Home
ಸುದ್ದಿಜಾಲ

ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಟಿವಿಯ ಆಗಮನ! ಇದು ಮಕ್ಕಳ ಮೇಲೂ ನಿಗಾ ಇಡಲಿದೆ!

ಐವಾ ಬ್ರ್ಯಾಂಡ್‌ನ ಸ್ಮಾರ್ಟ್‌ಟಿವಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಟಿವಿಗಳ ಮೂಲಕ ತನ್ನದೇ ಆದ ಪ್ರಾಬಲ್ಯವನ್ನು ಕ್ರಿಯೆಟ್‌ ಮಾಡಿದೆ. ಸದ್ಯ ಇದೀಗ ಹೊಸ ಐವಾ 65 ಇಂಚಿನ QLED ಗೂಗಲ್ ಟಿವಿಯನ್ನು ಅನಾವರಣಗೊಳಿಸಿದೆ. ಇದು QLED TV ಕಂಪನಿಯ ಮ್ಯಾಗ್ನಿಫಿಕ್ ಸರಣಿಯ ಭಾಗವಾಗಿದೆ.

ಹೌದು, ಐವಾ 65 ಇಂಚಿನ QLED ಗೂಗಲ್ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಬೆಜೆಲ್-ಲೆಸ್ ವಿನ್ಯಾಸ, ಕ್ರಿಸ್ಟ್ ಟೆಕ್ ವಿಷನ್, ಆಂಫಿಥಿಯೇಟರ್ ವ್ಯೂನಂತಹ ಫೀಚರ್ಸ್‌ಗಳೊಂದಿಗೆ ಬರಲಿದೆ. ಇದು ಗೂಗಲ್‌ ಟಿವಿಯೊಂದಿಗೆ ಸಂಯೋಜಿಸಲ್ಪಟ್ಟಿರವುದರಿಂದ ಬಳಕೆದಾರರಿಗೆ ವಿಷಯವನ್ನು ಸುಲಭವಾಗಿ ಸ್ಟ್ರೀಮ್ ಮಾಡಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಟಿವಿಯ ಆಗಮನ! ಇದು ಮಕ್ಕಳ ಮೇಲೂ ನಿಗಾ ಇಡಲಿದೆ!

ಐವಾ(Aiwa) 65 ಇಂಚಿನ QLED ಗೂಗಲ್‌ ಟಿವಿ ಫೀಚರ್ಸ್‌ ಹೇಗಿದೆ?
Aiwa 65 ಇಂಚಿನ QLED ಗೂಗಲ್‌ ಟಿವಿ ಹೆಸರೇ ಸೂಚಿಸುವಂತೆ 65 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3840×2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 178 ಡಿಗ್ರಿಗಳ ವ್ಯೂ ಆಂಗಲ್‌ ಅನ್ನು ಪಡೆದಿದೆ. ಇದು ಗೂಗಲ್‌ ಟಿವಿಯೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ರನ್‌ ಆಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೂಗಲ್‌ ಟಿವಿಯನ್ನಲಿ ನಡೆಸಲ್ಪಡುವುದರಿಂದ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡುವ ಕೆಲಸವನ್ನು ಸಹ ಮಾಡಲಿದೆ.

ಇದಲ್ಲದೆ ಸ್ಮಾರ್ಟ್‌ಟಿವಿ ಹಲವಾರು ಮಕ್ಕಳ ಕೇಂದ್ರಿತ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರಿಂದ ಬಳಕೆದಾರರು ತಮ್ಮ ಮಕ್ಕಳು ಟಿವಿ ವೀಕ್ಷಿಸುವುದಕ್ಕೆ ಸಮಯದ ಮಿತಿಯನ್ನು ಸಹ ಸೆಟ್‌ ಮಾಡಬಹುದಾಗಿದೆ. ಇದು ವೀಡಿಯೊ ಮತ್ತು ಆಡಿಯೊ ವರ್ಧನೆಗಳಿಗಾಗಿ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಅನ್ನು ನೀಡುತ್ತದೆ. ಇನ್ನು ಸ್ಮಾರ್ಟ್‌ಟಿವಿಯು 10-ವ್ಯಾಟ್ ಸೌಂಡ್ ಔಟ್‌ಪುಟ್‌ನೊಂದಿಗೆ ಎರಡು ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ.

ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಟಿವಿಯ ಆಗಮನ! ಇದು ಮಕ್ಕಳ ಮೇಲೂ ನಿಗಾ ಇಡಲಿದೆ!

ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಕ್ರೋಮಾಕಾಸ್ಟ್‌, HDR10 ಬೆಂಬಲ, MEMC, ಎರಡು-ಮಾರ್ಗ BT, ಮೂರು HDMI 2.0 ಪೋರ್ಟ್‌ಗಳು, Wi-Fi ಡೈರೆಕ್ಟ್, ಎರಡು USB ಪೋರ್ಟ್‌ಗಳು, ಈಥರ್ನೆಟ್ ಮತ್ತು ಆಪ್ಟಿಕಲ್ ಔಟ್ ಆಯ್ಕೆಗಳ ಜೊತೆಗೆ ಸ್ಕ್ರೀನ್ ಶೇರ್‌ ಆಯ್ಕೆಯನ್ನು ಸಹ ಒಳಗೊಂಡಿದೆ.

ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಟಿವಿಯ ಆಗಮನ! ಇದು ಮಕ್ಕಳ ಮೇಲೂ ನಿಗಾ ಇಡಲಿದೆ!

ಭಾರತದಲ್ಲಿ ಐವಾ 65 ಇಂಚಿನ QLED Google TV ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Aiwa 65-ಇಂಚಿನ QLED Google TV 1,49,000 ರೂ.ಬೆಲೆಯನ್ನು ಹೊಂದಿದೆ. ಇದು A65QUHDX3-GTV ಮಾಡೆಲ್‌ ನಂಬರ್‌ ಅನ್ನು ಹೊಂದಿದ್ದು, ದೇಶದ ಪ್ರಮುಖ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಯನ್ನು ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಇನ್ನು ಐವಾ ಕಂಪೆನಿ ಸ್ಮಾರ್ಟ್‌ಟಿವಿ ಮಾತ್ರವಲ್ಲದೆ ಸ್ಪೀಕರ್‌ಗಳಿಗೂ ಕೂಡ ಪ್ರಖ್ಯಾತಿ ಪಡೆದುಕೊಂಡಿದೆ. ಈ ವರ್ಷದ ಆರಂಭದಲ್ಲಿ ಐವಾ ಕಂಪೆನಿ ಭಾರತದಲ್ಲಿ ಮೂರು ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಸ್ಪೀಕರ್‌ಗಳು ರೆಟ್ರೋ ಶೈಲಿಯನ್ನು ಹೊಂದಿದ್ದು, ಮೊದಲ ನೋಟದಲ್ಲಿ ಗಮನಸೆಳೆಯುವ ವಿನ್ಯಾಸವನ್ನು ಪಡೆದಿದೆ. ಅತ್ಯಾಸಕ್ತಿಯ ಆಡಿಯೊಫೈಲ್ಸ್ ಮತ್ತು ಹಾರ್ಡ್-ಕೋರ್ ಮ್ಯೂಸಿಕ್‌ ಪ್ರೇಮಿಗಳ ಅಗತ್ಯಗಳನ್ನು ಪೂರೈಸಲು ಈ ಸ್ಪೀಕರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಐವಾ MIX-440 ಎನಿಗ್ಮಾ ಬೀಟಾ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಡೈನಾಮಿಕ್‌ ಪ್ರಮುಖ ಸ್ಪೀಕರ್‌ ಆಗಿದೆ. ಇದು ಅತ್ಯುತ್ತಮವಾದ ಆಡಿಯೋ ಎಕ್ಸ್‌ಪಿರಿಯನ್ಸ್‌ಗೆ ಹೆಸರುವಾಸಿಯಾಗಿದೆ.

Best Mobiles in India

English summary
Aiwa 65-inch QLED Google TV Launched in India: Price and Features Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+