ಅಮಿತಾಬ್‌ ಬಚ್ಚನ್‌ ಜೊತೆ ಮಾತಾನಾಡಬೇಕೆ? ಹಾಗಾದ್ರೆ ಹೀಗೆ ಮಾಡಿ?

|

ಭಾರತ ಚಿತ್ರರಂಗದ ಮೇರು ನಟ ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ಬಿಗ್‌ಬಿ ಜೊತೆ ಮಾತನಾಡುವ ಅವಕಾಶ ಸಿಕ್ಕರೆ ಸಾಕು ಅದೃಷ್ಟ ಎಂದುಕೊಳ್ಳುತ್ತಾರೆ. ನೀವು ಕೂಡ ಅಮಿತಾಬ್‌ ಜೊತೆ ಮಾತನಾಡಬೇಕಾ ಇದಕ್ಕಾಗಿ ನೀವು ಕಷ್ಟ ಪಡಬೇಕಾದ ಅನಿವಾರ್ಯತೆ ಇಲ್ಲ. ಯಾಕಂದ್ರೆ ಇನ್ಮುಂದೆ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಅಮೆಜಾನ್‌ ಅಲೆಕ್ಸಾ ಮೂಲಕ "ಅಮಿತ್ ಜಿ, ವಾಟ್‌ ಕ್ಯಾನ್‌ ಯೂ ಡೂ?" ಎಂದು ಹೇಳುವ ಮೂಲಕ ಹೊಸ ಅನುಭವದೊಂದಿಗೆ ನೀವು ಮಾತನಾಡಬಹುದು.

ಅಮೆಜಾನ್‌

ಹೌದು, ಸ್ಮಾರ್ಟ್‌ ಹೋಮ್‌ ಅಸಿಸ್ಟೆಂಟ್‌ ಅಮೆಜಾನ್‌ ಅಲೆಕ್ಸಾ ಮೂಲಕ ಅಮಿತಾಬ್‌ ಬಚ್ಚನ್‌ ಧ್ವನಿಯನ್ನು ನೀವು ಮನೆಯಲ್ಲಿಯೇ ಕೇಳಬಹುದಾಗಿದೆ. ಅಷ್ಟೇ ಅಲ್ಲ ಅಮಿತಾಬ್‌ ಜೊತೆ ಸಂವಾದ ನಡೆಸಿದಂತೆ ಅಲೆಕ್ಸಾ ಜೊತೆಗೆ ಸಂವಾದ ನಡೆಸಬಹುದಾಗಿದೆ. ಇನ್ನು ಅಲೆಕ್ಸಾದಲ್ಲಿ ಸೆಲೆಬ್ರಿಟಿ ಧ್ವನಿಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉತ್ತರಗಳನ್ನು ನೀಡುತ್ತದೆ. ಅದರಲ್ಲೂ ಬಚ್ಚನ್ ಸಾರ್ವಜನಿಕವಾಗಿ ಹೇಗೆ ಸಂವಹನ ನಡೆಸುತ್ತಾರೋ ಥೇಟ್‌ ಅದೇ ಮಾದರಿಯಲ್ಲಿ ಮಾತನಾಡಬಹುದಾಗಿದೆ. ಹಾಗಾದ್ರೆ ಅಮೆಜಾನ್‌ ಅಲೆಕ್ಸಾದಲ್ಲಿ ಅಮಿತಾಬ್‌ ಜೊತೆ ಮಾತನಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಗ್‌ಬಿ ವಾಯ್ಸ್‌ ಕೇಳಲು ಹಣ ಪಾವತಿಸಬೇಕು?

ಬಿಗ್‌ಬಿ ವಾಯ್ಸ್‌ ಕೇಳಲು ಹಣ ಪಾವತಿಸಬೇಕು?

ಅಲೆಕ್ಸಾದಲ್ಲಿ ಬಚ್ಚನ್ ಅವರ ಧ್ವನಿಯು ಅವರ ಅಭಿಮಾನಿಗಳಿಗೆ ಅತ್ಯಾಕರ್ಷಕ ವಿಷಯವಾಗಿದೆ. ಆದರೆ ಜನರು ಈ ಅನುಭವ ಪಡೆದುಕೊಳ್ಳಲು ಹಣ ಪಾವತಿಸ ಬೇಕಾಗುತ್ತದೆ. ಅಮಿತಾಬ್‌ ಬಚ್ಚನ್‌ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರ ಅಭಿಮಾನಿಗಳ ಅಲೆಕ್ಸಾದಲ್ಲಿ ಬಚ್ಚನ್‌ ಧ್ವನಿ ಕೇಳಲು ಹಣ ಪಾವತಿಸುತ್ತಾರೆ ಅನ್ನೊದು ಅಮೆಜಾನ್‌ ನಂಬಿಕೆ. ಅಲೆಕ್ಸಾದಲ್ಲಿ ಅಮಿತಾಬ್‌ ಬಚ್ಚನ್‌ ಅವರ ಧ್ವನಿ ಪ್ರಸ್ತುತ ಭಾರತೀಯ ಬಳಕೆದಾರರಿಗೆ ಮಾತ್ರ ಪ್ರತ್ಯೇಕವಾಗಿದೆ.

ಅಮೆಜಾನ್

ಇನ್ನು ಅಮೆಜಾನ್ ತನ್ನ ಅಲೆಕ್ಸಾವನ್ನು ಸುಧಾರಿಸಲು ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ನ ಸಿರಿ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಲು ಎದುರು ನೋಡುತ್ತಿದೆ. ಇದೇ ಕಾರಣಕ್ಕೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಳವಡಿಸುತ್ತಾ ಬಂದಿದೆ. ಹಿಂದಿನ ಚಲನೆಗಳು ಅಲೆಕ್ಸಾವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಅಮೆಜಾನ್‌ಗೆ ಸಹಾಯ ಮಾಡುತ್ತಿವೆ. ವಾಯ್ಸ್ ಅಸಿಸ್ಟೆಂಟ್ ಅನ್ನು ಹೆಚ್ಚು ಉಪಯುಕ್ತ ಕೃತಕ ಬುದ್ಧಿಮತ್ತೆ (ಎಐ) ಉತ್ಪನ್ನವಾಗಿಸಲು ವಿಶೇಷವಾಗಿ ಹಿಂದಿಯಲ್ಲಿ 1,000 ಕೌಶಲ್ಯಗಳನ್ನು ಒಳಗೊಂಡಂತೆ 30,000 ಕೌಶಲ್ಯಗಳೂ ಇವೆ. ಇವುಗಳಲ್ಲಿ ಹಲವು ಕೌಶಲ್ಯಗಳು ಥರ್ಢ್‌ ಪಾರ್ಟಿ ಡೆವಲಪರ್‌ಗಳಿಂದ ಬರುತ್ತಿವೆ.

ಸೆಲೆಬ್ರಿಟಿ

ಈ ಹೊಸ ಸೆಲೆಬ್ರಿಟಿ ಧ್ವನಿ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವ ಮೂಲಕ, ಅಮೆಜಾನ್ ನಿಜವಾಗಿಯೂ ಬಳಕೆದಾರರಿಂದ ಹೆಚ್ಚಿನ ಡೇಟಾವನ್ನು ಪಡೆಯಲು ಯೋಜಿಸುತ್ತಿದೆ. ಅದು ಅಲೆಕ್ಸಾವನ್ನು ಹೆಚ್ಚಿಸಲು ಬಳಸುತ್ತದೆ. ಆದಾಗ್ಯೂ, ಸೆಲೆಬ್ರಿಟಿ ವಾಯ್ಸ್ ಫೀಚರ್ ಅಲೆಕ್ಸಾಗೆ ವಾಯ್ಸ್ ಅಸಿಸ್ಟೆಂಟ್‌ಗಳ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಯಾವುದೇ ಹೆಚ್ಚಿನ ಯಶಸ್ಸನ್ನು ಸಾಧಿಸಲು ಸಹಾಯ ಮಾಡಲಿದೆಯಾ ಅನ್ನೊದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ.

ಸೆಲೆಬ್ರಿಟಿ

ಆದರೆ "ಕೆಲವು ಸೆಲೆಬ್ರಿಟಿಗಳ ಧ್ವನಿಯನ್ನು ಬಳಸುವುದು ಆ ಸೆಲೆಬ್ರಿಟಿಗಳ ಅಭಿಮಾನಿಗಳಿಗೆ ಉತ್ತಮ ಬೋನಸ್ ಮತ್ತು ಅಲೆಕ್ಸಾಗೆ ಹೆಚ್ಚಿನ ವ್ಯಕ್ತಿತ್ವವನ್ನು ನೀಡಲು ಸಹಾಯ ಮಾಡುತ್ತದೆ" ಎಂದು ವಿಶ್ವದಾದ್ಯಂತ ಗ್ರಾಹಕರು ತಂತ್ರಜ್ಞಾನದ ಅಳವಡಿಕೆ ಮತ್ತು ಬಳಕೆಯನ್ನು ವಿಶ್ಲೇಷಿಸುವ ರೆಟಿಕ್ಲ್ ರಿಸರ್ಚ್‌ನ ಸ್ಥಾಪಕ ಮತ್ತು ಪ್ರಧಾನ ವಿಶ್ಲೇಷಕ ರಾಸ್ ರೂಬಿನ್ ಅಭಿಪ್ರಾಯ ಪಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಅಲೆಕ್ಸಾ ಯಶಸ್ಸಿಗೆ ಕಾರಣವಾಗಲಿದೆ ಅನ್ನೊದು ಕಾದು ನೋಡಬೇಕಿದೆ.

Best Mobiles in India

Read more about:
English summary
Amazon on Thursday launched the voice of the 78-year-old Bollywood star as a part of its efforts to amuse existing users and attract new consumers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X