Airtel vs Jio vs Vi: 1000ರೂ. ಒಳಗಿನ ಅತ್ಯುತ್ತಮ ಪ್ರಿಪೇಯ್ಡ್ ಪ್ಲಾನ್‌ಗಳು!
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ ಮತ್ತು ವಿ ಟೆಲಿಕಾಂಗಳು ಈಗಾಗಲೇ ಹಲವು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪೈಕಿ 1000 ರೂ.ಗಳ ಅಡಿಯಲ್ಲಿ ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಸಹ ಒಳಗೊಂಡಿವೆ. ಇನ್ನು ಈ ಪ್ರಿಪೇಯ್ಡ್ ಪ್ಲಾನ್‌ಗಳು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಹಾಗೂ ದೈನಂದಿನ 2GB ಡೇಟಾ ಪ್ರಯೋಜನವನ್ನು ನೀಡುತ್ತಿವೆ. ಜೊತೆಗೆ ಸ್ಟ್ರೀಮಿಂಗ್ ಪ್ರಯೋಜನಗಳ ಜೊತೆಗೆ ದೈನಂದಿನ ಡೇಟಾ ಬಯಸುವವರಿಗೆ ಈ ಪ್ಲಾನ್‌ಗಳು ಸೂಕ್ತವಾಗಿವೆ.

ಹೌದು, ಏರ್‌ಟೆಲ್, ಜಿಯೋ, ವಿ ಟೆಲಿಕಾಂಗಳು ಸಾವಿರ ರೂ, ಗಿಂತ ಕಡಿಮೆ ಬೆಲೆಯಲ್ಲಿ ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಹೊಂದಿವೆ. ಈ ಪ್ರಿಪೇಯ್ಡ್ ಪ್ಲಾನ್‌ಗಳು 84 ದಿನಗಳ ಮಾನ್ಯತೆಯನ್ನು ಹೊಂದಿವೆ. ಈ ಪ್ಲಾನ್‌ಗಳಲ್ಲಿ ಪ್ರಮುಖವಾಗಿ ಸ್ಟ್ರೀಮಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಅಧಿಕ ಡೇಟಾ ಬಯಸುವವರು ಈ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾದ್ರೆ ಏರ್‌ಟೆಲ್, ಜಿಯೋ, ವಿ ಟೆಲಿಕಾಂಗಳು ಸಾವಿರ ರೂ ಒಳಗೆ ಹೊಂದಿರುವ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳು
ಏರ್‌ಟೆಲ್ ಟೆಲಿಕಾಂ 298ರೂ, 449ರೂ, 698ರೂ ಮತ್ತು 699ರೂ. ಬೆಲೆಯಲ್ಲಿ ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಎಲ್ಲಾ ಯೋಜನೆಗಳು ದೈನಂದಿನ 2GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡಲಿವೆ. ಅಲ್ಲದೆ ಈ ಯೋಜನೆಗಳು ಕ್ರಮವಾಗಿ 28 ದಿನಗಳು, 56 ದಿನಗಳು ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ 699ರೂ, ಪ್ರಿಪೇಯ್ಡ್ ಪ್ಲಾನ್ ಅಪ್‌ಗ್ರೇಡ್ ಮಾಡಿದ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್ ಆಗಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಪ್ಲಾನ್ ಮೂಲಕ 2ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು
ಇನ್ನು ಜಿಯೋ ಟೆಲಿಕಾಂ 2GB ಡೇಟಾ ಪ್ರಯೋಜನ ನೀಡುವ ಹಲವು ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ 249ರೂ, 444ರೂ, 599ರೂ, 666ರೂ ಮತ್ತು 888ರೂ ಬೆಲೆಯ ಪ್ಲಾನ್‌ಗಳು ಗಮನ ಸೆಳೆದಿವೆ. ಇನ್ನು ಈ ಎಲ್ಲಾ ಪ್ಲಾನ್ ಗಳು 2GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ನೀಡುತ್ತವೆ. ಇವುಗಳಲ್ಲಿ 249ರೂ, 444ರೂ ಮತ್ತು 599ರೂ ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳು ಕ್ರಮವಾಗಿ 28 ದಿನಗಳು, 56 ದಿನಗಳು ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿವೆ. ಹಾಗೆಯೇ 666ರೂ ಮತ್ತು 888ರೂ ಪ್ರಿಪೇಯ್ಡ್ ಯೋಜನೆಗಳು ಡಿಸ್ನಿ+ ಹಾಟ್‌ಸ್ಟಾರ್ ಪ್ರಿಪೇಯ್ಡ್ ಪ್ಲಾನ್‌ಗಳಾಗಿವೆ. ಈ ಪ್ಲಾನ್‌ಗಳು ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ.

ವಿ ಟೆಲಿಕಾಂ ಪ್ರಿಪೇಯ್ಡ್ ಪ್ಲಾನ್‌ಗಳು
ವಿ ಟೆಲಿಕಾಂ ಕಂಪೆನಿ ಪರಿಚಯಿಸಿರುವ 2ಜಿಬಿ ಡಾಟಾ ಪ್ಲಾನ್ ಗಳಲ್ಲಿ 299ರೂ, 449ರೂ ಮತ್ತು 699ರೂ ಪ್ಲಾನ್‌ಗಳು ಗಮನ ಸೆಳೆದಿವೆ. ಈ ಪ್ಲಾನ್‌ಗಳು ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತವೆ. ಜೊತೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ಪ್ರಯೋಜನವನ್ನು ಹೊಂದಿವೆ. ಇನ್ನು ವಿ ಟೆಲಿಕಾಂ ಇತ್ತೀಚಿಗೆ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳನ್ನು ಪರಿಷ್ಕರಣೆ ಮಾಡಿದೆ. ಪರಿಷ್ಕರಣೆ ಮಾಡಿದ ನಂತರ ಇವುಗಳ ಬೆಲೆ ಕ್ರಮವಾಗಿ 501ರೂ, 701ರೂ ಮತ್ತು 901ರೂ. ಬೆಲೆಯನ್ನು ಹೊಂದಿವೆ. ಈ ಯೋಜನೆಗಳು 100GB ಡೇಟಾವನ್ನು 28 ದಿನಗಳವರೆಗೆ, 200GB ಡೇಟಾವನ್ನು 56 ದಿನಗಳವರೆಗೆ ಮತ್ತು 300GB ಡೇಟಾವನ್ನು 84 ದಿನಗಳವರೆಗೆ ನೀಡುತ್ತವೆ. ಅಲ್ಲದೆ ಈ ಎಲ್ಲಾ ಯೋಜನೆಗಳು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಗಳನ್ನು ಟೆಲಿಕಾಂ-ನಿರ್ದಿಷ್ಟ ಪ್ರಯೋಜನಗಳೊಂದಿಗೆ ನೀಡುತ್ತವೆ.


Click it and Unblock the Notifications








