Home
ಸುದ್ದಿಜಾಲ

ಏರ್‌ಟೆಲ್‌ನಿಂದ ಬಂಪರ್‌ ಆಫರ್‌..! 4,500 ರೂ. ಗಿಫ್ಟ್‌ ಹಾಗೂ ಮತ್ತಷ್ಟು..!

ಜಿಯೋ ಹೊಡೆತಕ್ಕೆ ಸಿಲುಕಿ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಭಾರ್ತಿ ಏರ್‌ಟೆಲ್‌ ಭಾರತದಲ್ಲಿ ಕೈತಪ್ಪಿ ಹೋಗಿರುವ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ಸ್ಥಾಪಿಸಲು ಹವಣಿಸುತ್ತಿದೆ. ಹೌದು, ಅದಕ್ಕಾಗಿಯೇ ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಿದೆ. ಅದಕ್ಕಾಗಿಯೇ ಭಾರ್ತಿ ಏರ್‌ಟೆಲ್‌ ಇಂದು #AirtelThanks ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ.

ಏರ್‌ಟೆಲ್‌ನಿಂದ ಬಂಪರ್‌ ಆಫರ್‌..! 4,500 ರೂ. ಗಿಫ್ಟ್‌ ಹಾಗೂ ಮತ್ತಷ್ಟು..!

ಇದರ ಮೂಲಕ ಏರ್‌ಟೆಲ್‌ನ ಗ್ರಾಹಕರಿಗೆ ಹೆಚ್ಚುವರಿ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು, ಏರ್‌ಟೆಲ್‌ನ ವಿಧೇಯ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲದೇ ಹೆಚ್ಚುವರಿ ಆಫರ್‌ಗಳನ್ನು ನೀಡುತ್ತಿದೆ. ಈ ಆಫರ್‌ಗಳು ಪ್ರಿಮೀಯಂ ಡಿಜಿಟಲ್‌ ಕಂಟೆಂಟ್‌ ಮತ್ತು ಆನ್‌ಲೈನ್‌ ಶಾಪಿಂಗ್‌ ವೋಚರ್‌ಗಳನ್ನು ಒಳಗೊಂಡಿದ್ದು, ಏರ್‌ಟೆಲ್‌ ಗ್ರಾಹಕರು ಪಡೆಯಬಹುದು.

ಯಾರಿಗೆ ಲಭ್ಯ..?

ಯಾರಿಗೆ ಲಭ್ಯ..?

#AirtelThanks ಆಫರ್‌ಗಳು ತಿಂಗಳಿಗೆ 100 ರೂ. ಮತ್ತು ಅದಕ್ಕಿಂತ ಹೆಚ್ಚಿನ ಆದಾಯವನ್ನು ಏರ್‌ಟೆಲ್‌ಗೆ ನೀಡುತ್ತಿರುವ ಗ್ರಾಹಕರಿಗೆ ಈ ಆಫರ್‌ಗಳು ಲಭ್ಯವಿರುವುದು ವಿಶೇಷವಾಗಿದೆ. ಈ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಹೆಚ್ಚುವರಿ ಸೌಲಭ್ಯಗಳನ್ನು ಏರ್‌ಟೆಲ್‌ ನೀಡುತ್ತಿದೆ.

3 ತಿಂಗಳ ನೆಟ್‌ಫ್ಲಿಕ್ಸ್‌ ಉಚಿತ

3 ತಿಂಗಳ ನೆಟ್‌ಫ್ಲಿಕ್ಸ್‌ ಉಚಿತ

ಏರ್‌ಟೆಲ್‌ನ ಇನ್ಫಿನಿಟಿ ಪೋಸ್ಟ್‌ಪೇಡ್‌ ಗ್ರಾಹಕರಿಗೆ 1500 ರೂ. ಮೌಲ್ಯದ 3 ತಿಂಗಳ ನೆಟ್‌ಫ್ಲಿಕ್ಸ್‌ ಉಚಿತವಾಗಿ ಏರ್‌ಟೆಲ್‌ #AirtelThanks ನಡಿಯಲ್ಲಿ ನೀಡುತ್ತಿದೆ. ಈ ಆಫರ್‌ನ್ನು V-Fiber ಹೋಮ್‌ ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೆ ಶೀಘ್ರದಲ್ಲಿಯೇ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಆಫರ್‌ 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಪ್ಲಾನ್‌ ಹೊಂದಿದ ಗ್ರಾಹಕರಿಗೆ ಅನ್ವಯವಾಗುತ್ತದೆ.

ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಆಫರ್

ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಆಫರ್

ಏರ್‌ಟೆಲ್‌ ಫ್ಲಿಪ್‌ಕಾರ್ಟ್‌ ಜತೆ ಒಪ್ಪಂದ ಮಾಡಿಕೊಂಡಿದ್ದು, ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇ ಸೇಲ್‌ ಸಮಯದಲ್ಲಿ ಫ್ಲಿಪ್‌ಕಾರ್ಟ್‌ ಎಕ್ಸ್‌ಕ್ಲೂಸಿವ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ 4,500 ರೂ. ಮೌಲ್ಯದ ಸೌಲಭ್ಯ ಹಾಗೂ 100GB ಬೋನಸ್‌ ಡೇಟಾವನ್ನು ಪಡೆಯಲಿದ್ದು, ಗ್ರಾಹಕರು ಉತ್ತಮವಾದ ಆಫರ್‌ನ್ನು ಪಡೆಯಲಿರುವುದು ಖಂಡಿತ.

ಭಾರೀ ಮನರಂಜನೆ

ಭಾರೀ ಮನರಂಜನೆ

ಪೋಸ್ಟ್‌ಪೇಡ್‌ ಗ್ರಾಹಕರಿಗೆ ನೆಟ್‌ಫ್ಲಿಕ್ಸ್‌ ನೀಡಿದಂತೆ, ಪ್ರಿಪೇಡ್‌ ಗ್ರಾಹಕರಿಗೆ ZEE5 ಅಕ್ಸೆಸ್‌ ಸಿಗಲಿದೆ. ಯಾರು 199 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್‌ನ್ನು ಮಾಡಿಸುತ್ತಾರೋ ಅಂತಹ ಗ್ರಾಹಕರಿಗೆ ZEE5 ಪ್ರೀಮಿಯಂ ಕಂಟೆಂಟ್‌ ಸಿಗಲಿದೆ. ನೆಟ್‌ಫ್ಲಿಕ್ಸ್‌ ಮತ್ತು ZEE5 ಪ್ರಿಮಿಯಂ ಕಂಟೆಂಟ್‌ಗಳನ್ನು ಕೇವಲ Airtel TV ಮತ್ತು MyAirtel ಆಪ್‌ಗಳ ಮೂಲಕ ವೀಕ್ಷಿಸಬಹುದಾಗಿದೆ.

2,500 ರೂ. ಮೌಲ್ಯದ ಕ್ಯಾಶ್‌ಬ್ಯಾಕ್‌

2,500 ರೂ. ಮೌಲ್ಯದ ಕ್ಯಾಶ್‌ಬ್ಯಾಕ್‌

ಫ್ಲಿಪ್‌ಕಾರ್ಟ್‌ ಸಹಭಾಗಿತ್ವದೊಂದಿಗೆ ಏರ್‌ಟೆಲ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಎಕ್ಸ್‌ಕ್ಲೂಸಿವ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ 4,500 ರೂ. ಮೌಲ್ಯದ ಆಫರ್‌ಗಳನ್ನು ನೀಡುತ್ತಿದೆ. ಅದರಲ್ಲಿ 2,500 ರೂ. ಕ್ಯಾಶ್‌ಬ್ಯಾಕ್‌ ನೀಡುತ್ತಿದ್ದು, ಈ ಕ್ಯಾಶ್‌ಬ್ಯಾಕ್‌ 50 ರೂ. ಮೌಲ್ಯದ 50 ಡಿಜಿಟಲ್‌ ವೋಚರ್‌ ಆಗಿ ಕ್ರೆಡಿಟ್ ಆಗಲಿದ್ದು, ಮುಂದಿನ 50 ರಿಚಾರ್ಜ್‌ಗಳಲ್ಲಿ ಉಪಯೋಗಿಸಿಕೊಳ್ಳಬಹುದಾಗಿದ್ದು, 50 ತಿಂಗಳ ವ್ಯಾಲಿಡಿಟಿ ಇದೆ. 199, 249, 440 ರೂ.ಗಳಂತಹ ಪ್ಲಾನ್‌ಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

MakeMyTrip ವೋಚರ್‌

MakeMyTrip ವೋಚರ್‌

ಇನ್ನು ಉಳಿದ 2,000 ರೂ. ಮೌಲ್ಯದ ಡಿಜಿಟಲ್‌ ಉಡುಗೊರೆಯಾಗಿ MakeMyTrip ವೋಚರ್‌ನ್ನು ಏರ್‌ಟೆಲ್‌ ಗ್ರಾಹಕರಿಗೆ ನೀಡಲಿದೆ. ಇದಲ್ಲದೇ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಎಕ್ಸ್‌ಕ್ಲೂಸಿವ್‌ ಮೊಬೈಲ್‌ ಖರೀದಿಸಿದ ಗ್ರಾಹಕರಿಗೆ ಹೆಚ್ಚುವರಿ 100 GB ಡೇಟಾವನ್ನು ನೀಡಲಿದ್ದು, ಪ್ರತಿ ತಿಂಗಳು 10GB ಯಂತೆ 10 ತಿಂಗಳು ಡೇಟಾ ದೊರೆಯಲಿದೆ. ಈ ಆಫರ್‌ ಕೂಡ 199, 249 ಮತ್ತು 448 ರೂ. ಗಳ ಅನ್‌ಲಿಮಿಟೆಡ್‌ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಲಭ್ಯವಿರುತ್ತದೆ.

Best Mobiles in India

English summary
#AirtelThanks launched with free Netflix subscription, 100GB bonus data, more benefits. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+