Subscribe to Gizbot

ಡಾಟಾ ಕೇಂದ್ರ ಆರಂಭಿಸುತ್ತದೆ ಅಲೀಬಾಬಾ!! ಏನಿದು?

Written By:

ಚೀನಾದ ಇ-ಕಾಮರ್ಸ್ ದೈತ್ಯ ಅಲೀಬಾಬಾ ಗ್ರೂಪ್ ಭಾರತದಲ್ಲಿ ಮೊದಲ ಬಾರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಯನ್ನು ನೀಡಲು ಮುಂದಾಗಿದೆ.!! ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಅಲೀಬಾಬಾ ಸಂಸ್ಥೆ ಹೇಳಿದೆ.

ಅಮೇಜಾನ್ ಹಾಗೂ ಮೈಕ್ರೋಸಾಫ್ಟ್ ಈಗಾಗಲೇ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆ ಹೊಂದಿದ್ದು, ಅಲೀಬಾಬಾ ಪ್ರವೇಶದಿಂದಾಗಿ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆಯಲ್ಲಿ ಭಾರಿ ಪೈಪೋಟಿ ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.!! ಹಾಗಗಿ, ಅಲೀಬಾಬಾ ಕ್ಲೌಡ್ ಬರುವಿಕೆ ಎಲ್ಲರಿಗೂ ಕುತೋಹಲ ಮೂಡಿದೆ.!!

ಡಾಟಾ ಕೇಂದ್ರ ಆರಂಭಿಸುತ್ತದೆ ಅಲೀಬಾಬಾ!! ಏನಿದು?

ಬಳಕೆದಾರರು ತಮ್ಮ ಡಾಟಾವನ್ನು ಕ್ಲೌಡ್ ಕಂಪ್ಯೂಟಿಂಗ್ ಸೇವೆಯ ಮೂಲಕ ರಕ್ಷಿಸಬಹುದಾಗಿದ್ದು, ಇದಕ್ಕೆ ಕಂಪೆನಿಗಳು ಸ್ವಲ್ಪದರದ ಹಣವನ್ನು ವಿಧಿಸುತ್ತವೆ.ಈಗಾಗಲೇ ಹೆಚ್ಚು ಪ್ರಸಿದ್ದಿಯಾಗಿರುವ ಕ್ಲೌಡ್ ಕಂಪ್ಯೂಟಿಂಗ್ ಭವಿಷ್ಯದಲ್ಲಿ ಭಾರಿ ಬೆಳವಣಿಗೆಯಾಗಲಿದೆ.!!

ಡಾಟಾ ಕೇಂದ್ರ ಆರಂಭಿಸುತ್ತದೆ ಅಲೀಬಾಬಾ!! ಏನಿದು?

ಅಲೀಬಾಬಾ ಡಾಟಾ ಕ್ಲೌಡ್ ವಿನೂತನ ಮಾದರಿಯ ಸೇವೆಯನ್ನು ಒದಗಿಸಲಿದ್ದು, ನವೀನ ಮಾದರಿಯ ಡಾಟಾ ಇಂಟಲಿಜೆನ್ಸ್ ಹಾಗೂ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸಲಿದೆ. ಇನ್ನು ಅತಿ ಹೆಚ್ಚು ಇಂಟರ್ ನೆಟ್ ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತಕ್ಕೆ 2018 ರ ವೇಳೆಗೆ ಮುಂಬೈನಲ್ಲಿ ಡಾಟಾ ಸೆಂಟರ್ ಪ್ರಾರಂಭವಾಗಲಿದೆ.

English summary
The data centre will be set up in Mumbai by March 31, 2018, the group said, adding that another one will come up in Jakarta.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot