Home
ಸುದ್ದಿಜಾಲ

ರೆಟ್ರೊ ಸ್ಟೈಲ್‌ನಲ್ಲಿ ಮೂರು ಹೊಸ ಸ್ಪೀಕರ್‌ಗಳನ್ನು ಪರಿಚಯಿಸಿದ ಐವಾ! ಬೆಲೆ ಎಷ್ಟು?

ಆಡಿಯೋ ಪ್ರಾಡಕ್ಟ್‌ಗಳ ಜನಪ್ರಿಯ ಬ್ರ್ಯಾಂಡ್‌ ಐವಾ ಕಂಪೆನಿ ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಯುವಜನತೆಯ ಆಶಯಗಳಿಗೆ ಪೂರಕವಾದ ಡಿಸೈನ್‌ ಹಾಗೂ ವಿನ್ಯಾಸವನ್ನು ಈ ಪೋರ್ಟಬಲ್‌ ಸ್ಪೀಕರ್‌ಗಳಲ್ಲಿ ಕಾಣಬಹುದಾಗಿದೆ. ಸದ್ಯ ಮೂರು ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಐವಾ MIX- 440 Enigma Beta, ಐವಾ RS-X 150 Natsukasii Pro ಮತ್ತು ಐವಾ RS-X 100 Natsukasii Proಗಳೆಂದು ಹೆಸರಿಸಲಾಗಿದೆ.

ರೆಟ್ರೊ ಸ್ಟೈಲ್‌ನಲ್ಲಿ ಮೂರು ಹೊಸ ಸ್ಪೀಕರ್‌ಗಳನ್ನು ಪರಿಚಯಿಸಿದ ಐವಾ! ಬೆಲೆ ಎಷ್ಟು?

ಹೌದು, ಐವಾ ಕಂಪೆನಿ ಭಾರತದಲ್ಲಿ ಮೂರು ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಪೀಕರ್‌ಗಳು ರೆಟ್ರೋ ಶೈಲಿಯನ್ನು ಹೊಂದಿದ್ದು, ಮೊದಲ ನೋಟದಲ್ಲಿ ಗಮನಸೆಳೆಯುವ ವಿನ್ಯಾಸವನ್ನು ಪಡೆದಿದೆ. ಅತ್ಯಾಸಕ್ತಿಯ ಆಡಿಯೊಫೈಲ್ಸ್ ಮತ್ತು ಹಾರ್ಡ್-ಕೋರ್ ಮ್ಯೂಸಿಕ್‌ ಪ್ರೇಮಿಗಳ ಅಗತ್ಯಗಳನ್ನು ಪೂರೈಸಲು ಈ ಸ್ಪೀಕರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಐವಾ ಕಂಪನಿ ಹೇಳಿಕೊಂಡಿದೆ. ಹಾಗಾದ್ರೆ ಐವಾ ಕಂಪೆನಿ ಪರಿಚಯಿಸಿರುವ ಹೊಸ ಪೋರ್ಟಬಲ್‌ ಸ್ಪೀಕರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐವಾ MIX-440 ಎನಿಗ್ಮಾ ಬೀಟಾ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಹೇಗಿದೆ?

ಐವಾ MIX-440 ಎನಿಗ್ಮಾ ಬೀಟಾ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಡೈನಾಮಿಕ್‌ ಮತ್ತು ಬಹುಮುಖ ಸ್ಪೀಕರ್‌ ಆಗಿದೆ. ಇದು ಅತ್ಯುತ್ತಮವಾದ ಆಡಿಯೋ ಎಕ್ಸ್‌ಪಿರಿಯನ್ಸ್‌ ನೀಡಲಿದೆ ಎಂದು ಐವಾ ಕಂಪೆನಿ ಹೇಳಿಕೊಂಡಿದೆ. ಇದು ವಿಶೇಷವಾಗಿ BASS++ ಸೌಂಡ್‌ ಪ್ರೊಫೈಲ್ ಅನ್ನು ಹೊಂದಿದ್ದು, ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಈ ಸ್ಪೀಕರ್ ಪೋರ್ಟಬಲ್ ಮತ್ತು ತುಂಬಾನೇ ಸ್ಟೈಲಿಶ್ ಆಗಿದ್ದು, ಎರಡು ಬಾಸ್ ರೇಡಿಯೇಟರ್‌ಗಳೊಂದಿಗೆ ಧ್ವನಿಯನ್ನು ಸಮವಾಗಿ ವಿತರಿಸಲಿದೆ.

ರೆಟ್ರೊ ಸ್ಟೈಲ್‌ನಲ್ಲಿ ಮೂರು ಹೊಸ ಸ್ಪೀಕರ್‌ಗಳನ್ನು ಪರಿಚಯಿಸಿದ ಐವಾ! ಬೆಲೆ ಎಷ್ಟು?

ಇನ್ನು ಈ ಸ್ಪೀಕರ್‌ 15000 mAH ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಪವರ್‌ಫುಲ್‌ ಸೌಂಡ್‌ ಅನ್ನು ನೀಡಲಿದೆ. ಇದು ಟೈಪ್ - ಸಿ ಚಾರ್ಜಿಂಗ್ ಪಾಯಿಂಟ್‌ ಹೊಂದಿದ್ದು, 4 ಗಂಟೆಗಳ ಚಾರ್ಜಿಂಗ್ ಟೈಂ ಮತ್ತು 9 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಆಕ್ಟಿವ್‌ ಮಾಡಲಿದೆ. ಇದಲ್ಲದೆ ಈ ಸ್ಪೀಕರ್ ಕರೋಕೆ ಪ್ರಿಯರಿಗೆ ಉಪಯುಕ್ತವಾಗುವ ಕಾರ್ಡ್‌ಲೆಸ್ MIC ಅನ್ನು ಕೂಡ ಒಳಗೊಂಡಿದೆ. ಇದರಲ್ಲಿ ನೀವು ಡಿಜಿಟಲ್‌ ಕಂಟ್ರೋಲ್‌ ಮತ್ತು TSW ಮಲ್ಟಿ-ಲಿಂಕ್ ಟೆಕ್ನಾಳಜಿಯನ್ನು ಕಾಣಬಹುದಾಗಿದೆ.

ಐವಾ RS-X 150 Natsukasii Pro ಪೋರ್ಟಬಲ್ ರೆಟ್ರೋ ಬ್ಲೂಟೂತ್ ಸ್ಪೀಕರ್ ಫೀಚರ್ಸ್‌

ಐವಾ RS-X 150 Natsukasii Pro ಪ್ರೀಮಿಯಂ ರೆಟ್ರೊ ಬ್ಲೂಟೂತ್‌ ಸ್ಪೀಕರ್‌ ಬ್ಯೂಟಿಫುಲ್‌ ಡಿಸೈನ್‌ನಿಂದ ಗಮನಸೆಳೆದಿದೆ. ಇದರ ವಿನ್ಯಾಸಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಇದು ಅತ್ಯುತ್ತಮ ದರ್ಜೆಯ ಸೌಂಡ್‌ ಗುಣಮಟ್ಟವನ್ನು ಹೊಂದಿದ್ದು, ಜಪಾನೀಸ್ ತಂತ್ರಜ್ಞಾನ ಮತ್ತು ಟ್ರಿಪಲ್ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನು ಈ ಸ್ಪೀಕರ್‌ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 12 ಗಂಟೆಗಳ ಪ್ಲೇಬ್ಯಾಕ್‌ ಟೈಂ ನೀಡಲಿದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರಲಿದೆ.

ರೆಟ್ರೊ ಸ್ಟೈಲ್‌ನಲ್ಲಿ ಮೂರು ಹೊಸ ಸ್ಪೀಕರ್‌ಗಳನ್ನು ಪರಿಚಯಿಸಿದ ಐವಾ! ಬೆಲೆ ಎಷ್ಟು?

ಐವಾ RS-X 100 Natsukasii Pro ಪೋರ್ಟಬಲ್ ರೆಟ್ರೋ ಬ್ಲೂಟೂತ್ ಸ್ಪೀಕರ್

ಐವಾ RS-X 100 Natsukasii Pro ಸ್ಪೀಕರ್‌ ತನ್ನ ರೆಟ್ರೊ ಸ್ಟೈಲಿಂಗ್ ಮತ್ತು ಸೌಂಡ್‌ ಔಟ್‌ಪುಟ್‌ನಿಂದ ಗಮನಸೆಳೆಯಲಿದೆ. ಈ ಸ್ಪೀಕರ್‌ ಕಾಂಪ್ಯಾಕ್ಟ್ ಬಿಲ್ಟ್‌ ಅನ್ನು ಹೊಂದಿದ್ದು, ಸಮತೋಲಿತ ಧ್ವನಿ ವಿತರಣೆಗಾಗಿ ಟ್ರಿಪಲ್ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನು ಈ ಡಿವೈಸ್‌ 4000 mAH ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ತ್ವರಿತ ಚಾರ್ಜಿಂಗ್‌ಗಾಗಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಬೆಂಬಲಿಸಲಿದೆ.

ರೆಟ್ರೊ ಸ್ಟೈಲ್‌ನಲ್ಲಿ ಮೂರು ಹೊಸ ಸ್ಪೀಕರ್‌ಗಳನ್ನು ಪರಿಚಯಿಸಿದ ಐವಾ! ಬೆಲೆ ಎಷ್ಟು?

ಭಾರತದಲ್ಲಿ ಐವಾ ಸ್ಪೀಕರ್‌ಗಳ ಬೆಲೆ ಮತ್ತು ಲಭ್ಯತೆ

ಐವಾ MIX-440 ಎನಿಗ್ಮಾ ಬೀಟಾ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಅತ್ಯುಂತ ದುಬಾರಿ ಸ್ಪೀಕರ್‌ ಆಗಿದೆ. ಭಾರತದಲ್ಲಿ ಇದರ ಬೆಲೆ 54,990ರೂ. ಆಗಿದೆ. ಇನ್ನು ಐವಾ RS-X 150 Natsukasii Pro ಪೋರ್ಟಬಲ್ ರೆಟ್ರೋ ಬ್ಲೂಟೂತ್ ಸ್ಪೀಕರ್‌ 33,990ರೂ. ಬೆಲೆ ಹೊಂದಿದೆ. ಆದರೆ ಐವಾ RS-X 100 Natsukasii Pro ಪೋರ್ಟಬಲ್ ರೆಟ್ರೋ ಬ್ಲೂಟೂತ್ ಸ್ಪೀಕರ್ 27,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಐವಾ ಕಂಪೆನಿಯ ಈ ಮೂರು ಸ್ಪೀಕರ್‌ಗಳು ಕೂಡ ಐವಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಹಾಗೆಯೇ ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಸೆಲೆಕ್ಟ್ ಪಾರ್ಟ್‌ನರ್ ಸ್ಟೋರ್‌ಗಳಲ್ಲಿಯೂ ಕೂಡ ಮಾರಾಟಕ್ಕೆ ಬರಲಿವೆ.

Best Mobiles in India

English summary
The company has claimed that the speakers are designed to meet the needs of avid audiophiles and hard-core music enthusiasts who are looking for exclusivity.know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+