ಏರ್‌ಟೆಲ್‌ ಪ್ರಿಪೇಡ್ ಗ್ರಾಹಕರಿಗೆ 'ಡಬಲ್‌ ಡೇಟಾ" ಬಂಪರ್‌ ಆಫರ್

By Suneel
|

ಏರ್‌ಟೆಲ್‌ ಪ್ರಿಪೇಡ್‌ ಗ್ರಾಹಕರಿಗೆ ಈಗ ಡಬಲ್‌ ಧಮಾಕಾ ಆಫರ್. ಭಾರತದ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್‌ ಏರ್‌ಟೆಲ್ ತನ್ನ ಪ್ರಿಪೇಡ್‌ ಗ್ರಾಹಕರಿಗೆ ಬುಧವಾರ "ಡಬಲ್‌ ಡೇಟಾ" ಪ್ಯಾಕ್ಸ್‌ ಅನ್ನು ಹೊಸದಾಗಿ ಪ್ರಕಟಿಸಿದ್ದು, ಹೊಸ ಡೇಟಾ ಪ್ಯಾಕ್ ರಾತ್ರಿ ವೇಳೆ ಹೆಚ್ಚುವರಿ ಡೇಟಾ ಲಾಭವನ್ನು ನೀಡುತ್ತದೆ. ಏರ್‌ಟೆಲ್‌ ಕಂಪನಿ ಪ್ರೆಸ್‌ ಹೇಳಿಕೆಯಲ್ಲಿ ಹೊಸ ಡೇಟಾ ಪ್ಯಾಕ್‌ ಜೊತೆ ಪ್ರಿಪೇಡ್ ಗ್ರಾಹಕರು ಶೇಕಡ 30 ರಷ್ಟು ಉಳಿತಾಯವನ್ನು ರೀಚಾರ್ಜ್‌ನಿಂದ ಪಡೆಯಬಹುದು ಎಂದಿದೆ. ಅಂದಹಾಗೆ ಅಂತಹ ಉಳಿತಾಯದ ಡೇಟಾ ಪ್ಯಾಕ್‌ಗಳು ಹೇಗಿವೆ, ವಿಶೇಷತೆ ಏನು, ಲಾಭ ಏನು ಎಂಬುದನ್ನು ಲೇಖನ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

1

1

ಏರ್‌ಟೆಲ್‌ ರಾತ್ರಿ ವೇಳೆ ಹೆಚ್ಚುವರಿ ಡೇಟಾ ಲಾಭವು ಪರಿಣಾಮಕಾರಿಯಾಗಿ ಡೇಟಾ ಲಿಮಿಟ್‌ ಅನ್ನು ಗ್ರಾಹಕರಿಗೆ ಎರಡರಷ್ಟು ಮಾಡುತ್ತದೆ.

2

2

ಪ್ರಿಪೇಡ್‌ ಡೇಟಾ ಪ್ಯಾಕ್‌ ಪ್ರಸ್ತುತದಲ್ಲಿ ರೂ 259 ಇದ್ದು ಅದು 1GB 3G/4G ಡೇಟಾವನ್ನು 28 ದಿನಗಳು ಆಫರ್‌ ಮಾಡುತ್ತದೆ. ಹೊಸದಾಗಿ ಪ್ರಕಟಗೊಳಿಸಿರುವ ಡಬಲ್‌ ಡೇಟಾ ಪ್ಯಾಕ್‌ ರೂ 296 ರಿಂದ ಗ್ರಾಹಕರು 2GB ಡೇಟಾವನ್ನು (1GB 3G/4G ದಿನನಿತ್ಯ ಮತ್ತು 1GB ಡೇಟಾವನ್ನು ರಾತ್ರಿ ವೇಳೆ) ಪಡೆಯಲಿದ್ದಾರೆ ಎಂದು ಏರ್‌ಟೆಲ್‌ ಹೇಳಿದೆ.

3

3

* 186 ರೂಪಾಯಿಗೆ ನಿಯಮಿತ 400MB ಮತ್ತು ರಾತ್ರಿ ವೇಳೆ 400MB
* 3,346 ರೂಪಾಯಿಗೆ 20GB ನಿಯಮಿತ ಮತ್ತು ರಾತ್ರಿ ವೇಳೆ 20GB

4

4

ಏರ್‌ಟೆಲ್‌ ಹೊಸ ಡೇಟಾ ಪ್ಯಾಕ್‌ ಆಫರ್‌ಗಳು ವಲಯದಿಂದ ವಲಯಕ್ಕೆ ಬದಲಾಗಬಹುದು ಎನ್ನಲಾಗಿದ್ದು, ರಾತ್ರಿ ವೇಳೆಯು ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆವರೆಗೆ ಗಣನೆ ಆಗಲಿದೆ.

5

5

'ಭಾರತ ಮತ್ತು ದಕ್ಷಿಣ ಏಷಿಯಾ' ಭಾರತಿ ಏರ್‌ಟೆಲ್‌ ಮಾರುಕಟ್ಟೆ ನಿರ್ದೇಶಕ 'ಅಜಯ್‌ ಪೂರಿ'ರವರು. " ಗ್ರಾಹಕರಿಗೆ ಉತ್ತಮ ಅನುಭವ ನೀಡಲು ಗುರಿಹೊಂದಿದ್ದು, ಗ್ರಾಹಕರಿಗೆ ಉತ್ತಮ ಮೌಲ್ಯ ನೀಡಲು ನಿರೀಕ್ಷಿಸಿದ್ದೇವೆ. ಸ್ಮಾರ್ಟ್‌ಫೋನ್‌ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆನ್‌ಲೈನ್‌ನಲ್ಲಿ ಇರಲು ಇಷ್ಟಪಡುತ್ತಾರೆ. ಆದ್ದರಿಂದ ಡಬಲ್‌ ಡೇಟಾ ಪ್ಯಾಕ್ ಮೂಲಕ ಮೌಲ್ಯ ಪ್ರತಿಪಾದನೆಯನ್ನು ಮರುವ್ಯಾಖ್ಯಾನಗೊಳಿಸುತ್ತಿದ್ದೇವೆ. ಏರ್‌ಟೆಲ್‌ ಗ್ರಾಹಕರು ಈಗ ಹೆಚ್ಚು ಚಿಂತಸಿದೆ ಉತ್ತಮ ಡಬಲ್‌ ಡೇಟಾ ಪ್ಯಾಕ್‌ ಬಳಸಬಹುದು" ಎಂದಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ರಹಸ್ಯಗಳನ್ನು ಹೊಂದಿದ್ದ ಸಾಮಾನ್ಯ ಬಿಲ್ಡಿಂಗ್‌ಗಳು: ವೈರಲ್‌ರಹಸ್ಯಗಳನ್ನು ಹೊಂದಿದ್ದ ಸಾಮಾನ್ಯ ಬಿಲ್ಡಿಂಗ್‌ಗಳು: ವೈರಲ್‌

2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು <br /></a><a href=ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು" title="2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು
ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು" />2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು
ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Airtel's New 'Double Data' Prepaid Packs Offer Extra Data at Night. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X