ಏರ್‌ಟೆಲ್‌ನಿಂದ ಬಿಗ್‌ ಆಫರ್‌! ಬಳಕೆದಾರರಿಗೆ ಸಿಗಲಿದೆ 6,000ರೂ. ಕ್ಯಾಶ್‌ಬ್ಯಾಕ್!

|

ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್ ಈಗಾಗಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ಲಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಈಗಾಗಲೇ ಹಲವು ಆಯ್ಕೆಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿರುವ ಏರ್‌ಟೆಲ್‌ ಇದೀಗ ಪ್ರಿಪೇಯ್ಡ್ ಬಳಕೆದಾರರಿಗೆ ಹೊಸ ಕ್ಯಾಶ್‌ಬ್ಯಾಕ್ ಆಫರ್‌ ಅನ್ನು ಘೋಷಿಸಿದೆ. ಈ ಆಫರ್‌ನಲ್ಲಿ ಬಳಕೆದಾರರು ಖರೀದಿಸುವ ಆಯ್ದ ಸಾಧನಗಳ ಮೇಲೆ 6,000ರೂ. ಕ್ಯಾಶ್‌ಬ್ಯಾಕ್ ನೀಡುತ್ತಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ತನ್ನ ಪ್ರಿಪೇಯ್ಡ್‌ ಗ್ರಾಹಕರಿಗೆ ಬಿಗ್‌ ಆಫರ್ ಘೋಷಣೆ ಮಾಡಿದೆ. ಈ ಕ್ಯಾಶ್ ಬ್ಯಾಕ್ ಆಫರ್ ಅಗ್ಗದ ಬಜೆಟ್ ಫೋನ್ ಗಳಲ್ಲೂ ಲಭ್ಯವಿದೆ. ಈ ಕ್ಯಾಶ್‌ಬ್ಯಾಕ್ ಆಫರ್ ಸ್ಯಾಮ್‌ಸಂಗ್, ಒಪ್ಪೋ, ರಿಯಲ್‌ಮಿ, ನೋಕಿಯಾ, ಟೆಕ್ನೊ, ಲೆನೊವೊ, ಮೊಟೊರೊಲಾ, ಇನ್ಫಿನಿಕ್ಸ್, ವಿವೋ, ಐಟೆಲ್, ಶಿಯೋಮಿ ಮತ್ತು ಲಾವಾ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಅನ್ವಯಿಸುತ್ತದೆ. ಹಾಗಾದ್ರೆ ಏರ್‌ಟೆಲ್‌ ಘೋಷಿಸಿರುವ 6,000ರೂ. ಕ್ಯಾಶ್‌ಬ್ಯಾಕ್ ಯಾರಿಗೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ತನ್ನ ಪ್ರಿಪೇಯ್ಡ್‌ ಬಳಕೆದಾರರಿಗೆ ಮಾತ್ರ 6,000ರೂ.ಗಳ ಕ್ಯಾಶ್‌ಬ್ಯಾಕ್‌ ನೀಡುತ್ತಿದೆ. ಏರ್‌ಟೆಲ್ ಟೆಲಿಕಾಂನ ಈ ಕ್ಯಾಶ್‌ಬ್ಯಾಕ್ ಆಫರ್ ಸ್ಯಾಮ್‌ಸಂಗ್, ಒಪ್ಪೋ, ರಿಯಲ್‌ಮಿ, ನೋಕಿಯಾ, ಟೆಕ್ನೊ, ಲೆನೊವೊ, ಮೊಟೊರೊಲಾ, ಇನ್ಫಿನಿಕ್ಸ್, ವಿವೋ, ಐಟೆಲ್, ಶಿಯೋಮಿ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಅನ್ವಯಿಸಲಿದೆ. ಇದರಲ್ಲಿ 12,000 ವರೆಗಿನ ಬೆಲೆಯ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಮಾತ್ರ ಈ ಆಫರ್‌ ಮಾನ್ಯವಾಗಲಿದೆ.

ಏರ್‌ಟೆಲ್‌

ಇದಲ್ಲದೆ ಏರ್‌ಟೆಲ್‌ ತನ್ನ ಆಫರ್‌ನಲ್ಲಿ ಕ್ಯಾಶ್‌ಬ್ಯಾಕ್ ಮಾತ್ರವಲ್ಲದೆ, ಫ್ರೀ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಅನ್ನು ಸಹ ಪಡೆಯಬಹುದು. ಇದು ಒಂದು ವರ್ಷದವರೆಗೆ ಮಾತ್ರ ಮಾನ್ಯವಾಗಿರಲಿದೆ. ಇನ್ನು ಏರ್‌ಟೆಲ್ ಥ್ಯಾಂಕ್ಸ್‌ ಪ್ಲಾನ್‌ ಮೂಲಕ ಗ್ರಾಹಕರು ಉಚಿತವಾಗಿ ವಿಂಕ್ ಮ್ಯೂಸಿಕ್ ಮತ್ತು 30 ದಿನಗಳ ಉಚಿತ ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿಯನ್ನು ಸಹ ಪಡೆಯಲಿದ್ದಾರೆ. ಇದಕ್ಕಾಗಿ ಬಳಕೆದಾರರು ತಾವು ಯಾವುದೇ ಸಾಧನವನ್ನು ಖರೀದಿಸುವ ಮೊದಲು, ಅವರು ಖರೀದಿಸಲು ಯೋಜಿಸಿರುವ ಸ್ಮಾರ್ಟ್‌ಫೋನ್‌ ಕ್ಯಾಶ್‌ಬ್ಯಾಕ್ ಪಡೆಯಲು ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಏರ್‌ಟೆಲ್‌ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಬೆಲೆ

ಇನ್ನು ಏರ್‌ಟೆಲ್‌ನ 249ರೂ ಪ್ರಿಪೇಯ್ಡ್‌ ಪ್ಲಾನ್‌ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ರೀಚಾರ್ಜ್ ಮಾಡಿದಾಗ ಮಾತ್ರ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ ಎಂದು ಏರ್‌ಟೆಲ್ ಹೇಳಿದೆ. ಏರ್‌ಟೆಲ್‌ 249ರೂ. ಪ್ರಿಪೇಯ್ಡ್ ಪ್ಲಾನ್ 1.5GB ದೈನಂದಿನ ಡೇಟಾ, ಅನಿಯಮಿತ ಕರೆಗಳು, ದಿನಕ್ಕೆ 100 SMS, ಉಚಿತ ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿಗೆ ಪ್ರವೇಶ ನೀಡುವ ಪ್ರಯೋಜನಗಳನ್ನು ಹೊಂದಿದೆ. ಏರ್‌ಟೆಲ್‌ ಟೆಲಿಕಾಂನ 6,000ರೂ. ಕ್ಯಾಶ್ ಬ್ಯಾಕ್ ಆಫರ್ ಪಡೆಯಲು, 249ರೂ.ಗಳ ರೀಚಾರ್ಜ್‌ ಅನ್ನು 36 ತಿಂಗಳು ನಿರಂತರವಾಗಿ ಖರೀದಿಸಬೇಕಾಗುತ್ತದೆ. ನಂತರ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಎರಡು ಕಂತುಗಳಲ್ಲಿ ಕ್ಯಾಶ್‌ಬ್ಯಾಕ್ ಆಫರ್‌ ನೀಡಲಿದೆ.ಇದರಲ್ಲಿ ಮೊದಲನೆಯ ಕ್ಯಾಶ್‌ಬ್ಯಾಕ್‌ ಆಫರ್‌ 2,000ರೂ.ಸಿಗಲಿದ್ದು, ಇದು 18 ತಿಂಗಳ ನಂತರ ಬರುತ್ತದೆ. ಎರಡನೆಯ ಕ್ಯಾಶ್‌ಬ್ಯಾಕ್‌ನಲ್ಲಿ 4,000 ರೂ. ಸಿಗಲಿದ್ದು, ಇದು 36 ತಿಂಗಳು ಪೂರ್ಣಗೊಂಡ ನಂತರ ದೊರೆಯಲಿದೆ.

ಕ್ಯಾಶ್‌ಬ್ಯಾಕ್

ಒಂದು ವೇಳೆ ಗ್ರಾಹಕರು ಮೊದಲ ಕ್ಯಾಶ್‌ಬ್ಯಾಕ್ ಅನ್ನು ಕ್ಲೇಮ್ ಮಾಡಲು ಮರೆತಿದ್ದರೆ, ಅವರು ಎರಡನೇ ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗಿರುವುದಿಲ್ಲ. ಈ ಆಫರ್ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಲಭ್ಯವಿಲ್ಲ ಮತ್ತು ಪ್ರಿಪೇಯ್ಡ್ ಬಳಕೆದಾರರು ಮಾತ್ರ ಇದರ ಲಾಭವನ್ನು ಪಡೆಯಬಹುದು. ನಿಮ್ಮ ಕ್ಯಾಶ್‌ಬ್ಯಾಕ್ ಅನ್ನು ನಿಮ್ಮ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಏರ್‌ಟೆಲ್‌ ನೆಟ್‌ವರ್ಕ್‌ನಲ್ಲಿ ಹೊಸ ಹ್ಯಾಂಡ್ಸೆಟ್ ಅನ್ನು ಬಳಸಿದ 30 ದಿನಗಳಲ್ಲಿ ಬಳಕೆದಾರರು ಹೊಸ 4G ಹ್ಯಾಂಡ್ಸೆಟ್ ಅನ್ನು ರೀಚಾರ್ಜ್ ಮಾಡಿದರೆ ಮಾತ್ರ ಯಾವುದೇ ಬಳಕೆದಾರರು ಆಫರ್ ಅನ್ನು ಪಡೆಯಲು ಸಾಧ್ಯವಾಗುತ್ತದೆ ಅನ್ನೊದನ್ನ ಗಮನಿಸಬೇಕು.

ಏರ್‌ಟೆಲ್‌

ಇನ್ನು ಏರ್‌ಟೆಲ್‌ನ ಇತರೆ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಅಲ್ಫಾವಧಿಯ ಪ್ಲಾನ್‌ಗಳನ್ನು ಸಹ ಪರಿಚಯಿಸಿದೆ. ಇದರಲ್ಲಿ ಏರ್‌ಟೆಲ್‌ನ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಕೂಡ ಒಂದಾಗಿದೆ. ಈ ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಲೈಫ್‌ ಇನ್ಶೂರೆನ್ಸ್‌ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB (4G/3G/2G ) ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಪ್ರಯೋಜನ ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ.

Best Mobiles in India

English summary
Airtel's new scheme offers a whopping Rs. 6,000 cashback on Xiaomi, Nokia and other smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X