ಜಿಯೋಗೆ ಕೌಂಟರ್ ನೀಡಿದ ಏರ್‌ಟೆಲ್: ಪ್ರೀಪೆಯ್ಡ್ ಬಳಕೆದಾರರಿಗೆ ಮಾತ್ರವೇ ಆಫರ್..!
ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಏರ್‌ಟೆಲ್, ಮಾರುಕಟ್ಟೆಗೆ ಹೊಸದೊಂದು ಪ್ಲಾನ್ ಅನ್ನು ಪರಿಚಯ ಮಾಡಿದ್ದು, ಆ ಮೂಲಕ ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸೆಡ್ಡು ಹೊಡೆಯುವುದಲ್ಲದೇ, ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಈ ಎರಡು ಕಂಪನಿಗಳ ನಡುವಿನ ದರ ಸಮರವೂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿವೆ.

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಬಿಡುಗಡೆ ಮಾಡುವ ಆಫರ್ ಗಳಿಗೆ ಎದುರಾಗಿ ಆಫರ್ ಗಳನ್ನು ಲಾಂಚ್ ಮಾಡುವ ಏರ್‌ಟೆಲ್, ಈ ಬಾರಿಯೂ ಮಾರುಕಟ್ಟೆಗೆ 6GB ಆಡ್ ಆನ್ ಪ್ಯಾಕ್ ಅನ್ನು ಪರಿಚಯ ಮಾಡಿದ್ದು, ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವ ಈ ಆಫರ್ ಬೆಲೆಯೂ ಕಡಿಮೆ ಇದ್ದು, ನೇರವಾಗಿ ಜಿಯೋ ಲಾಂಚ ಮಾಡಿರುವ ಆಫರ್ ಗೆ ಕೌಂಟರ್ ಕೊಡುವ ಮಾದರಿಯಲ್ಲಿದೆ ಎನ್ನಲಾಗಿದೆ.

ಡೇಟಾ ಆಡ್ ಅನ್:
ಏರ್‌ಟೆಲ್ ತನ್ನ ಬಳಕೆದಾರರಿಗೆ ಒಟ್ಟು ಎರಡು ಆಡ್ ಅನ್ ಪ್ಯಾಕ್ ಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಒಂದೊಂದು ಆಫರ್ ಒಂದೊಂದು ಮಾದರಿಯ ಲಾಭವನ್ನು ಮಾಡಿಕೊಡಲಿದೆ. ರೂ.49 ಮತ್ತು ರೂ.93 ಪ್ಲಾನ್ ಲಾಂಚ್ ಆಗಿದ್ದು, ಬಳಕೆದಾರರಿಗೆ ಈ ಕುರಿತು ಮಾಹಿತಿಯೂ ಮುಂದಿದೆ.

ರೂ.49 ಆಡ್ ಅನ್:
ಈ ಪ್ಲಾನಿನಲ್ಲಿ ಬಳಕೆದಾರರಿಗೆ 3GB ಡೇಟಾ ಆಡ್ ಆಗಲಿದೆ. ಇದರಲ್ಲಿ ಬಳಕೆದಾರಿಗೆ ರೂ.49ಕ್ಕೆ ಹೆಚ್ಚಿನ ಡೇಟಾವೂ ದೊರೆಯಲಿದದೆ. ಇದು ಬಳದಾರರಿಗೆ ಮೂರು ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ.


ರೂ.92 ಆಡ್ ಅನ್:
ರೂ.92ಕ್ಕೆ ಬಳಕೆದಾರರಿಗೆ ಏರ್‌ಟೆಲ್ 6GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಇದರಲ್ಲಿ ಬಳಕೆದಾರರಿಗೆ 7 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಅಲ್ಲದೇ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ದೊರೆಯಲಿದೆ.

ಹೆಚ್ಚುವರಿ ಬಳಕೆ:
ಈ ಆಡ್ ಆನ್‌ಗಳು ಬಳಕೆದಾರರಿಗೆ ಹೆಚ್ಚಿನ ಡೇಟಾ ಅವಶ್ಯಕತೆಯನ್ನು ಪೂರೈಸಿಸಲಿದೆ ಎನ್ನಲಾಗಿದೆ. ಇದರಲ್ಲಿ ಹೆಚ್ಚುವರಿ ಡೇಟಾವು ವ್ಯಾಲಿಡಿಟಿಯೊಂದಿಗೆ ದೊರೆಯುವುದು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಇದರಿಂದಾಗಿ ಬಳಕೆದಾರರು ತಮ್ಮ ಡೇಟಾ ಹಸಿವವನ್ನು ಇಲ್ಲಿ ತಣಿಸಿಕೊಳ್ಳಬಹುದಾಗಿದೆ.


Click it and Unblock the Notifications








