Home
ಸುದ್ದಿಜಾಲ

ಜಿಯೋಗೆ ತಲೆಕಡಿಸಿದ ಏರ್ ಟೆಲ್ ನೀಡಿರುವ 5 ತಿಂಗಳ ‘ಸೂಪರ್ ಪ್ಲಾನ್’…!

By Srinidhi

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ದರ ಸಮರವನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ಹೊಸ ಆಫರ್ ಗಳನ್ನು ಬಳಕೆದಾರರಿಗೆ ನೀಡುತ್ತಿರುತ್ತವೆ. ಇದೇ ಮಾದರಿಯಲ್ಲಿ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಏರ್ ಟೆಲ್ ಹೊಸದೊಂದು ಪ್ಲಾನ್ ಅನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕುವ ಸಾಧ್ಯತೆಯನ್ನು ಹೊಂದಿದೆ. ಏರ್ ಟೆಲ್ ಬಳಕೆದಾರರು ರಿಚಾರ್ಜ ಮಾಡಿಸುವ ಮುನ್ನ ಈ ಪ್ಲಾನ್ ಅನ್ನು ಒಮ್ಮೆ ನೋಡಿದರೆ ಉತ್ತಮ.

ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ಕಡಿಮೆ ದಿನಗಳ ವ್ಯಾಲಿಡಿಟಿಯ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿಯೇ, ಭಾರ್ತಿ ಏರ್ ಟೆಲ್ ಹೊಸ ಮಾದರಿಯ ಪ್ಲಾನ್ ಘೋಷಣೆ ಮಾಡಿದ್ದು, ಬಳಕೆದಾರರಿಗೆ ಹೆಚ್ಚಿನ ದಿನಗಳ ವ್ಯಾಲಿಡಿಟಿಯನ್ನು ನೀಡುವುದರೊಂದಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತೆ ಏರ್ ಟೆಲ್ ಹವಾ ಜೋರಾಗುವ ಸಾಧ್ಯತೆ ಇದೆ. ಈ ಪ್ಲಾನ್ ನಲ್ಲಿ ಏರ್ ಟೆಲ್ ತನ್ನ ಬಳಕೆದಾರರಿಗೆ ಹೆಚ್ಚಿನದನ್ನು ನೀಡಲಿದೆ.

ಏರ್ ಟೆಲ್ ನೀಡಿರುವ 5 ತಿಂಗಳ ಸೂಪರ್ ಪ್ಲಾನ್…!

5 ತಿಂಗಳಿಗೂ ಹೆಚ್ಚಿನ ವ್ಯಾಲಿಡಿಟಿ

5 ತಿಂಗಳಿಗೂ ಹೆಚ್ಚಿನ ವ್ಯಾಲಿಡಿಟಿ

ಏರ್ ಟೆಲ್ ಹೊಸದಾಗಿ ನೀಡಿರುವ ಪ್ಲಾನ್ ನಲ್ಲಿ ಬಳಕೆದಾರರಿಗೆ 168 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಇದು 5 ತಿಂಗಳಿಗೂ ಹೆಚ್ಚಿನ ಸಮಯವಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಸಾಕು, ಅತೀ ಹೆಚ್ಚು ದಿನಗಳ ವರೆಗೆ ಆಫರ್ ನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಬೆಲೆ ಎಷ್ಟು ಅಂದ್ರಾ..? ಮುಂದೆ ಓದಿ.

ಅನ್ ಲಿಮಿಟೆಡ್ ಕರೆಗಳು

ಅನ್ ಲಿಮಿಟೆಡ್ ಕರೆಗಳು

ಈ ಹೊಸ ಪ್ಲಾನ್ ನಲ್ಲಿ ಬಳಕೆದಾರರಿಗೆ ಏರ್ ಟೆಲ್ 168 ದಿನಗಳ ವರೆಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಬಳಕೆದಾರರು ಯಾವುದೇ ಮಿತಿ ಇಲ್ಲದೇ ಕರೆ ಮಾಡುವ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ರೋಮಿಂಗ್ ಸಹ ಇದರಲ್ಲಿ ಉಚಿತವಾಗಿದೆ.

ನಿತ್ಯ 100 ಎಸ್ಎಂಎಸ್

ನಿತ್ಯ 100 ಎಸ್ಎಂಎಸ್

ಇದಲ್ಲದೇ ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಏರ್ ಟೆಲೆ ನಿತ್ಯ 100 ಮೇಸೆಜ್ ಕಳುಹಿಸುವ ಅವಕಾಶವನ್ನು ಸಹ ಮಾಡಿಕೊಡುತ್ತಿದೆ. ಇದರಿಂದಾಗಿ ಬೇರೆ ಎಲ್ಲಾ ಪ್ಲಾನ್ ಗಳಿಗಿಂತಲೂ ಹೆಚ್ಚಿನ ಲಾಭವನ್ನು ಈ ಪ್ಲಾನ್ ನಲ್ಲಿ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

10 GB ಡೇಟಾ

10 GB ಡೇಟಾ

ಈ ಪ್ಲಾನ್ ನಲ್ಲಿ ಏರ್ ಟೆಲ್ ತನ್ನ ಬಳಕೆದಾರರಿಗೆ ಇಡೀ ವ್ಯಾಲಿಡಿಟಿಗೆ ಕಡಿಮೆ ಎನ್ನುವಂತೆ 10GB ಡೇಟಾವನ್ನು ಮಾತ್ರವೇ ನೀಡುತ್ತಿದೆ. ಇದರಿಂದಾಗಿ ಹೆಚ್ಚಿನ ಡೇಟಾ ಬಳಕೆದಾರರಿಗೆ ಈ ಪ್ಲಾನ್ ಹೇಳಿ ಮಾಡಿಸಿದ್ದಲ್ಲ ಎನ್ನಬಹುದು.

ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ..!

ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ..!

ರೂ.597 ರೀಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರಿಗೆ ಇಷ್ಟು ಪ್ರಮಾಣದ ಲಾಭವನ್ನು ಕಾಣಬಹುದಾಗಿದೆ, ಮಾರುಕಟ್ಟೆಯಲ್ಲಿ ಬೇರೆ ಯಾವುದೇ ಕಂಪನಿಗಳು ಈ ಮಾದರಿಯ ಪ್ಲಾನ್ ಅನ್ನು ಘೋಷಣೆ ಮಾಡಿಲ್ಲ ಎನ್ನಲಾಗಿದೆ. ಬಳಕೆದಾರರಿಗೆ ಈ ಪ್ಲಾನ್ ನಲ್ಲಿ ದೊರೆಯುವಷ್ಟು ಲಾಭ ಬೇರೆ ಎಲ್ಲಿಯೂ ದೊರೆಯುವುದಿಲ್ಲ. ಕರೆ ಮಾಡುವವರಿಗೆ ಇದು ಬೆಸ್ಟ್ ಪ್ಲಾನ್ ಎನ್ನಬಹುದು.

Best Mobiles in India

English summary
Airtel takes on jio launches Rs.597 paln. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+