Home
ಸುದ್ದಿಜಾಲ

ಭಾರತಕ್ಕೆ Alcatel V3 ಫೋನ್ ಸರಣಿ: V3 ಅಲ್ಟ್ರಾ ಬೆಲೆ ಮತ್ತು ಫೀಚರ್ಸ್ ನೋಡಿ!

TCL ಕಮ್ಯುನಿಕೇಷನ್‌ನ ಅಧೀನದಲ್ಲಿರುವ ಫ್ರೆಂಚ್ ಮೊಬೈಲ್ ಬ್ರ್ಯಾಂಡ್ ಅಲ್ಕಾಟೆಲ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ V3 ಸರಣಿಯನ್ನು ಪರಿಚಯಿಸಲು ಸಜ್ಜಾಗಿದೆ. ಕಂಪನಿಯು ಅಧಿಕೃತವಾಗಿ ಮೇ 27 ರಂದು ಮಧ್ಯಾಹ್ನ 12 ಗಂಟೆಗೆ Alcatel V3 ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಈ ಸರಣಿಯಲ್ಲಿ Alcatel V3 ಅಲ್ಟ್ರಾ, Alcatel V3 ಪ್ರೊ ಮತ್ತು Alcatel V3 ಕ್ಲಾಸಿಕ್ ಎಂಬ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು Alcatel V3 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ.

Alcatel V3 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಬಹಿರಂಗವಾಗಿದ್ದು, ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ ಮತ್ತು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದರೊಂದಿಗೆ, ಈ ಫೋನ್ ಸ್ಟೈಲಸ್ ಬೆಂಬಲದೊಂದಿಗೆ ಬರಲಿದೆ ಎಂದು ಟೀಸ್ ಮಾಡಲಾಗಿದೆ, ಇದು ಬಳಕೆದಾರರಿಗೆ ಬರೆಯಲು ಮತ್ತು ಚಿತ್ರಿಸಲು ಅನುಕೂಲವಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಕಾಟೆಲ್ ಹಂಚಿಕೊಂಡಿರುವ ಟೀಸರ್‌ಗಳ ಪ್ರಕಾರ, V3 ಅಲ್ಟ್ರಾವು ವೃತ್ತಾಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದ್ದು, ಮೂರು ಲೆನ್ಸ್‌ಗಳು ಮತ್ತು LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸೆಂಟ್ರಲ್ಲಿ ಅಲೈನ್ಡ್ ಹೋಲ್-ಪಂಚ್ ಕಟೌಟ್‌ನೊಂದಿಗೆ ಫ್ಲಾಟ್ ಡಿಸ್ಪ್ಲೇ ಇರಲಿದೆ. ಇದು ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

ಇವುಷ್ಟು ಅಧಿಕೃತವಾಗಿ ದೊರೆತ ಮಾಹಿತಿಯಾಗಿದ್ದರೆ, Alcatel V3 ಅಲ್ಟ್ರಾ ಕುರಿತ ನಿರೀಕ್ಷಿತ ವೈಶಿಷ್ಟ್ಯಗಳ ಮಾಹಿತಿ ಆನ್‌ಲೈನಿನಲ್ಲಿ ಲಭ್ಯವಾಗಿವೆ. ಈ Alcatel V3 ಅಲ್ಟ್ರಾ ಫೋನ್ 120Hz ರಿಫ್ರೆಶ್ ದರದೊಂದಿಗೆ 6.8-ಇಂಚಿನ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು. ಕ್ಯಾಮೆರಾ ವಿಭಾಗದಲ್ಲಿ, ಇದು 108-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗುತ್ತದೆ. ಬ್ಯಾಟರಿ ವಿಷಯಕ್ಕೆ ಬಂದರೆ, ಇದು 33W ಚಾರ್ಜಿಂಗ್ ಬೆಂಬಲದೊಂದಿಗೆ 5,010mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಮಾರುಕಟ್ಟೆಯ ವದಂತಿಗಳ ಪ್ರಕಾರ, Alcatel V3 ಅಲ್ಟ್ರಾ ಭಾರತದಲ್ಲಿ 30,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಭಾರತಕ್ಕೆ Alcatel V3 ಫೋನ್ ಸರಣಿ: V3 ಅಲ್ಟ್ರಾ ಬೆಲೆ ಮತ್ತು ಫೀಚರ್ಸ್ ನೋಡಿ!

ಭಾರತದಲ್ಲಿ Alcatel V3 ಸರಣಿ ಸ್ಮಾರ್ಟ್‌ಫೋನ್‌ಗಳ ಲಭ್ಯತೆಯ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಮಾರಾಟ ವೇದಿಕೆಯಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ವಿಶೇಷವಾಗಿ, ಫ್ಲಿಪ್‌ಕಾರ್ಟ್‌ನ ತ್ವರಿತ ವಾಣಿಜ್ಯ ವೇದಿಕೆಯಾದ ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿಯೂ ಇವು ಲಭ್ಯವಿರಲಿವೆ. ಈ ಸರಣಿಯು ವಿಭಿನ್ನ ಬಳಕೆಗಳಿಗಾಗಿ ಮೀಸಲಾದ ಡಿಸ್ಪ್ಲೇ ಮೋಡ್‌ಗಳನ್ನು ಹೊಂದಿರುತ್ತದೆ, ಉದಾಹರಣೆಗೆ ಓದುವುದು, ವೀಕ್ಷಿಸುವುದು ಮತ್ತು ಸ್ಕ್ರೋಲಿಂಗ್ ಮಾಡುವುದು. ಗಮನಾರ್ಹವಾಗಿ, ಈ ಫೋನ್‌ಗಳು TCL ನ ಸ್ವಾಮ್ಯದ NXTPAPER ಡಿಸ್ಪ್ಲೇ ತಂತ್ರಜ್ಞಾನದೊಂದಿಗೆ ಬರಲಿವೆ ಎಂದು ದೃಢಪಡಿಸಲಾಗಿದೆ, ಇದು ಉತ್ತಮ ದೃಶ್ಯ ಅನುಭವವನ್ನು ನೀಡುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳು ಫೋನಿನ ಬಳಕೆಯ ಅನುಭವವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ, ಅಲ್ಕಾಟೆಲ್ ತನ್ನ V3 ಸರಣಿಯ ಸ್ಥಳೀಯ ಉತ್ಪಾದನೆಗಾಗಿ ಡಿಕ್ಸನ್ ಟೆಕ್ನಾಲಜೀಸ್‌ನ ಅಂಗಸಂಸ್ಥೆಯಾದ ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್‌ನೊಂದಿಗೆ ಕೈಜೋಡಿಸಿದೆ. ಈ ಸಹಭಾಗಿತ್ವವು ಭಾರತದಲ್ಲಿ ಈ ಫೋನ್‌ಗಳ ಉತ್ಪಾದನೆಯನ್ನು ಖಚಿತಪಡಿಸುತ್ತದೆ. ಒಟ್ಟಾರೆಯಾಗಿ, ಅಲ್ಕಾಟೆಲ್‌ನ ಮುಂಬರುವ V3 ಸರಣಿಯು ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಸ್ಟೈಲಸ್ ಬೆಂಬಲ, ಉತ್ತಮ ಕ್ಯಾಮೆರಾ ಮತ್ತು NXTPAPER ಡಿಸ್ಪ್ಲೇಯಂತಹ ವೈಶಿಷ್ಟ್ಯಗಳೊಂದಿಗೆ, ಈ ಫೋನ್‌ಗಳು ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆಯೇ ಎಂದು ಕಾದು ನೋಡಬೇಕಿದೆ. ಬಿಡುಗಡೆಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ. ಇದಕ್ಕಾಗಿ, ನೀವು ಯಾವಾಗಲೂ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
Alcatel, the French mobile brand managed by TCL Communication, has officially revealed the launch date for its upcoming V3 series in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+