ಅಲಿಬಾಬ ಕಂಪೆನಿಯಿಂದ ನಿವೃತ್ತಿ ಘೋಷಿಸಿದ 'ಜಾಕ್ ಮಾ'!..ರೋಚಕ ಕಥೆಗೆ ಶಾಕಿಂಗ್ ಟ್ವಿಸ್ಟ್!!

|

ಆತನ ಆರಂಭದ ಜೀವನದಲ್ಲಿ ಎಲ್ಲರೂ ನಿರಾಕರಿಸಿದ ಸಾಮಾನ್ಯ ಮನುಷ್ಯನೋರ್ವ ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡ ಕಥೆಯೇ ರೋಚಕವಾದದ್ದು, ಆದರೆ, ಅದೇ ಶ್ರೀಮಂತನು ತಾನು ಕಟ್ಟಿದ್ದ ತನ್ನ ಕನಸಿನ ಕಂಪೆನಿಯಿಂದ ಕೇವಲ 55ನೇ ವಯಸ್ಸಿನಲ್ಲೇ ನಿವೃತ್ತಿಯನ್ನು ತೆಗೆದುಕೊಳ್ಳುತ್ತಿರುವುದು ಮಾತ್ರ ವಿಶ್ವಕ್ಕೇ ಅಚ್ಚರಿ ಉಂಟು ಮಾಡಿದೆ.

ಹೌದು, ವಿಶ್ವ ವಿಖ್ಯಾತ ಇ ಕಾಮರ್ಸ್ ಉದ್ಯಮ ಸಂಸ್ಥೆ ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್ ಲಿಮಿಟೆಡ್‌ ಕಂಪೆನಿಯ ಸಹ ಸ್ಥಾಪಕ, ಕಾರ್ಯನಿರ್ವಾಹಕ ಅಧ್ಯಕ್ಷ, ಬಿಲಿಯಾಧಿಪತಿ, ಜಾಕ್ ಮಾ ಅವರು ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್ ಸಂಸ್ಥೆಯಿಂದ ನಿವೃತ್ತನಾಗುವುದಾಗಿ ಪ್ರಕಟಿಸಿದ್ದಾರೆ. ಈ ಸುದ್ದಿ ವಿಶ್ವಾದ್ಯಂತ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಶಾಕ್ ಆಗಿದೆ.

ಅಲಿಬಾಬ ಕಂಪೆನಿಯಿಂದ ನಿವೃತ್ತಿ ಘೋಷಿಸಿದ 'ಜಾಕ್ ಮಾ'!..ರೋಚಕ ಕಥೆಗೆ ಟ್ವಿಸ್ಟ್!!

ಇದೇ ಸೆಪ್ಟೆಂಬರ್ 10 ರಂದು ತಾನು ನಿವೃತ್ತಿಯನ್ನು ತೆಗೆದುಕೊಳ್ಳುತ್ತಿದ್ದು, ತನ್ನ ನಿವೃತ್ತಿಯ ಯುಗಾಂತ್ಯವಲ್ಲ; ಯುಗಾರಂಭ ಎಂದು ಜಾಕ್ ಮಾ ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಇದು ವಿಶ್ವದಾದ್ಯಂತ ಜಾಕ್ ಮಾ ಅಭಿಮಾನಿಗಳಿಗೂ ಸೇರಿದಂತೆ ದಿಗ್ಗಜರಿಗೂ ಅಚ್ಚರಿ ಉಂಟು ಮಾಡಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ ಎಂಬುದನ್ನು ಮುಂದೆ ಓದಿರಿ.

ವಿಶ್ವಕ್ಕೇ ಅಚ್ಚರಿ!

ವಿಶ್ವಕ್ಕೇ ಅಚ್ಚರಿ!

ಸೆಪ್ಟೆಂಬರ್ 10 ರಂದು ತಾನು ನಿವೃತ್ತಿಯನ್ನು ತೆಗೆದುಕೊಳ್ಳುತ್ತಿರುವುದಾಗಿ ಜಾಕ್ ಮಾ ಅವರು ಹೇಳಿದ ಸುದ್ದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ವಿಶ್ವಕ್ಕೇ ಅಚ್ಚರಿ ಮೂಡಿಸಿದೆ.ನಿವೃತ್ತಿಯ ಬಳಿಕ ತಾನು ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ಮಾತ್ರ ಉಳಿಯುವುದಾಗಿಯೂ ಕಂಪೆನಿಯ ಆಡಳಿತಕ್ಕೆ ಮಾರ್ಗದರ್ಶಕನಾಗಿ ಕೆಲಸ ಮಾಡುವುದಾಗಿಯೂ ಅವರು ಹೇಳಿದ್ದಾರೆ.

ನಿವೃತ್ತಿ ಪಡೆಯುತ್ತಿರುವುದು ಏಕೆ?

ನಿವೃತ್ತಿ ಪಡೆಯುತ್ತಿರುವುದು ಏಕೆ?

ತಾನೇ ಬೆಳೆಸಿದ ಒಂದು ದಿಗ್ಗಜ ಸಂಸ್ಥೆಯಿಂದ ನಿವೃತ್ತಿಯ ಬಳಿಕ ತಾನು ಶಿಕ್ಷಣ ಮತ್ತು ದಾನ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ವಿಶ್ರಾಂತ ಜೀವನ ನಡೆಸುವುದಾಗಿ ಜಾಕ್ ಮಾ ಅವರು ಹೇಳಿದ್ದಾರೆ. ಕಂಪೆನಿಯ ಆಡಳಿತಕ್ಕೆ ಮಾರ್ಗದರ್ಶಕನಾಗಿ ಕೆಲಸ ಮಾಡುವ ಅವರ ಮುಂದಿನ ಜೀವನವನ್ನು ಸಮಾಜ ಸೇವೆಗೆ ಮೀಸಲಿಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜ್ಯಾಕ್ ಮಾ ಜೀವನವೇ ಒಂದು ರೋಚಕ ಕಥೆ!

ಜ್ಯಾಕ್ ಮಾ ಜೀವನವೇ ಒಂದು ರೋಚಕ ಕಥೆ!

90ನೇ ದಶಕದಲ್ಲಿ ಚೀನಾ ದೇಶಕ್ಕೆ ಅಂತರಾಷ್ಟ್ರೀಯ ಸಂಸ್ಥೆ ಕೆಎಫ್​ಸಿ ಕಾಲಿಟ್ಟು ಉದ್ಯೋಗಿಗಳಿಗಾಗಿ ಕೆಲಸಕ್ಕೆ ಆಹ್ವಾನವನ್ನು ನೀಡಿತ್ತು. ಉದ್ಯೋಗಕ್ಕಾಗಿ ಒಟ್ಟು 24 ಜನರು ಅರ್ಜಿ ಸಲ್ಲಿಸಿದ್ದರು. ಆ 24 ಜನರಲ್ಲಿ 23 ಜನರಿಗೆ ಕೆಲಸ ಸಿಕ್ಕಿತ್ತು. ಆದರೆ, ಅಂದು ಉದ್ಯೋಗ ಪಡೆಯಲು ಸಾಧ್ಯವಾಗದ ಒರ್ವ ವ್ಯಕ್ತಿ ಇಂದುಪ್ರಪಂಚದ ನಂಬರ್ 20 ಶ್ರೀಮಂತರಲ್ಲಿ ಓರ್ವರು.

ಪ್ರಖ್ಯಾತ ಇ-ಕಾಮರ್ಸ್ ಅಲಿಬಾಬ ಸೃಷ್ಟಿಕರ್ತ

ಪ್ರಖ್ಯಾತ ಇ-ಕಾಮರ್ಸ್ ಅಲಿಬಾಬ ಸೃಷ್ಟಿಕರ್ತ

ತನ್ನ ಇಂಗ್ಲೀಷ್ ಭಾಷಾಜ್ಞಾನ ಮತ್ತು ಉದ್ದಿಮೆಯ ಗುಣಗಳಿಂದಲೇ ಚೀನಾದ ನಂಬರ್ ಒನ್ ಶ್ರೀಮಂತನಾಗಿ ಬೆಳೆದುನಿಂತ. ವಿಶ್ವದ ಟಾಪ್ ಇ-ಕಾಮರ್ಸ್ ಕಂಪೆನಿಯೊಂದನ್ನು ಕಟ್ಟಿ ಬೆಳೆಸಿದ ಜಾಕ್ ಮಾ ಬಗ್ಗೆ ಹೇಳುತ್ತಾ ಹೋದರೆ ಅವನ ಜೀವನವೇ ಒಂದು ರೋಚಕ ಕಥೆ. ಆತ್ಮವಿಶ್ವಸವೊಂದಿದ್ದರೆ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಇವನೇ ಉದಾಹರಣೆ.

ಮಾ ಯುನ್ ಬದಲಾಗಿ ಜಾಕ್ ಮಾ!

ಮಾ ಯುನ್ ಬದಲಾಗಿ ಜಾಕ್ ಮಾ!

ಅವನ ಮೊದಲ ಹೆಸರು ಮಾ ಯುನ್ ಎಂದು. ಆದರೆ, ಅವನು ಇಂಗ್ಲೀಷ್ ಕಲಿಯಲು ಪ್ರವಾಸಿಗರ ಬಳಿ ತೆರಳುತ್ತಿದ್ದಾಗ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಜಾಕ್ ಮಾ ಎಂಬ ಹೆಸರೇ ಅವನಿಗೆ ಫೈನಲ್ ಆಯಿತು.

ಜಾಕ್ ಮಾ ಬಾಲ್ಯ ಹೀಗಿತ್ತು.!

ಜಾಕ್ ಮಾ ಬಾಲ್ಯ ಹೀಗಿತ್ತು.!

ಬಡಕುಟುಂಬದಲ್ಲಿ ಹುಟ್ಟಿ ಹನ್ನೆರಡರ ಪೋರ ಮಾ ಯುನ್‌ಗೆ ಇಂಗ್ಲಿಷ್ ಕಲಿಯುವ ಆಸೆ ಹೆಚ್ಚಿತ್ತು. ಹಾಗಾಗಿ, ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಅಲ್ಲಿಗೆ ಬರುತ್ತಿದ್ದ ವಿದೇಶಿ ಯಾತ್ರಿಗಳಿಗೆ ಹಣಪಡೆಯದೇ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಇದೇ ಅವನನ್ನು ಇಷ್ಟು ಎತ್ತರಕ್ಕೆ ತಂದುನಿಲ್ಲಿಸಿತು.

ಇಂಗ್ಲೀಷ್ ಪದವಿ ಗಳಿಸಿದ.

ಇಂಗ್ಲೀಷ್ ಪದವಿ ಗಳಿಸಿದ.

ಜಾಕ್ ಮಾಗೆ ಇಂಗ್ಲೀಷ್ ಕಲಿಯುವ ಕನಸಿತ್ತು. ಅದರಂತೆಯೇ ಜಾಕ್ ಮಾ ಇಂಗ್ಲಿಷ್​ನಲ್ಲಿ ಪದವಿ ಪಡೆದ. ಇಂಗ್ಲಿಷ್​ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುಕೊಡುವ ಕೆಲಸ ಮಾಡುತ್ತಿದ್ದ.

ರೋಡಿನಲ್ಲಿ ಹೂ ಮಾರುತ್ತಿದ್ದ

ರೋಡಿನಲ್ಲಿ ಹೂ ಮಾರುತ್ತಿದ್ದ

ಜಾಕ್ ಮಾಗೆ ಇಂಗ್ಲೀಷ್ ಪಾಠ ಹೇಳಿಕೊಡುವುದು ಶಾಶ್ವತವಾದ ಕೆಲಸವೇನು ಆಗಿರಲಿಲ್ಲ. ಮತ್ತು ಆದಾಯವಿಲ್ಲದ ಬಳಲಿದ್ದ. ನಂತರ ಜೀವನ ನಿರ್ವಹಣೆಗಾಗಿ ಜಾಕ್ ರಸ್ತೆಯ ಮೇಲೆ ಪುಸ್ತಕ, ಹೂವು, ಬಟ್ಟೆ ಎಲ್ಲವನ್ನೂ ಮಾರಾಟ ಮಾಡಿದ್ದನೆಂದರೆ ಅಂದು ಜಾಕ್ ಮಾ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದು.

ಅಮೆರಿಕಾಕ್ಕೆ ತೆರಳುವ ಆಫರ್!

ಅಮೆರಿಕಾಕ್ಕೆ ತೆರಳುವ ಆಫರ್!

ಮೊದಲೇ ಹೇಳಿದಂತೆ ಜಾಕ್‌ಮಾನ ಇಂಗ್ಲೀಷ್ ಕಲಿಕೆಯೇ ಅವನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು ಎನ್ನಬಹುದು. 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಜಾಕ್ ಇಂಗ್ಲಿಷ್​ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್​ನಲ್ಲ. ಹಾಗಾಗಿ, ಅವನು ಅಲ್ಲಿ ಕಂಪ್ಯೂಟರ್ ಭವಿಷ್ಯವನ್ನು ತಿಳಿದುಕೊಂಡನು.

ಇಂಟರ್‌ನೆಟ್ ತಲೆಕೆಡಿಸಿತು

ಇಂಟರ್‌ನೆಟ್ ತಲೆಕೆಡಿಸಿತು

ಇಂಟರ್​ನೆಟ್​ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್​ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು. ಅಂತರ್ಜಾಲದ ಅಪಾರ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿದ್ದರಿಂದ ಇಂಟರ್‌ನೆಟ್ ಅವನ ತಲೆಕೆಡಿಸಿತು.

ಇ-ಕಾಮರ್ಸ್ ಸಂಸ್ಥೆ ಶುರು!

ಇ-ಕಾಮರ್ಸ್ ಸಂಸ್ಥೆ ಶುರು!

‘ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಆ ಇ-ಕಾಮರ್ಸ್ ಸಂಸ್ಥೆ ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ವಿಶ್ವದ ಅಂತರ್ಜಾಲ ಸೈಟ್​ಗಳಲ್ಲಿ ಮೊದಲ ಹತ್ತರೊಳಗಿರಬೇಕು ಎಂದು ಹೇಳಿದ. ಅದೇ ರೀತಿ ವಿಶ್ವದ ಟಾಪ್ 10 ಅಂತರ್ಜಾಲ ಸೈಟ್‌ಗಳಲ್ಲಿ ಒಂದಾದ ಅಲಿಬಾಬ.ಕಾಮ್ ಅನ್ನು ಜಾಕ್ ಮಾ ರೂಪಿಸಿದ.

ಚೀನಾದಲ್ಲಿ ಅಲಿಬಾಬ!

ಚೀನಾದಲ್ಲಿ ಅಲಿಬಾಬ!

ಈವರೆಗೂ ಹಲವರಿಗೆ ಪ್ರರ್ಶನೆಯಾಗಿಯೇ ಉಳಿದಿರುವುದು ಚೀನಾದಲ್ಲಿ ಅಲಿಬಾಬ ಎಂಬ ಹೆಸರು ಬಂದಿದ್ದೇಗೆ ಎಂಬುದು. ಆದರೆ, ನಿಮಗೆ ಗೊತ್ತಾ? ಜಾಕ್ ಈ ಹೆಸರನ್ನು ಕಂಪನಿಗೆ ಇಟ್ಟ ಉದ್ದೇಶವೆಂದರೆ ಅರೇಬಿಯನ್ ನೈಟ್ಸ್​ನಲ್ಲಿ ಬರುವ ಅಲಿಬಾಬನ ಹೆಸರು ಜಗತ್ತಿನ ಜನರೆಲ್ಲರಿಗೂ ತೀರಾ ಪರಿಚಿತ ಎನ್ನುವುದು. ವಿವಿಧ ದೇಶಗಳ 30 ಜನರನ್ನು ನಿಮಗೆ ಅಲಿಬಾಬಾ ಗೊತ್ತೇ ಎಂದು ಕೇಳಿದಾಗ ಎಲ್ಲರೂ ಗೊತ್ತಿದೆ ಎಂದೇ ಹೇಳಿದ್ದರಂತೆ.!

ಅಲಿಬಾಬ.ಕಾಮ್!

ಅಲಿಬಾಬ.ಕಾಮ್!

18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್​ಗಳನ್ನು ಕೂಡಿಸಿದ ನಂತರ ಜಾಕ್ ಮಾ ನೇತೃತ್ವದಲ್ಲಿ 1999ರಲ್ಲಿ ಅಲಿಬಾಬ.ಕಾಮ್ ಶುರುವಾಯಿತು. ಅಲಿಬಾಬಾ.ಕಾಮ್‌ನಲ್ಲಿ ಮಾರಾಟಗಾರನೊಬ್ಬ ಆನ್‌ಲೈನ್ ಮೂಲಕ ಎಕೆ 47 ಅನ್ನು ಮಾರಾಟ ಮಾಡಲು ಹೊರಟಿದ್ದು ನೆಗೆಟಿವ್ ಪ್ರಚಾರವಾದರೂ ಕಂಪೆನಿ ಹೆಸರು ನಿಧಾನಕ್ಕೆ ಬೆಳೆಯುತ್ತಾ ಹೋಯಿತು.!

ಹಿಂದಿರುಗಿ ನೋಡಲೇ ಇಲ್ಲ!

ಹಿಂದಿರುಗಿ ನೋಡಲೇ ಇಲ್ಲ!

2000ದ ಹೊತ್ತಿಗೆ ಅಲಿಬಾಬಾದಲ್ಲಿ 25 ಮಿಲಿಯನ್​ಗಿಂತ ಹೆಚ್ಚು ಹೂಡಿಕೆಯಾಗಿತ್ತು. ಅಲ್ಲಿಂದ ಮುಂದೆ ಜಾಕ್ ಮತ್ತು ಸ್ನೇಹಿತರು ಹಿಂದಿರುಗಿ ನೋಡಲೇ ಇಲ್ಲ. ಇಂದು ಅಲಿಬಾಬಾ, ವಾಲ್​ವಾರ್ಟ್ ಅನ್ನೂ ಹಿಂದಿಕ್ಕಿ 200ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಅತೀ ದೊಡ್ಡ ರೀಟೇಲರ್ ಕಂಪನಿಯಾಗಿದೆ 2017ರಲ್ಲಿ ಅಲಿಬಾಬಾದ ಮಾರುಕಟ್ಟೆ ಮೌಲ್ಯ 360 ಬಿಲಿಯನ್ ಅಮೆರಿಕನ್ ಡಾಲರ್​ಗಳು ಎಂದರೆ ನೀವು ನಂಬಲೇಬೇಕು.!

Most Read Articles
Best Mobiles in India

English summary
Ma, a former tour guide, English teacher and self-styled "China's Forrest Gump," would remain on the company's board of directors and continue to mentor the company's management. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more