Subscribe to Gizbot

ಸಿಟಿಸೆಂಟರ್‌ ಮಾಲ್‌ನಲ್ಲಿ ಏರ್‌ಟೆಲ್‌ ವೈಫಿ ಉದ್ಘಾಟನೆ

Posted By:

ಮಂಗಳೂರಿನ ಟೆಕ್‌ ಪ್ರಿಯರಿಗೆ ಒಂದು ಗುಡ್‌ ನ್ಯೂಸ್‌. ನಗರದ ದೊಡ್ಡ ಮಾಲ್‌ ಎಂದೇ ಪ್ರಸಿದ್ದವಾಗಿರುವ ಸಿಟಿ ಸೆಂಟರ್‌ ಮಾಲ್‌ನಲ್ಲಿ ವೈಫಿ (Wi-Fi ) ಹಾಟ್‌ಸ್ಪಾಟ್‌ ಉದ್ಘಾಟನೆಯಾಗಿದೆ. ಈ ಮೂಲಕ ಸಂಪೂರ್ಣ ವೈಫಿ ಹಾಟ್‌ಸ್ಪಾಟ್‌ ಹೊಂದಿದ ರಾಜ್ಯದ ಮೊದಲ ಮಳಿಗೆ ಎಂಬ ಕೀರ್ತಿಗೆ ಸಿಟಿ ಸೆಂಟರ್‌ ಮಾಲ್‌ ಭಾಜನವಾಗಿದೆ.

ಕಳೆದ ಶನಿವಾರ ಈ ವೈಫಿ ಹಾಟ್‌ಸ್ಪಾಟ್‌ ಉದ್ಘಾಟನೆಗೊಂಡಿದ್ದು, ಸುಮಾರು 200 ರಿಟೇಲ್‌ ಮಳಿಗೆಗಳವರೆಗೆ ವೈಫಿ ವ್ಯಾಪ್ತಿ ಇದ್ದು ಸಾರ್ವಜನಿಕರು ಬಳಸಬಹುದಾಗಿದೆ. ಸದ್ಯದಲ್ಲೇ ಈ ಸೇವೆ ಉಡುಪಿ ಮತ್ತು ಮಣಿಪಾಲದಲ್ಲಿ ವೈಫಿ ಹಾಟ್‌ಸ್ಪಾಟ್‌ ಆರಂಭಿಸುವುದಾಗಿ ಏರ್‌ಟೆಲ್‌ ಹೇಳಿದೆ.

ಸಿಟಿಸೆಂಟರ್‌ ಮಾಲ್‌ನಲ್ಲಿ ಏರ್‌ಟೆಲ್‌ ವೈಫಿ ಉದ್ಘಾಟನೆ

ಸಿಟಿ ಸೆಂಟರ್‌ನಲ್ಲಿ ಏರ್‌ಟೆಲ್‌ ಹಾಟ್‌ಸ್ಪಾಟ್‌ ಭಾರ್ತಿ ಏರ್‌ಟೆಲ್‌ ಕರ್ನಾಟಕದ ಮುಖ್ಯ ಓಪರೇಟಿಂಗ್‌ ಅಧಿಕಾರಿ ಸುರಭ್‌ ಗೋಯಲ್‌ ವೈಫಿ ಹಾಟ್‌ಸ್ಪಾಟ್‌ನ್ನು ಉದ್ಘಾಟಿಸಿದರು.

ಮಂಗಳೂರಿನ ಕಾರ್ನಾಡ್ ಸದಾಶಿವ ರಾವ್ ರಸ್ತೆಯ ಬಳಿ 5,40,00 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಸಿಟಿ ಸೆಂಟರ್ 2010 ಎ.25ರಂದು ಉದ್ಘಾಟನೆಗೊಂಡಿತ್ತು. ಭಾರತದ ಹತ್ತನೇ ಬೃಹತ್ ಮಾಲ್ ಹಾಗೂ ಕರ್ನಾಟಕದ ಎರಡನೇ ಅತ್ಯಂತ ದೊಡ್ಡ ಮಾಲ್ ಎಂಬ ಹೆಗ್ಗಳಿಕೆಗೆ ಈ ಮಾಲ್‌ ಪಾತ್ರವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot