Subscribe to Gizbot

ಏರ್ ಟೆಲ್ ನಿಂದ ಬಳಕೆದಾರರಿಗೆ ಎರಡು ಹೊಸ ಡೇಟಾ ಪ್ಲಾನ್ ಗಳು..!

Posted By: Precilla Dias

ಭಾರತೀಯ ಟೆಲಿಕಾಂ ಕಂಪನಿಗಳಲ್ಲಿ ಅತೀ ದೊಡ್ಡ ಬಳಕೆದಾರರನ್ನು ಹೊಂದಿರುವ ಏರ್ ಟೆಲ್, ತನ್ನ ಬಳಕೆದಾರರಿಗೆ ಹೊಸ ಪ್ರೀಪೇಯ್ಡ್ ಪ್ಲಾನ್ ಗಳನ್ನು ಘೋಷಣೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಎರಡು ಹೊಸ ಪ್ಲಾನ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಇದರಿಂದಾಗಿ ಇನ್ನಷ್ಟು ಮಂದಿ ಏರ್ ಟೆಲ್ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ.

ಏರ್ ಟೆಲ್ ನಿಂದ ಬಳಕೆದಾರರಿಗೆ ಎರಡು ಹೊಸ ಡೇಟಾ ಪ್ಲಾನ್ ಗಳು..!

ಈ ಹಿಂದೆ ರೂ.499ಕ್ಕೆ ನಿತ್ಯ 2GB ಡೇಟಾವನ್ನು 82 ದಿನಗಳ ಕಾಲ ನೀಡುವ ಆಫರ್ ನೀಡಿದ್ದ ಏರ್ ಟೆಲ್. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಕರೆ ಮಾಡುವ ಅವಕಾಶ, ಉಚಿತ SMS ಸೇವೆಗಳನ್ನು ನೀಡುವುದಾಗಿ ತಿಳಿಸಿತ್ತು. ಈಗ ಇದೇ ಮಾದರಿಯ ಆಫರ್ ಅನ್ನು 28 ದಿನಗಳ ಅವಧಿಗೆ ಘೋಷಣೆ ಮಾಡಿದೆ,.

ಸದ್ಯ ಏರ್ ಟೆಲ್ ರೂ,249ಕ್ಕೆ ಪ್ರತಿ ನಿತ್ಯ 2GB ಡೇಟಾವನ್ನು ನೀಡುವ ಆಫರ್ ವೊಂದನ್ನು ಲಾಂಚ್ ಮಾಡಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಬಳಕೆದಾರರಿಗೆ ನಿತ್ಯ 100SMS ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಸಂಪೂರ್ಣ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಆಫರ್ ನಲ್ಲಿ ಬಳಕೆದಾರರಿಗೆ ಲಭ್ಯವಿದೆ.

HP Sprocket First Impressions (Kannada)
ಇದೇ ಮಾದರಿಯಲ್ಲಿ ರೂ.349 ಪ್ಲಾನ್ ವೊಂದನ್ನು ನೀಡಿದ್ದು, ಇದಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 2.5GB ಡೇಟಾ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿಯಲ್ಲಿ ನಿತ್ಯ 100SMS ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಸಂಪೂರ್ಣ ಉಚಿತವಾಗಿ ಕರೆ ಮಾಡುವ ಅವಕಾಶವು ಲಭ್ಯವಿದೆ.

ಎಚ್ಚರ..! ಸಿಮ್ ಸ್ವಾಪ್‌ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುವ ಖದೀಮರು

ಈ ಎರಡು ಪ್ಲಾನ್ ಗಳಲ್ಲಿ ಬಳಕೆದಾರರಿಗೆ ಕ್ರಮವಾಗಿ 56GB ಮತ್ತು 84GB ಡೇಟಾ ಬಳಕೆಗೆ ದೊರೆಯಲಿದೆ. ಎರಡು ಪ್ಲಾನ್ ಗಳು ಒಂದೇ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ಆಫರ್ ಗಳನ್ನು ಏರ್ ಟೆಲ್ ಬಳಕೆದಾರರು ಮೈ ಏರ್ ಟೆಲ್ ಆಪ್ ಮತ್ತು ಏರ್ ಟೆಲ್ ವೆಬ್ ಸೈಟಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಎರಡು ಆಫರ್ ಗಳು ಜಿಯೋ ಸೆಡ್ಡು ಹೊಡೆಯುವ ಸಲುವಾಗಿಯೇ ಬಿಡುಗಡೆಯಾಗಿರುವುದು ಎನ್ನಲಾಗಿದೆ.

English summary
Airtel is competing with Reliance Jio and is refreshing its plans every now and then. The recent news is that Airtel has launched a new prepaid plan for Rs. 249. This plan offers 2GB of data per day, unlimited voice calls and 100 SMS per day for 28 days. Also, the operator has revised the Rs. 349 plan to offer 3GB of daily data and similar benefits.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot