ಅಲೆಕ್ಸಾ ಫೀಚರ್ಸ್‌ ಮೂಲಕವೇ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡಲು ಅವಕಾಶ!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಇಂಡಿಯಾ ತನ್ನ ಬಳಕೆದಾರರಿಗೆ ಹಲವರು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈ ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವ ಗ್ರಾಹಕರಿಗೆ ಉಪಯೋಗವಾಗುವಂತೆ ಸೌಲಭ್ಯಗಳನ್ನ ಕಲ್ಪಿಸಿಕೊಟ್ಟಿದೆ. ಅಲ್ಲದೆ ಕಾಲಕಾಲಕ್ಕೆ ಹಲವು ಹೊಸತುಗಳನ್ನು ಪರಿಚಯಿಸುತ್ತಿರುವ ಅಮೆಜಾನ್‌ ಇದೀಗ ತನ್ನ ಶಾಪಿಂಗ್ ಅಪ್ಲಿಕೇಶನ್‌ನಲ್ಲಿ ಅಲೆಕ್ಸಾ ಅಸಿಸ್ಟೆಂಟ್‌ನ ಸೌಲಭ್ಯವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ.

ಹೌದು

ಹೌದು, ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ದೈತ್ಯ ಎಂದೇ ಹೆಸರುವಾಸಿಯಾಗಿರುವ ಅಮೆಜಾನ್‌ ತನ್ನ ಶಾಪಿಂಗ್‌ ಆಪ್ಲಿಕೇಶನ್‌ನಲ್ಲಿ ಅಲೆಕ್ಸಾ ಅಸಿಸ್ಟೆಂಟ್‌ ಸೌಲಭ್ಯವನ್ನ ಕಲ್ಪಿಸುವುದಾಗಿ ಹೇಳಿದೆ. ಈ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನ ಅಲೆಕ್ಸಾ ಮೂಲಕ ಆರ್ಡರ್‌ ಮಾಡಬಹುದಾಗಿದೆ. ಅಲ್ಲದೆ ಆರ್ಡರ್‌ ಮಾಡಿದ ಪ್ರಾಡಕ್ಟ್‌ ಎಲ್ಲಿದೆ, ಯವಾಗ ಡೆಲಿವರಿ ಆಗಲಿದೆ ಇತ್ಯಾದಿಗಳನ್ನ ಅಲೆಕ್ಸಾ ಮೂಲಕ ಮೇಲ್ವಿಚಾರಣೆ ಮಾಡಬಹುದಾಗಿದೆ. ಈ ಮೂಲಕ ಗ್ರಾಹಕರು ಶಾಪಿಂಗ್‌ ತಾಣದಲ್ಲಿ ಟೈಪಿಂಗ್‌ ಮಾಡುತ್ತಾ ಸರ್ಚ್‌ ಮಾಡುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಸಮಯವನ್ನು ಸಹ ಉಳಿಸಬಹುದಾಗಿದೆ.

ಇನ್ನು

ಇನ್ನು ಈಗಾಗ್ಲೇ ಅಲೆಕ್ಸಾ ಅಸಿಸ್ಟೆಂಟ್‌ ಅನ್ನು ಪರಿಚಯಿಸಿ ಯಶಸ್ವಿಯಾಗಿರುವ ಅಮೆಜಾನ್‌,ಇದೀಗ ತಾನೇ ಪರಿಚಯಿಸಿರುವ ಫೀಚರ್ಸ್‌ ಅನ್ನು ತನ್ನ ಶಾಪಿಂಗ್‌ ಆಪ್ಲಿಕೇಶನ್‌ನಲ್ಲಿ ಆಳವಡಿಸಿಕೊಳ್ಳಲಿದೆ. ಇದು ಗ್ರಾಹಕರಿಗೆ ಧ್ವನಿ ಆಜ್ಞೆಗಳ ಮೂಲಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಶಾಪಿಂಗ್ ಮಾಡಲು ಸಹಾಯ ಮಾಡಲಿದೆ. ಈ ಸೇವೆ ಪ್ರಸ್ತುತ ಅಂಡ್ರಾಯ್ಡ್‌ ಅಪ್ಲಿಕೇಶನ್‌ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ. ಇದು ಇದೀಗ ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್‌ ಭಾಷೆಯ ಕೆಲ ನುಡಿಗಟ್ಟುಗಳನ್ನ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇತರೆ ಭಾಷೆಗಳನ್ನು ಸಹ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನ ವೃದ್ಧಿಸಲಾಗುವುದು ಎಂದು ಅಮೆಜಾನ್‌ ಕಂಪೆನಿ ಹೇಳಿದೆ.

ಅಮೆಜಾನ್‌

ಅಮೆಜಾನ್‌ ಇಂಡಿಯಾ ತಾಣದಲ್ಲಿ ಗ್ರಾಹಕರು ಆನ್‌ಲೈನ್‌ ಶಾಪಿಂಗ್‌ ಮೂಲಕ ಆರ್ಡರ್‌ ಮಾಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಗ್ರಾಹಕರಿಗೆ ಸೂಕ್ತ ಪ್ರಾಡಕ್ಟ್‌ನ ಹೆಸರನ್ನು ಟೈಪ್‌ ಮಾಡಲು ಬಾರದೇ ಇರಬಹದು, ಇಲ್ಲವೇ ಆರ್ಡರ್‌ ಮಾಡಿದ ವಸ್ತು ಎಲ್ಲಿದೆ ಎಂದು ತಿಳಿಯುವ ಕಾತುವಿರರುತ್ತದೆ. ಹೀಗಾಗಿ ಗ್ರಾಹಕರು ಪ್ರತಿಕ್ರಿಯಿಸುವ ರೀತಿಯನ್ನು ಅರಿತುಕೊಳ್ಳುವ ಉದ್ದೇಶದಿಂದ ಈ ಮಾದರಿಯ ಸೇವೆಯನ್ನ ಪರಿಚಯಿಸುತ್ತಿದ್ದೇವೆ ಎಂದು ಅಮೆಜಾನ್ ಇಂಡಿಯಾದ ಮಾರ್ಕೆಟಿಂಗ್‌ ಮ್ಯಾನೇಜರ್‌ ಕಿಶೋರ್ ಥೋಟಾ ಹೇಳಿದ್ದಾರೆ.

ಮುಂದಿನ

ಅಂದಹಾಗೇ ಅಮೆಜಾನ್‌ ಮುಂದಿನ ದಿನಗಳಲ್ಲಿ ಎಲ್ಲವೂ ಧ್ವನಿ ಆಧಾರಿತ ಆಜ್ಞೆಗಳ ಮೂಲಕ ಶಾಪಿಂಗ್‌ ನಡೆಸಲು ಬಯಸುತ್ತಿಲ್ಲ. ಬದಲಿಗೆ ಈ ಮಾದರಿಯಲ್ಲಿಯೂ ಕೂಡ ಗ್ರಾಹಕರು ಶಾಪಿಂಗ್‌ ನಡೆಸಲು ಸಕ್ರಿಯರಾಗಲಿ ಎಂದು ಬಯಸುತ್ತೇವೆ ಅನ್ನೊದನ್ನ ಅಮೆಜಾನ್‌ ಹೇಳಿದೆ. ಒಂದರ್ಥದಲ್ಲಿ ಧ್ವನಿ ಆಜ್ಞೆ ಮೂಲಕ ಆರ್ಡರ್‌ ಮಾಡುವುದು ಗ್ರಾಹಕರಿಗೆ ಉತ್ತಮವಾಗಲಿದೆ ಅನ್ನೊ ಉದ್ದೇಶವನ್ನ ಅಮೆಜಾನ್‌ ಇಟ್ಟುಕೊಂಡಿದೆ.

ಅಮೆಜಾನ್‌ ಶಾಪಿಂಗ್‌ ಆಪ್‌ನಲ್ಲಿ ಅಲೆಕ್ಸಾವನ್ನು ಬಳಸುವುದು ಹೇಗೆ?

ಅಮೆಜಾನ್‌ ಶಾಪಿಂಗ್‌ ಆಪ್‌ನಲ್ಲಿ ಅಲೆಕ್ಸಾವನ್ನು ಬಳಸುವುದು ಹೇಗೆ?

ಇದು ಅಂಡ್ರಾಯ್ಡ್‌ ಆಪ್ಲಿಕೇಶನ್‌ ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ. ಅಮೆಜಾನ್‌ ಶಾಂಪಿಗ್‌ ಆಪ್ಲಿಕೇಶನ್‌ ಗೆ ಎಂಟ್ರಿ ಕೊಟ್ಟ ಮೇಲೆ ಸರ್ಚ್‌ಬಾರ್‌ > ಮೈಕ್‌ ಐಕಾನ್‌ ಟ್ಯಾಪ್‌ ಮಾಡಿ > ನಿಮಗೆ ಬೇಕಾದ ಪ್ರಾಡಕ್ಟ್‌ ನ ಹೆಸರನ್ನ ಹೇಳಿ ಆರ್ಡರ್‌ ಮಾಡಿದರೆ ಅಲೆಕ್ಸಾ ಆ ಕೆಲಸವನ್ನ ಮಾಡಲಿದೆ.

Most Read Articles
Best Mobiles in India

English summary
Starting today, Amazon users with the Android version can search for products on the app through voice commands.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X