Subscribe to Gizbot

ಮಾರುಕಟ್ಟೆಗೆ ಮತ್ತೊಂದು ಹೊಸ ಆಫರ್: ರೂ.49ಕ್ಕೆ 3GB ಡೇಟಾ ಕೊಟ್ಟ ಏರ್ ಟೆಲ್..!

Posted By: Lekhaka

ಏರ್ ಟೆಲ್ ತನ್ನ ಬಳಕೆದಾರರಿಗೆ ಹೊಸ ಪ್ರೀಪೇಯ್ಡ್ ಪ್ಲಾನ್ ವೊಂದನ್ನು ಘೋಷಣೆ ಮಾಡಿದೆ. ರೂ.49ರ ಪ್ಲಾನ್ ಲಾಂಚ್ ಮಾಡಿದ್ದು, 3GB 3G/4G ಡೇಟಾವನ್ನು ಒಂದು ದಿನ ವ್ಯಾಲಿಡಿಟಿಗೆ ನೀಡಲಿದೆ ಎನ್ನಲಾಗಿದೆ. ಅಲ್ಲದೇ ಈ ಪ್ಲಾನ್ ಕೆಲವು ಆಯ್ದ ಏರ್ ಟೆಲ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಈ ಹಿಂದೆ ಇದೇ ಬೆಲೆಗೆ ಒಂದು GB ಡೇಟಾವನ್ನು ನೀಡುತಿತ್ತು ಎನ್ನಲಾಗಿದೆ.

ಮಾರುಕಟ್ಟೆಗೆ ಮತ್ತೊಂದು ಹೊಸ ಆಫರ್: ರೂ.49ಕ್ಕೆ 3GB ಡೇಟಾ ಕೊಟ್ಟ ಏರ್ ಟೆಲ್..!

ಈ ಪ್ಲಾನ್ ಅನ್ನು ಪಡೆಯುವ ಸಲುವಾಗಿ ಏರ್ ಟೆಲ್ ಬಳಕೆದಾರರು ಮೈ ಏರ್ ಟೆಲ್ ಆಪ್ ಅನ್ನು ಹಾಕಿಕೊಳ್ಳಬೆಕಾಗಿದೆ. ಅಲ್ಲದೇ ವೆಬ್ ಸೈಟಿನ ಮೂಲಕವು ಪಡೆದುಕೊಳ್ಳಬಹುದಾಗಿದೆ. ಇದು ಡೇಟಾ ವಿಭಾಗದಲ್ಲಿ ಕಾಣಿಸಿಕೊಂಡ ಆಯ್ಕೆಯಾಗಿದೆ. ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ ಎನ್ನಲಾಗಿದೆ.

ಜಿಯೋ ಪ್ಲಾನ್:

ಇದೇ ಮಾದರಿಯಲ್ಲಿ ರೂ.49ರ ಪ್ಲಾನ್ ಹೊಂದಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಆದರೆ ಇದು ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಈ ಪ್ಲಾನ್ ನಲ್ಲಿ ಬಳಕೆದಾರರಿಗೆ 1GB ಡೇಟಾ ಸಹ ದೊರೆಯಲಿದೆ.

4G ಆಪ್ ಗ್ರೇಡ್ ಪ್ಲಾನ್

ಇದಲ್ಲದೇ ಏರ್ ಟೆಲ್ ತನ್ನ ಬಳಕೆದಾರರು 4ಜಿ ಸ್ಮಾರ್ಟ್ ಫೋನ್ ಕೊಂಡು ಕೊಂಡ ಸಂದರ್ಭದಲ್ಲಿ 30GB ಡೇಟಾವನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದ್ದು, ಇದು 2G-3G ಸ್ಮಾರ್ಟ್ ಫೋನ್ ಬಳಕೆದಾರರನ್ನು ಆಕರ್ಷಿಸುವ ಸಲುವಾಗಿ ಲಾಂಚ್ ಮಾಡಿರುವ ಆಫರ್ ಎನ್ನಲಾಗಿದೆ.

ಇತರೆ ಏರ್ಟೆಲ್ ಪ್ಲಾನ್:

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಇದಲ್ಲದೇ ಏರ್ಟೆಲ್ ಹಲವು ಪ್ಲಾನ್ ಗಳನ್ನು ಬಳಕೆದಾರರಿಗೆ ನೀಡಿದೆ ಎನ್ನಲಾಗಿದೆ. ಇದರಲ್ಲಿ ರೂ,65ಕ್ಕೆ 1GB ಡೇಟಾವನ್ನು 28 ದಿನಗಳ ಅವಧಿಗೆ ನೀಡಲಿದೆ ಎನ್ನಲಾಗಿದೆ. ಇದಲ್ಲದೇ ರೂ.249 ಪ್ಲಾನ್ ನಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾ ನೀಡಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದೇ ಮಾದರಿಯಲ್ಲಿ ರೂ.349 ಪ್ಲಾನ್ ಲಭ್ಯವಿದ್ದು ಇದರಲ್ಲಿ ನಿತ್ಯ 3GB ಡೇಟಾವನ್ನು ಬಳಕೆ ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಕರೆ ಮಾಡುವ, ಮೇಸೆಜ್ ಮಾಡುವ ಎಲ್ಲಾ ಅವಕಾಶವನ್ನು ಮಾಡಿಕೊಡಲಾಗಿದೆ.

ನಿಜಕ್ಕೂ ಶಾಕಿಂಗ್ ಸುದ್ದಿ: ಆಕೌಂಟ್ ಇಲ್ಲದವರ ಮಾಹಿತಿಯನ್ನು ಸಂಗ್ರಹಿಸಿದೆ ಫೇಸ್‌ಬುಕ್ ...!

Read more about:
English summary
Airtel introduces a new Rs. 49 prepaid pack to select subscribers. This tariff plan offers 3GB of 3G or 4G data to the users with a validity of 1 day. The previous Rs. 49 plan from Airtel offers just 1GB of data for 1 day but this is applicable to all prepaid customers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot