ಅಂತು ಬಂತು ಇಂಟರ್ನೆಟ್‌ ಕಾರು: ರಸ್ತೆಗೆ ಯಾವಾಗ?

By Suneel
|

ಕೈಯಲ್ಲಿರುವ ಮೊಬೈಲ್‌ನಲ್ಲಿ ಇಂಟರ್ನೆಟ್, ಮನೆಯಲ್ಲಿರುವ ಡೆಸ್‌ಟಾಪ್‌ನಲ್ಲಿ ಇಂಟರ್ನೆಟ್‌, ಬ್ಯಾಂಗ್‌ನಲ್ಲಿರುವ ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್‌ ಸೌಕರ್ಯವಿದ್ರೆ ಸಾಕ ನಾವು ಚಲಿಸುವ ಬಸ್ಸು, ಕಾರುಗಳಲ್ಲಿ ಇಂಟರ್ನೆಟ್‌ ಸೌಕರ್ಯ ಇದ್ರೆ ಇನ್ನು ಚೆನ್ನಾಗಿರುತ್ತೆ ಅಲ್ವಾ ಲೈಫ್. ಹೌದು, ಇಂತಹ ಅಲೋಚನೆಯಿಂದಲೇ ಚೀನಾದ 'ಅಲಿಬಾಬಾ' ಇ-ಕಾಮರ್ಸ್‌ ಕಂಪನಿ ಈಗ 'ಇಂಟರ್ನೆಟ್‌ ಕಾರು" ಅಭಿವೃದ್ದಿಪಡಿಸಿದೆ. ಅಲ್ಲದೇ ಏಪ್ರಿಲ್‌ ತಿಂಗಳಲ್ಲಿ ಇಂಟರ್ನೆಟ್‌ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಕಾರು ಅಭಿವೃದ್ದಿಗೆ 800 ಸಂಶೋಧಕರು ಶ್ರಮಪಟ್ಟಿದ್ದಾರೆ. ಹಾಗಾದ್ರೆ ಈ ಇಂಟರ್ನೆಟ್‌ ಕಾರಿನ ವಿಶೇಷತೆ ಆದ್ರು ಏನು? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಚೀನಾದ ವಿಶಾಲ ಇ-ಕಾಮರ್ಸ್‌ ಕಂಪನಿ ಅಲಿಬಾಬಾ ಮಹತ್ತರ ಬೆಳವಣಿಗೆಯ "ಇಂಟರ್ನೆಟ್‌ ಸಂಪರ್ಕದ ಸ್ಮಾರ್ಟ್‌ ಕಾರು" ಅನ್ನು ಇದೇ ವರ್ಷದ (2016) ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಸಿದ್ದಗೊಂಡಿದೆ ಎಂದು 'People's Daily' ಮಂಗಳವಾರ(ಮಾರ್ಚ್‌ 22) ವರದಿಮಾಡಿದೆ.

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಅಲಿಬಾಬಾ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ವಾಂಗ್‌ ಜಿಯನ್‌ "ಇಂಟರ್ನೆಟ್‌ ಕಾರು, ಕಾರು ಟೆಕ್ನಾಲಜಿಯ ಒಂದು ಹೊಸ ಸಂಶೋಧನೆಯಾಗಿದೆ. ಅದು ಹೇಗೆ ಇಂಟರ್ನೆಟ್ ಒದಗಿಸುತ್ತದೆ ಎಂಬ ವಿವರವನ್ನು ಏಪ್ರಿಲ್‌'ನಲ್ಲಿ ಕಾರು ಬಿಡುಗಡೆ ಮಾಡಿದ ದಿನ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಅಂದಹಾಗೆ ಇಂಟರ್ನೆಟ್‌ ಕಾರು ಶಕ್ತಿ ಉಳಿತಾಯ ಕಾರು ಆಗಿದ್ದು, 160,000 ಕಿಲೋ ಮೀಟರ್ ದೂರ ಚಲಿಸಿದ ಮೇಲೆ ಶೇಕಡ 80 ರಷ್ಟು ಬ್ಯಾಟರಿ ಉಳಿತಾಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ.
ಚಿತ್ರ ಕೃಪೆ :caixin.com

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು, 'ಕಂಪ್ಯೂಟರ್‌, ಆಧುನಿಕ ಸೆನ್ಸಾರ್‌, ಮಾಹಿತಿ ಸಮ್ಮಿಳನ, ಟೆಲಿಕಂಮ್ಯೂನಿಕೇಷನ್‌, ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್‌ ಮತ್ತು ಸ್ವಯಂಚಾಲಿತ ನಿಯಂತ್ರಣ' ಎಲ್ಲಾ ರೀತಿಯ ಸೌಲಭ್ಯಹೊಂದಿರುತ್ತದೆ.

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರನ್ನು ಅಲಿಬಾಬಾ ಮತ್ತು ಶಾಂಘೈ ಆಟೋಮೊಟಿವ್‌ ಇಂಡಸ್ಟ್ರಿ ಕಾರ್ಪೋರೇಷನ್‌(SAIC) ಸಂಘಟಿತವಾಗಿ ನೈಜಕಾರಿಗೆ ಸ್ಮಾರ್ಟ್‌ ಕಾರ್ಯಾಚರಣೆ ವ್ಯವಸ್ಥೆ ಮಾಡಲಾಗಿದೆ ಹಾಗೂ ಬೌದ್ಧಿಕ ಆಸ್ತಿ ಹಕ್ಕು ಹೊಂದಿದೆ.

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು ಅಭಿವೃದ್ದಿಪಡಿಸಲು ಯೋಜನೆಗೆ ಅಲಿಬಾಬಾ ಕಂಪನಿ 800 ಸಂಶೋಧಕರನ್ನು ವ್ಯವಸ್ಥೆ ಮಾಡಿತ್ತು ಹಾಗೂ ಬಿಲಿಯನ್‌ ಗಟ್ಟಲೆ ಡಾಲರ್ ವೆಚ್ಚ ಮಾಡಿದೆ.

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು

ಇಂಟರ್ನೆಟ್‌ ಕಾರು ಕೇವಲ ಜನರ ಜೊತೆ ಸಂವಹನ ನಡೆಸುವುದಲ್ಲದೇ, ಇತರ ಕಾರುಗಳ ನಡುವೆ, ಕಾರು ಮತ್ತು ರಸ್ತೆಯ ನಡುವೆ, ಕಾರು ಮತ್ತು ಮೂಲಸೌಕರ್ಯದ ಬಗ್ಗೆ ಸಂವಹನ ನಡೆಸಲು ಉತ್ತೇಜಿಸುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳುವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು

ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Alibaba to unveil first internet car in April. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X