Home
ಸುದ್ದಿಜಾಲ

ಸದ್ದಿಲ್ಲದೆ ಹೊಸ ಬ್ರಾಡ್‌ಬ್ಯಾಂಡ್‌ ಲೈಟ್‌ ಪ್ಲಾನ್‌ ಪರಿಚಯಿಸಿದ ಏರ್‌ಟೆಲ್‌! ಏನೆಲ್ಲಾ ಪ್ರಯೋಜನಗಳು!

ಜನಪ್ರಿಯ ಬ್ರಾಡ್‌ಬ್ಯಾಂಡ್‌ ಪೂರೈಕೆದಾರರಲ್ಲಿ ಏರ್‌ಟೆಲ್‌ ಟೆಲಿಕಾಂ ಕೂಡ ಒಂದಾಗಿದೆ. ತನ್ನ ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್‌ ಫೈಬರ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಈಗಾಗಲೇ ವಿವಿಧ ಬೆಲೆಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ನೀಡಿರುವ ಏರ್‌ಟೆಲ್‌ ಸದ್ದಿಲ್ಲದೆ ಹೊಸ ಬ್ರಾಡ್‌ಬ್ಯಾಮಡ್‌ ಲೈಟ್‌ ಪ್ಲಾನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್‌ ಫೈಬರ್‌ ಬ್ರಾಡ್‌ಬ್ಯಾಂಡ್‌ ಲೈಟ್‌ ಪ್ಲಾನ್‌ ಪರಿಚಯಿಸಿದೆ. ಇದು 219ರೂ. ಮಾಸಿಕ ಬಾಡಿಗೆಯಲ್ಲಿ ಬರಲಿದೆ. ಇದು ಜಿಯೋದ 198ರೂ. ಬ್ಯಾಕಪ್‌ ಪ್ಲಾನ್‌ಗೆ ಪೈಪೋಟಿ ನೀಡುವುದಕ್ಕೆ ಪರಿಚಯಿಸಲಾಗಿದೆ. ಹಾಗಾದ್ರೆ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಲೈಟ್ ಪ್ಲಾನ್ ಏನೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ದಿಲ್ಲದೆ ಹೊಸ ಬ್ರಾಡ್‌ಬ್ಯಾಂಡ್‌ ಲೈಟ್‌ ಪ್ಲಾನ್‌ ಪರಿಚಯಿಸಿದ ಏರ್‌ಟೆಲ್‌!

ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಲೈಟ್‌ ಪ್ಲಾನ್‌

ಏರ್‌ಟೆಲ್‌ ಕಂಪೆನಿ ಇದೀಗ ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ಪ್ಲಾನ್‌ ಮಾಸಿಕ 219ರೂ. ಬೆಲೆಯಲ್ಲಿ ಬರಲಿದ್ದು, ವಾರ್ಷಿಕ ಚಂದಾದಾರಿಕೆಯಾಗಿ ಮಾತ್ರ ಲಭ್ಯವಾಗಲಿದೆ. ಇನ್ನು ಈ ಪ್ಲಾನ್‌ ತನ್ನ ಬಳಕೆದಾರರಿಗೆ 10Mbps ವೇಗವನ್ನು ನೀಡಲಿದ್ದು, ಉಚಿತ ರೂಟರ್‌ನೊಂದಿಗೆ ಬರುತ್ತದೆ. ಆದರಿಂದ ಹೊಸ ಪ್ಲಾನ್‌ಗೆ ಸೈನ್ ಅಪ್ ಮಾಡಲು ಬಳಕೆದಾರರು ಒಟ್ಟು 3,101ರೂ. ಪಾವತಿಸಬೇಕಾಗುತ್ತದೆ.

ಸದ್ದಿಲ್ಲದೆ ಹೊಸ ಬ್ರಾಡ್‌ಬ್ಯಾಂಡ್‌ ಲೈಟ್‌ ಪ್ಲಾನ್‌ ಪರಿಚಯಿಸಿದ ಏರ್‌ಟೆಲ್‌!

ಇನ್ನು ಈ ಹೊಸ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಲೈಟ್ ಪ್ಲಾನ್ ಬಿಹಾರ, ಉತ್ತರ ಪ್ರದೇಶ ಪೂರ್ವ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಲಭ್ಯವಾಗಲಿದೆ. ಆದರೆ ಈ ಪ್ಲಾನ್‌ನಲ್ಲಿ ಯಾವುದೇ OTT ಅಥವಾ ಲೈವ್ ಟಿವಿ ಪ್ರಯೋಜನಗಳಿಲ್ಲ ಎಂದು ಹೇಳಲಾಗಿದೆ. ಸದ್ಯ ಬಳಕೆದಾರರು ತಿಂಗಳಿಗೆ 219 ರೂ.ಗಳಲ್ಲಿ 10Mbps ಸ್ಥಿರ ವೇಗದ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು.

ಇದೇ ಸಮಯದಲ್ಲಿ ಜಿಯೋದ 198ರೂ ಬ್ಯಾಕ್‌ಅಪ್‌ ಪ್ಲಾನ್‌ ಒಂದು, ಎರಡು ಅಥವಾ ಏಳು ದಿನಗಳವರೆಗೆ 30Mbps ಅಥವಾ 100Mbps ಒಂದು-ಕ್ಲಿಕ್ ವೇಗದ ಅಪ್‌ಗ್ರೇಡ್ ಅನ್ನು ನೀಡುತ್ತದೆ. ಈ ವೇಗದ ಅಪ್‌ಗ್ರೇಡ್‌ಗಳ ಬೆಲೆಯು ದಿನಕ್ಕೆ 30Mbps ವೇಗಕ್ಕೆ 21 ರೂ.ನಿಂದ ಪ್ರಾರಂಭವಾಗಲಿದೆ. ಜಿಯೋ ತಿಂಗಳಿಗೆ 100ರೂ ಮತ್ತು ತಿಂಗಳಿಗೆ 200ರೂ ಮೌಲ್ಯದ ಎಂಟರ್‌ಟೈನ್‌ಮೆಂಟ್‌ ಅಪ್‌ಗ್ರೇಡ್ ಪ್ಲಾನ್‌ಗಳನ್ನು ಸಹ ನೀಡುತ್ತಿದೆ. ಇದರಿಂದ ಬಳಕೆದಾರರು ಉಚಿತ 4K ಸೆಟ್-ಟಾಪ್ ಬಾಕ್ಸ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಸದ್ದಿಲ್ಲದೆ ಹೊಸ ಬ್ರಾಡ್‌ಬ್ಯಾಂಡ್‌ ಲೈಟ್‌ ಪ್ಲಾನ್‌ ಪರಿಚಯಿಸಿದ ಏರ್‌ಟೆಲ್‌!

ಇನ್ನು ಇತ್ತೀಚಿಗೆ ಏರ್‌ಟೆಲ್‌ ತನ್ನ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ರಿಮೂವ್‌ ಮಾಡಿದೆ. ಇದರಲ್ಲಿ 99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಸದ್ಯಕ್ಕೆ ಒಂಬತ್ತು ವಲಯಗಳಿಂದ ತೆಗೆದುಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಲಯಗಳಿಂದ ಈ ರೀಚಾರ್ಜ್‌ ಪ್ಲ್ಯಾನ್‌ ಅನ್ನು ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ. ವಿಷಯ ಏನೆಂದರೆ ಈ ಮೊದಲು 99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್ 79 ರೂ. ಗಳಾಗಿತ್ತು. ಆದರೆ, ಈ ಎರಡು ವರ್ಷಗಳ ಅವಧಿಯಲ್ಲಿ ಬೇಸ್ ಪ್ಲ್ಯಾನ್‌ದರ 150 ರೂ. ಗಳ ಗಡಿ ದಾಟಿದೆ.

ಎರಡು ವರ್ಷಗಳ ಹಿಂದೆ ಇದೇ ಪ್ಲ್ಯಾನ್‌ 49 ರೂ. ಗಳನ್ನು ಪಡೆದಿತ್ತು. ಆದರೆ, ಬಳಕೆದಾರರು 2021 ರಲ್ಲಿ ಈ ರೀಚಾರ್ಜ್‌ ಪ್ಲ್ಯಾನ್‌ಗೆ 79 ರೂ. ಗಳನ್ನು ಪಾವತಿಗೆ ಮಾಡುವಂತಾಗಿತ್ತು. ಇದಾದ ಬಳಿಕ ಅಂದರೆ ಡಿಸೆಂಬರ್ 2021 ರಲ್ಲಿ ಸುಂಕದ ಹೆಚ್ಚಳ ಹಿನ್ನೆಲೆ 79 ರೂ. ಗಳ ಪ್ಲ್ಯಾನ್‌ ಅನ್ನು ತೆಗೆದುಹಾಕಿ ಇದಕ್ಕೆ ಉತ್ತಮ ಪರ್ಯಾಯವಾಗಿ 99 ರೂ. ಗಳ ಪ್ಲ್ಯಾನ್‌ ಅನ್ನು ಏಪರಿಚಯಿಸಲಾಗಿತ್ತು. ಆದರೆ, ಈ ಪ್ಲ್ಯಾನ್‌ಗೂ ಕೂಡ ಈಗ ಏರ್‌ಟೆಲ್‌ ವಿದಾಯ ಹೇಳುತ್ತಿದೆ.

Best Mobiles in India

English summary
Airtel Xstream Fiber Broadband Lite Plan silently launched for Rs 219 in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+