ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ನಿಂದ ಹೊಸ ಪ್ರಯೋಗ..!
ದೇಶಿಯ ಮಾರುಕಟ್ಟೆಯಲ್ಲಿ ಟೆಲಿಕಾಂ ಕಂಪನಿಗಳು ಕೇವಲ ಗ್ರಾಹಕರಿಗೆ ಕರೆ ಮಾಡುವ ಮತ್ತು ಡೇಟಾ ಸೇವೆಯನ್ನು ನೀಡುವುದರೊಂದಿಗೆ ಇನ್ನು ಹಲವು ಸೇವೆಗಳನ್ನು ನೀಡಲು ಮುಂದಾಗಿವೆ. ಇದೆಲ್ಲವೂ ಜಿಯೋ ನಂತರದಲ್ಲಿ ಆಚರಣೆಗೆ ಬಂದಿದೆ ಎನ್ನಲಾಗಿದೆ. ಜಿಯೋದೊಂದಿಗೆ ಸೆಣೆಸಲು ಉಳಿದ ಕಂಪನಿಗಳು ಬೇರೆ ಬೇರೆ ಸೇವೆಯನ್ನು ಬಳಕೆದಾರರಿಗೆ ಉಚಿತವಾಗಿ ನೀಡುತ್ತಿವೆ.

ಜಿಯೋ ತನ್ನ ಬಳಕೆದಾರರಿಗೆ ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಿದ ಬೆನ್ನಲೇ ಏರ್‌ಟೆಲ್ ತನ್ನ ತನ್ನದೇ ಮೂವಿ ಆಪ್ ಬಿಡುಗಡೆ ಮಾಡಿದ್ದು, ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರರೊಂದಿಗೆ ಮತ್ತೊಂದು ಸೇವೆಯನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಹಾಟ್ ಸ್ಟಾರ್ ನೊಂದಿಗೆ:
ಏರ್‌ಟೆಲ್ ತನ್ನ ಬಳಕೆದಾರರಿಗೆ ಹೆಚ್ಚಿನ ಮನರಂಜನೆಯನ್ನು ನೀಡಬೇಕು ಎನ್ನುವ ಕಾರಣಕ್ಕೆ ಹಾಟ್ ಸ್ಟಾರ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಹಾಟ್ ಸ್ಟಾರ್ ಕಂಟೆಂಟ್ ಗಳು ಇನ್ನು ಮುಂದೆ ಏರ್‌ಟೆಲ್ ಬಳಕೆದಾರರಿಗೆ ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ.

ಹೆಚ್ಚಿನ ಡಿಜಿಟಲ್ ಮನರಂಜನೆ:
ಇದರಿಂದಾಗಿ ಏರ್‌ಟೆಲ್ ಬಳಕೆದಾರರಿಗೆ ಹೆಚ್ಚಿನ ಮನರಂಜನೆಯೂ ದೊರೆಯಲಿದೆ ಎನ್ನಲಾಗಿದೆ. ಏರ್‌ಟೆಲ್ ಮೂವೀಸ್ ನಲ್ಲಿ ಅಮೆಜಾನ್ ಪ್ರೈಮ್ ನೊಂದಿಗೆ ಹಾಟ್ ಸ್ಟಾರ್ ಅನ್ನು ನೋಡುವ ಅವಕಾಶ ದೊರೆಯಲಿದೆ.

ಲೈವ್ ಕ್ರಿಕೆಟ್:
ಇದರಿಂದಾಗಿ ಏರ್‌ಟೆಲ್ ಬಳಕೆದಾರರು ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುವ ಲೈವ್ ಕ್ರಿಕೆಟ್ ಅನ್ನು ಉಚಿತವಾಗಿ ಆನ್ ಟೈಮಿನಲ್ಲಿ ನೋಡಬಹುದಾಗಿದೆ. ಈ ಹಿನ್ನಲೆಯಲ್ಲಿ ಇದು ಏರ್‌ಟೆಲ್ ಬಳಕೆದಾರರಿಗೆ ಬಂಪರ್ ಅವಕಾಶವಾಗಲಿದೆ.

ಜಿಯೋಗೆ ಸೆಡ್ಡು:
ಏರ್‌ಟೆಲ್ ಜಿಯೋ ಸಿನಿಮಾ ಮತ್ತು ಜಿಯೋ ಟಿವಿಯನ್ನು ಸೆಡ್ಡು ಹೊಡೆಯುವ ಸಲುವಾಗಿ ಈ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಹೆಚ್ಚಿನ ಜನರನ್ನು ಸೆಳೆಯಲಿದೆ ಎನ್ನಲಾಗಿದೆ.


Click it and Unblock the Notifications








