Home
ಸುದ್ದಿಜಾಲ

ಜಿಯೋ ವಿರುದ್ಧ ಯುದ್ಧದಲ್ಲಿ ಏರ್‌ಟೆಲ್, ವೊಡಾಫೋಸ್‌ಗೆ ಸೋಲು ಖಚಿತ

ಏರ್‌ಟೆಲ್, ವೊಡಾಫೋನ್ ಕಂಪನಿಗಳು ಬೇಕೆಂದೆ ಜಿಯೋ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿವೆ.

By Srinidhi

ದೇಶದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಸ್ಪರ್ಧೆಯನ್ನು ಎದುರಿಸಲಾಗದೆ ಇತರೆ ಟೆಲಿಕಾಂ ಕಂಪನಿಗಳು ಸುಮ್ಮನ್ನೆ ಜಿಯೋ ವಿರುದ್ಧ ಆರೋಪಗಳನ್ನು ಮಾಡಲು ಶುರು ಮಾಡಿದವು, ಜಿಯೋ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಟೆಲಿಕಾಂ ನಿಯಂತ್ರಣ ಮಂಡಲಿಗೆ ದೂರ ಸಹ ನೀಡಿದ್ದವು.

ಜಿಯೋ ವಿರುದ್ಧ ಯುದ್ಧದಲ್ಲಿ ಏರ್‌ಟೆಲ್, ವೊಡಾಫೋಸ್‌ಗೆ ಸೋಲು ಖಚಿತ

ಸದ್ಯ ಇದಕ್ಕೆಲ್ಲ ಉತ್ತರ ನೀಡಿರುವ ಭಾರತೀಯ ಸ್ಪರ್ಧೆ ಆಯೋಗ( ಸಿಸಿಐ), ಏರ್‌ಟೆಲ್, ವೊಡಾಫೋನ್ ಕಂಪನಿಗಳು ಬೇಕೆಂದೆ ಜಿಯೋ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿವೆ ಎಂದು ತಿಳಿಸಿದೆ. ಜಿಯೋ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಅದನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿವೆ ಎಂದು ತಿಳಿಸಿದೆ.

ಈ ಕುರಿತಂತೆ ಫೈರ್ ಟ್ರೆಡ್ ರೆಗ್ಯಲೆಟರ್ಸ್ ನಿರ್ಧಾರವೊಂದಕ್ಕೆ ಬಂದಿದ್ದು, ಏರ್‌ಟೆಲ್, ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳ ವಿರುದ್ಧ ಅನ್ಯಾಯದ ವ್ಯವಹಾರದ ಅಭ್ಯಾಸಗಳು ಎಂದು ಆರೋಪಿಸಿ ಕೇಸ್ ದಾಖಲಿಸಲಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಜಿಯೋ ವಿರುದ್ಧ ಯುದ್ಧದಲ್ಲಿ ಏರ್‌ಟೆಲ್, ವೊಡಾಫೋಸ್‌ಗೆ ಸೋಲು ಖಚಿತ

ಈ ಕುರಿತಂತೆ ಏರ್‌ಟೆಲ್, ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳಿಗೆ ತಿಳಿಸಲಾಗಿದ್ದು, ಮುಂದೆ ಇಂತಹ ವರ್ತನೆ ಮರುಕಳಿಸದಂತೆ ಎಚ್ಚರವಹಿಸುವಂತೆಯೂ ಮನವಿ ಮಾಡಲಾಗಿದೆ. ಮತ್ತೆ ಮರುಕಳಿಸಿದರೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿಯೂ ತಿಳಿಸಲಾಗಿದೆ.

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲ್ಲೇಲ್ಲಿಯೂ ಜಿಯೋ ಹೆಸರು ಕೇಳಿಬರುತ್ತಿರುವುದು ಇತರೆ ಕಂಪನಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಿಯೋ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಇದಕ್ಕೆ ಟ್ರಾಯ್ ಸಹ ತಲೆಯಾಡಿಸುತ್ತಿದೆ ಎನ್ನಲಾಗಿದೆ.

Best Mobiles in India

English summary
Competition Commission of India(CCI) has ordered a detailed probe against major telecom players for allegedly trying to block the entry of newcomer Reliance Jio, according to sources. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+