Home
ಸುದ್ದಿಜಾಲ

ಏರ್‌ಟೆಲ್ ಪೇಮೆಂಟ್ ಬ್ಯಾಂಕ್: ಎಟಿಎಂನಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಡ್ರಾ ಮಾಡಿ!

By Sushma Charhra

ನೀವು ಎಷ್ಟು ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದೀರಿ. ನಿಮ್ಮ ಬಳಿ ಎಷ್ಟು ಎಟಿಎಂ ಕಾರ್ಡ್ ಗಳಿವೆ? ಎಟಿಎಂ ಕಾರ್ಡ್, ಮೆಟ್ರೋ ಕಾರ್ಡ್, ಪ್ಯಾನ್ ಕಾರ್ಡ್, ಓಟರ್ ಐಡಿ, ಆಧಾರ್ ಕಾರ್ಡ್ ಹೀಗೆ ಕಾರ್ಡ್ ಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾ ಹೋದರೆ ಎಷ್ಟು ದೊಡ್ಡ ಪರ್ಸ್ ಇದ್ದರೂ ಸಾಕಾಗುವುದಿಲ್ಲ ಅಲ್ಲವೇ? ಅದ್ರಲ್ಲೂ ಎರಡು ಮೂರು ಬ್ಯಾಂಕ್ ಎಂಟಿಎಂ ಕಾರ್ಡ್ ಗಳನ್ನು ಹೊಂದಿರುವವರಿಗಂತೂ ಒಂದು ರೀತಿಯ ಹಿಂಸೆಯೇ ಸರಿ. ಒಂದು ವೇಳೆ ನಿಮ್ಮ ಪರ್ಸ್ ಕಳೆದು ಹೋದರೆ ಆ ಎಲ್ಲಾ ಎಟಿಎಂ ಕಾರ್ಡ್ ಗಳನ್ನು ಬ್ಲಾಕ್ ಮಾಡಿಸಬೇಕು, ಪುನಃ ಪಡೆಯಬೇಕು, ಎಷ್ಟು ಗೋಜಲಿನ ಕೆಲಸವಾಗುತ್ತದೆಯಲ್ಲವೇ?

ಆದರೆ ಒಂದು ವೇಳೆ ಎಟಿಎಂ ನಲ್ಲಿ ಕ್ಯಾಷ್ ಡ್ರಾ ಮಾಡಲು ಕಾರ್ಡೇ ಬೇಡ ಎಂಬಂತಾಗಿದ್ದರೆ ಎಂದು ಎಷ್ಟೋ ಬಾರಿ ನಾವು ಆಲೋಚಿಸಿರುತ್ತೇವೆ. ಆ ಸಮಯ ಈಗ ಬಂದಾಗಿದೆ. ಹೌದು ಹೊಸ ತಂತ್ರಜ್ಞಾನವೊಂದನ್ನು ಏರ್ ಟೆಲ್ ಪೇಮೆಂಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಒದಗಿಸಿದೆ.

ಏರ್‌ಟೆಲ್ ಪೇಮೆಂಟ್ ಬ್ಯಾಂಕ್: ಎಟಿಎಂನಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಡ್ರಾ ಮಾಡಿ!

ಏರ್ ಟೆಲ್ ತನ್ನ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಬಳಕೆದಾರರಿಗೆ ಎಟಿಎಂಗಳಿಂದ ಕ್ಯಾಷ್ ಡ್ರಾ ಮಾಡಲು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಗತ್ಯವೇ ಇಲ್ಲದಂತ ಒಂದು ಹೊಸ ವಿಧಾನವನ್ನು ಪರಿಚಯಿಸುತ್ತಿದೆ. ಏರ್ ಟೆಲ್ ಸದ್ಯ Empays ಜೊತೆಗೆ ಕೈ ಜೋಡಿಸಿದ್ದು ತನ್ನ ಅಕೌಂಟ್ ಹೋಲ್ಡರ್ ಗಳು Instant Money Transfer (IMT) ಮಾಡಲು ಅವಕಾಶ ನೀಡುತ್ತಿದೆ. ದೇಶಾದ್ಯಂತ ಸುಮಾರು 20,000 ಎಟಿಎಂಗಳಲ್ಲಿ ಇದಕ್ಕೆ ಅವಕಾಶವಿರುತ್ತದೆ. ಈ ಹೊಸ ವೈಶಿಷ್ಟ್ಯತೆಯ ಸ್ಮಾರ್ಟ್ ಫೋನ್ ಮತ್ತು ಫೀಚರ್ಡ್ ಫೋನ್ ಎರಡೂ ಬಳಕೆದಾರರು USSD (*400#) ಅಥವಾ ಮೈ ಏರ್ ಟೆಲ್ ಆಪ್ ಮೂಲಕ ಬಳಕೆ ಮಾಡಬಹುದು.

Empays IMT ಕಾರ್ಡ್ ಲೆಸ್ ಕ್ಯಾಷ್ ತಂತ್ರಜ್ಞಾನವನ್ನು ಬಳಸಿ, ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಸೇವಿಂಗ್ ಅಕೌಂಟ್ ಹೋಲ್ಡರ್ ಗಳು ಎಟಿಎಂ ಮೂಲಕ ಕ್ಯಾಷ್ ವಿತ್ ಡ್ರಾ ಮಾಡಬಹುದು ಅಥವಾ ಎಟಿಎಂ ನಲ್ಲ ಹಣ ಡ್ರಾ ಮಾಡುವವರಿಗೆ ಹಣ ಕಳುಹಿಸಿಕೊಡಬಹುದು.

ಮೈ ಏರ್ ಟೆಲ್ ಆಪ್ ಬಳಸಿ ಹಣ ವಿತ್ ಡ್ರಾ ಮಾಡುವುದು ಹೇಗೆ?

ಬಳಕೆದಾರರು ತಮ್ಮ ಏರಿಯಾದಲ್ಲಿರು IMT-ಅನೇಬಲ್ ಆಗಿರುವ ಎಟಿಎಂ ಗೆ ತೆರಳಬೇಕು, ಯುಎಸ್ಎಸ್ ಡಿ ಅಥವಾ ಮೈ ಏರ್ ಟೆಲ್ ಆಪ್ ಬಳಸಿ ಕ್ಯಾಷ್ ವಿತ್ ಡ್ರಾವಲ್ ರಿಕ್ವೆಸ್ಟ್ ನ್ನು ಜನರೇಟ್ ಮಾಡೇಕು. ಒಂದು ವೇಳೆ ನೀವು ಮೈಏರ್ ಟೆಲ್ ಆಪ್ ಬಳಸುವುದಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

ಮೊಬೈಲ್ ನಂಬರ್ ನ್ನು ಎಂಟರ್ ಮಾಡಿ> ಸೆಂಡರ್ ಕೋಡ್ ನ್ನು ಎಂಟರ್ ಮಾಡಿ(ಎಸ್ಎಂಎಸ್ ನಲ್ಲಿ ರಿಸೀವ್ ಆಗಿರುತ್ತದೆ) > OTPಯನ್ನು ಎಂಟರ್ ಮಾಡಿ > ಸೆಲೆಕ್ಟ್ 1 ಅಂದರೆ ಅದು 'ATM self-withdrawal' > IMT ಅಮೌಂಟ್ ನ್ನು ಎಂಟರ್ ಮಾಡಿ > ಕ್ಯಾಷ್ ಲಭ್ಯವಾಗುತ್ತದೆ.

USSD ಬಳಸಿ ಹಣ ಡ್ರಾ ಮಾಡುವುದು ಹೇಗೆ?

ನೀವು USSD ಬಳಸುವುದಾದರೆ,ಬಳಕೆದಾರರು ತಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ 4002# ನ್ನು ಡಯಲ್ ಮಾಡಬೇಕು.IMT- ಅನೇಬಲ್ ಆಗಿರುವ ATM ನಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು. ಸೆಲೆಕ್ಟ್ 1 'cardless cash withdrawal' > ಸೆಲೆಕ್ಟ್ 1 'ATM self-withdrawal' > IMT ಅಮೌಂಟ್ ನ್ನು ಎಂಟರ್ ಮಾಡಿ > mPIN ನ್ನು ಎಂಟರ್ ಮಾಡಿ > ಕ್ಯಾಷ್ ಲಭ್ಯವಾಗುತ್ತದೆ

ಸೂಚನೆಗಳು:

ಏರ್ ಟೆಲ್ ಸೂಚಿಸಿರುವಂತೆ ಮೊದಲ ಎರಡು ಟ್ರಾನ್ಸ್ಯಾಕ್ಷನ್ ಗಳು ಉಚಿತವಾಗಿರುತ್ತದೆ. ಆದರೆ ನಂತರದ ಟ್ರಾನ್ಸ್ಯಾಕ್ಷನ್ ಗಳಿಗೆ ಪ್ರತಿ ಟ್ರಾನ್ಸ್ಯಾಕ್ಷನ್ ಗೆ 25 ರುಪಾಯಿ ಚಾರ್ಜ್ ಮಾಡಲಾಗುತ್ತದೆ ಎದು ಏರ್ ಟೆಲ್ ತಿಳಿಸಿದೆ. ಸದ್ಯಕ್ಕೆ ಕೇವಲ 20,000 ಎಟಿಎಂಗಳಲ್ಲಿ ಈ ಸೇವೆ ಲಭ್ಯವಿರುತ್ತದೆ. ಈ ವರ್ಷದ ಅಂತ್ಯದ ಒಳಗೆ ಸುಮಾರು 1 ಲಕ್ಷ ಎಟಿಎಂಗಳಲ್ಲಿ ಈ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಏರ್ ಟೆಲ್ ಹೊಂದಿದೆ.

ಇನ್ನು ಇದರ ಬಿಡುಗಡೆಯ ಬಗ್ಗೆ ಮಾತನಾಡಿರುವ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನ ಚೀಫ್ ಎಕ್ಸಿಕ್ಯೂಟೀವ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅನುಬ್ರತಾ ಬಿಸ್ವಾಸ್, " ನಾವು ಡಿಜಿಟಲ್ ಇಂಡಿಯಾದಲ್ಲಿ ನಂಬಿಕೆ ಇಟ್ಟಿದ್ದೇವೆ. ಬ್ಯಾಂಕಿಂಗ್ ನ್ನು ಇನ್ನಷ್ಟು ಉತ್ತಂಗಕ್ಕೇರಿಸುವ ಕೆಲವು ಪ್ರಮುಖ ಡಿಜಿಟಲ್ ಮಾರ್ಗಗಳನ್ನು ನಾವು ಈ ಮೂಲಕ ಕೊಡುತ್ತಿದ್ದೇವೆ. ನಾವು Empays ಜೊತೆಗೆ ಕೈಜೋಡಿಸಿರುವುದು ಒಂದು ಪ್ರಮುಖ ಹಂತವಾಗಿದ್ದು, ನಮ್ಮ ಗ್ರಾಹಕರಿಗೆ ಡಿಜಿಟಲ್, ಫೋನ್ ಮೂಲಕ ಕ್ಯಾಷ್ ವಿತ್ ಡ್ರಾವಲ್ ಗಳನ್ನು ಸುಮಾರು 1 ಲಕ್ಷ ಎಟಿಎಂಗಳಲ್ಲಿ ಸಾಧಿಸಲು ಅವಕಾಶ ನೀಡುತ್ತದೆ. ಅದಕ್ಕಾಗಿ ಗ್ರಾಹಕರು USSD ಅಥವಾ ಮೈ ಏರ್ ಟೆಲ್ ಆಪ್ ಬಳಕೆ ಮಾಡಬಹುದು.ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ನಾವು ಬ್ಯಾಂಕಿಂಗ್ ವಿಭಾಗವನ್ನು ಇನ್ನಷ್ಟು ಸರಳ ಮತ್ತು ಸುಲಭವನ್ನಾಗಿ ಪರಿವರ್ತಿಸುತ್ತಿದ್ದೇವೆ” ಎಂದು ಹೇಳಿಕೆ ನೀಡಿದ್ದರು.

ಒಟ್ಟಾರೆ ಹೊಸ ಸೌಲಭ್ಯವೊಂದು ಎಟಿಎಂ ಕ್ಯಾಷ್ ವಿತ್ ಡ್ರಾವಲ್ ಗೆ ಅವಕಾಶ ನೀಡುತ್ತದೆ. ಆದರೆ ಈ ಸೌಲಭ್ಯವನ್ನು ಗ್ರಾಹಕರು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Best Mobiles in India

English summary
Airtel Payments Bank Users Can Now Use Card-Less Cash Withdrawal at ATMs Across India: Here's How
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+