ಏರ್‌ಟೆಲ್‌ನಿಂದ ಬ್ರಾಡ್‌ಬ್ಯಾಂಡ್ ಯುದ್ಧ ಆರಂಭ!..1000 ಜಿಬಿ ವರೆಗೂ ಉಚಿತ ಡೇಟಾ!
ಇದೇ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ರಿಲಯನ್ಸ್ ಜಿಯೋ ಫೈಬರ್ ಹೋಮ್ ಬ್ರಾಡ್‌ಬ್ಯಾಂಡ್ ಸೇವೆಯ ವಾಣಿಜ್ಯ ಬಿಡುಗಡೆಗೆ ತಯಾರಾದ ತಕ್ಷಣವೇ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯುದ್ಧವನ್ನು ಆರಂಭಿಸಿದೆ. ಬ್ರಾಡ್‌ಬ್ಯಾಂಡ್ ಡೇಟಾ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನದಲ್ಲಿ, ಏರ್‌ಟೆಲ್ ತನ್ನ ವಿ-ಫೈಬರ್ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಷ್ಕರಿಸಿ ತನ್ನೆಲ್ಲಾ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಹೆಚ್ಚುವರಿ ಉಚಿತ ಡೇಟಾವನ್ನು ನೀಡುತ್ತಿದೆ.

ಹೌದು, ಪ್ರಸ್ತುತ ಏರ್‌ಟೆಲ್‌ನ ನಾಲ್ಕು ಬ್ರಾಡ್‌ಬ್ಯಾಂಡ್ ಯೋಜನೆಗಳು ಲಭ್ಯವಿವೆ. ಏರ್‌ಟೆಲ್ ಬೇಸಿಕ್ ಪ್ಲಾನ್, ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಪ್ಲಾನ್, ಏರ್‌ಟೆಲ್ ಪ್ರೀಮಿಯಂ ಪ್ಲಾನ್ ಮತ್ತು ಏರ್‌ಟೆಲ್ ವಿಐಪಿ ಪ್ಲಾನ್‌ಗಳ ಮೇಲೆ 100 ರಿಂದ 1000 ಜಿಬಿವರೆಗೂ ಹೆಚ್ಚುವರಿ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಇದು ACT ಫೈಬರ್ನೆಟ್ ಯೋಜನೆಗಳಿಗೆ ಹೋಲುತ್ತಿದ್ದು, ಬಳಕೆದಾರರು ಆಯ್ದ ನಗರಗಳಲ್ಲಿ ಆರು ತಿಂಗಳ ಮಾನ್ಯತೆಯೊಂದಿಗೆ ಒಟ್ಟು 1.5 ಟಿಬಿ ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ ಎಂದು ತಿಳಿದುಬಂದಿದೆ.
ಬ್ರಾಡ್‌ಬ್ಯಾಂಡ್ ಯೋಜನೆಗಳ ಪರಿಷ್ಕರಣೆಯ ನಂತರ, ಏರ್ಟೆಲ್ ಬೇಸಿಕ್ ಅಥವಾ 799 ರೂ ಯೋಜನೆಯು 100 ಜಿಬಿ ಡೇಟಾದೊಂದಿಗೆ ಒಟ್ಟು 200 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಅಥವಾ 1,099 ರೂ ಬ್ರಾಡ್‌ಬ್ಯಾಂಡ್ ಯೋಜನೆ ಒಟ್ಟು 500 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಹಾಗೆಯೇ, 1,599 ರೂ. ಏರ್‌ಟೆಲ್ ವಿಐಪಿ ಯೋಜನೆ ಗ್ರಾಹಕರ ಖಾತೆಗೆ 1 ಟಿಬಿ ಅಥವಾ 1000 ಜಿಬಿ ಹೆಚ್ಚುವರಿ ಡೇಟಾವನ್ನು ಸೇರಿಸುತ್ತದೆ.

ಇನ್ನು ಏರ್‌ಟೆಲ್ ಈಗ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ 99 ರೂ.ಗಳಿಂದ ಪ್ರಾರಂಭವಾಗುವ ಕೆಲವು ಹೊಸ ಡೇಟಾ ಆಡ್-ಆನ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಇದು ಅವರ ಖಾತೆಯ ಎಫ್‌ಯುಪಿ ಮಿತಿಯನ್ನು ಪುನಃ ತುಂಬಲು ಅನುವು ಮಾಡಿಕೊಡುತ್ತದೆ. ಏರ್ಟೆಲ್ ಈ ಆಡ್-ಆನ್ ಯೋಜನೆಗಳನ್ನು ಏರ್ಟೆಲ್ ಸ್ಮಾರ್ಟ್ ಬೈಟ್ಸ್ ಎಂದು ಕರೆಯುತ್ತಿದೆ. 99 ರೂ ಯೋಜನೆಯು 5 ಜಿಬಿ ಡೇಟಾವನ್ನು ನೀಡುತ್ತದೆ, 199 ರೂ 15 ಜಿಬಿ ಡೇಟಾ ಮಿತಿಯೊಂದಿಗೆ ಬರುತ್ತದೆ.
ದೇಶದಲ್ಲಿ ಇಂಟರ್ನೆಟ್ ಸೇವಾ ಪೂರೈಕೆದಾರರು (ಐಎಸ್‌ಪಿಗಳು) ಜಿಯೋ ಫೈಬರ್‌ನ ವಾಣಿಜ್ಯ ಉಡಾವಣೆಯನ್ನು ಎದುರಿಸಲು ತಮ್ಮ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಯೋಜನೆಗಳ ಬೆಲೆಯನ್ನು ಕಡಿತಗೊಳಿಸುತ್ತಿದ್ದರೆ, ಭಾರತಿ ಏರ್‌ಟೆಲ್ ಇದೀಗ ಆ ಅಂಶದತ್ತ ಗಮನ ಹರಿಸುತ್ತಿಲ್ಲ. ತೀರಾ ಇತ್ತೀಚೆಗೆ, ಏರ್ಟೆಲ್ ವಿ-ಫೈಬರ್ ಗ್ರಾಹಕರು ಏರ್ಟೆಲ್ ಥ್ಯಾಂಕ್ಸ್ ಪ್ರಯೋಜನಗಳಿಗೆ ಅರ್ಹರಾಗುತ್ತಾರೆ ಎಂದು ಏರ್ಟೆಲ್ ಘೋಷಿಸಿತು. ಹಾಗಾಗಿ, ಈ 1,099 ರೂ., 1,599 ಮತ್ತು 1,999 ರೂ., 799 ರೂಗಳು ಏರ್‌ಟೆಲ್ ಟಿವಿ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಬರುತ್ತವೆ.


Click it and Unblock the Notifications








