ಏಲಿಯನ್‌ಗಳ ಹೊಸ ನಿಯಮದಿಂದ ಮನುಕುಲ ವಿನಾಶ

By Shwetha
|

ಏಲಿಯನ್‌ಗಳ ಕುರಿತಾದ ಸಾಕಷ್ಟು ಸಂಗತಿಗಳ ಬಗ್ಗೆ ನೀವು ಕೇಳಿರುತ್ತೀರಿ ಓದಿರುತ್ತೀರಿ ಅಲ್ಲವೇ? ಅನ್ಯಗ್ರಹ ಜೀವಿಗಳಾದ ಹಾರುವ ತಟ್ಟೆಗಳೆಂದೇ ಚಿರಪರಿಚಿತವಾದ ಈ ಜೀವಿಗಳು ತಮ್ಮ ಅಸ್ತಿತ್ವವನ್ನು ಹಿಂದಿನಿಂದಲೂ ಮನುಕುಲಕ್ಕೆ ಸಾರುತ್ತಲೇ ಬಂದಿವೆ. ಅನ್ಯಗ್ರಹದಲ್ಲಿದ್ದುಕೊಂಡೇ ಭೂಮಿಯ ಮೇಲೆ ತಮ್ಮ ಚಟುವಟಿಕೆಗಳನ್ನು ಇವುಗಳು ನಡೆಸಿಕೊಂಡು ಬರುತ್ತಿವೆ ಎಂಬುದಾಗಿ ಹಲವಾರು ಸಂಶೋಧನೆಗಳು ತಿಳಿಸಿದ್ದು ಇದಕ್ಕೆ ಸಂಬಂಧಿಸಿದ ಹಲವಾರು ದಾಖಲೆಗಳು ಭೂಮಿಯಲ್ಲಿ ದೊರಕಿದೆ.

ಅವುಗಳು ಭೂಮಿಗೆ ಬಂದಾಗ ತಮ್ಮ ವಾಹನದ ಗುರುತನ್ನು ಇಲ್ಲಿ ಬಿಟ್ಟಿರುವುದು, ಇಲ್ಲಾ ಅವುಗಳ ಮೃತದೇಹ ಪತ್ತೆಯಾಗಿರುವಂಥದ್ದು, ಹೆಜ್ಜೆಗಳ ಉಳಿಕೆಗಳು ಹೀಗೆ ತಮ್ಮ ಸಾನಿಧ್ಯವನ್ನು ಅವುಗಳು ಸಾರುತ್ತಲೇ ಬಂದಿವೆ. ಆದರೆ ಅವುಗಳು ನಮಗೆ ಉಪಕಾರಿಗಳೋ ಇಲ್ಲವೇ ಅಪಲಾರಿಗಳೋ ಎಂಬುದು ಮಾತ್ರ ಜಿಜ್ಞಾಸೆಯಲ್ಲಿದ್ದು ಅವುಗಳಿಂದ ನಮಗೆ ಅಪಾಯ ಇದ್ದೇ ಇದೆ ಎಂಬುದಾಗಿಯೇ ವಿಜ್ಞಾನ ಲೋಕ ತಿಳಿಸುತ್ತಿದೆ. ಮಾನವ ಕುಲವನ್ನು ಅಳಿಸಿ ತಮ್ಮ ಅಸ್ತಿತ್ವವನ್ನು ಬಲಗೊಳಿಸಬೇಕೆಂಬ ಇವುಗಳ ಯೋಜನೆಯ ಕುರಿತೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಮಾಹಿತಿಗಳನ್ನು ನೀಡಲಿದ್ದೇವೆ. ಬನ್ನಿ ಅದೇನು ಎಂಬುದನ್ನು ನೋಡೋಣ.

ಬಾಹ್ಯಾಕಾಶದಿಂದ ಭೂಮಿಗೆ ಏಲಿಯನ್‌ಗಳು ತಮ್ಮ ಪ್ರಯಾಣವನ್ನು ಮಾಡುತ್ತವೆ ಎಂದಾದಲ್ಲಿ ಇದು ಮನುಕುಲಕ್ಕೆ ಅತ್ಯಂತ ಕೆಟ್ಟ ವಾರ್ತೆ ಎಂಬುದಾಗಿ ಮೂಲವೊಂದು ತಿಳಿಸಿದೆ.

ಭೂಮಿಗೆ ಪ್ರಯಾಣ

ಭೂಮಿಗೆ ಪ್ರಯಾಣ

ಬಾಹ್ಯಾಕಾಶದಿಂದ ಭೂಮಿಗೆ ಏಲಿಯನ್‌ಗಳು ತಮ್ಮ ಪ್ರಯಾಣವನ್ನು ಮಾಡುತ್ತವೆ ಎಂದಾದಲ್ಲಿ ಇದು ಮನುಕುಲಕ್ಕೆ ಅತ್ಯಂತ ಕೆಟ್ಟ ವಾರ್ತೆ ಎಂಬುದಾಗಿ ಮೂಲವೊಂದು ತಿಳಿಸಿದೆ.

ಅತ್ಯಾಧುನಿಕ ತಂತ್ರಜ್ಞಾನ

ಅತ್ಯಾಧುನಿಕ ತಂತ್ರಜ್ಞಾನ

ಅವುಗಳು ಬಳಸುತ್ತಿರುವ ತಂತ್ರಜ್ಞಾನ ಅತ್ಯಾಧುನಿಕವಾಗಿದ್ದು ಇದನ್ನು ಬಳಸಿ ಮಾನವರ ನಾಶವನ್ನು ಮಾಡಿ ತಮ್ಮ ಅಸ್ತಿತ್ವವನ್ನು ಇವುಗಳು ನೆಲೆಗೊಳಿಸಬೇಕೆಂಬ ಯೋಜನೆಯಲ್ಲಿವೆ.

ನಮ್ಮನ್ನು ಮೀರಿಸಿ

ನಮ್ಮನ್ನು ಮೀರಿಸಿ

ಎಸ್‌ಇಟಿಐ ಇನ್‌ಸ್ಟಿಟ್ಯೂಟ್ (ಸರ್ಚ್ ಫಾರ್ ಎಕ್ಸ್ಟ್ರಾ ಟೆರಿಸ್ಟ್ರಿಯಲ್ ಲೈಫ್ ಇನ್‌ಸ್ಟಿಟ್ಯೂಟ್) ಈ ಸುದ್ದಿಯನ್ನು ಅರುಹಿದ್ದು, ಭೂಮಿಗೆ ಅವುಗಳು ಆಗಾಗ್ಗೆ ಬಂದಿಳಿಯುತ್ತಿವೆ ಎಂದಾದಲ್ಲಿ ಅವುಗಳ ತಂತ್ರಜ್ಞಾನ ನಮ್ಮನ್ನು ಮೀರಿಸಿರುವಂಥದ್ದು ಎಂಬುದಾಗಿ ಸಂಸ್ಥೆ ತಿಳಿಸಿದೆ.

ತಮ್ಮದೇ ನಿಯಮ

ತಮ್ಮದೇ ನಿಯಮ

ತಮ್ಮದೇ ನಿಯಮಗಳನ್ನು ಭೂಮಿಯಲ್ಲಿ ಅನ್ವಯಿಸುವ ಯೋಜನೆ ಅವುಗಳಾದ್ದಾಗಿದ್ದು ಅವುಗಳ ನೇರ ಸಂಪರ್ಕಕ್ಕೆ ನಾವು ಬಂದಾಗ ಇದು ಸಂಭವಿಸಲಿದೆ ಎಂಬುದಾಗಿದೆ ಸುದ್ದಿ.

ರೇಡಿಯೊ ಅಲೆ

ರೇಡಿಯೊ ಅಲೆ

ರೇಡಿಯೊ ಅಲೆಗಳನ್ನು ಸಂಸ್ಥೆಯು ಕಳುಹಿಸುವುದರ ಮೂಲಕ ಅವುಗಳ ಪ್ರತಿಕ್ರಿಯೆಯನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಿದ್ದು ನಮ್ಮ ರೇಡಿಯೊ ಅಲೆಗಳನ್ನು ಬಳಸಿಕೊಂಡು ಅವುಗಳು ಸಂವಹನವನ್ನು ನಡೆಸಬಲ್ಲವೇ ಎಂಬುದು ತಿಳಿದಿಲ್ಲ.

ಹಳೆಯದಾದ ನಾಗರೀಕತೆ

ಹಳೆಯದಾದ ನಾಗರೀಕತೆ

1,000 ವರ್ಷಕ್ಕಿಂತಲೂ ಹಳೆಯದಾದ ನಾಗರೀಕತೆ ಇತ್ತು ಎಂದಾದಲ್ಲಿ, ಸಂವಹನಕ್ಕಾಗಿ ಅವರುಗಳು ಬಳಸುತ್ತಿದ್ದ ತಂತ್ರಜ್ಞಾನ ಯಾವುದು ಎಂಬುದನ್ನು ಕಂಡುಕೊಳ್ಳಬಹುದಾಗಿತ್ತು, ಎಂಬುದಾಗಿ ಎಸ್‌ಇಟಿಐ ಯ ನತಾಲಿ ಕೇಬ್ರಲ್ ತಿಳಿಸಿದ್ದಾರೆ.

ಸಂವಹನ ಪ್ರಕ್ರಿಯೆ

ಸಂವಹನ ಪ್ರಕ್ರಿಯೆ

ಏಲಿಯನ್‌ಗಳೊಂದಿಗಿನ ಸಂವಹನ ಪ್ರಕ್ರಿಯೆಯನ್ನು ನಾವು ಸಾಧ್ಯವಾದಷ್ಟು ಬೇಗನೇ ನಡೆಸಲಿದ್ದು ಅವುಗಳ ಯೋಜನೆ ಏನು ಎಂಬುದನ್ನು ತಿಳಿದುಕೊಳ್ಳುವ ಉಪಾಯದಲ್ಲಿ ನಾವಿದ್ದೇವೆ.

ಏಲಿಯನ್‌ ನಮ್ಮೊಂದಿಗೆ

ಏಲಿಯನ್‌ ನಮ್ಮೊಂದಿಗೆ

ಮುಂದಿನ 20 ವರ್ಷಗಳಲ್ಲಿ ನಾವು ಮಾತ್ರವಲ್ಲದೆ ಏಲಿಯನ್‌ಗಳನ್ನು ನಮ್ಮೊಂದಿಗೆ ನಾವು ನೋಡಲಿದ್ದೇವೆ.

ಸೌರವ್ಯವಸ್ಥೆ

ಸೌರವ್ಯವಸ್ಥೆ

ನಮ್ಮ ಸೌರವ್ಯವಸ್ಥೆಯಲ್ಲಿರುವ ಮಂಗಳ ಮತ್ತು ಚಂದ್ರನಲ್ಲಿ ಹಲವಾರು ವರ್ಷಗಳಿಂದೀಚೆಗೆ ಏಲಿಯನ್ ಜೀವನಕ್ಕಾಗಿ ಹುಡುಕಾಟಗಳನ್ನು ನಡೆಸಲಾಗುತ್ತಿದೆ.

ಹೊಸ ಟೆಲಿಸ್ಕೋಪ್

ಹೊಸ ಟೆಲಿಸ್ಕೋಪ್

ಬಾಹ್ಯಾಕಾಶದಲ್ಲಿ ಲಾಂಚ್ ಮಾಡಲಾದ ಹೊಸ ಟೆಲಿಸ್ಕೋಪ್ ಸೋಲಾರ್ ಸಿಸ್ಟಮ್‌ನ ಹೊರಗಡೆ ಇರುವ ಪ್ಲಾನೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದು ಜೀವನವನ್ನು ಸುಧಾರಿಸಲಿವೆ.

ಇನ್ನಷ್ಟು ಲೇಖನಗಳು

ಇನ್ನಷ್ಟು ಲೇಖನಗಳು

ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!</a><br /><a href=ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ
ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌
ಜಗತ್ತಿಗೆ ಹೊಸ ದಾರಿ ತೋರಿದ ಹಾರುವ ತಟ್ಟೆಗಳು" title="ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!
ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ
ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌
ಜಗತ್ತಿಗೆ ಹೊಸ ದಾರಿ ತೋರಿದ ಹಾರುವ ತಟ್ಟೆಗಳು" loading="lazy" width="100" height="56" />ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!
ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ
ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌
ಜಗತ್ತಿಗೆ ಹೊಸ ದಾರಿ ತೋರಿದ ಹಾರುವ ತಟ್ಟೆಗಳು

Best Mobiles in India

English summary
A scientist and astronomer from the SETI Institute has cautioned that if aliens visit Earth, they will be the ones to "set the rules".

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X