ ಮತ್ತು 100ಎಸ್ಎಂಎಸ್ ಉಚಿತವಾಗಿರುತ್ತದೆ. ಇದು 28 ದಿನಗಳ ಅವಧಿಯನ್ನು ಹೊಂದಿರುತ್ತದೆ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳಿಗೂ ಕೂಡ ಇದು ಅವಕಾಶ ನೀಡುತ್ತದೆ ಜೊತೆಗೆ ಎಲ್ಲಾ ಜಿಯೋ ಸ್ಯೂಟ್ ಆಪ್ ಗಳಿಗೆ ಆಕ್ಸಿಸ್ ನ್ನು ಒದಗಿಸುತ್ತದೆ ಅದರಲ್ಲಿ ಜಿಯೋಸಿನಿಮಾ, ಜಿಯೋ ಟಿವಿ ಮತ್ತು ಇತರೆ ಹಲವನ್ನು ಒಳಗೊಂಡಿರುತ್ತದೆ.

ವೊಡಾಫೋನ್ ಪ್ಲಾನ್ ಹೇಗಿದೆ?
ವೊಡಾಫೋನಿನ ರೂಪಾಯಿ 159 ಪ್ಲಾನ್ ನಲ್ಲಿ 1ಜಿಬಿ ಡಾಟಾ ಪ್ರತಿದಿನ ಉಚಿತವಾಗಿದ್ದು ಅನಿಯಮಿತ ಕರೆಗಳಿಗೆ ಅವಕಾಶವಿರುತ್ತದೆ. ಅಷ್ಟೇ ಅಲ್ಲ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿರುತ್ತದೆ. ವೊಡಾಫೋನಿನ ಈ ಪ್ಲಾನ್ ನ ಅವಧಿ 21 ದಿನಗಳಾಗಿರುತ್ತದೆ.

ಐಫೋನ್ XR ಬುಕ್ ಮಾಡಿ..!
ಏರ್ ಟೆಲ್ ಇತ್ತೀಚೆಗೆ ಆಪಲ್ ಐಫೋನ್ ಎಕ್ಸ್ ಆರ್ ಗೆ ಪ್ರೀಆರ್ಡರ್ ಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಪ್ರಕಟಿಸಿತ್ತು. ಯಾವುದೇ ಗ್ರಾಹಕರು ಇದನ್ನು ಪ್ರೀಬುಕ್ ಮಾಡಲು ಇಚ್ಛಿಸುತ್ತಿದ್ದರೆ ಏರ್ ಟೆಲ್ ಆನ್ ಲೈನ್ ಸ್ಟೋರ್ ಗೆ ಲಾಗ್ ಇನ್ ಆಗಬಹುದು.
14,999 ರುಪಾಯಿಯ ಡೌನ್ ಪೇಮೆಂಟ್ ಮಾಡುವ ಮೂಲಕ ಗ್ರಾಹಕರು ಐಫೋನ್ ಎಕ್ಸ್ಆರ್ ನ್ನು ಪ್ರೀಬುಕ್ ಮಾಡಬಹುದು. ಕಂಪೆನಿಯು ಇಎಂಐ ಆಯ್ಕೆಯನ್ನು ಕೂಡ ನೀಡಲಿದ್ದು ಬಿಲ್ಟ್ ಇನ್ ಪೋಸ್ಟ್ ಪೇಯ್ಡ್ ಪ್ಲಾನ್ ನ್ನು ಕೂಡ ಇದು ಒಳಗೊಂಡಿರುತ್ತದೆ ಇದರಲ್ಲಿ ಡಾಟಾ ಮತ್ತು ಅನಿಯಮಿತ ಕರೆಗಳನ್ನು ಮತ್ತು ಪ್ರೀಮಿಯಂ ಕಟೆಂಟ್ ಗಳನ್ನು ಕೂಡ ಸೇರಿರುತ್ತದೆ. ಅಕ್ಟೋಬರ್ 26,2018 ರ ನಂತರ ಗ್ರಾಹಕರಿಗೆ ಸ್ಮಾರ್ಟ್ ಫೋನ್ ಗಳನ್ನು ತಲುಪಿಸಲಾಗುತ್ತದೆ.


Click it and Unblock the Notifications








