ಏರ್‌ಟೆಲ್ ಕೊಟ್ಟ ಆಚ್ಚರಿ ಕೊಡುಗೆಗೆ ಜಿಯೋ ಸಹ ನಡುಗಿದೆ..!
ದೇಶಿಯ ಮಾರುಕಟ್ಟೆಯಲ್ಲಿ ಟೆಲಿಕಾಂ ಕಂಪನಿಗಳ ನಡುವಿನ ಸಮರವೂ ಜೋರಾಗಿ ನಡೆಯುತ್ತಿದ್ದು, ಬಳಕೆದಾರರಿಗೆ ಆಕರ್ಷಕ ಆಫರ್ ಗಳನ್ನು ನೀಡುವ ಮೂಲಕ ಅವರನ್ನು ಸೆಳೆಯುವ ಕಾರ್ಯತಂತ್ರಕ್ಕೆ ಎಲ್ಲಾ ಕಂಪನಿಗಳು ಮುಂದಾಗಿವೆ. ಇದೇ ಮಾದರಿಯಲ್ಲಿ ಜಿಯೋ ಬಳಕೆದಾರರಿಗೆ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿರುವ ರೀತಿಯಲ್ಲಿಯೇ ಏರ್‌ಟೆಲ್ ಹೊಸದೊಂದು ಆಫರ್ ಅನ್ನು ಬಿಡುಗಡೆ ಮಾಡಿದ್ದು, ಮಾರುಟಕ್ಟೆಯೇ ಗಢಗಢ ಎಂದಿದೆ.

ಈಗಾಗಲೇ ದರ ಸಮರದಲ್ಲಿ ಏರ್‌ಟೆಲ್ ಮತ್ತು ಜಿಯೋ ಸಮರಕ್ಕೆ ನಿಂತು ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿವೆ. ಜಿಯೋ ಮಾರುಕಟ್ಟೆಯಲ್ಲಿ ರೂ.199ಕ್ಕೆ ಪೋಸ್ಟ್ ಪೇಯ್ಡ್ ಪ್ಲಾನ್ ಲಾಂಚ್ ಮಾಡಿದ ಮಾದರಿಯಲ್ಲಿ ಏರ್‌ಟೆಲ್ ಅತೀ ಕಡಿಮೆ ಬೆಲೆಗೆ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ರೀಪೇಯ್ಡ್ ಪ್ಲಾನ್ ಲಾಂಚ್ ಮಾಡಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭಗಳನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಏರ್‌ಟೆಲ್ ಲಾಂಚ್ ಮಾಡಿರುವ ರೂ.149 ಪ್ಲಾನ್ ಬಗ್ಗೆ ಮಾಹಿತಿಯೂ ಮುಂದಿದೆ.

ರೂ.149:
ಜಿಯೋ ವಿರುದ್ಧವಾಗಿ ಏರ್‌ಟೆಲ್ ಲಾಂಚ್ ಮಾಡಿರುವ ರೂ.149 ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಲಾಭವು ದೊರೆಯಲಿದೆ. ಇದರದಲ್ಲಿ ಬಳಕೆದಾರರಿಗೆ ಡೇಟಾ, ಉಚಿತ ಕರೆ ಮಾಡುವ ಅವಕಾಶವನ್ನು ಏರ್‌ಟೆಲ್ ಮಾಡಿಕೊಡುತ್ತಿದೆ.

28 ದಿನ ವ್ಯಾಲಿಡಿಟಿ:
ಏರ್‌ಟೆಲ್ ಹೊಸದಾಗಿ ಲಾಂಚ್ ಮಾಡಿರುವ ರೂ.149 ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಇದರಿಂದಾಗಿ ಬಳಕೆದಾರರು ಈ ಪ್ಲಾನ್ ಅನ್ನು ಹೆಚ್ಚು ದಿನಗಳ ಕಾಲ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಲಾಭ ದೊರೆಯಲಿದೆ.

ಪ್ರತಿ ನಿತ್ಯ 1GB ಡೇಟಾ:
ಈ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ನಿತ್ಯ 1GB ಡೇಟಾವನ್ನು ಬಳಕೆಗೆ ನೀಡಲಿದೆ. ಇದೀಮದಾಗಿ ಬಳಕೆದಾರರು ನಿತ್ಯ 1GB 4G ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ.

ಉಚಿತ ಕರೆ:
ಈ ಪ್ಲಾನ್‌ನಲ್ಲಿ ಏರ್‌ಟೆಲ್ ಬಳಕೆದಾರರು ಉಚಿತ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದು, ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಿ ಇರಲಿದೆ. ದೇಶದ ಯಾವುದೇ ಮೂಲೆಗೆ ಹೋದರು ಹಣ ಪಾವತಿಸುವ ಅವ್ಯಕತೆ ಇಲ್ಲ.

ನಿತ್ಯ 100 SMS:
ಏರ್‌ಟೆಲ್ ರೂ.149 ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 100 SMS ಕಳುಹಿಸುವ ಅವಕಾಶವನ್ನು ನೀಡಲಾಗಿದ್ದು, ಇದರಿಂದಾಗಿ ಡೇಟಾ ಇಲ್ಲದೇಯೇ SMS ಮೂಲಕ ಚಾಟ್ ಮಾಡಲು ಇದು ಸಹಾಯವನ್ನು ಮಾಡಲಿದೆ. ಇದರಿಂದಾಗಿ ಬಳಕೆದಾರರಿಗೆ SMS ಲಾಭವು ದೊರೆಯಲಿದೆ.


ಜಿಯೋ ರೂ.149:
ಜಿಯೋ ರೂ.149 ಪ್ಲಾನ್ ಅನ್ನು ಬಳಕೆದಾರರಿಗೆ ನೀಡಿದ್ದು, ಇದು ಸಹ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದಲ್ಲದೇ ಬಳಕೆದಾರರಿಗೆ ನಿತ್ಯ 1.5GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ ಉಚಿತವಾಗಿ ಕರೆಮಾಡುವ ಅವಕಾಶವಲ್ಲದೇ, ರೋಮಿಂಗ್ ಸಹ ಇದರಲ್ಲಿ ಉಚಿತವಾಗಿದೆ.


Click it and Unblock the Notifications








