ಏರ್‌ಟೆಲ್, ಜಿಯೋ, ವೊಡಾಫೋನ್: ಯಾವುದರಲ್ಲಿದೆ ಬೆಸ್ಟ್‌ ಪ್ಲಾನ್‌..!

|

ಎಲ್ಲಾ ಪ್ರಮುಖ ಟೆಲಿಕಾಂ ಆಪರೇಟರ್ ಗಳು ಏರ್ ಟೆಲ್, ಜಿಯೋ ಮತ್ತು ವೊಡಾಫೋನ್‌ ಗಳು ಹೆಚ್ಚು ಅವಧಿಯಿರುವ ಮತ್ತು ಉತ್ತಮ ಆಫರ್ ಗಳಿರುವ ಪ್ಲಾನ್ ಗಳನ್ನು ನೀಡುತ್ತಿದ್ದಾರೆ.

ಏರ್‌ಟೆಲ್, ಜಿಯೋ, ವೊಡಾಫೋನ್: ಯಾವುದರಲ್ಲಿದೆ ಬೆಸ್ಟ್‌ ಪ್ಲಾನ್‌..!

80 ದಿನಗಳ ಅವಧಿಗೂ ಮೀರಿದ ಕೆಲವು ಅತ್ಯುತ್ತಮ ಪ್ರಿಪೇಡ್ ಪ್ಲಾನ್ ಗಳ ಪಟ್ಟಿಯನ್ನು ನಾವು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಈ ಪ್ಲಾನ್ ಗಳನ್ನು ನೋಡಿದ ಮೇಲೆ ನೀವು ಯಾವುದು ಬೆಸ್ಟ್ ಎಂದು ಆಯ್ದುಕೊಳ್ಳಲು ಸೂಕ್ತವಾಗಿರುತ್ತದೆ.

ಜಿಯೋ ರೂ 399 / ರೂ 449 ಪ್ರಿಪೇಡ್ ಪ್ಲಾನ್ಸ್ 

ಜಿಯೋ ರೂ 399 / ರೂ 449 ಪ್ರಿಪೇಡ್ ಪ್ಲಾನ್ಸ್ 

ಜಿಯೋ ರೂ399 ಮತ್ತು ಜಿಯೋ ರೂ449 ಪ್ಲಾನ್ ಗಳು ಒಂದೇ ರೀತಿಯ ಆಫರ್ ಗಳನ್ನು ನೀಡುತ್ತದೆ. ಎರಡರಲ್ಲೂ ಕೂಡ 1.5ಜಿಬಿ 4ಜಿ ಡಾಟಾ ಪ್ರತಿದಿನ ಉಚಿತವಾಗಿರುತ್ತದೆ, ಅನಿಯಮಿತ ವಾಯ್ಸ್ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್) , 100 ಎಸ್ಎಂಎಸ್ ಪ್ರತಿದಿನ ಮತ್ತು ಇತರೆ ಜಿಯೋ ಆಪ್ ಮತ್ತು ಸೇವೆಗಳಿಗೆ ಉಚಿತ ಚಂದಾದಾರಿಕೆಯೂ ಲಭ್ಯವಿದೆ. ಎರಡೂ ಆಫರ್ ಗಳಲ್ಲಿ ಒಂದೇ ಒಂದು ವ್ಯತ್ಯಾಸವೆಂದರೆ ರೂ 399 ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ಒಟ್ಟು 126ಜಿಬಿ ಡಾಟಾವನ್ನು 3.16 ರುಪಾಯಿ ವೆಚ್ಚದಲ್ಲಿ ನೀಡುತ್ತದೆ. ಆದರೆ ರೂ449 ಪ್ಲಾನ್ 91 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಇದರಲ್ಲಿ 136ಜಿಬಿ ಡಾಟಾ 3.30/ಜಿಬಿ ಮೊತ್ತದಲ್ಲಿ ನೀಡುತ್ತದೆ.

ಜಿಯೋ ರೂ 448 / ರೂ 498 ಪ್ರಿಪೇಡ್ ಪ್ಲಾನ್ಸ್ 

ಜಿಯೋ ರೂ 448 / ರೂ 498 ಪ್ರಿಪೇಡ್ ಪ್ಲಾನ್ಸ್ 

ಯಾರು 1.5 ಜಿಬಿ ಪ್ರತಿದಿನದ ಡಾಟಾಕ್ಕಿಂತಲೂ ಹೆಚ್ಚು ನಿರೀಕ್ಷಿಸುತ್ತಾರೋ ಅಂತವರಿಗೆ ಜಿಯೋದಲ್ಲಿ ಇನ್ನಷ್ಟು ಆಫರ್ ಗಳು ಲಭ್ಯವಿದೆ. ಹೆಚ್ಚು ವ್ಯಾಲಿಡಿಟಿಯೊಂದಿಗೆ 2ಜಿಬಿ ಡಾಟಾ ಪ್ರತಿದಿನ ಉಚಿತವಿರುವ ಪ್ಲಾನ್ ಗಳೂ ಕೂಡ ಲಭ್ಯವಿದೆ. ಜಿಯೋ ರೂ 448 ಪ್ಲಾನ್ ನಲ್ಲಿ 2ಜಿಬಿ 4ಜಿ ಡಾಟಾ 84 ದಿನಗಳ ವ್ಯಾಲಿಡಿಟಿಯಲ್ಲಿ ಸಿಗುತ್ತದೆ.ಅಂದರೆ 2.66 ರೂ/ಜಿಬಿ ಮೊತ್ತದಲ್ಲಿ 168ಜಿಬಿ ಡಾಟಾ ಈ ಅವಧಿಯಲ್ಲಿ ಲಭ್ಯವಾಗುತ್ತದೆ. ಅದೇ ರೀತಿಯ ಜಿಯೋ ರೂ498 ಪ್ಲಾನ್ ನಲ್ಲಿ 91 ದಿನಗಳ ಅವಧಿಗೆ ಇದೇ ಮೊತ್ತದ ಡಾಟಾವು ಪ್ರತಿದಿನ ಲಭ್ಯವಾಗುತ್ತದೆ. ಅದರ ಫಲಿತಾಂಶ 182ಜಿಬಿ 4ಜಿ ಡಾಟಾವು 2.73/ ಜಿಬಿ ಮೊತ್ತದಲ್ಲಿ ಲಭ್ಯವಾಗುತ್ತದೆ. ಇದರ ಜೊತೆಗೆ ಉಚಿತ ಕರೆಗಳು, ಪ್ರತಿದಿನ 100ಎಸ್ಎಂಎಸ್ ಉಚಿತ,ಜೊತೆಗೆ ಜಿಯೋ ಆಪ್ ಮತ್ತು ಸೇವೆಗಳಿಗೆ ಸಿಗುವ ಸೌಲಭ್ಯಗಳು ಅದೇ ಆಗಿರುತ್ತದೆ.

ಏರ್ ಟೆಲ್ ರೂ 399/ ರೂ 509 ಪ್ರಿಪೇಡ್ ಪ್ಲಾನ್ಸ್ 

ಏರ್ ಟೆಲ್ ರೂ 399/ ರೂ 509 ಪ್ರಿಪೇಡ್ ಪ್ಲಾನ್ಸ್ 

ಏರ್ ಟೆಲ್ ನ ರೂ 399 ನ ಪ್ಲಾನಿ ಜಿಯೋ 399 ಪ್ಲಾನ್ ನೊಂದಿಗೆ ನೇರವಾಗಿ ಸ್ಪರ್ಧೆ ಮಾಡುತ್ತದೆ. ಆದರೆ ಜಿಯೋ ಗೆ ಹೋಲಿಸಿದರೆ 100ಎಂಬಿ ಕಡಿಮೆ ಡಾಟಾವನ್ನು ಈ ಪ್ಲಾನ್ ನೀಡುತ್ತದೆ. ಏರ್ ಟೆಲ್ ರೂ 399 ಪ್ಲಾನ್ 1.4ಜಿಬಿ 4ಜಿ ಡಾಟಾವನ್ನು ಪ್ರತಿದಿನ ನೀಡುತ್ತದೆ. ಇದರ ವ್ಯಾಲಿಡಿಟಿ ಅವಧಿ 70 ದಿನಗಳು. ಈ ಪ್ಲಾನ್ ನ್ನು ನೀವು ಏರ್ ಟೆಲ್ ಮೊಬೈಲ್ ಆಪ್ ಮೂಲಕ ಖರೀದಿಸಿದರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ. ಅದರ ಪ್ರಕಾರ 117ಜಿಬಿ ಡಾಟಾವು ವ್ಯಾಲಿಡಿಟಿ ಅವಧಿಯಲ್ಲಿ 3.41ರೂ/ಜಿಬಿ ಮೊತ್ತದಲ್ಲಿ ಲಭ್ಯವಾದಂತಾಗುತ್ತದೆ. ಇನ್ನು ಏರ್ ಟೆಲ್ ರೂ 509 ಪ್ರಿಪೇಡ್ ಪ್ಲಾನ್ ಇದೇ ಬೆನಿಫಿಟ್ ಗಳನ್ನು 90 ದಿನಗಳ ಅವಧಿಗೆ ನೀಡುತ್ತದೆ. ಅಂದರೆ ಈ ಅವಧಿಯಲ್ಲಿ ನಿಮಗೆ 126ಜಿಬಿ 4ಜಿ ಡಾಟಾ ಲಭ್ಯವಾಗುತ್ತದೆ.

ಏರ್ ಟೆಲ್ ರೂ 499 ಪ್ರಿಪೇಡ್ ಪ್ಲಾನ್

ಏರ್ ಟೆಲ್ ರೂ 499 ಪ್ರಿಪೇಡ್ ಪ್ಲಾನ್

ಡಾಟಾ, ಎಸ್ಎಂಎಸ್ ಮತ್ತು ಕರೆಗಳ ಲಾಭಗಳನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ಏರ್ ಟೆಲ್ ರೂ 499 ಪ್ಲಾನ್ ಜಿಯೋ 498 ಪ್ಲಾನ್ ನ ಸ್ಥಾನವನ್ನೇ ಪಡೆಯುತ್ತದೆ. ಈ ಪ್ಲಾನ್ ನಲ್ಲಿ ಪ್ರತಿದಿನ 2ಜಿಬಿ ಡಾಟಾ ಉಚಿತವಾಗಿ ಸಿಗುತ್ತದೆ. ಜಿಯೋ ಗೆ ಹೋಲಿಸಿದರೆ 9 ದಿನ ಕಡಿಮೆ ವ್ಯಾಲಿಡಿಟಿಯನ್ನು ಏರ್ ಟೆಲ್ ನೀಡುತ್ತದೆ. ಆ ಪ್ರಕಾರ ಏರ್ ಟೆಲ್ ನ 499 ಪ್ಲಾನ್ 164ಜಿಬಿ ಡಾಟಾವನ್ನು ಪ್ರತಿದಿನ 3.04/ಜಿಬಿ ಮೊತ್ತದಲ್ಲಿ ನೀಡಿದಂತಾಗುತ್ತದೆ. ಏರ್ ಟೆಲ್ ನ ರೂ399, 499 ಪ್ಲಾನ್ ಗಳೆರಡೂ ಕೂಡ ಉಚಿತ ಕರೆಗಳು ಮತ್ತು 100ಎಸ್ಎಂಎಸ್ ನ್ನು ಉಚಿತವಾಗಿ ನೀಡುತ್ತದೆ.

ವೊಡಾಫೋನ್ ರೂ 458 / ರೂ 509 ಪ್ರಿಪೇಡ್ ಪ್ಲಾನ್ಸ್ 

ವೊಡಾಫೋನ್ ರೂ 458 / ರೂ 509 ಪ್ರಿಪೇಡ್ ಪ್ಲಾನ್ಸ್ 

ಈ ಎರಡೂ ಪ್ಲಾನ್ ಗಳು ಜಿಯೋ ಮತ್ತು ಏರ್ ಟೆಲ್ ನ ಪ್ರತಿದಿನ 1.5ಜಿಬಿ ಮತ್ತು 1.4ಜಿಬಿ ಡಾಟಾ ಕ್ರಮವಾಗಿ ಪ್ರತಿದಿನ ಉಚಿತವಿರುವ ಪ್ಲಾನ್ ನೊಂದಿಗೆ ಸ್ಪರ್ಧೆಯೊಡ್ಡುತ್ತದೆ. ಈ ಎರಡೂ ಪ್ಲಾನ್ ಗಳು 1.4ಜಿಬಿ ಡಾಟಾವನ್ನು ಉಚಿತವಾಗಿ ನೀಡುತ್ತದೆ. ಉಚಿತ ಸ್ಥಳೀಯ /STD/ರೋಮಿಂಗ್ ಕರೆಗಳನ್ನು (250 minutes ಪ್ರತಿದಿನ ಅಥವಾ 1000 minutes ಪ್ರತಿವಾರ) ಮತ್ತು 100 ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಲಭ್ಯವಾಗುತ್ತದೆ. ವೊಡಾಫೋನ್ ನ ರೂ 458 ಪ್ಲಾನ್ 84 ದಿನಗಳ ಅವಧಿಯನ್ನು ಹೊಂದಿರುತ್ತದೆ. ಅಂದರೆ ನಿಮಗೆ 117.6GB ಡಾಟಾವು ಪ್ರತಿದಿನ 3.89ರುಪಾಯಿ/ಜಿಬಿ ಮೊತ್ತದಲ್ಲಿ ನೀಡಿದಂತಾಗುತ್ತದೆ. ಇದರ ಜೊತೆಗೆ ರೂ 5.9 ಪ್ಲಾನ್ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.ಇದರ ಫಲಿತಾಂಶ 126ಜಿಬಿ ಡಾಟಾವು ಈ ಅವಧಿಯಲ್ಲಿ 4.03 ರುಪಾಯಿ/ ಜಿಬಿ ಮೊತ್ತದಲ್ಲಿ ಲಭ್ಯವಾದಂತಾಗುತ್ತದೆ.

ವೊಡಾಫೋನ್ ರೂ 569 ಪ್ರಿಪೇಡ್ ಪ್ಲಾನ್ 

ವೊಡಾಫೋನ್ ರೂ 569 ಪ್ರಿಪೇಡ್ ಪ್ಲಾನ್ 

ಕೊನೆಯದಾಗಿ ಮತ್ತು ಪ್ರತಿ ಜಿಬಿ ಡಾಟಾ ಲೆಕ್ಕಾಚಾರದಲ್ಲಿ ಹೇಳುವುದಾದರೆ ಬೆಸ್ಟ್ ಪ್ಲಾನ್ ಆಗಿರುವ ವೊಡಾಫೋನ್ ರೂ 569 ಪ್ಲಾನ್ ಇದೆ.ಪ್ರತಿದಿನ ಅತೀ ಹೆಚ್ಚು ಡಾಟಾ ಬಳಕೆ ಮಾಡುವವರಿಗೆ ಇದು ಹೇಳಿ ಮಾಡಿಸಿದ್ದಾಗಿದೆ. 84 ದಿನಗಳ ಅವಧಿಗೆ 3ಜಿಬಿ ಹೈ ಸ್ಪೀಡ್ ಡಾಟಾ ಪ್ರತಿದಿನ ಇದರಲ್ಲಿ ಉಚಿತವಾಗಿರುತ್ತದೆ. ಅಂದರೆ ಒಟ್ಟು ವ್ಯಾಲಿಡಿಟಿ ಅವಧಿಯಲ್ಲಿ 252 ಜಿಬಿ ಡಾಟಾ ಲಭ್ಯವಾಗುತ್ತದೆ. ಉಚಿತ ಕರೆಗಳು, ಎಸ್ಎಂಎಸ್ ಲಾಭಗಳು ಮೇಲಿನ ವೊಡಾಫೋನ್ ಪ್ಲಾನ್ ನಂತೆಯೇ ಇರುತ್ತದೆ.

Best Mobiles in India

English summary
Airtel vs Jio vs Vodafone: Best long validity prepaid plans to buy in September 2018. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X