ಜಿಯೋಗೆ ಮತ್ತೊಂದು ಏಟು..! ಏರ್‌ಟೆಲ್‌ನಿಂದ ದಿನಕ್ಕೆ 3GB ಡೇಟಾ ಆಫರ್..!
2016ರ ನಂತರ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಏರ್‌ಟೆಲ್ ಮತ್ತು ಜಿಯೋ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಇದರ ಲಾಭವನ್ನು ಎರಡು ಟೆಲಿಕಾಂ ಆಪರೇಟರ್‌ಗಳ ಗ್ರಾಹಕರು ಉತ್ತಮವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಬಿಎಸ್‌ಎನ್‌ಎಲ್, ವೊಡಾಫೋನ್ ಸ್ಪರ್ಧೆಯಲ್ಲಿದ್ದರೂ ಏರ್‌ಟೆಲ್ ಮತ್ತು ಜಿಯೋ ಸ್ಪರ್ಧೆ ಗ್ರಾಹಕರಿಗೆ ಬರಪೂರ ಲಾಭವನ್ನು ತಂದುಕೊಡುತ್ತಿದೆ.

ಹೌದು, ಇತ್ತೀಚೆಗೆ ತಾನೇ ಭಾರತದ ಅತಿ ದೊಡ್ಡ್ ನೆಟ್‌ವರ್ಕ್ ಸ್ಥಾನವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ ಬಿಟ್ಟುಕೊಟ್ಟಿರುವ ಏರ್‌ಟೆಲ್ ಗ್ರಾಹಕರನ್ನು ಸೆಳೆಯಲು ಹೊಸ ಪ್ಲಾನ್ ಒಂದನ್ನು ಘೋಷಿಸಿದ್ದು, 200 ರೂ. ಒಳಗೆ ದಿನಕ್ಕೆ 3GB ಡೇಟಾ ಆಫರ್ ನೀಡಿ ಜಿಯೋ ಮತ್ತು ಬಿಎಸ್‌ಎನ್‌ಎಲ್‌ಗೆ ದೊಡ್ಡ ಹೊಡೆತವನ್ನು ನೀಡಿದೆ.

ಅದಲ್ಲದೇ ಸದ್ಯಕ್ಕೆ ಯಾವ ಟೆಲಿಕಾಂ ಆಪರೇಟರ್‌ಗಳು 200 ರೂ. ಒಳಗೆ ಇಂತಹ ಆಫರ್ ನೀಡಿಲ್ಲದಿರುವುದು ಏರ್‌ಟೆಲ್‌ಗೆ ವರದಾನವಾಗಿದೆ. ಆಗಿದ್ರೇ ಈ ಪ್ಲಾನ್‌ನಲ್ಲಿ ಏನೇನಿದೆ..? ಬೇರೆ ಆಪರೇಟರ್‌ಗಳು ಯಾವ ಆಫರ್‌ಗಳನ್ನು ನೀಡುತ್ತಿದ್ದಾರೆ..? ವ್ಯಾಲಿಡಿಟಿ ಎಷ್ಟು ..? ಎಂಬುದನ್ನು ಮುಂದೆ ನೋಡಿ.

181 ರೂ. ಪ್ಲಾನ್
ಏರ್‌ಟೆಲ್ 181 ರೂ. ಪ್ಲಾನ್ ಘೋಷಿಸಿದೆ. ಈ ಪ್ಲಾನ್ ಅನ್ವಯ ಗ್ರಾಹಕ ಒಟ್ಟಾರೆ 42GB ಡೇಟಾವನ್ನು ಪಡೆಯಲಿದ್ದಾನೆ. ಏರ್‌ಟೆಲ್ ಪರಿಚಯಿಸಿರುವ ಹೊಸ ಪ್ಲಾನ್ ಹಿಂದೆ ಬಂದಿದ್ದ 199 ರೂ. ಪ್ಲಾನ್‌ನ ಮತ್ತೊಂದು ಅವತರಣಿಕೆಯಾಗಿದೆ. ಅಲ್ಲಿಯೂ ಕೂಡ 28 ದಿನಗಳಿಗೆ ದಿನಕ್ಕೆ 1.4GBಯಂತೆ 42GB ಡೇಟಾವನ್ನು ಗ್ರಾಹಕ ಪಡೆಯುತ್ತಿದ್ದ.

ದಿನಕ್ಕೆ 3GB ಡೇಟಾ
ಏರ್‌ಟೆಲ್‌ನ ಹೊಸ ಪ್ಲಾನ್ ದಿನಕ್ಕೆ 3GB ಡೇಟಾವನ್ನು ನೀಡುತ್ತಿದೆ. ಈ ಪ್ಲಾನ್ 14 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಕರೆ ಹಾಗೂ ಪ್ರತಿನಿತ್ಯ 100 ಉಚಿತ ಎಸ್‌ಎಂಎಸ್‌ಗಳನ್ನು ಪಡೆಯಲಿದ್ದಾರೆ.

ಜಿಯೋ, ಬಿಎಸ್‌ಎನ್‌ಎಲ್ ಟಾರ್ಗೇಟ್
ರಿಲಾಯನ್ಸ್ ಜಿಯೋ 198 ರೂ. ಪ್ಲಾನ್‌ನಲ್ಲಿ 2GB ಡೇಟಾದ ಜತೆಗೆ ಅನಿಯಮಿತ ಎಸ್‌ಟಿಡಿ ಹಾಗೂ ಸ್ಥಳೀಯ ಕರೆಗಳನ್ನು ನೀಡುತ್ತಿತ್ತು. ಅದಲ್ಲದೇ ಬಳಕೆದಾರನಿಗೆ ದಿನಕ್ಕೆ 100 ಎಸ್‌ಎಂಎಸ್ ಉಚಿತವಾಗಿ ದೊರೆಯುತ್ತವೆ. ಇನ್ನು ಬಿಎಸ್‌ಎನ್‌ಎಲ್ ಪ್ಲಾನ್ ಗಮನಿಸಿದರೆ, 187 ರೂ. ಪ್ಲಾನ್‌ನಲ್ಲಿ ದಿನಕ್ಕೆ 3.2GB ಡೇಟಾವನ್ನು ಬಿಎಸ್‌ಎನ್‌ಎಲ್ ನೀಡುತ್ತಿತ್ತು. ಇದರ ಜತೆಗೆ ಅನಿಯಮಿತ ಕರೆ ಮತ್ತು ಉಚಿತ ಎಸ್‌ಎಂಎಸ್‌ಗಳು ಇದ್ದವು. ಜಿಯೋ ಮತ್ತು ಬಿಎಸ್‌ಎನ್‌ಎಲ್ ಎರಡು ಪ್ಲಾನ್‌ಗಳು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ.

ಏರ್‌ಟೆಲ್ 97 ರೂ. ಪ್ಲಾನ್
ಕಳೆದ ತಿಂಗಳು ಏರ್‌ಟೆಲ್ 97 ರೂ. ಪ್ಲಾನ್‌ನ್ನು ಘೋಷಿಸಿತ್ತು. ಇದರನ್ವಯ 350 ನಿಮಿಷ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಸೇವೆ ಹಾಗೂ 1.5GB ಡೇಟಾ ಮತ್ತು 200 ಸ್ಥಳೀಯ ಹಾಗೂ ಎಸ್‌ಟಿಡಿ ಎಸ್‌ಎಂಎಸ್‌ಗಳು ಉಚಿತವಾಗಿ 97 ರೂ.ಗೆ ದೊರೆಯುತ್ತಿತ್ತು. ಈ ಪ್ಲಾನ್‌ಗಳನ್ನು ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್ ಮತ್ತು ಮೈ ಏರ್‌ಟೆಲ್ ಆಪ್‌ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು.


Click it and Unblock the Notifications








