ಮಾನವನನ್ನೇ ಮೀರಿಸಲಿದೆ ಅಲಿಬಾಬಾ ಕೃತಕ ಬುದ್ಧಿಮತ್ತೆ: ಲಕ್ಷ ಪ್ರಶ್ನೆಗಳಿಗೆ ಸರಿ ಉತ್ತರ...!!

Written By:

ಚೀನಾದಲ್ಲಿ ಸದ್ದು ಮಾಡುತ್ತಿರುವ ಅಲಿಬಾಬಾ ಇನ್ನು ಜಾಗತಿಕವಾಗಿ ತನ್ನ ಕೃತಕ ಬುದ್ದಿಮತ್ತೆ ಹಾಗೂ ಯಂತ್ರ ಮಾನವನಿಂದ ಗುರುತಿಸಿಕೊಳ್ಳಲಿದೆ. ಈಗಾಗಲೇ ಅಲಿಬಾಬಾ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ದಿಮತ್ತೆಯೂ ಸಾಮಾನ್ಯ ಮಾನವನ ಬುದ್ಧಿ ಸಾಮಾರ್ಥ್ಯವನ್ನು ಮೀರಿಸಲಿದೆ ಎನ್ನಲಾಗಿದೆ.

ಅಲಿಬಾಬಾ ಕೃತಕ ಬುದ್ಧಿಮತ್ತೆ: ಲಕ್ಷ ಪ್ರಶ್ನೆಗಳಿಗೆ ಸರಿ ಉತ್ತರ...!!

ಅಲಿಬಾಬಾ ನಿರ್ಮಿಸಿರುವ ಕೃತಕ ಬುದ್ಧಿಮತ್ತೆಯ ಸಾಧನವು ಮಾನವ ಬುದ್ಧಿಮತ್ತೆಗಿಂತಲೂ ಹೆಚ್ಚು ಚುರುಕಾಗಿದೆ ಎಂದು ಸ್ಟಾಂಡ್ ಪೋರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಸಾಬೀತಾಗಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ಕೃತಕ ಬುದ್ಧಿಮತ್ತೆಯೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಯಂತ್ರ ಮಾನವ ರೋಬೊಟ್ ವಿಧಾನವನ್ನು ಬದಲಾಯಿಸಲಿದೆ.

ಓದಿರಿ: ಜಿಯೋ ಪ್ಲಾನ್ ಕಾಪಿ: ಏರ್‌ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇದು ಬೆಸ್ಟ್ ಆಯ್ಕೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
100000 ಪ್ರಶ್ನೆಗಳಿಗೆ ಉತ್ತರ:

100000 ಪ್ರಶ್ನೆಗಳಿಗೆ ಉತ್ತರ:

ಅಲಿಬಾಬಾ ಅಂಗ ಸಂಸ್ಥೆಯಾದ ಡೇಟಾ ಸೈನ್ಸ್ ಟೆಕ್ನಾಲಜಿಸ್ ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಸ್ಟಾಂಡ್ ಪೋರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಸುಮಾರು ಒಂದು ಲಕ್ಷ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದೆ ಎನ್ನಲಾಗಿದೆ. ಇದು ಮಾನವ ಬುದ್ದಿಮತ್ತೆಗಿಂತಲೂ ಉತ್ತಮವಾಗಿದೆ ಎನ್ನಲಾಗಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಕೃತಕ ಬುದ್ಧಿಮತ್ತೆಯಲ್ಲಿ ನಂ.1:

ಕೃತಕ ಬುದ್ಧಿಮತ್ತೆಯಲ್ಲಿ ನಂ.1:

ಚೀನಾ ಮೂಲದ ಕೃತಕ ಬುದ್ಧಿ ಮತ್ತೆ ಪರೀಕ್ಷೆಯಲ್ಲಿ 82.44 ಅಂಕವನ್ನು ಗಳಿಸಿಕೊಂಡಿದ್ದು, ಇದು ಕೃತಕ ಬುದ್ಧಿಮತ್ತೆಯೊಂದು ಪರೀಕ್ಷೆಯಲ್ಲಿ ಪಡೆದುಕೊಂಡಿರುವ ಅತೀ ಹೆಚ್ಚಿನ ಅಂಕಗಳಾಗಿದ್ದು, ಇದುವರೆಗೂ ಯಾವುದೇ ಕೃತಕ ಬುದ್ಧಿಮತ್ತೆಗಳು ಇಷ್ಟು ಪ್ರಮಾಣದ ಅಂಕಗಳನ್ನು ಗಳಿಸಿಕೊಂಡಿಲ್ಲ ಎನ್ನಲಾಗಿದೆ.

ಮೈಕ್ರೋ ಸಾಫ್ಟ್ ಜೊತೆಗೆ:

ಮೈಕ್ರೋ ಸಾಫ್ಟ್ ಜೊತೆಗೆ:

ಇದಲ್ಲದೇ ರೋಬೊಟಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಯಲ್ಲಿ ಅಲಿಬಾಬಾ ಮೈಕ್ರೋ ಸಾಫ್ಟ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಈ ಮೂಲಕ 2030ಯಲ್ಲಿ ಈ ಎರಡು ಕಂಪನಿಗಳು ಕೃತಕ ಬುದ್ದಿ ಮತ್ತೆ ಹಾಗೂ ರೋಬೊಟಿಕ್ ತಂತ್ರಜ್ಞಾನದಲ್ಲಿ ಮುಂಚುಣಿಯಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Alibaba AI outgunned humans in key reading test, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot