Home
ಸುದ್ದಿಜಾಲ

ಏರ್‌ಟೆಲ್‌ನ ಹೊಸ ''ಭರ್ಜರಿ ಆಫರ್'': ಉಚಿತವಾಗಿ ವೀಕ್ಷಿಸಿ 'ಐಪಿಎಲ್'!!

ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಭರ್ಜರಿ ಆಫರ್ ನೀಡಿದ ಜಿಯೋಗೆ ವಿರುದ್ದವಾಗಿ ಏರ್‌ಟೆಲ್ ತನ್ನದೇ ಗ್ರಾಹಕರಿಗೇ ಆಶ್ಚರ್ಯವಾಗುವಂತಹ ಆಫರ್ ನೀಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

By Bhaskar N J

ಜಿಯೋಗೆ ಭಾರೀ ಸೆಡ್ಡು ಹೊಡೆಯುತ್ತಿರುವ ಟೆಲಿಕಾಂ ಕಂಪೆನಿ ಏರ್‌ಟೆಲ್ ಇದೀಗ ಮತ್ತೊಮ್ಮೆ ಜಿಯೋಗೆ ಟಾಂಗ್ ನೀಡಿದೆ. ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಭರ್ಜರಿ ಆಫರ್ ನೀಡಿದ ಜಿಯೋಗೆ ವಿರುದ್ದವಾಗಿ ಏರ್‌ಟೆಲ್ ತನ್ನದೇ ಗ್ರಾಹಕರಿಗೇ ಆಶ್ಚರ್ಯವಾಗುವಂತಹ ಆಫರ್ ನೀಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಇತ್ತೀಚಿಗಷ್ಟೆ 299 ರೂಪಾಯಿಗಳಿಗೆ ಪ್ರತಿದಿನ ಮೂರು ಜಿಬಿ ಡೇಟಾ ಆಫರ್ ಪ್ರಕಟಿಸಿದ್ದ ಏರ್‌ಟೆಲ್ ಇದೀಗ, ವಿವೊ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಶುರುವಾಗುವ ಮುನ್ನವೇ ಏರ್‌ಟೆಲ್ ಕಂಪೆನಿ ನೂತನ "ಏರ್‌ಟೆಲ್ ಟಿವಿ" ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಆಫರ್‌ನಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಅವಕಾಶವನ್ನು ನೀಡಿದೆ.

ಉಚಿತ ಐಪಿಎಲ್ ಆಕ್ಷನ್!!

ಉಚಿತ ಐಪಿಎಲ್ ಆಕ್ಷನ್!!

ಭಾರತದ ಕ್ರಿಕೆಟ್ ಹಬ್ಬ ಎಂದೇ ಕರೆಸಿಕೊಳ್ಳುವ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ಹಿಂದೆ ಬಿದ್ದಿರುವ ಏರ್‌ಟೆಲ್ ಗ್ರಾಹಕರನ್ನು ಸೆಳೆಯಲು ಹೊಸ ತಂತ್ರವನ್ನು ಹಾಕಿಕೊಂಡಿದೆ. ತನ್ನ "ಏರ್‌ಟೆಲ್ ಟಿವಿ" ಆಪ್‌ ಮೂಲಕ ಉಚಿತವಾಗಿ ಅನ್‌ಲಿಮಿಟೆಡ್ ಐಪಿಎಲ್ ವೀಕ್ಷಣೆ ಅವಕಾಶವನ್ನು ನೀಡಿ ಏರ್‌ಟೆಲ್ ಗಮನಸೆಳೆದಿದೆ.

ಹಲವು ಉಚಿತ ಸೇವೆಗಳು!!

ಹಲವು ಉಚಿತ ಸೇವೆಗಳು!!

ಕ್ರಿಕೆಟ್ ಮ್ಯಾಚ್‌ಗಳ ಲೈವ್ ಜೊತೆಗೆ ಕ್ರಿಕೆಟ್ ಹೈಲೈಟ್ಸ್, ಕ್ರಿಕೆಟ್ ತಜ್ಞರ ವಿಶ್ಲೇಷಣೆ, ನೆಚ್ಚಿನ ತಂಡಗಳನ್ನು ಆಯ್ಕೆ, ನಡೆಯುತ್ತಿರುವ ಪಂದ್ಯಗಳು, ಮುಂಬರುವ ವೇಳಾಪಟ್ಟಿ ಮತ್ತು ವಿಶೇಷ ಸ್ಕೋರ್‌ಕಾರ್ಡ್ ಅಧಿಸೂಚನೆಗಳನ್ನು ಸೇರಿ ಹಲವು ವಿಶೇಷತೆಗಳನ್ನು ಏರ್‌ಟೆಲ್ ನೀಡಿದ್ದು, ಈ ಎಲ್ಲಾ ಸೇವೆಗಳು ಏರ್‌ಟೆಲ್ ಟಿವಿ ಆಪ್‌ನಲ್ಲಿ ಉಚಿತವಾಗಿ ಸಿಗಲಿದೆ.

ಉಚಿತ ಐಪಿಎಲ್ ವೀಕ್ಷಣೆ ಹೇಗೆ?

ಉಚಿತ ಐಪಿಎಲ್ ವೀಕ್ಷಣೆ ಹೇಗೆ?

ಏರ್‌ಟೆಲ್ ಟೆಲಿಕಾಂ ಕಂಪೆನಿ ತನ್ನ "ಏರ್‌ಟೆಲ್ ಟಿವಿ" ಆಪ್‌ನಲ್ಲಿ ಐಪಿಎಲ್ ಕ್ರಿಕೆಟ್‌ಗಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆದಿದೆ. ಏರ್‌ಟೆಲ್‌ನ ಎಲ್ಲಾ ಬಳಕೆದಾರರು ಉಚಿತವಾಗಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಐಪಿಎಲ್ ಕ್ರಿಕೆಟ್‌ಗಾಗಿಯೇ ಇರುವ ವಿಭಾಗದಲ್ಲಿ ಎಲ್ಲಾ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ಏರ್‌ಟೆಲ್ ತಿಳಿಸಿದೆ.!

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಏರ್‌ಟೆಲ್ ಸಿಇಒ ಹೇಳಿದ್ದೇನು?

ಏರ್‌ಟೆಲ್ ಸಿಇಒ ಹೇಳಿದ್ದೇನು?

ಏರ್‌ಟೆಲ್ ಟಿವಿ ಮೂಲಕ ಉಚಿತವಾಗಿ ಅನಿಯಮಿತ ಐಪಿಎಲ್ ಲೈವ್ ಮ್ಯಾಚ್‌ಗಳನ್ನು ಪ್ರಸಾರವನ್ನು ಸೇರಿಸಲು ನಾವು ರೋಮಾಂಚನಗೊಂಡಿದ್ದೇವೆ. ಏರ್ಟೆಲ್ ಟಿವಿ ಅಪ್ಲಿಕೇಶನ್ ಬಳಕೆದಾರರು ಒಂದು ಕ್ಷಣವೂ ಸಹ ಅತಿದೊಡ್ಡ ಕ್ರಿಕೆಟ್ ಪ್ರದರ್ಶನದಿಂದ ಹೊರಗುಳಿಯವುದಿಲ್ಲ ಎಂದು ಏರ್‌ಟೆಲ್‌ ಕಂಟೆಂಟ್ ಸಿಇಒ ಸಮೀರ್ ಬಾತ್ರಾ ತಿಳಿಸಿದ್ದಾರೆ.

Best Mobiles in India

English summary
Apart from free Vivo IPL 2018 cricket live stream option, Airtel TV also offers many regional entertainment and news channels for daily consumption. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+