Subscribe to Gizbot

IPL ನೋಡಲು ಏರ್‌ಟೆಲ್ ಬೆಸ್ಟ್‌: ಇಲ್ಲಿದೇ ಅದ್ಧೂರಿ ಡೇಟಾ ಆಫರ್..!

Written By:

ಟೆಲಿಕಾಂ ಕಂಪನಿಗಳ ದರ ಸಮರವೂ ಕೊನೆಯಾಗುವಂತೆ ಕಾಣುತ್ತಿಲ್ಲ. ಅದರಲ್ಲೂ IPL ಆರಂಭದ ನಂತರದಲ್ಲಿ ಹೆಚ್ಚಿನ ಡೇಟಾವನ್ನು ನೀಡುವಂತಹ ಆಫರ್ ಗಳನ್ನು ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ನೀಡುವಂತಹ ಆಫರ್ ವೊಂದನ್ನು ನೀಡಲು ಮುಂದಾಗಿದ್ದು, ಸ್ಮಾರ್ಟ್‌ಫೋನಿನಲ್ಲಿ IPL ನೋಡಲಿ ಎನ್ನುವ ಕಾರಣಕ್ಕೆ ಈ ಆಫರ್ ನೀಡಲಾಗಿದೆ.

IPL ನೋಡಲು ಏರ್‌ಟೆಲ್ ಬೆಸ್ಟ್‌: ಇಲ್ಲಿದೇ ಅದ್ಧೂರಿ ಡೇಟಾ ಆಫರ್..!

82 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಏರ್‌ಟೆಲ್‌ ರೂ.499 ಪ್ಲಾನ್‌ನಲ್ಲಿ ಬಳಕೆದಾರರು ನಿತ್ಯ 2GB 4G ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. BSNL ನಿತ್ಯ 3GB ಡೇಟಾ ಆಫರ್ ನೀಡಿದ ಮಾದರಿಯಲ್ಲಿಯೇ, ಜಿಯೋ ನಿತ್ಯ 2GB ಡೇಟಾವನ್ನು ನೀಡಿದ ಕಾರಣಕ್ಕೆ ಏರ್‌ಟೆಲ್ ಈ ಹೊಸ ಆಫರ್ ನೀಡಿದೆ ಎನ್ನಲಾಗಿದೆ.

ರೂ.499 ಪ್ಲಾನ್‌ನಲ್ಲಿ ಬಳಕೆದಾರರಿಗೆ ಡೇಟಾ ಮಾತ್ರವಲ್ಲದೇ ಕರೆ ಮಾಡುವ ಅವಕಾಶವನ್ನು ನೋಡಬಹುದಾಗಿದ್ದು, ಅನ್‌ಲಿಮಿಟೆಡ್ ಕರೆಯೊಂದಿಗೆ ರೋಮಿಂಗ್ ಕರೆಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಇದಲ್ಲದೇ 100SMS ಉಚಿತವಾಗಿ ಕಳುಹಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

IPL ನೋಡಲು ಏರ್‌ಟೆಲ್ ಬೆಸ್ಟ್‌: ಇಲ್ಲಿದೇ ಅದ್ಧೂರಿ ಡೇಟಾ ಆಫರ್..!

ಈ ಆಫರ್ ನಲ್ಲಿ ಬಳಕೆದಾರರು 164GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದು, ರೂ.3 ಒಂದ GB ಡೇಟಾಕ್ಕೆ ತಗಲುವ ವೆಚ್ಚವಾಗಿದೆ. ಇದರಿಂದಾಗಿ ಬಳಕೆದಾರರು ಅತೀ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಈ ಬಾರಿ IPL ಮ್ಯಾಚ್‌ಗಳನ್ನು ಸಂಪೂರ್ಣವಾಗಿ ಸಾಧ್ಯವಾಗದಿದ್ದರು ಮನೆ ತಲುಪುವ ದಾರಿಯಲ್ಲಿ ನೋಡಿಕೊಳ್ಳಬಹುದಾಗಿದೆ.

How to find out where you can get your Aadhaar card done (KANNADA)

ಇದಕ್ಕಾಗಿ ಏರ್‌ಟೆಲ್ ಟಿವಿ ಆಪ್‌ನಲ್ಲಿ ಹಾಟ್‌ಸ್ಟಾರ್ ಲೈವ್ ಕಾಣಿಸಿಕೊಂಡಿದ್ದು, ಉಚಿತವಾಗಿ ಏರ್‌ಟೆಲ್ ಬಳಕೆದಾರರು ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಬಾರಿಯ IPL ಕಿಚ್ಚು ಹೆಚ್ಚಿಸಲು ಏರ್‌ಟೆಲ್ ಹೊಸ ಪ್ಲಾನ್‌ಗಳ ಮೇಲೆ ಪ್ಲಾನ್‌ಗಳನ್ನು ನೀಡುತ್ತಿದೆ.

English summary
Airtel Rs. 499 Recharge Pack With 2GB Daily Data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot