ಊಹೆಗೂ ಸಿಗದ ಜೀನಿಯಸ್ ಮ್ಯಾನ್!...ಇದು 'ಐನ್‌ಸ್ಟೈನ್' ಬದುಕಿನ ರೋಚಕ ಕಥೆ!!

|

ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ, ಪ್ರೀತಿಸುವ ಒಬ್ಬ ವಿಜ್ಞಾನಿ ಐನ್‌ಸ್ಟೈನ್. ಈತ ಹುಟ್ಟಿದ್ದು ಜರ್ಮನಿಯ ಉಲ್ಮ್ ನಲ್ಲಿ. ಇಸವಿ 1879, ಮಾರ್ಚ್ 14ನೇ ತಾರೀಖಿನಂದು ಹುಟ್ಟಿದ್ದ ಐನ್‌ಸ್ಟೈನ್ ಮಾರು 5 ವರ್ಷಗಳವರೆಗೆ ಮಾತನಾಡುತ್ತಿರಲಿಲ್ಲ. ಅಂದರೆ ಮೂಗನಾಗಿದ್ದ.! ನಿಧಾನವಾಗಿ ಮಾತು ಆರಂಭಿಸಿದ ಐನ್‌ಸ್ಟೈನ್ಗೆ ಮಾತಿನ ಸಮಸ್ಯೆ 9 ವರ್ಷಗಳವರೆಗೂ ಇತ್ತು.ಈ ಕಾರಣದಿಂದ ಐನ್‌ಸ್ಟೈನ್ ಹೆಚ್ಚು ಮೌನಿಯಾಗಿರುತ್ತಿದ್ದ, ಭಾವನೆಗಳನ್ನು ಹೊರ ಹಾಕಲು ಆತನ ಬಳಿ ದಾರಿಗಳಿರಲಿಲ್ಲ. ಈ ಕಾರಣಕ್ಕೆ ಆಲೋಚನೆ ಮಾಡುವ ಅಭ್ಯಾಸ ಐನ್‌ಸ್ಟೈನ್ಗೆ ಬೆಳೆದಿರಬಹುದು ಎಂಬ ಮಾತುಗಳಿವೆ.

ಇಂತಹ ರೋಚಕ ವಿಷಯಗಳನ್ನು ಹೊಂದಿರುವ ಅಲ್ಬರ್ಟ್ ಐನ್ ಸ್ಟೈನ್ ಅವರ ಇವರ ಜೀವನಗಾಥೆ ಖಂಡಿತವಾಗಿಯೂ ಒಂದು ಕುತೂಹಲಕಾರಿಯಾದ ವಿಷಯ. ಈ ಕುತೂಹಲಕ್ಕೆ ಕಾರಣ ಅಲ್ಬರ್ಟ್ ಅವರ ಕುತೂಹಲವೆಂದರೆ ಅತಿಶಯೋಕ್ತಿ ಅಲ್ಲ. ಅವರ ಕುತೂಹಲಗಳಿಂದಲೇ ಸಾಕಷ್ಟು ಅನ್ವೇಷಣೆಗಳು ವಿಜ್ಞಾನದಲ್ಲಿ ಅವರು ಮಾಡುವುದಕ್ಕೆ ಸಾಧ್ಯವಾಗಿದೆ. ಆ ವಿಜ್ಞಾನದ ಅನ್ವೇಷಣೆಗಳು ಇಂದು ಜನರ ಜೀವನಶೈಲಿಯನ್ನೇ ಬದಲಿಸುವುದಕ್ಕೆ ಕಾರಣವಾಗಿದೆ. ಆದರೆ, ಐನ್‌ಸ್ಟೈನ್ ಅವರ ಜೀವನ ಕೇವಲ ವಿಜ್ಞಾನ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಜೀವನವೇ ಒಂದು ವಿಶ್ವಕೋಶ ಎಂದು ಹೇಳಬಹುದು.

ಊಹೆಗೂ ಸಿಗದ ಜೀನಿಯಸ್ ಮ್ಯಾನ್!...ಇದು 'ಐನ್‌ಸ್ಟೈನ್' ಬದುಕಿನ ರೋಚಕ ಕಥೆ!!

ನಿಮ್ಮ ಕೈಯನ್ನು ಬಿಸಿಯಾದ ಸ್ಟವ್ ಮೇಲಿಡಿ, ಒಂದು ನಿಮಿಷ ಒಂದು ಗಂಟೆಯಂತೆ ಭಾಸವಾಗುತ್ತದೆ. ಅದೇ ಸುಂದರವಾದ ಹುಡುಗಿಯ ಪಕ್ಕದಲ್ಲಿ ಕುಳಿತುಕೊಳ್ಳಿ, ಗಂಟೆ ನಿಮಿಷದಂತೆ ತೋರುತ್ತದೆ. ಇದೇ ಸಾಪೇಕ್ಷ ಸಿದ್ಧಾಂತ ಎಂದು ಹೇಳಿದ ಆಲ್ಬರ್ಟ್ ಐನ್ ಸ್ಟೈನ್ ಅವರನ್ನು ಈ ವಿಶ್ವವು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವೇ ಇಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಜೀನಿಯಸ್ ಎನ್ನುವುದಕ್ಕೆ ಪರ್ಯಾಯ ಎಂದು ಕರೆಸಿಕೊಂಡ ಆಲ್ಬರ್ಟ್ ಐನ್ ಸ್ಟೈನ್ ಅವರ ಜೀವನಗಾಥೆಯನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ. ಅವರ ಜೀವನವೇ ಒಂದು ವಿಶ್ವಕೋಶ ಎಂದು ಹೇಳಿರುವುದರಿಂದ, ಇಲ್ಲಿ ಅವರಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದ್ದೇನೆ.

ಐನ್‌ಸ್ಟೈನ್ ಎನ್ನುವ ಪದವೇ ಜೀನಿಯಸ್

ಐನ್‌ಸ್ಟೈನ್ ಎನ್ನುವ ಪದವೇ ಜೀನಿಯಸ್

ಐನ್‌ಸ್ಟೈನ್ ಎನ್ನುವ ಪದ ಜೀನಿಯಸ್ ಎನ್ನುವುದಕ್ಕೆ ಪರ್ಯಾಯ ಎಂದು ಕರೆಸಿಕೊಂಡಿದೆ. ಐನ್‌ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೈನ್‌ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ ‘ಬೋಸ್-ಐನ್‌ಸ್ಟೈನ್‌ ಸ್ಟಾಟಿಸ್ಟಿಕ್ಸ್' ಸೇರಿದಂತೆ ‘ಐನ್‌ಸ್ಟೈನ್‌ ರೆಫ್ರಿಜರೇಟರ್', ‘ಐನ್‌ಸ್ಟೈನ್‌-ಕಾರ್ಟನ್ ಸಿದ್ಧಾಂತ', ‘ಐನ್‌ಸ್ಟೈನ್‌-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್', ‘ಐನ್‌ಸ್ಟೈನ್‌-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್' ಇವುಗಳಲ್ಲಿ ಪ್ರಮುಖವಾದವು. ಇರ್ವಿನ್ ಶ್ರೋಡಿಂಗರ್'ಗೆ ಸಂಶೋಧನೆಗೆ ಸೂಚಿಸಿದ್ದು ಐನ್‌ಸ್ಟೈನ್ ಹಿರಿಮೆಗಳಲ್ಲೊಂದು.

ಯಶಸ್ಸಿಗೆ ಐನ್‌ಸ್ಟೈನ್‌ ಸೂತ್ರಗಳು

ಯಶಸ್ಸಿಗೆ ಐನ್‌ಸ್ಟೈನ್‌ ಸೂತ್ರಗಳು

ಐನ್‌ಸ್ಟೈನ್‌ ಹಾದಿಯಲ್ಲಿ ನಡೆಯಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಯಶಸ್ಸಿಗೆ ಸೂತ್ರಗಳೇನಾದರೂ ಇವೆಯೋ ಎಂದು ಅವರ ಬಳಿ ಕೇಳುತ್ತಿದ್ದರು. ಅದಕ್ಕೆ ಐನ್‌ಸ್ಟೈನ್‌ ಒಂದು ಫಾರ್ಮುಲಾ ನೀಡುತ್ತಿದ್ದರು ಅದು ಹೀಗಿತ್ತು, A = X+Y+Z. ಐನ್‌ಸ್ಟೈನ್‌ ಪ್ರಕಾರ ಇಲ್ಲಿ A ಅಂದರೆ ಯಶಸ್ಸು, ಅದಕ್ಕೆ ಬೇಕಾಗಿದ್ದು X- ಕೆಲಸ, Y-ಆಟ ಮತ್ತು Z-ಬಾಯಿ ಮುಚ್ಚಿಕೊಂಡಿರಬೇಕು ಎನ್ನುತ್ತಿದ್ದರು. ಇಷ್ಟು ಸರಳವಾಗಿ ಯಶಸ್ಸಿಗೆ ಸೂತ್ರವನ್ನು ತಿಳಿಸಿದ ಐನ್‌ಸ್ಟೈನ್‌ ಇದನ್ನು ವಿನೋದಕ್ಕಾಗಿ ಹೇಳಿದ್ದರು ಎಂಬ ತರ್ಕಗಳಿವೆ.

ದೇವರು ಅನ್ನೋ ಪದ ಮೂಢನಂಬಿಕೆ

ದೇವರು ಅನ್ನೋ ಪದ ಮೂಢನಂಬಿಕೆ

ದೇವರು ಅನ್ನೋ ಪದ ನನಗೆ ಮೂಢನಂಬಿಕೆಗಳ ಮತ್ತೊಂದು ಅವತಾರ. ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ. ಬೈಬಲ್​​ ಅನ್ನೋದು ಪುರಾತನ ದಂತಕಥೆಗಳ ಸಂಗ್ರಹ. ಈ ಬಗ್ಗೆ ಯಾವುದೇ ವ್ಯಾಖ್ಯಾನ ಬಂದರೂ, ಅದು ಎಷ್ಟು ಸೂಕ್ಷ್ಮವಾಗಿದ್ದರೂ ಕೂಡ ನನ್ನ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದಿದ್ದರು. ತನ್ನ ಯಹೂದಿ ಧರ್ಮದ ಬಗ್ಗೆ ಮಾತನಾಡಿದ್ದ ಐನ್​​​ಸ್ಟೀನ್​, ಅದೂ ಕೂಡ ಎಲ್ಲಾ ಧರ್ಮಗಳಂತೆಯೇ ಪುರಾತನ ಮೂಢನಂಬಿಕೆಗಳ ಮತ್ತೊಂದು ಅವತಾರ ಎಂದಿದ್ದರು.

ಅವರ ಪತ್ರವನ್ನು 'ಗಾಡ್​​ ಲೆಟರ್' ಎನ್ನಲಾಗುತ್ತದೆ! ​

ಅವರ ಪತ್ರವನ್ನು 'ಗಾಡ್​​ ಲೆಟರ್' ಎನ್ನಲಾಗುತ್ತದೆ! ​

ಎರಿಕ್​​ ಗಟ್​​ಕೈಂಡ್ ಅವರು ‘ಚೂಸ್ ಲೈವ್: ದಿ ಬಿಬ್ಲಿಕಲ್ ಕಾಲ್ ಟು ರಿವೋಲ್ಟ್' ಪುಸ್ತಕದ ಪ್ರತಿಯನ್ನು ಐನ್‌ಸ್ಟೀನ್‌ಗೆ ಕಳಿಸಿದ್ದರು. ಇದಕ್ಕೆ ಪತ್ರದ ಮೂಲಕ ಐನ್‌ಸ್ಟೀನ್ ಪ್ರತಿಕ್ರಿಯಿಸಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆಯುತ್ತಿತ್ತು. ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ ಎಂದು ಐನ್‌ಸ್ಟೀನ್ ಅಭಿಪ್ರಾಯಪಟ್ಟಿದ್ದನ್ನು ಗಾಡ್ ಲೆಟರ್ ಎಂದು ಕರೆಯಲಾಗಿದೆ.ಅವರು ಬರೆದ ಈ ಪತ್ರವು ಬರೋಬ್ಬರಿ 2.9 ಮಿಲಿಯನ್​ ಡಾಲರ್​(₹20,58,56,500)ಗೆ ಹರಾಜಾಗಿ ಆಶ್ಚರ್ಯ ಮೂಡಿಸಿತ್ತು.

ಪತ್ನಿಗೂ ಸೂತ್ರವನ್ನು ಹಾಕಿದ್ದರು!

ಪತ್ನಿಗೂ ಸೂತ್ರವನ್ನು ಹಾಕಿದ್ದರು!

‘ನನ್ನ ಬಟ್ಟೆಯನ್ನು ಚೆನ್ನಾಗಿ ಇಟ್ಟಿರಬೇಕು, ದಿನಕ್ಕೆ ಮೂರು ಬಾರಿ ಊಟ ಕೊಡಬೇಕು, ನಾನು ಮಲಗುವ ಕೋಣೆ ಮತ್ತು ನನ್ನ ಟೇಬಲ್ ಚೆನ್ನಾಗಿರಬೇಕು, ಅದರಲ್ಲೂ ನನ್ನ ಟೇಬಲನ್ನು ಯಾರೂ ಮುಟ್ಟಬಾರದು' ಎಂದು ಷರತ್ತು ವಿಧಿಸಿದರು ಐನ್‌ಸ್ಟೈನ್. ‘ಸಮಾಜಕ್ಕೆ ಇದೆಲ್ಲಾ ಬೇಕಾಗಿಲ್ಲದೇ ಇದ್ದರೂ ನೀನು ನನ್ನೊಂದೊಗಿನ ಎಲ್ಲಾ ಸಂಬಂಧಗಳನ್ನು ತ್ಯಜಿಸಬೇಕು' ಎಂಬ ಕರಾರನ್ನು ಪತ್ನಿಯ ಮುಂದಿಟ್ಟಿದ್ದರು. ಆದರೆ, ಇದೇ ಸೂತ್ರಗಳಲ್ಲಿ ಅವರ ವೈವಾಹಿಕ ಬದುಕು ಅಷ್ಟೇನು ಸುಖಮಯವಾಗಿರಲಿಲ್ಲ ಎಂದು ಹೇಳಬಹುದು.

ಅವರಲ್ಲೊಬ್ಬ ರಸಿಕ ಕೂಡ ಇದ್ದ

ಅವರಲ್ಲೊಬ್ಬ ರಸಿಕ ಕೂಡ ಇದ್ದ

ಸಾಪೇಕ್ಷ ಸಿದ್ಧಾಂತ (Theory of Relativity) ಮಂಡಿಸಿದ ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ರ ಬಗ್ಗೆ ಪ್ರತಿಯೊಬ್ಬ ವಿಜ್ಞಾನದ ವಿದ್ಯಾರ್ಥಿಗೂ ಗೊತ್ತು. ಆದರೆ ಅವರಲ್ಲೊಬ್ಬ ರಸಿಕ ಕೂಡ ಇದ್ದ ಎಂಬ ವಿಚಾರ ತುಂಬಾ ಜನರಿಗೆ ಗೊತ್ತಿಲ್ಲ. ಮಾರ್ಚ್ 14 ರಂದು ಐನ್ ಸ್ಟೀನ್ ಅವರ ಹುಟ್ಟುಹಬ್ಬದ ಅಂಗವಾಗಿ ಇಸ್ರೇಲ್ ದೇಶದ ಜೆರುಸಲೆಮ್ ಹೀಬ್ರೂ ವಿಶ್ವವಿದ್ಯಾಲಯದವರು ಅವರ 80 ಸಾವಿರಕ್ಕೂ ಹೆಚ್ಚು ಸಂಶೋಧನಾ ಹಾಗು ಅಪರೂಪದ ಪ್ರೇಮ ಪತ್ರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ.

ಪಾಕೆಟ್ ಕಂಪಾಸ್ ನೋಡಿ ಆಶ್ಚರ್ಯಪಟ್ಟಿದ್ದರು

ಪಾಕೆಟ್ ಕಂಪಾಸ್ ನೋಡಿ ಆಶ್ಚರ್ಯಪಟ್ಟಿದ್ದರು

ಅಲ್ಬರ್ಟ್ ಅವರು 5 ವರ್ಷದವರಿದ್ದಾಗ ಅವರ ತಂದೆಯಿಂದ ಪಾಕೆಟ್ ದಿಕ್ಸೂಚಿಯನ್ನು ಅವರು ನೋಡಿದರು. ಇದು ಅವರ ಕುತೂಹಲ ಗರಿಗೆದರಿಸಿದ ಮೊದಲ ಅಂಶ ಎಂದು ನಿಮಗೆ ಗೊತ್ತಾ?,. ವಿಜ್ಞಾನದೆಡೆಗೆ ಅವರ ಕುತೂಹಲಕ್ಕೆ ಕಾರಣವಾಗಿರುವ ಮೊದಲ ಅಂಶ ಇದು ಎಂದು ಅಲ್ಬರ್ಟ್ ಐನ್ ಸ್ಟೈನ್ ಹೇಳಿಕೊಂಡಿದ್ದಾರೆ. ಪಾಕೆಟ್ ದಿಕ್ಸೂಚಿಯನ್ನು ಯಾವ ದಿಕ್ಕಿಗೆ ಹಿಡಿದರೂ ಅದು ಒಂದೇ ರೀತಿಯಲ್ಲಿ ತೋರಿಸುತ್ತಿರುವುದು ಇದಕ್ಕೆ ಕಾರಣವಾಗಿತ್ತು.

ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ!

ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ!

ತಮ್ಮ ಅಧ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೈನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೋಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಏಕೆಂದರೆ, , ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ. ಇದರ ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ ‘ಫೋಟೋ ಎಲೆಕ್ಟ್ರಿಕ್ ಇಫೆಕ್ಟ್'ಗೆ ಅದೂ 16 ವರ್ಷ ಬಿಟ್ಟು 1921ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ವಿಚಿತ್ರ ಎಂದರೆ ಅವರ ಕೆಲವು ಥಿಯರಿಗಳು ಸಾಕ್ಷವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದ ಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ.

ನಾಲಗೆಯನ್ನು ಹೊರಗೆ ಚಾಚಿ ಪೋಸು

ನಾಲಗೆಯನ್ನು ಹೊರಗೆ ಚಾಚಿ ಪೋಸು

ಐನ್‌ಸ್ಟೈನ್ ಅವರ ಜನಪ್ರಿಯ ಚಿತ್ರವೆಂದರೆ ಅವರು ತಮ್ಮ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದ್ದು. ಐನ್‌ಸ್ಟೈನ್ ಚಿಕ್ಕ ಹುಡುಗನಂತೆ ವರ್ತಿಸಿದ್ದ ಈಈ ಚಿತ್ರ ತೆಗೆದಿದ್ದು ಐನ್‌ಸ್ಟೈನ್‌ 72ನೇ ಹುಟ್ಟುಹಬ್ಬದಂದು. ಐನ್‌ಸ್ಟೀನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಟನ್ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೋಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು.ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೋ ತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೈನ್‌ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದರು.

ಸಾಕ್ಸ್ ಹಾಕುತ್ತಿರಲಿಲ್ಲ

ಸಾಕ್ಸ್ ಹಾಕುತ್ತಿರಲಿಲ್ಲ

ಐನ್ ಸ್ಟೈಲ್ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್ ಆಗಿತ್ತು. ಆದರೆ ಅವರ ಕೆದರಿದ ಕೂಡಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂ ಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ.. ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್ ಸ್ಟೈನ್ ಅವರಿಗೆ ಸಾಕ್ಸ್ ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತಂತೆ. ಆದರೆ, ವಿಶ್ವದಲ್ಲಿ ಶೇ. 90 ಕ್ಕಿಂತ ಹೆಚ್ಚು ಜನರು ಸಾಕ್ಸ್ ಹಾಕುವುದನ್ನು ಇಷ್ಪಡುತ್ತಾರೆ.

ಮಾತುಗಾರಿಕೆ ನಿಧಾನ!

ಮಾತುಗಾರಿಕೆ ನಿಧಾನ!

ಐನ್ ಸ್ಟೈನ್ ಮೊದಲ ಬಾರಿಗೆ ಅವರ ಮೊದಲ ನುಡಿಯಾಡಿದ್ದು 3 ವರ್ಷವಾದ ಮೇಲೆ ಅಂದರೆ ಅವರು ಬಹಳ ನಿಧಾನವಾಗಿ ಮಾತು ಕಲಿತಿದ್ದಾರೆ. ಸ್ಟ್ಯಾಂಡರ್ಡ್ ಯುನಿವರ್ಸಿಟಿಯ ಥಾಮಸ್ ಸೋವೆಲ್ ಅವರು ಚುರುಕಿಗಿರುವ ವ್ಯಕ್ತಿಗಳು ನಿಧಾನವಾಗಿ ಮಾತು ಕಲಿಯುವುದನ್ನು ಐನ್ ಸ್ಟೈಲ್ ಸಿಂಡ್ರೋಮ್ ಎಂದೇ ಹೆಸರಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ, ಐನ್ ಸ್ಟೈನ್ ಅವರು ಮಾತು ಕಲಿಯುವ ಮುನ್ನ ಬಹಳ ಯೋಚಿಸುತ್ತಿದ್ದರಿಂದ ಅವರೋರ್ವ ಪ್ರಖ್ಯಾತ ಚಿಂತಕನಾಗಲು ಕಾರಣ ಎಂದು ಹೇಳಲಾಗಿದೆ.

ಮ್ಯೂಸಿಕ್ ಪ್ರಿಯರು

ಮ್ಯೂಸಿಕ್ ಪ್ರಿಯರು

ಐನ್ ಸ್ಟೈನ್ ಅವರ ತಾಯಿ ಪೈಂಟಿಸ್ಟ್. ಆಕೆ ತನ್ನ ಮಗ ಮ್ಯೂಸಿಕ್ ನ್ನು ಇಷ್ಟಪಡಬೇಕು ಮತ್ತು ಕಲಿಯಬೇಕು ಎಂದು ಬಯಸಿದ್ದರು.ಅಲ್ಬರ್ಟ್ ಐನ್ ಸ್ಟೈನ್ ಚಿಕ್ಕವರಿದ್ದಾಗ ವಾಯಲಿನ್ ಕಲಿಯುವುದನ್ನು ಇಷ್ಟಪಡಲೇ ಇಲ್ಲ. ಆದರೆ ಟೀನೇಜ್ ಗೆ ಕಾಲಿಟ್ಟ ಮೇಲೆ ಅವರು ವಯಲಿನ್ ಕಲಿತದ್ದು ಮಾತ್ರವಲ್ಲ ಹಾಡುವುದೂ ಕೂಡ ತಿಳಿದಿತ್ತು. ಮ್ಯೂಸಿಕ್ ಅನ್ನು ಬಹಳವಾಗಿ ಇಷ್ಟಪಟ್ಟರು.ಐನ್‌ಸ್ಟೈನ್ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ. ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ; ಸಂಗೀತಗಾರನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೈನ್ ಹೇಳಿಕೊಂಡಿದ್ದರು.

ಏಯ್ ಏಯ್ ಐನ್ ಸ್ಟೈನ್ !

ಏಯ್ ಏಯ್ ಐನ್ ಸ್ಟೈನ್ !

ನೌಕಾಯಾನ ಅಂದರೆ ಐನ್ ಸ್ಟೈನ್ ಅವರಿಗೆ ಇಷ್ಟವಾಗುತ್ತಿತ್ತು. ಹಾಗಂತ ಅವರು ಅಷ್ಟೇನು ಉತ್ತಮ ನಾವಿಕರಾಗಿರಲಿಲ್ಲ. ದೋಣಿ ಹಾಳಾದರೆ ಅಕ್ಕಪಕ್ಕದವರು ಅದನ್ನು ಸರಿಪಡಿಸಿಕೊಡಬೇಕಿತ್ತು. ಅಷ್ಟೇ ಅಲ್ಲ ಅವರು ತಮ್ಮ ಜೀವನದುದ್ದಕ್ಕೂ ಈಜುವುದನ್ನು ಕಲಿಯಲೇ ಇಲ್ಲವಂತೆ. ಹಾಗಂತ ಅವರು ನೌಕಾಯಾನ ಕೈಗೊಳ್ಳುವುದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ.

ಪೈಪ್ ಸ್ಮೋಕರ್ ಕ್ಲಬ್

ಪೈಪ್ ಸ್ಮೋಕರ್ ಕ್ಲಬ್

ಐನ್ ಸ್ಟೈನ್ ಪೈಪ್ ನಲ್ಲಿ ಧೂಮಪಾನ ಮಾಡುವುದನ್ನು ಇಷ್ಟಪಡುತ್ತಿದ್ದರು. ಮಾನ್ಟ್ರೈಯಲ್ ಪೈಪ್ ಸ್ಮೋಕರ್ ಕ್ಲಬ್ ಹೆಸರಿನ ಕ್ಲಬ್ ವೊಂದಕ್ಕೆ ಅವರು ಜೀವನಪರ್ಯಂತದ ಸದಸ್ಯತ್ವವನ್ನು ಪಡೆದು ಅವರು ಸೇರಿಕೊಂಡಿದ್ದರು ಮತ್ತು ಅವರು ಪೈಪ್ ಸ್ಮೋಕಿಂಗ್ ಎಲ್ಲಾ ರೀತಿಯ ಮಾನವ ವ್ಯವಹಾರಗಳಲ್ಲಿ ಸ್ವಲ್ಪ ಶಾಂತ ಮತ್ತು ವಸ್ತುನಿಷ್ಟ ತೀರ್ಪನ್ನು ನೀಡುತ್ತದೆ ಎಂದು ನಂಬಿಕೊಂಡಿದ್ದರು.

ರೆಫ್ರಿಜರೇಟರ್ ಸಂಶೋಧನೆ ಮಾಡಿದ್ದರು

ರೆಫ್ರಿಜರೇಟರ್ ಸಂಶೋಧನೆ ಮಾಡಿದ್ದರು

ಐನ್ ಸ್ಟೈನ್ ಅವರು ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್ ಅನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರ ಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಪ್ರಿಜರೇಟರ್ ಅನ್ನು ಪೇಟೆಂಟ್ ಪಡೆಯಲಾಯಿತು ಮತ್ತು ಕೂಡಲೇ ಅದರ ಅಪ್ ಡೇಟ್ ಆಗಿರುವ ವರ್ಷನ್ ಕೂಡ ಬಂತು. ಹೊಸ ವರ್ಷನ್ ತುಂಬಾ ಉತ್ತಮವಾಗಿತ್ತು ಆದರೆ ಅಷ್ಟೇ ಪರಿಸರಕ್ಕೆ ಅಪಾಯಕಾರಿಯಾಗಿತ್ತು.

ಅಧ್ಯಕ್ಷರಾಗುವ ಆಫರ್

ಅಧ್ಯಕ್ಷರಾಗುವ ಆಫರ್

ಇಸ್ರೆಲ್ ನ ಮೊದಲ ಅಧ್ಯಕ್ಷ ಚೈಮ್ ವಿಜ್ಮನ್ ಅವರು 1952, ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೆಲ್ ನ ಎರಡನೇ ಅಧ್ಯಕ್ಷರಾಗುವಂತೆ ಅಲ್ಬರ್ಟ್ ಐನ್ ಸ್ಟೈನ್ ಅವರಿಗೆ ಆಫರ್ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್ ಸ್ಟೈನ್ ನಾಜೂಕಿನಿಂದಲೇ ಅವರಿಗೆ ಬಂದ ಆಫರ್ ನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವನ್ನು ಕೇಳಿದಾಗ ಅವರು " ನೈಸರ್ಗಿಕ ಯೋಗ್ಯತೆಯ ಕೊರತೆ ಮತ್ತು ಜನರನ್ನು ಸರಿಯಾಗಿ ನಿಭಾಯಿಸುವ ತಾಕತ್ತು ಇಲ್ಲದೇ ಇರುವುದು" ಎಂದು ತಿಳಿಸಿದ್ದರು. ಅಂದರೆ ನನಗೆ ವಯಸ್ಸಾಗಿದೆ ನಾನು ಅಧ್ಯಕ್ಷನಾಗುವುದು ಸೂಕ್ತವಲ್ಲ ಎಂದು ಹೇಳಿದ್ದರು.

ಅವರ ಹೆಸರನ್ನು ರೀಅರೆಂಜ್ ಮಾಡುವುದು!

ಅವರ ಹೆಸರನ್ನು ರೀಅರೆಂಜ್ ಮಾಡುವುದು!

ಇದು ಖಂಡಿತ ಬಹಳ ಮುಖ್ಯವಾದ ಅಂಶ. ಇಂತಹ ವಿಚಾರಗಳೇ ನಮಗೆ ವಿಭಿನ್ನವಾದ ಯೋಗ್ಯತೆಯನ್ನು ಸೃಷ್ಟಿ ಮಾಡಬಹುದು. ಕೆಲವೊಮ್ಮೆ ಹೆಸರೂ ಕೂಡ ವ್ಯಕ್ತಿಯ ಯೋಗ್ಯತೆಯನ್ನು ವಿವರಿಸುತ್ತದೆ. ನಿಮಗೆ ನಂಬಿಕೆ ಬರುತ್ತಿಲ್ಲ ಅನ್ನಿಸುತ್ತೆ ನಾವ್ಯಾಕೆ ಹೀಗೆ ಹೇಳುತ್ತಿದ್ದೇವೆ ಎಂದು. ಐನ್ ಸ್ಟೈನ್ ಅವರ ಹೆಸರನ್ನೇ ತೆಗೆದುಕೊಳ್ಳಿ. ಇಂಗ್ಲೀಷ್ ನಲ್ಲಿ ಅವರ ಹೆಸರಿನ "Albert Einstein" ನಲ್ಲಿರುವ ಅಕ್ಷರಗಳನ್ನು ಆಚೀಚೆ ಮಾಡಿ ಪುನಃ ಜೋಡಿಸಿದರೆ ‘Ten elite brains' ಎಂದು ಕೂಡ ಮಾಡಬಹು.ಇದರರ್ಥ 10 ಶ್ರೇಷ್ಠ ಮೆದುಳುಗಳು ಎಂದಾಗುತ್ತದೆ. ಇದೆಷ್ಟು ಸಮಂಜಸವಾಗಿಲ್ಲವೇ ಐನ್ ಸ್ಟೈಲ್ ಅವರಿಗೆ ನೀವೇ ಹೇಳಿ!

Best Mobiles in India

Read more about:
English summary
Albert Einstein, (born March 14, 1879, Ulm, Württemberg, Germany—died April 18, 1955, Princeton, New Jersey, U.S.), German-born physicist who developed the special and general theories of relativity and won the Nobel Prize for Physics in 1921 for his explanation of the photoelectric effect.to know more visit to kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X