Home
ಸುದ್ದಿಜಾಲ

ಡೌನ್‌ಲೋಡಿಂಗ್‌ನಲ್ಲಿ ಏರ್‌ಟೆಲ್‌ ಫಸ್ಟ್‌..! 4Gಯಲ್ಲಿ ಜಿಯೋ ಬೆಸ್ಟ್‌..!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮತ್ತು ಏರ್‌ಟೆಲ್‌ ನಡುವೆ ಭಾರೀ ಸ್ಪರ್ಧೆ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ಸ್ಪರ್ಧೆ ಜನರಿಗೆ ಭರಪೂರ ಲಾಭವನ್ನು ತಂದುಕೊಡುತ್ತಿದೆ. ಎರಡು ಟೆಲಿಕಾಂ ಆಪರೇಟರ್‌ಗಳು ಗ್ರಾಹಕರ ಸೆಳೆಯಲು ಆಕರ್ಷಕ ಆಫರ್‌ಗಳನ್ನು ಘೋಷಿಸುತ್ತಲೆ ಬಂದಿವೆ. ಆದರೆ, ಈಗ ನಾವು ಹೇಳೋಕೆ ಹೊರಟಿರೋದು ಆಫರ್‌ ಬಗ್ಗೆ ಅಲ್ಲ.

ಡೌನ್‌ಲೋಡಿಂಗ್‌ನಲ್ಲಿ ಏರ್‌ಟೆಲ್‌ ಫಸ್ಟ್‌..! 4Gಯಲ್ಲಿ ಜಿಯೋ ಬೆಸ್ಟ್‌..!

ಹೌದು, ಒಪನ್‌ ಸಿಗ್ನಲ್‌ ಒಂದು ವರದಿಯನ್ನು ಪ್ರಕಟಿಸಿದ್ದು, ಇಲ್ಲೂ ಕೂಡ ಜಿಯೋ ಮತ್ತು ಏರ್‌ಟೆಲ್‌ ಭಾರೀ ಮುಖಾಮುಖಿಯಾಗಿವೆ. ಒಂದರಲ್ಲಿ ಏರ್‌ಟೆಲ್‌ ಬೆಸ್ಟ್‌ ಇದ್ದರೆ, ಇನ್ನೊಂದರಲ್ಲಿ ಜಿಯೋ ಉತ್ತಮವಾಗಿದೆ. ಒಪನ್‌ ಸಿಗ್ನಲ್‌ ಪ್ರಕಟಿಸಿರುವ ಮೊಬೈಲ್‌ ನೆಟ್‌ವರ್ಕ್‌ ಅನುಭವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಆಗಿದ್ರೆ, ಒಪನ್‌ ಸಿಗ್ನಲ್‌ ಪ್ರಕಟಿಸಿರುವ ವರದಿಯಲ್ಲಿ ಏನೀದೆ..? ನಿಜವಾಗಲೂ ಯಾವುದು ಬೆಸ್ಟ್‌ ಎಂಬುದನ್ನು ಮುಂದೆ ನೋಡಿ.

ಡೌನ್‌ಲೋಡಿಂಗ್‌ನಲ್ಲಿ ಏರ್‌ಟೆಲ್‌ ಬೆಸ್ಟ್‌

ಡೌನ್‌ಲೋಡಿಂಗ್‌ನಲ್ಲಿ ಏರ್‌ಟೆಲ್‌ ಬೆಸ್ಟ್‌

ಒಪನ್‌ ಸಿಗ್ನಲ್‌ ಪ್ರಕಟಿಸಿರುವ ವರದಿಯಲ್ಲಿ ಏರ್‌ಟೆಲ್‌ ಬೆಸ್ಟ್‌ ಡೌನ್‌ಲೋಡಿಂಗ್‌ ವೇಗವನ್ನು ಹೊಂದಿದೆ. ಏರ್‌ಟೆಲ್‌ 7.53Mbps ವೇಗವನ್ನು ಹೊಂದಿದೆ. ಡೌನ್‌ಲೋಡಿಂಗ್‌ ವೇಗದಲ್ಲಿ ಜಿಯೋ 5.47Mbps ಹಾಗೂ ವೊಡಾಫೋನ್‌ 5.20Mbps ವೇಗ ಹೊಂದಿವೆ. ಇನ್ನು ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ಗಳು ಕ್ರಮವಾಗಿ 4.92Mbps ಮತ್ತು 2.70Mbps ವೇಗವನ್ನು ಹೊಂದಿವೆ.

ಅಪ್‌ಲೋಡಿಂಗ್‌ನಲ್ಲಿ ವೊಡಾಫೋನ್‌ ಐಡಿಯಾ ಟಾಪ್‌

ಅಪ್‌ಲೋಡಿಂಗ್‌ನಲ್ಲಿ ವೊಡಾಫೋನ್‌ ಐಡಿಯಾ ಟಾಪ್‌

ಇನ್ನು ಅಪ್‌ಲೋಡಿಂಗ್‌ ಸ್ಪೀಡ್‌ನಲ್ಲಿ ಯಾರು ಟಾಪ್‌ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮಹಾ ಸಮ್ಮಿಲನ ಎಂದೇ ಕರೆಸಿಕೊಂಡಿರುವ ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಮೊದಲ ಎರಡು ಸ್ಥಾನಗಳನ್ನು ಪಡೆದಿದೆ. ಅದರಲ್ಲೂ ಐಡಿಯಾ ಅಪ್‌ಲೋಡಿಂಗ್‌ನಲ್ಲಿ ಬೆಸ್ಟ್‌ ಆಗಿದ್ದು, ಅಪ್‌ಲೋಡಿಂಗ್‌ ಸ್ಪೀಡ್‌ 2.88Mbps ಇದೆ. ಇನ್ನು ವೊಡಾಫೋನ್‌ 2.31Mbps ಅಪ್‌ಲೋಡಿಂಗ್‌ ವೇಗ ಹೊಂದಿದೆ. ಏರ್‌ಟೆಲ್‌, ಜಿಯೋ ಮತ್ತು ಬಿಎಸ್‌ಎನ್‌ಎಲ್‌ಗಳು ಕ್ರಮವಾಗಿ 1.90Mbps. 1.58Mbps ಮತ್ತು 0.78Mbps ಅಪ್‌ಲೋಡಿಂಗ್‌ ವೇಗವನ್ನು ಹೊಂದಿವೆ.

4G ಲಭ್ಯತೆಯಲ್ಲಿ ಜಿಯೋ ಫಸ್ಟ್‌

4G ಲಭ್ಯತೆಯಲ್ಲಿ ಜಿಯೋ ಫಸ್ಟ್‌

ಭಾರತದಲ್ಲಿ 4G ನೆಟ್‌ವರ್ಕ್‌ ಲಭ್ಯತೆಯಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. 22 ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯವಿರುವ ಜಿಯೋ ಶೇ.96.70 ಸ್ಥಳಗಳಲ್ಲಿ ಲಭ್ಯವಿದೆ. ಇನ್ನು ಏರ್‌ಟೆಲ್‌ ಶೇ.73.99, ಐಡಿಯಾ ಶೇ.73.17 ಮತ್ತು ವೊಡಾಫೋನ್‌ ಶೇ.72.59 ಸ್ಥಳದಲ್ಲಿ 4G ಸೇವೆಯನ್ನು ನೀಡುತ್ತಿವೆ.

ವಿಡಿಯೋ ವೀಕ್ಷಣೆಗೆ ಏರ್‌ಟೆಲ್‌ ಉತ್ತಮ

ವಿಡಿಯೋ ವೀಕ್ಷಣೆಗೆ ಏರ್‌ಟೆಲ್‌ ಉತ್ತಮ

ಒಪನ್‌ ಸಿಗ್ನಲ್ ವರದಿ ಹೇಳುವಂತೆ ವಿಡಿಯೋ ವೀಕ್ಷಣೆಗೆ ಏರ್‌ಟೆಲ್‌ ಉತ್ತಮವಾಗಿದೆಯಂತೆ. ಏರ್‌ಟೆಲ್‌ 100ಕ್ಕೆ 39,30 ಅಂಕ ಪಡೆದರೆ, ಜಿಯೋ 38.63, ವೊಡಾಫೋನ್‌ 38.55, ಐಡಿಯಾ 37.56 ಮತ್ತು ಬಿಎಸ್‌ಎನ್‌ಎಲ್‌ 28.25 ಅಂಕವನ್ನು ಪಡೆದಿವೆ.

ಆನ್‌ಲೈನ್‌ ವೀಕ್ಷಣೆ ಪ್ರಮಾಣ ಹೆಚ್ಚಳ

ಆನ್‌ಲೈನ್‌ ವೀಕ್ಷಣೆ ಪ್ರಮಾಣ ಹೆಚ್ಚಳ

ಒಪನ್‌ ಸಿಗ್ನಲ್‌ ವರದಿಯಂತೆ ಭಾರತದಲ್ಲಿ ಮೊಬೈಲ್‌ನಲ್ಲಿ ಆನ್‌ಲೈನ್‌ ವಿಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಏರ್‌ಟೆಲ್‌ ತನ್ನ ಗ್ರಾಹಕರಿಗೆ ನೆಟ್‌ಫ್ಲಿಕ್ಸ್‌ ಪ್ಲಾನ್‌ಗಳನ್ನು ನೀಡುತ್ತಿರುವುದು. ಜಿಯೋ ಸಹ zee ಹಾಗೂ Viacom18 ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಅದರ ಜತೆ, ಬಿಎಸ್‌ಎನ್‌ಎಲ್‌ ಕೂಡ ಅಮೆಜಾನ್‌ ಪ್ರೈಂ ವಿಡಿಯೋ ಕಂಟೆಂಟ್‌ಗಳನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ.

ವರದಿ ಹೇಗೆ ತಯಾರು..?

ವರದಿ ಹೇಗೆ ತಯಾರು..?

ಒಪನ್‌ ಸಿಗ್ನಲ್‌ ಜೂನ್‌ 1ರಿಂದ ಆಗಸ್ಟ್‌ 29ರವರೆಗಿನ 90 ದಿನಗಳ ಮಾಹಿತಿಯನ್ನು ಭಾರತದ 22 ಟೆಲಿಕಾಂ ಸರ್ಕಲ್‌ಗಳಲ್ಲಿ ಕಲೆ ಹಾಕಿದೆ. ಈ ಸಮಯದಲ್ಲಿ 1.7 ಮಿಲಿಯನ್‌ ಡಿವೈಸ್‌ಗಳಿಂದ 10.5 ಬಿಲಿಯನ್‌ ಮೆಸರ್‌ಮೆಂಟ್‌ಗಳನ್ನು ವಿಶ್ಲೇಷಿಸಲಾಗಿದೆ. ಇವುಗಳ ಆಧಾರದ ಮೇಲೆ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ರಿಲಾಯನ್ಸ್‌ ಜಿಯೋ, ಐಡಿಯಾ ಮತ್ತು ವೊಡಾಫೋನ್‌ಗಳಿಗೆ ವಿವಿಧ ವರ್ಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ.

Best Mobiles in India

English summary
Airtel tops download speeds in India, Jio has highest 4G availability: OpenSignal. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+