ಭಾರತಕ್ಕೆ ಎಂಟ್ರಿ ಕೊಟ್ಟ ಅಕೈ ಫೈರ್‌ ಟಿವಿ ಆವೃತ್ತಿ!ವಿಶೇಷತೆ ಏನ್‌ ಗೊತ್ತಾ?

|

ಸ್ಮಾರ್ಟ್‌ಟಿವಿ ಮಾರುಕಟ್ಟೆ ಇದೀಗ ಸಾಕಷ್ಟು ಬದಲಾಗಿದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳು ಇಂದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಹೊಸ ವಿನ್ಯಾಸದಲ್ಲಿ ಗ್ರಾಹಕರನ್ನ ಆಕರ್ಷಿಸುತ್ತಿವೆ. ಇನ್ನು ಭಾರತದಲ್ಲಿ ಕೂಡ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದ್ದು, ಹಲವು ಕಂಪೆನಿಗಳು ತಮ್ಮ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಜಪಾನ್‌ ಕಂಪನಿ ಅಕೈ ಹೊಸ ಫೈರ್ ಟಿವಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅಕೈ ಫೈರ್ ಟಿವಿ ಆವೃತ್ತಿಯು 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.

ಫೈರ್‌ ಟಿವಿ

ಹೌದು, ಜಪಾನ್‌ ಮೂಲದ ಅಕೈ ಕಂಪೆನಿ ತನ್ನ ಹೊಸ ಫೈರ್‌ ಟಿವಿ ಎಡಿಷನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೈರ್‌ಟಿವಿ ಫುಲ್‌ ಹೆಚ್‌ಡಿ ರೆಸಲ್ಯೂಶನ್ ಹೊಂದಿದೆ. ಇನ್ನು ಅಕೈ ಕಂಪೆನಿ ಭಾರತದಲ್ಲಿ ಫೈರ್ ಟಿವಿ ಆವೃತ್ತಿಯನ್ನು ಪರಿಚಯಿಸಲು ಒನಿಡಾ ಜೊತೆಗೆ ಸೇರಿಕೊಂಡಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಫೈರ್‌ಟಿವಿಯ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಕೈ ಫೈರ್ ಟಿವಿ

ಅಕೈ ಫೈರ್ ಟಿವಿ ಆವೃತ್ತಿಯು 43 ಇಂಚಿನ ಫುಲ್‌ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಟಿವಿ ಅಮೆಜಾನ್‌ನ ಫೈರ್ ಟಿವಿ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಗೇಮ್ಸ್‌ ಮತ್ತು ಲೈವ್ ಟಿವಿಗೆ ಪ್ರವೇಶವನ್ನು ನೀಡುತ್ತದೆ. ಜೊತೆಗೆ ಈ ಫೈರ್‌ಟಿವಿಯು 20W ಸ್ಪೀಕರ್‌ಗಳು, ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ ಟ್ರುಸರೌಂಡ್ ಅನ್ನು ಸಹ ಹೊಂದಿದೆ.

ಅಕೈ ಫೈರ್ ಟಿವಿ ಆವೃತ್ತಿ

ಇನ್ನು ಅಕೈ ಫೈರ್ ಟಿವಿ ಆವೃತ್ತಿಯು 1GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪ್ಯಾಕ್ ಮಾಡುತ್ತದೆ. ಇದು 178 ಡಿಗ್ರಿ ವೀಕ್ಷಣಾ ಕೋನವನ್ನು ನೀಡುತ್ತದೆ. ಇದಲ್ಲದೆ ಬಳಕೆದಾರರು ತಮ್ಮ ಫೋನ್‌ಗಳನ್ನು ಟಿವಿಯಲ್ಲಿಯೂ ಪ್ರತಿಬಿಂಬಿಸಬಹುದಾಗಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ಒಂದು ಯುಎಸ್‌ಬಿ ಪೋರ್ಟ್ ಸೇರಿವೆ. ಟಿವಿಯು ರಿಮೋಟ್‌ನೊಂದಿಗೆ ಬರುತ್ತದೆ, ಇದು ಅಲೆಕ್ಸಾ ವಾಯ್ಸ್‌ ಸರ್ಚ್‌ ಬೆಂಬಲವನ್ನು ಹೊಂದಿದೆ. ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಅಮೆಜಾನ್ ಮ್ಯೂಸಿಕ್‌ಗಾಗಿ ಮೀಸಲಾದ ಬಟನ್‌ಗಳನ್ನು ಹೊಂದಿದೆ.

ಅಕೈ ಫೈರ್ ಟಿವಿ

ಅಕೈ ಫೈರ್ ಟಿವಿ ಆವೃತ್ತಿಯ ಬೆಲೆ 23,999, ರೂ ಆಗಿದ್ದು, ಪ್ರಸ್ತುತ ಅಮೆಜಾನ್‌ನಲ್ಲಿ ಲಭ್ಯವಿದೆ. ಇದು ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ಬರುತ್ತದೆ. ಇದಲ್ಲದೆ ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಫೈರ್ ಟಿವಿ ಆವೃತ್ತಿ ಮಾದರಿಗಳನ್ನು ಬಿಡುಗಡೆ ಮಾಡಲು ಅಕೈ ಯೋಜಿಸಿದೆ. ಇದು 14,999 ಬೆಲೆಯ 32 ಇಂಚಿನ ಫೈರ್ ಟಿವಿ ಆವೃತ್ತಿಯನ್ನು ನೀಡುತ್ತದೆ ಮತ್ತು 50 ಇಂಚಿನ ಮತ್ತು 55 ಇಂಚಿನ ಯುಹೆಚ್‌ಡಿ ರೂಪಾಂತರಗಳಲ್ಲಿಯೂ ಸಹ ನೀಡುತ್ತದೆ.

Best Mobiles in India

English summary
Akai Fire TV Edition is equipped with 20W speakers, and it packs 1GB of RAM with 8GB of internal storage.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X