ಏರ್‌ಟೆಲ್‌ನ ಈ ಪ್ಲ್ಯಾನಿನಲ್ಲಿ 210GB ಡೇಟಾ ಗ್ಯಾರಂಟಿ!..ವ್ಯಾಲಿಡಿಟಿ ಮತ್ತು ಬೆಲೆ ಎಷ್ಟು?
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಏರ್‌ಟೆಲ್, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಏರ್‌ಟೆಲ್ ಅಧಿಕ ಡೇಟಾ ಪ್ರಯೋಜನದ ಪ್ರೀಪೇಯ್ಡ್ ಪ್ಲ್ಯಾನ್ ಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಡೇಟಾ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಆ ಪೈಕಿ ಏರ್‌ಟೆಲ್ ಈ ಒಂದು ಪ್ಲ್ಯಾನಿನಲ್ಲಿ 210 GB ಡೇಟಾ ಪಕ್ಕಾ.

ಹೌದು, ಏರ್‌ಟೆಲ್ ಟೆಲಿಕಾಂನ 999ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಹೊಂದಿದ್ದು, ಹಾಗೆಯೇ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪಡೆದಿದ್ದು, ಇದರೊಂದಿಗೆ ಏರ್‌ಟೆಲ್ ಆಪ್ಸ್‌ಗಳ ಪ್ರಯೋಜನಗಳು ಸಹ ಲಭ್ಯವಾಗಲಿವೆ. ಹಾಗಾದರೇ ಏರ್‌ಟೆಲ್‌ನ 999ರೂ. ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಯೋಗ್ಯವೇ?..ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ಓದಿರಿ.

ಏರ್‌ಟೆಲ್ 999ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ 999ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2.5 GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 210GB ಡೇಟಾ ಗ್ಯಾರಂಟಿ ಸಿಗುತ್ತದೆ. ಹಾಗೆಯೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್ ಅಮೆಜಾನ್ ಪ್ರೈಮ್‌ನ ಒಂದು ತಿಂಗಳ ಚಂದಾದಾರಿಕೆ ಸಿಗಲಿದ್ದು, ಏರ್‌ಟೆಲ್‌ನ Wynk Music ಸೇವೆ ಸಹ ದೊರೆಯುತ್ತದೆ. ಇದರೊಂದಿಗೆ ಹೆಲೊಟೂನ್ಸ್ ಮತ್ತು 100 ರೂ. ಫಾಸ್ಟ್‌ಟ್ಯಾಗ್ ಕ್ಯಾಶ್-ಬ್ಯಾಕ್ ಸಹ ಸಿಗಲಿದೆ.

ಏರ್‌ಟೆಲ್ 299 ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂ 299ರೂ.ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಈ ಯೋಜನೆಯಲ್ಲಿಯೂ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.

ಏರ್‌ಟೆಲ್ 265 ರೂ.ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್ಟೆಲ್ 265ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ ಕೂಡ 28 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಡೇಟಾ ಲಭ್ಯವಿದೆ. ಇದಲ್ಲದೆ ಎಲ್ಲಾ ನೆಟ್‌ವರ್ಕ್ ಬೆಂಬಲಿಸುವ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್ ಸೇವೆಗಳು ಲಭ್ಯವಾಗಲಿದೆ. ಈ ಯೋಜನೆಯೊಂದಿಗೆ ಅಮೆಜಾನ್ ಪ್ರೈಮ್ ವೀಡಿಯೊಗೆ ಮೊಬೈಲ್ ಚಂದಾದಾರಿಕೆಯು ಒಂದು ತಿಂಗಳವರೆಗೆ ಲಭ್ಯವಿರುತ್ತದೆ.

ಏರ್ಟೆಲ್ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್ ಪ್ಯಾನ್‌ಗಳಲ್ಲಿ ಒಂದಾಗಿರುವ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಲಭ್ಯ. ಇದರೊಂದಿಗೆ ಪ್ರತಿದಿನ 3GB ಡೇಟಾ ಪ್ರಯೋಜನಗಳು ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಿವೆ.


Click it and Unblock the Notifications








