ಆಧಾರ್ ಕಾರ್ಡ್ ಕಳೆದುಕೊಂಡರೆ ಏನಾಗಬಹುದು?..ಈ ಆಘಾತಕಾರಿ ಘಟನೆ ನೋಡಿ!!

|

ಸೈಬರ್ ಕಳ್ಳರು ಏನೆಲ್ಲಾ ಪ್ಲಾನ್ ಮಾಡಿ ಹಣ ದೋಚುತ್ತಾರೆ ಎಂಬುದಕ್ಕೆ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ. ದೆಹಲಿಯ ನರೇಂದ್ರ ಬಿಶ್ತ್ ಎಂಬ ಯುವಕನ ಆಧಾರ್ ಕಾರ್ಡ್‌ಗೆ ನಕಲಿ ಫೋಟೋ ಹಾಕಿದ ವಂಚಕನೋರ್ವ ಆತನ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವುದು ಇದೀಗ ವರದಿಯಾಗಿದೆ.

ಹೌದು, ನರೇಂದ್ರ ಬಿಶ್ತ್ಗೆ ಮಾರ್ಚ್ 16 ರಂದು ಮೊಬೈಲ್ ಗೆ ಒಟಿಪಿಯೊಂದು ಬಂದಿತ್ತಂತೆ. ಈ ವೇಳೆಯಲ್ಲಿ ಮೊಬೈಲ್ ಕಂಪನಿ ತಪ್ಪಿನಿಂದ ಒಟಿಪಿ ಬಂದಿದೆ ಎಂದುಕೊಂಡನಂತೆ. ಆದರೆ, ಇದಾದ ಕೆಲವೇ ಕ್ಷಣಗಳಲ್ಲಿ ಆ ಅಕೌಂಟ್‌ನಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ ಎಂಬ ಸಂದೇಶ ಬಂದಿದೆ. ಇದಾದ ನಂತರ ದೂರು ನೀಡಿದಾಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಆಧಾರ್ ಕಾರ್ಡ್ ಕಳೆದುಕೊಂಡರೆ ಏನಾಗಬಹುದು?..ಈ ಆಘಾತಕಾರಿ ಘಟನೆ ನೋಡಿ!!

ಬಿಶ್ತ್ ಖಾತೆಯಿಂದ ಹಣ ಕದ್ದಿರುವ ಕಳ್ಳನು ಬ್ಯಾಂಕ್ ವಾಲೆಟ್ ಮೂಲಕ ಹಣವನ್ನು ದೋಚಿದ್ದಾನೆ. ಇದಕ್ಕಾಗಿ ಆತ ನರೇಂದ್ರನ ಸಿಮ್ ಅನ್ನು ನಕಲಿಸಿಕೊಂಡಿರುವು ಗೊತ್ತಾಗಿದೆ. ಮೊಬೈಲ್ ಕಂಪನಿಯವರು ಕೆಲ ದಿನಗಳ ಹಿಂದೆ ಆತನಿಗೆ ನಕಲಿ ಸಿಮ್ ನೀಡಿದ್ದಾರೆ. ಈ ಎಲ್ಲಾ ವಿಷಯಗಳು ಪೊಲೀಸರಿಗೂ ತಲೆನೋವಾಗಿದ್ದು, ಕ್ರಿಮಿನಲ್ ಬಳಸಿದ ಐಡಿಯಾ ಅವರನ್ನು ಬೆಚ್ಚಿಬೀಳಿಸಿದೆ.

ಆಧಾರ್ ಕಾರ್ಡ್‌ಗೆ ನಕಲಿ ಫೋಟೋ

ಆಧಾರ್ ಕಾರ್ಡ್‌ಗೆ ನಕಲಿ ಫೋಟೋ

ನರೇಂದ್ರನ ಸಿಮ್ ಅನ್ನು ನಕಲಿಸಿಕೊಂಡಿರುವ ಕ್ರಿಮಿನಲ್ ಅದಕ್ಕಾಗಿ ಆಡಿರುವುದು ಆಧಾರ್ ಕಾರ್ಡ್‌ಗೆ ನಕಲಿ ಫೋಟೋ ಹಾಕಿರುವುದು.! ನರೇಂದ್ರನ ಆಧಾರ್ ಅನ್ನು ಕದ್ದಿರುವ ಆತ ಆ ಆಧಾರ್ ಕಾರ್ಡ್ ಮೇಲೆ ತನ್ನ ಪೋಟೋ ಬರುವಂತೆ ಲ್ಯಾಮಿನೇಟ್ ಮಾಡಿದ್ದಾನೆ. ಇದಾದ ನಂತರ 'ಸ್ವಿಮ್ ಸ್ವಾಪ್' ನಡೆಸಿ ವಾಲೆಟ್ ಮೂಲಕ ನರೇಂದ್ರ ಬಿಶ್ತ್ ಹಣವನ್ನು ದೋಚಿದ್ದಾನೆ.

ಏನಿದು 'ಸಿಮ್ ಸ್ವ್ಯಾಪ್' '?

ಏನಿದು 'ಸಿಮ್ ಸ್ವ್ಯಾಪ್' '?

'ಸಿಮ್ ಸ್ವ್ಯಾಪ್' ಎಂದರೇ, 'ನಿಮ್ಮ ಬಳಿ ಈಗಾಗಲೇ ಇರುವ ಫೋನ್‌ ನಂಬರ್‌ ಅನ್ನು ಹೊಸ ಸಿಮ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು' ಎಂದರ್ಥ. ಈ ಕೆಲಸವನ್ನು ನೀವೇ ಮಾಡಿದ್ದರೆ ಯಾವ ತೊಂದರೆಯಿಲ್ಲ. ಆದರೆ, ನಿಮ್ಮ ಮಾಹಿತಿಯನ್ನು ಕದ್ದಿರುವ ಅಪರಿಚಿತರು ಈ ಕೆಲಸ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುವ ಹಗರಣ ಇದಾಗಿದೆ.!

ಹಗರಣ ಹೇಗೆ ನಡೆಯುತ್ತದೆ?

ಹಗರಣ ಹೇಗೆ ನಡೆಯುತ್ತದೆ?

ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ ಸೈಬರ್ ಕ್ರಿಮಿನಲ್‌ಗಳು ಈಗ ಸಿಮ್ ಅನ್ನು ಸಹ ನಕಲು ಮಾಡಹೊರಟಿದ್ದಾರೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹೇಗಾದರೂ ಪಡೆದುಕೊಂಡಿರುವ ಅವರಿಗೆ ಬೇಕಾಗಿರುವುದು ಒಟಿಪಿ ಮಾತ್ರ. ಅದಕ್ಕಾಗಿಯೇ ನಡೆಯುತ್ತಿರುವುದು 'ಸಿಮ್ ಸ್ವ್ಯಾಪ್' ಹಗರಣ.

ಈ ಘಟನೆಯಲ್ಲಿಹಣ ಕದ್ದಿದ್ದು ಹೇಗೆ?

ಈ ಘಟನೆಯಲ್ಲಿಹಣ ಕದ್ದಿದ್ದು ಹೇಗೆ?

ನರೇಂದ್ರನ ಆಧಾರ್ಕಾರ್ಡ್ ಅನ್ನು ಕದ್ದಿರುವ ಕ್ರಿಮಿನಲ್, ನಂತರ ಆ ಆಧಾರ್‌ಗೆ ತನ್ನ ಫೋಟೋ( ಸರಿಯಾಗಿಯೂ ಕಾಣದಂತೆ) ಹಾಕಿದ್ದಾನೆ. ಇದನ್ನು ಮೊಬೈಲ್‌ ಕಂಪೆನಿಗೆ ನೀಡಿ ನರೇಂದ್ರ ಬಿಶ್ತ್ ಅವರ ನಕಲಿ ಸಿಮ್ ಅನ್ನು ಪಡೆದುಕೊಂಡಿದ್ದಾನೆ. ಇದಾದ ನಂತರ ನಕಲಿ ಸಿಮ್‌ಗೆ ಬಂದ ಒಟಿಪಿ ಮೂಲಕ ಮೊಬೈಲ್ ವಾಲೆಟ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!

ನಿಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಮೊದಲ ಹೆಜ್ಜೆಯಾಗಿರುತ್ತದೆ. ಅದಕ್ಕಾಗಿ ಅವರು ನಿಮ್ಮ ದಾಖಲೆಗಳನ್ನು ಹುಡುಕಬಹುದು ಅಥವಾ ನಿಮ್ಮಿಂದಲೇ ಸಿಮ್ ಅನ್ನು ಅವರು ನಕಲಿಸಿಕೊಳ್ಳಬಹುದು. ಈ ಎರಡೂ ರೀತಿಯಿಂದಲೂ ಅವರು ನಿಮ್ಮನ್ನು ಕ್ಷಣಾರ್ಧದಲ್ಲಿ ಮೋಸಗೊಳಿಸಬಹುದು.

ವಿಶಿಷ್ಟ 20 ಡಿಜಿಟ್ ನಂಬರ್‌

ವಿಶಿಷ್ಟ 20 ಡಿಜಿಟ್ ನಂಬರ್‌

ಕಾಲ್‌ಡ್ರಾಫ್ಸ್ ಸೇರಿದಂತೆ ಕರೆ ಸೇವೆಯವನ್ನು ಮತ್ತಷ್ಟು ಸುಲಭಗೊಳಿಸುತ್ತೇವೆ ಎಂದು ನಿಮಗೊಂದು ಕರೆ ಬರುತ್ತದೆ. ಕಸ್ಟಮರ್ ಕೇರ್‌ ಸೂಗಿನಲ್ಲಿ ಕರೆ ಮಾಡುವ ಇವರು ಕರೆ ಮಾಡುವುದೇ ನಿಮ್ಮ ಸಿಮ್ ಹಿಂಬದಿಯ ನಂಬರ್‌ ಯಾವುದೆಂದು ತಿಳಿದುಕೊಳ್ಳಲು. ಒಮ್ಮೆ ನೀವು ಅವರ ಆದೇಶವನ್ನು ಚಾಚು ತಪ್ಪದೆ ಪಾಲಿಸಿದರೆ ನಿಮ್ಮ ಬ್ಯಾಂಕ್ ಅಂಕೌಂಟ್ ಖಾಲಿ ಖಾಲಿ.!

ಒಂದನ್ನು ಪ್ರೆಸ್‌ ಮಾಡಲು ಹೇಳುತ್ತಾರೆ!

ಒಂದನ್ನು ಪ್ರೆಸ್‌ ಮಾಡಲು ಹೇಳುತ್ತಾರೆ!

ನಿಮ್ಮ ಸಿಮ್‌ನ 20 ಡಿಜಿಟ್ ಸಂಖ್ಯೆ ಪಡೆದ ವಂಚಕ, ಅಧಿಕೃತವಾಗಿಹೊಸ ಸಿಮ್ ಪಡೆಯಲು ಮುಂದಾಗುತ್ತಾನೆ. ಆಗ, ನಿಮ್ಮ ಫೋನ್‌ಗೆ ಟೆಲಿಕಾಂ ಕಂಪೆನಿಯಿಂದ ಕನ್ಫರ್ಮೇಷನ್ ಎಸ್‌ಎಂಎಸ್‌ ಬರುತ್ತದೆ. ಆಗ ವಂಚಕ, ನಿಮಗೆ ಕರೆ ಮಾಡಿ ಒಂದನ್ನು ಪ್ರೆಸ್‌ ಮಾಡಲು ಸೂಚಿಸುತ್ತಾನೆ. ನೀವು ಒತ್ತಿದರೆ, ನಿಮ್ಮ ಸಿಮ್ ಬ್ಲಾಕ್ ಆಗಿ ಅವನ ಬಳಿ ನಿಮ್ಮ ಸಿಮ್ ಇರುತ್ತದೆ.

ಹಣ ಹೇಗೆ ಕಳೆದುಕೊಳ್ಳುತ್ತೀರಾ?

ಹಣ ಹೇಗೆ ಕಳೆದುಕೊಳ್ಳುತ್ತೀರಾ?

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆದ ವಂಚಕರು ಎಟಿಎಂ ಕಾರ್ಡ್‌ನಲ್ಲಿರುವ "ಸಿವಿವಿ" ನಂಬರ್ ಮೂಲಕ ಆನ್‌ಲೈನ್ ವ್ಯವಹಾರ ಮಾಡುತ್ತಾರೆ. ಈಗ ಸಿವಿವಿ ನಂಬರ್ ಮತ್ತು ಮೊಬೈಲ್ ಒಟಿಪಿ ಇದ್ದರೆ ಆನ್‌ಲೈನಿನಲ್ಲಿ ಹಣ ವರ್ಗಾವಣೆ ಕ್ಷಣಾರ್ಧದಲ್ಲಿ ನಡೆಯುತ್ತದೆ. ಈ ಎರಡು ಮಾಹಿತಿಗಳನ್ನು ನಿಮ್ಮಿಂದ ಪಡೆದ ಅವರು ನಿಮ್ಮ ಹಣ ದೋಚುತ್ತಾರೆ.

ಸಿಗುವುದು

ಸಿಗುವುದು

ನಕಲಿ ವೆಬ್‌ಸೈಟ್‌ ಅನ್ನು ತೆರೆಯುವ ಕ್ರಿಮಿನಲ್‌ಗಳು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲು ಪ್ರೇರೇಪಿಸುತ್ತಾರೆ. ಒಮ್ಮೆ ವ್ಯವಹಾರ ನಡೆದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಪಡೆಯುತ್ತಾರೆ. ಅಥವಾ ಕರೆ ಮಾಡಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ, ತೆರೆಯಲು ಕಾರ್ಡ್ ಮಾಹಿತಿ ನೀಡಿ ಎಂದು ಹೇಳುತ್ತಾರೆ.

ಟೆಲಿಕಾಂ ಕಂಪನಿಯ ಪ್ರತಿನಿಧಿ

ಟೆಲಿಕಾಂ ಕಂಪನಿಯ ಪ್ರತಿನಿಧಿ

ವಂಚಕರು ಟೆಲಿಕಾಂ ಕಂಪನಿಯ ಪ್ರತಿನಿಧಿಗಳೆಂದು ಹೇಳಿಕೊಂಡು ನಿಮಗೆ ಕರೆ ಮಾಡುತ್ತಾರೆ. ಕಾಲ್‌ ಡ್ರಾಪ್‌ ಪ್ಲಾಬ್ಲೆಮ್ ಅಥವಾ ಸಿಗ್ನಲ್‌ ಪ್ರಾಬ್ಲೆಮ್ ಸರಿಪಡಿಸಲು ಕಾಲ್‌ ಮಾಡುತ್ತಿರುವುದಾಗಿ ಹೇಳುತ್ತಾರೆ. ಅಥವಾ 4ಜಿ ಸಿಮ್ ಕಾರ್ಡ್‌ಗೆ ಬದಲಾಗಲು ನಿಮ್ಮ ಸಿಮ್ ಸಂಖ್ಯೆ ನೀಡಲು ಕೇಳುತ್ತಾರೆ. ಇಂತಹ ಕರೆಗಳನ್ನು ನಂಬಬೇಡಿ.

ಸಿಮ್ ತೆಗೆದಿಟ್ಟುಕೊಳ್ಳಿ!

ಸಿಮ್ ತೆಗೆದಿಟ್ಟುಕೊಳ್ಳಿ!

ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು ಮತ್ತು ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಮೂಲಕ ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬಹುದು.

ಪಾರಾಗುವುದು ಸಾಧ್ಯವಿದೆ!

ಪಾರಾಗುವುದು ಸಾಧ್ಯವಿದೆ!

ಮೊಬೈಲ್‌ನ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಟೆಲಿಕಾಂ ಕಂಪೆನಿ ಸಂಪರ್ಕಿಸಿ ಸಿಮ್ ಬ್ಲಾಕ್ ಮಾಡಿಸಿ. ಮತ್ತು ಎಟಿಎಂ ಅನ್ನು ಸಹ ಬ್ಲಾಕ್ ಮಾಡಿಬಿಡಿ.

ಸಿಮ್ ಸ್ವ್ಯಾಪ್ ಅನ್ನು ನೀವು ಮಾಡಿರುತ್ತೀರಿ!

ಸಿಮ್ ಸ್ವ್ಯಾಪ್ ಅನ್ನು ನೀವು ಮಾಡಿರುತ್ತೀರಿ!

ಹಾಗೆ ನೋಡಿದರೆ, ಮೇಲೆ ಹೇಳಿದ ಸಿಮ್ ಸ್ವ್ಯಾಪ್ ಎಂದರೆ ಹಗರಣ ಎಂದು ತಿಳಿಯುತ್ತಿರಲಿಲ್ಲ. ನೀವು 2ಜಿಯಿಂದ 3ಜಿ ಅಥವಾ 4ಜಿ ಸಿಮ್‌ ಬದಲಾಯಿಸಿಕೊಂಡಿದ್ದನ್ನು ಸಹ ಸಿಮ್ ಸ್ವ್ಯಾಪ್ ಎಂದು ಕರೆಯುತ್ತಾರೆ. ಆದರೆ, ಇಲ್ಲಿ ವಂಚಕರು ನಿಮ್ಮ ಸಿಮ್ ಅನ್ನು ಸ್ವ್ಯಾಪ್ ಮಾಡುತ್ತಿರುವುದಕ್ಕೆ ಇದು ಸಿಮ್ ಸ್ವ್ಯಾಪ್ ಹಗರಣ ಎಂದು ಬದಲಾಗಿದೆ.

Best Mobiles in India

English summary
Alert! Beware of losing aadhaar card. Aadhar to help catch money launderers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X