ಹರಿಯಾಣದಲ್ಲಿ 3G ಸೇವೆ ಸ್ಥಗಿತಗೊಳಿಸಿದ ಏರ್‌ಟೆಲ್
ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಏರ್‌ಟೆಲ್ ಹರಿಯಾಣದಲ್ಲಿ ತನ್ನ 3G ನೆಟ್‌ವರ್ಕ್‌ನ್ನು ಸ್ಥಗಿತಗೊಳಿಸಿದ್ದು, 3G ಗ್ರಾಹಕರನ್ನು 4G ಸೇವೆಗಳಿಗೆ ಸ್ಥಳಾಂತರಿಸಿದೆ. 3G ನೆಟ್‌ವರ್ಕ್ ಮುಚ್ಚುವಿಕೆಯು ದೇಶಾದ್ಯಂತ ಮೂರನೇ ತಲೆಮಾರಿನ ಸೇವೆಗಳನ್ನು ಕ್ರಮೇಣ ಹೊರಹಾಕುವ ಯೋಜನೆಯನ್ನು ಏರ್‌ಟೆಲ್ ಹೊಂದಿದೆ.

ಹರಿಯಾಣದಲ್ಲಿನ ಏರ್‌ಟೆಲ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳು ಈಗ ಹೆಚ್‌ಡಿ ಗುಣಮಟ್ಟದ ವೋಲ್ಟ್ ಕರೆಯೊಂದಿಗೆ ತನ್ನ ಹೈಸ್ಪೀಡ್ 4G ನೆಟ್‌ವರ್ಕ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್‌ನಿಂದ 3G ಸೇವೆ ಸ್ಥಗಿತವಾದ ಎರಡನೇ ಟೆಲಿಕಾಂ ವಲಯ ಹರಿಯಾಣ ಆಗಿದ್ದು, ಈ ಮೊದಲು ಕೊಲ್ಕತ್ತಾ ವಲಯದಲ್ಲಿ 3G ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಏರ್‌ಟೆಲ್ 3G ಸೇವೆ ಬಳಸುತ್ತಿರುವ ಎಲ್ಲಾ ಗ್ರಾಹಕರಿಗೆ ಸೂಚನೆ ನೀಡಲಾಗಿದ್ದು, ಏರ್‌ಟೆಲ್ 4G ಸೇವೆಯಲ್ಲಿ ಮುಂದುವರಿಯಲು ತಮ್ಮ ಹ್ಯಾಂಡ್‌ಸೆಟ್‌ಗಳು ಮತ್ತು ಸಿಮ್‌ಗಳನ್ನು ಅಪ್‌ಗ್ರೇಡ್ ಮಾಡಲು ವಿನಂತಿಸಲಾಗಿದೆ. ಆದಾಗ್ಯೂ, ಏರ್‌ಟೆಲ್ ಫೀಚರ್ ಫೋನ್‌ಗಳಲ್ಲಿ ಗ್ರಾಹಕರ ಸಂಪರ್ಕ ಅಗತ್ಯಗಳನ್ನು ಪೂರೈಸಲು ಹರಿಯಾಣದಲ್ಲಿ 2G ಸೇವೆ ಒದಗಿಸುವುದನ್ನು ಮುಂದುವರಿಸುತ್ತದೆ.
ಗ್ರಾಹಕರು ಹೆಚ್ಚಿನ ವೇಗದ 4G ಸೇವೆಗಳಿಗೆ ಅಪ್‌ಗ್ರೇಡ್ ಮಾಡಲು ಮುಂದಾಗುತ್ತಿರುವವುದರಿಂದ ಸ್ಮಾರ್ಟ್‌ಫೋನ್ ವಾತಾವರಣ 4G ಸಾಧನಗಳ ಕಡೆಗೆ ಸ್ಪಷ್ಟವಾಗಿ ಬದಲಾವಣೆ ಕಾಣುತ್ತಿದೆ. 3G ಸ್ಪೆಕ್ಟ್ರಮ್‌ನಿಂದ 4G ನಿಯೋಜನೆ ಮತ್ತು ವರ್ಧನೆಯು ನಮ್ಮ ರಾಷ್ಟ್ರೀಯ ಕಾರ್ಯತಂತ್ರಕ್ಕೆ ಅನುಗುಣವಾಗಿದೆ ಎಂದು ಭಾರ್ತಿ ಏರ್‌ಟೆಲ್‌ನ ಅಪ್ಪರ್ ನಾರ್ಥ್‌ನ ಹಬ್ ಸಿಇಒ ಮನು ಸೂದ್ ಹೇಳಿದ್ದಾರೆ. ಹರಿಯಾಣದಲ್ಲಿ ಸದ್ಯ ಕಂಪನಿಯು 2100 ಮೆಗಾಹರ್ಟ್ಜ್ ಬ್ಯಾಂಡ್‌ನಲ್ಲಿ 3G ಸೇವೆಯನ್ನು ಒದಗಿಸುತ್ತಿತ್ತು, ಇದೀನ ಅದನ್ನು 4G ಸೇವೆಗಳಿಗೆ ಬಳಸಲಿದೆ.


Click it and Unblock the Notifications








