₹20,58,56,500 ಕೋಟಿಗೆ ಹರಾಜಾಯ್ತು 'ಐನ್‌ಸ್ಟೀನ್' ಅವರು ಬರೆದಿದ್ದ ಪತ್ರ!!

|

ವಿಶ್ವ ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರು ಬರೆದ ಪತ್ರವೊಂದು ಬರೋಬ್ಬರಿ 2.9 ಮಿಲಿಯನ್​ ಡಾಲರ್​(₹20,58,56,500)ಗೆ ಹರಾಜಾಗಿ ಆಶ್ಚರ್ಯ ಮೂಡಿಸಿದೆ. ದೇವರು ಹಾಗೂ ಧರ್ಮದ ಕುರಿತು​​ ಐನ್​​ಸ್ಟೀನ್ ಅವರುವ ಬರೆದ ಈ ಪತ್ರ 'ಗಾಡ್​​ ಲೆಟರ್'​ ಎಂದೇ ಕರೆಯಲಾಗುತ್ತಿದ್ದು, ಇದೀಗ ನಿರೀಕ್ಷೆಗೂ ಮೀರಿ ಭಾರೀ ಬೆಲೆಗೆ ಹರಾಜಿನಲ್ಲಿ ಮಾರಾಟವಾಗಿದೆ.

ನೊಬೆಲ್​​​ ಪ್ರಶಸ್ತಿ ಪುರಸ್ಕೃತ ಐನ್​​ಸ್ಟೀನ್ ಅವರು ತಮ್ಮ ಜೀವನದ ಕೊನೆಯ ಭಾಗದಲ್ಲಿ ಅಂದರೆ, ಐನ್‌ಸ್ಟೀನ್ ಮೃತರಾಗುವುದಕ್ಕಿಂತ ಒಂದು ವರ್ಷ ಮೊದಲು ಈ ಪತ್ರವನ್ನು ಬರೆದಿದ್ದರು. ಧಾರ್ಮಿಕ ನಂಬಿಕೆ ಹಾಗೂ ತತ್ವಜ್ಞಾನ ಕುರಿ ತಂತೆ ಅವರು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಈ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ' ಎಂದು ಪತ್ರ ಹರಾಜು ಹಾಕಿರುವ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

₹20,58,56,500 ಕೋಟಿಗೆ ಹರಾಜಾಯ್ತು 'ಐನ್‌ಸ್ಟೀನ್' ಅವರು ಬರೆದಿದ್ದ ಪತ್ರ!!

ಜ.3, 1954 ಎಂದು ದಿನಾಂಕ ನಮೂದಾಗಿರುವ ಎರಡು ಪುಟಗಳ ಪತ್ರವನ್ನು ಜರ್ಮನಿಯ ತತ್ವಜ್ಞಾನಿ ಎರಿಕ್ ಗುಟ್ಕಿಂಡ್ ಅವರಿಗೆ ಐನ್‌ಸ್ಟೀನ್ ಅವರು ಬರೆದಿದ್ದರು ಎಂದು ಸಂಸ್ಥೆಯು ತಿಳಿಸಿದೆ. ಹಾಗಾದರೆ, ​​ಐನ್​​ಸ್ಟೀನ್ ಅವರು ಬರೆದಿದ್ದ ಪತ್ರದಲ್ಲಿ ಏನನ್ನು ಬರೆಯಲಾಗಿತ್ತು? ಅದನ್ನು 'ಗಾಡ್​​ ಲೆಟರ್'​ ಎಂದು ಕರೆದದ್ದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಆ ಪತ್ರ ಪ್ರಾಮುಖ್ಯತೆ ಪಡೆದಿದೆ

ಆ ಪತ್ರ ಪ್ರಾಮುಖ್ಯತೆ ಪಡೆದಿದೆ

ಜರ್ಮನ್​ ತತ್ವಜ್ಞಾನಿ ಎರಿಕ್​​ ಗಟ್​​ಕೈಂಡ್​ ಅವರ ಕೃತಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಐನ್​​​ಸ್ಟೀನ್​ ಈ ಪತ್ರವನ್ನು ಬರೆದಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆದಿದೆ. ಐನ್​​ಸ್ಟೀನ್​​ ಅವರ ನಿಧನಕ್ಕೆ ಒಂದು ವರ್ಷ ಮುಂಚೆ ಈ ಪತ್ರವನ್ನು ಬರೆದಿದ್ದರು. ತಮ್ಮದೇ ಹ್ಯಾಂಡ್​​ರೈಟಿಂಗ್​​ನಲ್ಲಿ ಜರ್ಮನ್​ ಭಾಷೆಯಲ್ಲಿ ಪತ್ರ ಬರೆದಿದ್ದ ಐನ್​​ಸ್ಟೀನ್​, ದೇವರ ನಂಬಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮೂಢನಂಬಿಕೆಗಳ ಮತ್ತೊಂದು ಅವತಾರ

ಮೂಢನಂಬಿಕೆಗಳ ಮತ್ತೊಂದು ಅವತಾರ

ನನಗೆ ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ. ಬೈಬಲ್​​ ಅನ್ನೋದು ಪುರಾತನ ದಂತಕಥೆಗಳ ಸಂಗ್ರಹ. ಈ ಬಗ್ಗೆ ಯಾವುದೇ ವ್ಯಾಖ್ಯಾನ ಬಂದರೂ, ಅದು ಎಷ್ಟು ಸೂಕ್ಷ್ಮವಾಗಿದ್ದರೂ ಕೂಡ ನನ್ನ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದಿದ್ದರು. ತನ್ನ ಯಹೂದಿ ಧರ್ಮದ ಬಗ್ಗೆ ಮಾತನಾಡಿದ್ದ ಐನ್​​​ಸ್ಟೀನ್​, ಅದೂ ಕೂಡ ಎಲ್ಲಾ ಧರ್ಮಗಳಂತೆಯೇ ಪುರಾತನ ಮೂಢನಂಬಿಕೆಗಳ ಮತ್ತೊಂದು ಅವತಾರ ಎಂದಿದ್ದರು.

'ಗಾಡ್​​ ಲೆಟರ್'​ ಎಂದು ಕರೆದದ್ದು ಏಕೆ?

'ಗಾಡ್​​ ಲೆಟರ್'​ ಎಂದು ಕರೆದದ್ದು ಏಕೆ?

ಎರಿಕ್​​ ಗಟ್​​ಕೈಂಡ್ ಅವರು ‘ಚೂಸ್ ಲೈವ್: ದಿ ಬಿಬ್ಲಿಕಲ್ ಕಾಲ್ ಟು ರಿವೋಲ್ಟ್' ಪುಸ್ತಕದ ಪ್ರತಿಯನ್ನು ಐನ್‌ಸ್ಟೀನ್‌ಗೆ ಕಳಿಸಿದ್ದರು. ಇದಕ್ಕೆ ಪತ್ರದ ಮೂಲಕ ಐನ್‌ಸ್ಟೀನ್ ಪ್ರತಿಕ್ರಿಯಿಸಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆಯುತ್ತಿತ್ತು. ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ ಎಂದು ಐನ್‌ಸ್ಟೀನ್ ಅಭಿಪ್ರಾಯಪಟ್ಟಿದ್ದನ್ನು ಗಾಡ್ ಲೆಟರ್ ಎಂದು ಕರೆಯಲಾಗಿದೆ.

ಹರಾಜು ಆಗುತ್ತಿರುವುದು ಇದೇ ಮೊದಲೇನಲ್ಲ

ಹರಾಜು ಆಗುತ್ತಿರುವುದು ಇದೇ ಮೊದಲೇನಲ್ಲ

ಐನ್​​ಸ್ಟೀನ್​ ಅವರ ಪತ್ರಗಳನ್ನ ಹರಾಜು ಹಾಕುತ್ತಿರುವುದು ಇದೇ ಮೊದಲೇನಲ್ಲ. ತನ್ನನ್ನು ಭೇಟಿಯಾಗಲು ನಿರಾಕರಿಸಿದ್ದ ಇಟಲಿಯ ಕೆಮಿಸ್ಟ್ರಿ ವಿದ್ಯಾರ್ಥಿಯೊಬ್ಬನಿಗೆ ಐನ್​ಸ್ಟೀನ್​ ಬರೆದಿದ್ದ ಪತ್ರ ಕಳೆದ ವರ್ಷ 6,100 ಡಾಲರ್​( ಸುಮಾರು ₹4 ಲಕ್ಷ)ಕ್ಕೆ ಮಾರಾಟವಾಗಿತ್ತು. ಹಾಗೇಯೇ, 1928ರಲ್ಲಿ ಐನ್​​ಸ್ಟೀನ್,​​​ ಥಿಯರಿ ಆಫ್​ ರಿಲೇಟಿವಿಟಿಯ ಮೂರನೇ ಹಂತದ ಬಗ್ಗೆ ಬರೆದಿದ್ದ ಟಿಪ್ಪಣಿಯೊಂದು 103,000 ಡಾಲರ್​ (ಸುಮಾರು ₹73 ಲಕ್ಷ) ಕ್ಕೆ ಸೇಲ್ ಆಗಿತ್ತು.

11 ಕೋಟಿ ಸುಖೀ ಜೀವನದ ನೋಟ್ ಮಾರಾಟವಾಗಿತ್ತು!

11 ಕೋಟಿ ಸುಖೀ ಜೀವನದ ನೋಟ್ ಮಾರಾಟವಾಗಿತ್ತು!

ಅಲ್ಲದೆ ಕಳೆದ ವರ್ಷ, ಸುಖೀ ಜೀವನದ ಬಗ್ಗೆ ಐನ್​​ಸ್ಟೀನ್​ ನೀಡಿದ್ದ ಸಲಹೆಯ ನೋಟ್​ವೊಂದು 1.56 ಮಿಲಿಯನ್​ ಡಾಲರ್​(ಸುಮಾರು ₹11 ಕೋಟಿ) ಗೆ ಹರಾಜಾಗಿತ್ತು. ಈ ನೋಟ್​​ನಲ್ಲಿ ಐನ್​ಸ್ಟೀನ್​​ ಒಂದೇ ವಾಖ್ಯದಲ್ಲಿ ಸುಖೀ ಜೀವನದ ಸೂತ್ರವನ್ನ ಹೇಳಿದ್ದರು. ಯಶಸ್ಸಿನ ಹಂಬಲ ಹಾಗೂ ಅದರ ಜೊತೆ ಬರುವ ಚಡಪಡಿಕೆಗಿಂತ, ಶಾಂತಿಯುತವಾದ ಹಾಗೂ ವಿನಮ್ರವಾದ ಜೀವನ ಹೆಚ್ಚು ಸಂತೋಷ ತರುತ್ತದೆ ಎಂದು ಐನ್​ಸ್ಟೀನ್​​ ಅವರು ಬರೆದಿದ್ದರು.

Best Mobiles in India

English summary
The letter is of invaluable significance in the ever ongoing debate between science and religion besides being of tremendous historical value to collectors and history and science buffs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X