ಏರ್‌ಟೆಲ್‌ನ ಹೊಸ ಪ್ಲಾನ್ಸ್: ಈಗ 22+ OTT ಮತ್ತು 350+ ಲೈವ್ ಟಿವಿ ಚಾನೆಲ್‌ಗಳು!
ಭಾರತದ ಪ್ರಮುಖ ಟೆಲಿಕಾಂ ಕಂಪನಿ ಏರ್‌ಟೆಲ್ IPL 2025 ರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಬ್ರಾಡ್‌ಬ್ಯಾಂಡ್ ಮತ್ತು ಬ್ಲ್ಯಾಕ್ ಯೋಜನೆಗಳನ್ನು ಹೊಸ ವಿನ್ಯಾಸದಲ್ಲಿ ಪರಿಚಯಿಸಿದೆ. ಭಾರೀ ಸ್ಟ್ರೀಮರ್‌ಗಳು ಮತ್ತು ಕ್ರೀಡಾ ಉತ್ಸಾಹಿಗಳಿಗೆ ಸೂಕ್ತವಾಗಿರುವಂತೆ ಈ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದ್ದು, ಇದೀಗ ₹599 ರ ಬ್ರಾಡ್‌ಬ್ಯಾಂಡ್ ಯೋಜನೆಯು 22+ OTT ಅಪ್ಲಿಕೇಶನ್‌ಗಳು ಮತ್ತು 350+ ಲೈವ್ ಟಿವಿ ಚಾನೆಲ್‌ಗಳನ್ನು ನೀಡುತ್ತಿದೆ. ಈ ಎಲ್ಲಾ ಯೋಜನೆಗಳು IPL 2025 ರ ಅಭಿಮಾನಿಗಳಿಗೆ ಮತ್ತು ಸ್ಟ್ರೀಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿವೆ. ಹಾಗಾದರೆ, ಹೊಸದಾಗಿ ವಿನ್ಯಾಸಗೊಳಿಸಲಾದ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಮತ್ತು ಬ್ಲ್ಯಾಕ್ ಯೋಜನೆಗಳು ಯಾವುವು ಮತ್ತು ಈ ಯೋಜನೆಗಳು ಹೇಗಿವೆ ಎಂಬುದನ್ನು ಮುಂದೆ ನೊಡೋಣ ಬನ್ನಿ.
₹599 ರೂ. ಬೆಲೆಯ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆ.
ಏರ್‌ಟೆಲ್ ಹೊಸದಾಗಿ ವಿನ್ಯಾಗೊಳಿಸಿರುವ ಯೋಜನೆಗಳಲ್ಲಿ ₹599ರ ಬ್ರಾಡ್‌ಬ್ಯಾಂಡ್ ಯೋಜನೆಯು ಪ್ರಮುಖವಾಗಿದೆ. ₹599ರ ಈ ಬ್ರಾಡ್‌ಬ್ಯಾಂಡ್ ಯೋಜನೆಯು ಇದೀಗ JioHotstar ಚಂದಾದಾರಿಕೆ ಜೊತೆಗೆ, 21 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳು ಮತ್ತು 350 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು IPL ವೀಕ್ಷಕರಿಗೆ ಲೈವ್ ಆಕ್ಷನ್ ನೋಡಲು ಅನುಕೂಲಕರವಾಗಿದೆ. ಈ ₹599 ರೂ. ಯೋಜನೆಯು 30 Mbps ಇಂಟರ್ನೆಟ್ ವೇಗವನ್ನು ನೀಡುತ್ತದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಮೂಲಕ JioHotstar, ZEE5 ಮತ್ತು ಇತರ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ. ಬಳಕೆದಾರರು ಇದರಲ್ಲಿ HD ಸ್ಟ್ರೀಮ್‌ಗಳು ಸೇರಿದಂತೆ ವಿವಿಧ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು.

Amazon Prime Video ಬ್ರಾಡ್‌ಬ್ಯಾಂಡ್ ಯೋಜನೆ
ಇದೇ ರೀತಿಯಾಗಿ ಏರ್‌ಟೆಲ್ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಸಹ ಒದಗಿಸುತ್ತಿದೆ. ಏರ್‌ಟೆಲ್‌ನ ₹699 ರ ಯೋಜನೆಯು 40 Mbps ವೇಗವನ್ನು ನೀಡುತ್ತದೆ, ₹899 ರ ಯೋಜನೆಯು 100 Mbps ವೇಗವನ್ನು ನೀಡುತ್ತದೆ ಮತ್ತು ₹1099 ರ ಯೋಜನೆಯು 200 Mbps ವೇಗವನ್ನು ನೀಡುತ್ತದೆ. ಈ ಎಲ್ಲಾ ಯೋಜನೆಗಳು ದೀಗ JioHotstar ಚಂದಾದಾರಿಕೆ ಜೊತೆಗೆ, 21 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳು ಮತ್ತು 350 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಆದರೆ, ₹1099 ರ ಯೋಜನೆಯಲ್ಲಿ ಏರ್‌ಟೆಲ್ ಗ್ರಾಹಕರು ಹೆಚ್ಚುವರಿಯಾಗಿ Amazon Prime Video ಮತ್ತು Apple TV+ ಚಂದಾದಾರಿಕೆ ಪಡೆಯಬಹುದು. ಇದಕ್ಕಿಂತಲೂ ಪ್ರೀಮಿಯಂ ಸೇವೆಯನ್ನು ಬಯಸುವ ಗ್ರಾಹಕರಿಗೆ ₹1599 ಮತ್ತು ₹3999 ಯೋಜನೆಗಳಿವೆ.
Netflix, JioHotstar, Prime Video
ಏರ್‌ಟೆಲ್ ಗ್ರಾಹಕರಿಗೆ ₹1599 ರ ಯೋಜನೆಯು 300 Mbps ವೇಗವನ್ನು ನೀಡುತ್ತದೆ ಮತ್ತು ಇದು Netflix ಚಂದಾದಾರಿಕೆಯನ್ನು ಒಳಗೊಂಡಿದೆ. ₹3999 ರ ಯೋಜನೆಯು 1 Gbps ವೇಗವನ್ನು ನೀಡುತ್ತದೆ ಮತ್ತು Netflix, JioHotstar, Prime Video, ZEE5 ಮತ್ತು Apple TV+ ಸೇರಿದಂತೆ ಎಲ್ಲಾ ಪ್ರಮುಖ ಸ್ಟ್ರೀಮಿಂಗ್ ಸೇವೆಗಳನ್ನು ಒಳಗೊಂಡಿದೆ. ಇನ್ನು ಏರ್‌ಟೆಲ್‌ನ ಬ್ಲ್ಯಾಕ್ ಯೋಜನೆಗಳು ಇಂಟರ್ನೆಟ್, ಧ್ವನಿ ಮತ್ತು ಸ್ಟ್ರೀಮಿಂಗ್ ಸೇವೆಗಳನ್ನು ಒಟ್ಟಿಗೆ ನೀಡುತ್ತವೆ. ₹699 ರಿಂದ ಪ್ರಾರಂಭವಾಗುವ ಈ ಯೋಜನೆಗಳು JioHotstar ಮತ್ತು ಎಕ್ಸ್‌ಸ್ಟ್ರೀಮ್ ಪ್ರವೇಶವನ್ನು ನೀಡುತ್ತವೆ. ₹1099 ಮತ್ತು ₹1599 ರ ಯೋಜನೆಗಳು Amazon Prime, Apple TV+, Apple Music ಮತ್ತು Netflix ನಂತಹ ಸೇವೆಗಳನ್ನು ಸಹ ಒಳಗೊಂಡಿವೆ. ಮತ್ತು IPTV ಬೆಂಬಲವನ್ನು ಸಹ ನೀಡಲಾಗುತ್ತದೆ.


Click it and Unblock the Notifications








