ಒಂದೇ ರಿಚಾರ್ಜ್ ನಲ್ಲಿ ಎಷ್ಟು ಲಾಭಗಳು..! ಈ ಪ್ಲಾನ್ ಮುಂದೆ ಜಿಯೋ ಕೂಡ ವೆಸ್ಟ್..!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಫೋಸ್ಟ್ ಪೇಯ್ಡ್ ಆಫರ್ ಗಳ ಅಬ್ಬರವೂ ಜೋರಾಗಿದೆ. ಈಗಾಗಲೇ ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಗಳು ತಮ್ಮ ಬಳಕೆದಾರರಿಗೆ ಹೊಸ ಫೋಸ್ಟ್ ಪೇಯ್ಡ್ ಆಫರ್ ಗಳನ್ನು ಪರಿಚಯಿಸುವ ಮೂಲಕ ಅವರನ್ನು ಸೆಳೆಯವ ಕಾರ್ಯಕ್ಕೆ ಮುಂದಾಗಿವೆ, ಇಷ್ಟು ದಿನಾ ಪ್ರೀಪೇಯ್ಡ್ ಮಾರುಕಟ್ಟೆಯಲ್ಲಿ ಮಾತ್ರವೇ ನಡೆಯುತ್ತಿದ್ದ ದರ ಸಮರವೂ ಫೋಸ್ಟ್ ಪೇಯ್ಡ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಇಲ್ಲಿಯೂ ಸಹ ಜಿಯೋ ಅಬ್ಬರ ಜೋರಾಗಿದ್ದು, ಇದನ್ನು ಉರುಳಿಸುವ ಸಲುವಾಗಿ ಏರ್ ಟೆಲ್ ಹೊಸದೊಂದು ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿದೆ. ಜಿಯೋಗಿಂತಲೂ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಪ್ರಮಾಣದ ಲಾಭವನ್ನು ಬಳಕೆದಾರರಿಗೆ ಮಾಡಿಕೊಡಲು ಏರ್ ಟೆಲ್ ನೂತನ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ಈ ಹೊಸ ಪ್ಲಾನ್ ಕುರಿತ ಮಾಹಿತಿಯೂ ಮುಂದಿದೆ.

90GB ಡೇಟಾ:
ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಏರ್ ಟೆಲ್ ತಿಂಗಳಿಗೆ 90GB ಡೇಟಾವನ್ನು ನೀಡುತ್ತಿದೆ ಎನ್ನಲಾಗಿದೆ. ಈ ಹಿಂದೆ ಇದೇ ಪ್ಲಾನ್ ನಲ್ಲಿ ಬಳಕೆದಾರರಿಗೆ 50 GB ಡೇಟಾವನ್ನು ನೀಡಲಾಗುತ್ತಿತ್ತು. ಆದರೆ ಸದ್ಯ ಪ್ಲಾನ್ ಅನ್ನು ವಿಸ್ತರಿಸಿರುವ ಏರ್ ಟೆಲ್ ಹೆಚ್ಚಿನ ಲಾಭವನ್ನು ಬಳಕೆದಾರರಿಗೆ ನೀಡುತ್ತಿದೆ.

ಅನ್ಲಿಮಿಟೆಡ್ ಕರೆಗಳು:
ಏರ್ ಟೆಲ್ ಲಾಂಚ್ ಮಾಡಿರುವ ರೂ.649 ಪ್ಲಾನ್ ನಲ್ಲಿ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶವೂ ದೊರೆತಿದ್ದು, ಬಳಕೆದಾರರು ಯಾವುದೇ ಮಿತಿ ಇಲ್ಲದೇ ಔಟ್ ಗೊಂಯಿಂಗ್ ಕರೆಗಳನ್ನು ಮಾಡಬಹುದಾಗಿದೆ, ಇದಲ್ಲದೇ ಯಾವುದೇ ರೋಮಿಂಗ್ ಚಾರ್ಜಸ್ ಸಹ ಇರುವುದಿಲ್ಲ.

ಉಚಿತ SMS:
ಏರ್ ಟೆಲ್ ಲಾಂಚ್ ಮಾಡಿರುವ ರೂ.649 ಪ್ಲಾನ್ ನಲ್ಲಿ ಬಳಕೆದಾರರಿಗೆ 90 GB ಡೇಟಾ ದೊರೆಯುವುದಲ್ಲದೇ, ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದು ಮಾತ್ರಲ್ಲದೇ ನಿತ್ಯ 100 SMSಗಳನ್ನು ಕಳುಹಿಸುವ ಅವಕಾಶವು ಬಳಕೆದಾರರಿಗೆ ಇದೆ.

ಅಮೆಜಾನ್ ಪ್ರೈಮ್:
ಏರ್ ಟೆಲ್ ಲಾಂಚ್ ಮಾಡಿರುವ ರೂ.649 ಪ್ಲಾನ್ ನಲ್ಲಿ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ಅನ್ನು ಉಚಿತವಾಗಿ ಪಡೆದುಕೊಳ್ಳುವ ಅವಕಾವನ್ನು ನೀಡಲಾಗಿದ್ದು, ಒಂದು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೇ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ನೋಡ ಬಹುದಾಗಿದೆ.


Click it and Unblock the Notifications








