Home
ಸುದ್ದಿಜಾಲ

ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ರೀಚಾರ್ಜ್‌ ಮಾಡುವವರಿಗೆ ಸಿಗಲಿದೆ ಬಿಗ್‌ ಆಫರ್‌!

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳು ಕೂಡ ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬ್ರಾಡ್‌ಬ್ಯಾಂಡ್ ಕೂಡ ಭಾರತದ ಅತ್ಯಂತ ಜನಪ್ರಿಯ ಇಂಟರ್ನೆಟ್ ಸೇವಾ ಪೂರೈಕೆದಾರರಲ್ಲಿ (ISP) ಒಂದಾಗಿದೆ. ಈಗಾಗಲೇ ಹಲವು ಬೆಲೆಗಳ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಸದ್ಯ ಇದೀಗ ತನ್ನ ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದ್ದು, ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿಯಾಗಿ ಅನೇಕ ಪ್ರಯೋಜನಗಳು ದೊರೆಯಲಿವೆ. ಆದರೆ ಇದಕ್ಕೆ ಕೆಲವು ಕಂಡಿಷನ್‌ ಕೂಡ ಇದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೂಪರ್, ಅಮೆಜಾನ್‌ ಪ್ರೈಮ್‌ ಪ್ರಯೋಜನಗಳನ್ನು ನೀಡಲು ಮುಂದಾಗಿದೆ. ಆದರೆ ಈ ಪ್ರಯೋಜನಗಳು ಏರ್‌ಟೆಲ್‌ ಥ್ಯಾಂಕ್ಸ್‌ ಅಪ್ಲಿಕೇಶನ್‌ ಮೂಲಕ ಚಂದಾದಾರರಾಗುವವರಿಗೆ ಮಾತ್ರ ಲಭ್ಯವಾಗಲಿದೆ. ಅಲ್ಲದೆ ವೆಬ್‌ಸೈಟ್‌ ಮೂಲಕ ರೀಚಾರ್ಜ್‌ ಮಾಡಿದರೆ ಅಮೆಜಾನ್‌ ಪ್ರೈಮ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳಲ್ಲಿ ಸ್ಟ್ರೀಮಿಂಗ್‌ ಪ್ಲಾನ್‌ಗಳನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ ಥ್ಯಾಂಕ್ಸ್‌

ಏರ್‌ಟೆಲ್‌ ಥ್ಯಾಂಕ್ಸ್‌ ಅಪ್ಲಿಕೇಶನ್‌ ಮೂಲಕ ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಚಂದಾದಾರಾದರೆ ಡಿಸ್ನಿ+ ಹಾಟ್‌ಸ್ಟಾರ್ ಸೂಪರ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಡಿಸ್ನಿ+ ಹಾಟ್‌ಸ್ಟಾರ್ ಸೂಪರ್ ಬಳಕೆದಾರರು HD ಯಲ್ಲಿ ನಿರ್ಬಂಧಿಸಲಾದ ವೀಡಿಯೊ ಗುಣಮಟ್ಟದೊಂದಿಗೆ 2 ಡಿವೈಸ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೂಪರ್ ಪ್ಲಾನ್ ಹೊಂದಿರುವ ಬಳಕೆದಾರರು ಲ್ಯಾಪ್‌ಟಾಪ್‌ಗಳು ಅಥವಾ ಟಿವಿ ಸೇರಿದಂತೆ ಎರಡು ಡಿವೈಸ್‌ಗಳಲ್ಲಿ ಶೋಗಳು ಅಥವಾ ಚಲನಚಿತ್ರಗಳನ್ನು ಸ್ಟ್ರೀಮ್ ಮಾಡಬಹುದು.

ಡಿಸ್ನಿ+ ಹಾಟ್‌ಸ್ಟಾರ್

ಡಿಸ್ನಿ+ ಹಾಟ್‌ಸ್ಟಾರ್ ಸೂಪರ್ ಪ್ಲಾನ್‌ ಪ್ರಯೋಜನವು ಏರ್‌ಟೆಲ್‌ ವೆಬ್‌ಸೈಟ್ ಮೂಲಕ ಪ್ರತ್ಯೇಕವಾಗಿ ಲಭ್ಯವಿಲ್ಲ. ಇದನ್ನು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಮಾತ್ರ ಪಡೆಯಬಹುದಾಗಿದೆ. ಆದಾಗ್ಯೂ, ಬಳಕೆದಾರರು ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿದಾಗ ಅಮೆಜಾನ್‌ ಪ್ರೈಮ್‌ ಪ್ರಯೋಜನ ಸೇರಿದಂತೆ ಇತರ ಪ್ರಯೋಜನಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನು 999ರೂ.ಬೆಲೆಯ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲಾನ್‌ 200 Mbps ವೇಗದ ಜೊತೆಗೆ ಅನಿಯಮಿತ ಕರೆ ಪ್ರಯೋಜನಗಳನ್ನು ನೀಡಲಿದೆ. ಈ ಯೋಜನೆಯು ಅಮೆಜಾನ್ ಪ್ರೈಮ್‌ಗೆ ಪ್ರವೇಶವನ್ನು ನೀಡಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಸೂಪರ್ ಯೋಜನೆಗೆ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್‌

ಇದಲ್ಲದೆ ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಫೈಬರ್‌ 1,499ರೂ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡಲಿದೆ. ಈ ಪ್ಲಾನ್‌ 300Mbps ಇಂಟರ್‌ನೆಟ್‌ ವೇಗವನ್ನು ನೀಡಲಿದ್ದು, ಅನಿಯಮಿತ ಧ್ವನಿ ಕರೆ ಪ್ರಯೋಜನಗಳೊಂದಿಗೆ ಬರುತ್ತದೆ. ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಏರ್‌ಟೆಲ್‌ ಎಕ್ಸಸ್ಟ್ರೀಮ್‌,ವಿಂಕ್‌ ಮ್ಯೂಸಿಕ್‌, Zee5 ಪ್ರೀಮಿಯಂ ಮತ್ತು ಅಮೆಜಾನ್‌ ಪ್ರೈಮ್‌ಗೆ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್‌

ಇನ್ನು ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಬ್ರಾಡ್‌ಬ್ಯಾಂಡ್‌ 3,999ರೂ. ಪ್ಲಾನ್‌ ವಿಐಪಿ ಪ್ಲಾನ್ ಆಗಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಪ್ರಯೋಜನಗಳೊಂದಿಗೆ, ಡಿಸ್ನಿ+ ಹಾಟ್‌ಸ್ಟಾರ್‌, ಏರ್‌ಟೆಲ್‌ ಎಕ್ಸಸ್ಟ್ರೀಮ್‌, ವಿಂಕ್‌ ಮ್ಯೂಸಿಕ್‌, Zee5 ಪ್ರೀಮಿಯಂ ಮತ್ತು ಅಮೆಜಾನ್‌ ಪ್ರೈಮ್‌ಗೆ ಪೂರಕ ಚಂದಾದಾರಿಕೆಯನ್ನು ಪಡೆದಿದೆ. ಈ ಪ್ಲಾನ್‌ನಲ್ಲಿ ಉಚಿತ ಎಕ್ಸ್‌ಸ್ಟ್ರೀಮ್ ಸ್ಟ್ರೀಮಿಂಗ್ ಬಾಕ್ಸ್ ಅನ್ನು ಸಹ ನೀಡಲಿದೆ.

ನೀವು ಕೂಡ ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕನೆಕ್ಟಿವಿಟಿಯನ್ನು ಪಡೆಯುವುದು ಹೇಗೆ?

ನೀವು ಕೂಡ ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕನೆಕ್ಟಿವಿಟಿಯನ್ನು ಪಡೆಯುವುದು ಹೇಗೆ?

ಹಂತ:1 ಹೊಸ ಏರ್‌ಟೆಲ್ ಎಕ್ಸಸ್ಟ್ರೀಮ್‌ ಫೈಬರ್‌ ಸೇವೆ ಪಡೆಯಲು ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ವೆಬ್‌ಪೇಜ್‌ಗೆ ಭೇಟಿ ನೀಡಿ
ಹಂತ:2 ನಿಮ್ಮ ಆಯ್ಕೆಯ ಅತ್ಯುತ್ತಮ ಇಂಟರ್‌ನೆಟ್ ಯೋಜನೆಯನ್ನು ಆಯ್ಕೆಮಾಡಿ
ಹಂತ:3 ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್‌ ಮಾಡಿ
ಹಂತ:4 ನಿಮ್ಮ ಆದ್ಯತೆಯ ವಿಳಾಸದಲ್ಲಿ ನೀವು ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಸನ್‌ ಅನ್ನು ಈಗ ಇನ್‌ಸ್ಟಾಲ್‌ ಮಾಡಿ.
ಹಂತ:5 ನಂತರ ಮುಂದಿನ 48 ಗಂಟೆಗಳ ಒಳಗೆ ನಿಮ್ಮ ಹೊಸ ಪ್ಲಾನ್‌ ಅನ್ನು ಸಕ್ರಿಯಗೊಳಿಸಲಾಗುತ್ತದೆ.

Best Mobiles in India

English summary
Airtel announced that it would give Disney+ Hotstar Super benefit with some of its broadband plans.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+