ಏರ್‌ಟೆಲ್‌ನಿಂದ ಪೋರ್ಟ್ ಆಗಬೇಡಿ: ಲಾಂಚ್ ಆಯ್ತು ಬಜೆಟ್ ಡೇಟಾ ಪ್ಲಾನ್..!
ಟೆಲಿಕಾಂ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಸೆಳೆಯ ಬೇಕು ಎನ್ನುವ ಕಾರಣಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಫರ್ ಗಳನ್ನು ಘೋಷಣೆ ಮಾಡುತ್ತಿರುವ ಕಂಪನಿಗಳ ಸಾಲಿನಲ್ಲಿ ಏರ್‌ಟೆಲ್ ಮೊದಲಿದೆ. ಈಗಾಗಲೇ ಹಲವು ಆಫರ್ ಗಳನ್ನು ಲಾಂಚ್ ಮಾಡಿರುವ ಮಾದರಿಯಲ್ಲಿ ಮತ್ತೊಂದು ಬಜೆಟ್ ಬೆಲೆಯ ಆಫರ್ ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ 28 ದಿನಗಳ ಪ್ಲಾನ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಈ ವಿಭಾಗದಲ್ಲಿಯೇ ಹೆಚ್ಚಿನ ಟೆಲಿಕಾಂ ಕಂಪನಿಗಳು ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿವೆ, ಇದಕ್ಕಾಗಿ ಏರ್‌ಟೆಲ್ ಸಹ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾವನ್ನು ಹಾಗೂ ಅನ್‌ಲಿಮಿಡೆಟ್ ಕರೆ ಮಾಡುವ ಆಫರ್ ವೊಂದನ್ನು ನೀಡಿದ್ದು, ಈ ಕುರಿತು ಮಾಹಿತಿಯೂ ಮುಂದಿದೆ.

ರೂ.168 ಪ್ಲಾನ್:
ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ಕಡಿಮೆಗೆ ದೊರೆಯುತ್ತಿರುವ ಪ್ಲಾನ್‌ಗಳಲ್ಲಿ ಇದು ಒಂದು. ಇದರಲ್ಲಿ ಬಳಕೆದಾರರಿಗೆ ರೂ.168ಕ್ಕೆ ಹೆಚ್ಚಿನ ಡೇಟಾ ಮತ್ತು ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರಲ್ಲಿ ಬಳಕೆದಾರರು 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ.

ನಿತ್ಯ 1 GB ಡೇಟಾ;
ಇದಲ್ಲದೇ ರೂ.168 ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವಾಗಲಿದ್ದು, ನಿತ್ಯ 1GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಈ ಪ್ಲಾನ್‌ನಲ್ಲಿ ಒಟ್ಟು 28 GB ಡೇಟಾ ಬಳಕೆ ದೊರೆಯಲಿದೆ .

ಅನ್‌ಲಿಮಿಟೆಡ್ ಕರೆಗಳು:
ಈ ಪ್ಲಾನ್‌ನಲ್ಲಿ ಬಳಕೆದಾರರು ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ನೀಡಲಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ದೇಶದ ಒಳಗೆ ಎಲ್ಲಿಗೆ ಬೇಕಾದರು ಉಚಿತವಾಗಿ ಕರೆ ಮಾಡಿ ಮಾತನಾಡುವ ಅವಕಾಶವು ಇದೆ.

ವೊಡಾಫೋನ್ ಪ್ಲಾನ್:
ಇದೇ ಮಾದರಿಯಲ್ಲಿ ವೊಡಾಫೋನ್ ಸಹ ಪ್ಲಾನ್ ಲಾಂಚ್ ಮಾಡಿದ್ದು, ರೂ.159ಕ್ಕೆ ನಿತ್ಯ 1 GB ಡೇಟಾವನ್ನು ನೀಡುವುದಲ್ಲದೇ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಅದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಶವು ಈ ಪ್ಲಾನ್‌ನಲ್ಲಿ ಲಭ್ಯವಿದೆ.

ಜಿಯೋ ಪ್ಲಾನ್:
ಟೆಲಿಕಾಂ ಮಾರುಕಟ್ಟೆಯ ಕಿಂಗ್ ಎಂದೇ ಕರೆಸಿಕೊಳ್ಳುತ್ತಿರುವ ಜಿಯೋ ಸಹ ಇದೇ ಮಾದರಿಯ ಆಫರ್ ನೀಡುತ್ತಿದೆ. ಇದರಲ್ಲಿ ಬಳಕೆದಾರರಿಗೆ 1.5 GB ಡೇಟಾ ನಿತ್ಯ ಬಳಕೆಗೆ ದೊರೆಯಲಿದ್ದು, ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಇದೆ.


Click it and Unblock the Notifications








