Home
ಸುದ್ದಿಜಾಲ

Airtel ನ 456 ರುಪಾಯಿ ಪ್ಲಾನ್ ನಲ್ಲಿ ಹೊಸ ಆಫರ್!

By Gizbot Bureau

60 ದಿನಗಳ ಅವಧಿ ಇರುವ ಹೊಸ ಪ್ರಿಪೇಯ್ಡ್ ಪ್ಲಾನ್ ನ್ನು ಭಾರತೀ ಏರ್ ಟೆಲ್ ಸಂಸ್ಥೆ ಬಿಡುಗಡೆಗೊಳಿಸಿದೆ. 'ಟ್ರೂಲಿ ಅನ್ ಲಿಮಿಟೆಡ್’ನ 456 ಪ್ಲಾನ್ 50ಜಿಬಿ ಅಂತರ್ಜಾಲದ ಡಾಟಾ ಮತ್ತು ಅನಿಯಮಿತ ವಾಯ್ಸ್ ಕರೆಗಳು ಮತ್ತು 100 ಎಸ್ಎಂಎಸ್ ನ್ನು ಉಚಿತವಾಗಿ ನೀಡುತ್ತದೆ. ಪ್ರತಿದಿನದ ಲಿಮಿಟ್ ಮೀರಿದ ನಂತರ ಎಸ್ಎಂಎಸ್ ಗೆ ಒಂದು ರುಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಅದೇ ರೀತಿ ಟೆಲ್ಕೋ ಗೆ ಅಂತರ್ಜಾಲದ ಸಂಪರ್ಕದ ಲಿಮಿಟ್ ಮೀರಿದ ನಂತ್ರ ಪ್ರತಿ ಎಂಬಿಗೆ 50 ಪೈಸೆಯಷ್ಟು ಪಾವತಿಯನ್ನು ಮಾಡಬೇಕಾಗುತ್ತದೆ.

Airtel ನ 456 ರುಪಾಯಿ ಪ್ಲಾನ್ ನಲ್ಲಿ ಹೊಸ ಆಫರ್!

ಈ ಹೊಸ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಅಮೇಜಾನ್ ಪ್ರೈಮ್ ವೀಡಿಯೋ ಮೊಬೈಲ್ ಎಡಿಷನ್,ಎರ್ ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ ಮತ್ತು ವೈಯಾಂಕ್ ಮ್ಯೂಸಿಕ್ ಕೂಡ ಉಚಿತವಾಗಿ ಸಿಗಲಿದೆ. ಆದರೆ ಡಿಸ್ನಿ+ಹಾಟ್ ಸ್ಟಾರ್ ವಿಐಪಿ ಉಚಿತ ವಾರ್ಷಿಕ ಚಂದಾದಾರಿಕೆ ಇದರಲ್ಲಿ ಇರುವುದಿಲ್ಲ. ಏರ್ ಟೆಲ್ ಥ್ಯಾಕ್ಸಂ ಆಪ್ ಮೂಲಕ ನೀವು ಈ ರೂಪಾಯಿ 456 ರ ಪ್ಲಾನ್ ನ್ನು ಖರೀದಿಸಬಹುದು ಮತ್ತು ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ಕೂಡ ಖರೀದಿಸುವುದಕ್ಕೆ ಅವಕಾಶವಿರುತ್ತದೆ.

400 ರಿಂದ 500 ರುಪಾಯಿ ರೇಂಜಿನ ಅನೇಕ ಪ್ಲಾನ್ ಗಳನ್ನು ಏರ್ ಟೆಲ್ ನೀಡುತ್ತದೆ. ಏರ್ ಟೆಲ್ಲಿನ 449 ರುಪಾಯಿ ಪ್ಲಾನ್ ಅನಿಯಮಿತ ಕರೆಗಳನ್ನು ಹೊಂದಿದೆ ಮತ್ತು 2GB ಪ್ರತಿದಿನ ಅಂತರ್ಜಾಲದ ಡಾಟಾ, ಏರ್ ಟೆಲ್ ಎಕ್ಸ್ ಟ್ರೀಮ್ ಮತ್ತು ಅಮೇಜಾನ್ ಪ್ರೈಮ್ ಮೊಬೈಲ್ ಎಡಿಷನ್(ಉಚಿತ ಟ್ರಯಲ್) ಮತ್ತು 100 ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಕಳುಹಿಸುವ ಆಫರ್ ನ್ನು ನೀಡುತ್ತದೆ.

ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನೊಂದು ಟ್ರೂಲಿ ಅನಿಯಮಿತ ಪ್ಲಾನ್ ಎಂದರೆ ಅದು 448 ರುಪಾಯಿಯ ಪ್ಲಾನ್ ಆಗಿದೆ. ಇದರಲ್ಲಿ 3ಜಿಬಿ ಪ್ರತಿದಿನ ಡಾಟಾ, ಅನಿಯಮಿತ ವಾಟ್ಸ್ ಕರೆಗಳು ಮತ್ತು 100ಎಸ್ಎಂಎಸ್ ಪ್ರತಿದಿನ ಕಳುಹಿಸಲು ಅವಕಾಶವಿದ್ದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ರಿಪೇಡ್ ಪ್ಲಾನ್ ನಲ್ಲಿ ಉಚಿತ ಡಿಸ್ನಿ+ಹಾಟ್ ಸ್ಟಾರ್ ವಿಐಪಿ ಮತ್ತು ಉಚಿತ ಸ್ಪೋರ್ಟ್ಸ್, ಮೂವೀಸ್ ಹಾಟ್ ಸ್ಟಾರ್ ಸ್ಪೆಷಲ್ ಮತ್ತು ಇತ್ಯಾದಿಗಳನ್ನು ಹೊಂದಿದೆ. ಬೇರೆಬೇರೆ ಬೆಲೆಯ ಪ್ಲಾನ್ ಗಳಲ್ಲಿ ಏರ್ ಟೆಲ್ ಹೆಚ್ಚು ಪ್ರಸಿದ್ಧತೆಯನ್ನು ಪಡೆಯಲು ಇಚ್ಛಿಸುತ್ತದೆ.

ಇದೇ ಬೆಲೆಯಲ್ಲಿ ವಿಐ ಕೂಡ ಹಲವು ಬೆನಿಫಿಟ್ ಗಳಿರುವ ಆಫರ್ ನೀಡುತ್ತದೆ. Rs 449 ಪ್ಲಾನ್ ನಲ್ಲಿ 4ಜಿಬಿ ಪ್ರತಿದಿನದ ಡಾಟಾ ಜೊತೆಗೆ ವೀಕ್ ಎಂಡ್ ಡಾಟಾ ರೋಲ್ ಓವರ್,ವಿಐ ಮೂವೀಸ್ ಮತ್ತು ಟಿವಿ ಮತ್ತು ಬಿಂಗ್ ಆಲ್ ನೈಟ್ ಆಫರ್ ಗಳಿವೆ. ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನೊಂದು ವಡಾಫೋನ್ ಆಫರ್ 499 ರುಪಾಯಿ ಪ್ರಿಪೇಯ್ಡ್ ಪ್ಲಾನ್ ಆಗಿದ್ದು ಅನಿಯಮಿತ ಕರೆಗಳು,1.5 ಪ್ರತಿದಿನ ಅಂತರ್ಜಾಲಕ್ಕಾಗಿ ಡಾಟಾ, ವಿಐ ಮೂವೀಸ್ ಮತ್ತು ಟಿವಿಗಳಿಗೆ ಆಕ್ಸಿಸ್ ನೀಡಲಿದ್ದು 70 ದಿನಗಳ ವ್ಯಾಲಿಡಿಟಿ ಹೊಂದಿದೆ.

Best Mobiles in India

English summary
Airtel Rs. 456 Prepaid Plan Announced With 50GB Data, Unlimited Calling With 60 Days Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+