Home
ಸುದ್ದಿಜಾಲ

ಜಿಯೋಗಿಂತಲೂ ಬೆಸ್ಟ್ ಏರ್‌ಟೆಲ್‌ನ ಹೊಸ ಆಫರ್!!

ಜಿಯೋವಿನ ಆಫರ್‌ಗಳ ಬೆಲೆ ಹೆಚ್ಚಾದರೂ ಸಹ ಏರ್‌ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ರೀಚಾರ್ಜ್ ಆಫರ್ ನೀಡುತ್ತಿದೆ.!!

By Bhaskar N J

ಮುಖೇಶ್ ಆಂಬಾನಿ ಒಡೆತನದ ಜಿಯೋ ಟೆಲಿಕಾಂ ತನ್ನ ಆಫರ್‌ಗಳ ಬೆಲೆಯನ್ನು ನಿಧಾನವಾಗಿ ಹೆಚ್ಚಿಸುತ್ತಿದ್ದರೆ, ಇತ್ತ ಜಿಯೋವನ್ನು ಹಣಿಯಲು ಪ್ರಯತ್ನಿಸುತ್ತಿರುವ ಏರ್‌ಟೆಲ್ ತನ್ನ ಆಫರ್‌ಗಳ ಬೆಲೆಯನ್ನು ನಿಧಾನವಾಗಿ ಇಳಿಕೆ ಮಾಡುತ್ತಿದೆ.! ಇದಕ್ಕೆ ಹೊಸ ಸೇರ್ಪಡೆ ಏರ್‌ಟೆಲ್ ನೀಡಿರುವ ಜಿಯೋಗಿಂತಲೂ ಬೆಸ್ಟ್ ಆಫರ್.!!

ಹೌದು, ಜಿಯೋವಿನ ಆಫರ್‌ಗಳ ಬೆಲೆ ಹೆಚ್ಚಾದರೂ ಸಹ ಏರ್‌ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ರೀಚಾರ್ಜ್ ಆಫರ್ ನೀಡುತ್ತಿದೆ. ಇದೀಗ ಕೇವಲ 448 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸೇವೆಗಳನ್ನು ಏರ್‌ಟೆಲ್ ಒದಗಿಸಿದ್ದು, ಈ ಆಫರ್ ಜಿಯೋವಿಗಿಂತಲೂ ಉತ್ತಮವಾಗಿದೆ ಎನ್ನಬಹುದು.! ಹಾಗಾದರೆ, ಈ ಆಫರ್ ಹೇಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏರ್‌ಟೆಲ್ 448 ರೂ.ಆಫರ್!!

ಏರ್‌ಟೆಲ್ 448 ರೂ.ಆಫರ್!!

ಭಾರತದಲ್ಲಿ ಈಗಲೂ ನಂ.ಒನ್ ಟೆಲಿಕಾಂ ಆಗಿ ರಾರಾಜಿಸುತ್ತಿರುವ ಏರ್‌ಟೆಲ್ 448 ರೂಪಾಯಿಗಳ ಹೊಸದೋಂದು ಆಫರ್ ನೀಡಿದೆ. ಈ ಆಫರ್‌ನಲ್ಲಿ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಮಾಡುವ ಸೌಲಭ್ಯವನ್ನು ಏರ್‌ಟೆಲ್ ನೀಡಿದೆ.!!

448 ರೂ.ಆಫರ್ ವ್ಯಾಲಿಡಿಟಿ ಎಷ್ಟು?

448 ರೂ.ಆಫರ್ ವ್ಯಾಲಿಡಿಟಿ ಎಷ್ಟು?

448 ರೂ.ಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ನೀಡಿರುವ ಏರ್‌ಟೆಲ್ 70 ದಿನಗಳ ವ್ಯಾಲಿಡಿಟಿಯನ್ನು ನೀಡಿದೆ.! ಇದೇ ಮೊದಲ ಬಾರಿಗೆ ಕರೆ, ಡೇಟಾ ಮತ್ತು ಎಸ್‌ಎಮ್‌ಎಸ್‌ಗಳ ಆಫರ್ ಅನ್ನು ಹೆಚ್ಚು ವ್ಯಾಲಿಡಿಟಿಯೊಂದಿಗೆ ಏರ್‌ಟೆಲ್ ಪ್ರಕಟಿಸಿದೆ.!!

1GB ನಂತರವು ಡೇಟಾ ಮುಂದುವರಿಕೆ!!

1GB ನಂತರವು ಡೇಟಾ ಮುಂದುವರಿಕೆ!!

448 ರೂಪಾಯಿಗಳ ಏರ್‌ಟೆಲ್ ಆಫರ್‌ನಲ್ಲಿ 70 ದಿನಗಳವರೆಗೆ ಪ್ರತಿದಿನ ಒಂದು ಜಿಬಿ ಡೇಟಾ ನಿಡಿದೆ. ಡೇಟಾ ಖಾಲಿಯಾದ ನಂತರವೂ ಡೇಟಾ ಬಳಕೆಗೆ ಅವಕಾಶವಿದ್ದು, ಪ್ರತಿದಿನ ಒಂದು ಜಿಬಿ ಸ್ಪೀಡ್ ಡೇಟಾ ಖಾಲಿಯಾದ ನಂತರ 64kbps ವೇಗದಲ್ಲಿ ಇಂಟರ್‌ನೆಟ್ ಬ್ರೌಸ್ ಮಾಡಬಹುದು.!

ಪ್ರೀಪೇಡ್ ಆಯ್ದ ಗ್ರಾಹಕರಿಗೆ ಮಾತ್ರ!!

ಪ್ರೀಪೇಡ್ ಆಯ್ದ ಗ್ರಾಹಕರಿಗೆ ಮಾತ್ರ!!

ಏರ್‌ಟೆಲ್‌ ತನ್ನ ಪ್ರೀಪೇಡ್ ಗ್ರಾಹಕರಿಗೆ ಮಾತ್ರ ಈ 448 ರೂಪಾಯಿಗಳ ಆಫರ್ ನೀಡಿದ್ದು, ಆಯ್ದ ಗ್ರಾಹಕರಿಗೆ ಈ ಬಗ್ಗೆ ಸಂದೇಶ ಕಳುಹಿಸಿದೆ. ನೀವು ಏರ್‌ಟೆಲ್‌ನ ಈ ಆಫರ್‌ಗೆ ಲಭ್ಯರಿದ್ದೀರಾ ಎಂದು ತಿಳಿದುಕೊಳ್ಳಲು ಏರ್‌ಟೆಲ್ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡಿ ಚೆಕ್ ಮಾಡಿ.!!

Best Mobiles in India

English summary
airtel Gives Unlimited Voice Calls, 1GB Data Per Day for 70 Days.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+