ಏರ್‌ಟೆಲ್‌ನ ಈ ಪ್ಲಾನ್‌ನಲ್ಲಿ ಸಿಗಲಿದೆ ಡಬಲ್‌ ಧಮಾಕ!

|

ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕಂಪೆನಿಗಳ ಪ್ಲಾನ್‌ಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಈ ಪೈಕಿ ಏರ್‌ಟೆಲ್‌ ಟೆಲಿಕಾಂ ಕಂಪೆನಿ ಕೂಡ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಟಾರಿಫ್‌ ಅನ್ನು ಹೆಚ್ಚಿಸುವ ಉದ್ದೇಶದಿಂದ ಬೇಸ್‌ ಪ್ಲಾನ್‌ ಬೆಲೆಯನ್ನು ಹೆಚ್ಚಳ ಮಾಡಿವೆ. ಇದರ ನಡುವೆ 500ರೂ, ಗಿಂತ ಕಡಿಮೆ ಬೆಲೆಯಲ್ಲಿ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಹೊಂದಿದ್ದು, ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಪ್ರವೇಶವನ್ನು ನೀಡುತ್ತಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಕಂಪೆನಿ ಪರಿಚಯಿಸಿರುವ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳು ಸ್ಟ್ರೀಮಿಂಗ್‌ ಸೇವೆಯನ್ನು ಉಚಿತವಾಗಿ ಪಡೆಯುವುದಕ್ಕೆ ಅವಕಾಶ ನೀಡಿವೆ. ಇನ್ನು ಈಗಾಗಲೇ ಏರ್‌ಟೆಲ್ ಅಮೆಜಾನ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿಯನ್ನು ಏರ್‌ಟೆಲ್ ಚಂದಾದಾರರಿಗೆ ನೀಡುತ್ತಿದೆ. ಜೊತೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಳಕೆದಾರರಿಗಾಗಿ ಒಟಿಟಿ ವಿಷಯವನ್ನು ಕೂಡ ಸೇರಿಸಿದೆ. ಹಾಗಾದ್ರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ನೀಡುವ ಏರ್‌ಟೆಲ್‌ ಪ್ರಿಪೇಯ್ಡ್‌ ಪ್ಲಾನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ 349ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 349ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂ ಕಂಪೆನಿಯ 349ರೂ, ಗಳ ಪ್ರಿಪೇಯ್ಡ್ ಪ್ಲಾನ್‌ ಈ ಹಿಂದೆ 2GB ಹೈಸ್ಪೀಡ್ ಡೇಟಾವನ್ನು 28 ದಿನಗಳ ಮಾನ್ಯತೆಯಲ್ಲಿ ನೀಡುತ್ತಿತ್ತು. ಇದೀಗ ಈ ಪ್ಲಾನ್‌ ಅನ್ನು ಪರಿಷ್ಕರಣೆ ಮಾಡಿದೆ. ಸದ್ಯ ಇದೀಗ ಈ ಪ್ಲಾನ್‌ 2.5GB ದೈನಂದಿನ ಡೇಟಾವನ್ನು ನೀಡಲಿದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಜೊತೆಗೆ ಈ ಪ್ಲಾನ್‌ ಅಮೆಜಾನ್ ಪ್ರೈಮ್‌ಗೆ ಉಚಿತ ಚಂದಾದಾರಿಕೆಯನ್ನು ನೀಡಲಿದೆ. ಈ ಪ್ಲಾನ್‌ನ ಹೆಚ್ಚುವರಿ ಪ್ರಯೋಜನಗಳಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಉಚಿತ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್, ಉಚಿತ ಆನ್‌ಲೈನ್ ಕೋರ್ಸ್‌ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ.

ಏರ್‌ಟೆಲ್‌ 289ರೂ. ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್‌ 289ರೂ. ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್‌ 289ರೂ. ಪ್ರಿಪೇಯ್ಡ್ ಪ್ಲಾನ್ ದೈನಂದಿನ 1.5GB ಡೇಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗಲಿದೆ. ಇನ್ನು ಈ ಪ್ಲಾನ್‌ ಅನ್‌ಲಿಮಿಟೆಡ್‌ ಕಾಲ್‌, ಡೈಲಿ 100 ಎಸ್‌ಎಂಎಸ್‌ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ Zee5 ಪ್ರೀಮಿಯಂಗೆ ಉಚಿತ ಚಂದಾದಾರಿಕೆ ಸಿಗಲಿದ್ದು, ಇದು 28 ​​ದಿನಗಳ ಮಾನ್ಯತೆ ಹೊಂದಿದೆ. ಇದರ ಹೆಚ್ಚುವರಿ ಪ್ರಯೋಜನಗಳಲ್ಲಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಗಳ ಜೊತೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂಗೆ ಚಂದಾದಾರಿಕೆಯೂ ಸೇರಿದೆ.

ಏರ್‌ಟೆಲ್‌ 499 ರೂ. ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್‌ 499 ರೂ. ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್‌ ಇತ್ತೀಚಿಗೆ ಪರಿಚಯಿಸಿರುವ 499 ರೂ. ಪ್ರಿಪೇಯ್ಡ್ ಪ್ಲಾನ್ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಪ್ರಯೋಜನವನ್ನು ನೀಡಲಿದೆ. ಇನ್ನು ಈ ಪ್ಲಾನ್‌ ಮೂಲಕ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದರಲ್ಲಿ ಬಳಕೆದಾರರು 3GB ಡೇಟಾ ಪ್ರಯೋಜನ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು 28 ದಿನಗಳ ಮಾನ್ಯತೆಯೊಂದಿಗೆ ಪಡೆಯಬಹುದಾಗಿದೆ.

ಜಿಯೋ

ಇದಲ್ಲದೆ ಜಿಯೋ ಟೆಲಿಕಾಂ ಕೂಡ ಏರ್‌ಟೆಲ್‌ ಮಾದರಿಯಲ್ಲಿಯೇ ತನ್ನ ಪ್ಲಾನ್‌ಗಳನ್ನು ಅಪ್‌ಡೇಟ್ ಮಾಡಿದೆ. ಈ ಹೊಸ ಪರಿಷ್ಕೃತ ಪ್ಲಾನ್‌ಗಳ ಮೂಲಕ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್‌ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದರಲ್ಲಿ ಜಿಯೋ ಟೆಲಿಕಾಂನ 499ರೂ, ಪ್ಲಾನ್‌ ಕೂಡ ಸೇರಿದೆ. ಇದು ಡೈಲಿ 3GB ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಪ್ರಯೋಜನ‌ವನ್ನು 28 ದಿನಗಳ ಮಾನ್ಯತೆಯಲ್ಲಿ ನೀಡಲಿದೆ.

ವಿ ಟೆಲಿಕಾಂ

ಇನ್ನು ವಿ ಟೆಲಿಕಾಂ ಕೂಡ 501ರೂ ಗಳ ಪ್ಲಾನ್‌ ನಲ್ಲಿ 100GB ಡೇಟಾ ಪ್ರಯೋಜನ ನೀಡುತ್ತಿದೆ. ಈ ಪ್ಲಾನ್‌ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ ಪ್ಲಾನ್‌ ಉಚಿತ ಚಂದಾದಾರಿಕೆಯೊಂದಿಗೆ ದೈನಂದಿನ 100 ಎಸ್‌ಎಂಎಸ್ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಇದಲ್ಲದೆ ವಿ ಟೆಲಿಕಾಂ 299ರೂ ಮತ್ತು 449ರೂ ಗಳ ಪ್ರಿಪೇಯ್ಡ್ ಪ್ಲಾನ್ನಲ್ಲಿ ಡಬಲ್ ಡಾಟಾ ಪ್ರಯೋಜನಗಳನ್ನು ನೀಡುತ್ತಿದೆ. ಜೊತೆಗೆ Zee5 ಪ್ರೀಮಿಯಂಗೆ ಪ್ರವೇಶವನ್ನು ನೀಡಲಿದೆ.

Best Mobiles in India

English summary
Airtel, Jio and Vi also give OTT benefits through their dedicated apps -- Airtel XStream, Jio apps and Vi Movies and TV respectively.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X